Health Tips: ಸಕ್ಕರೆ ಬದಲಿಗೆ ಈ ವಸ್ತುಗಳನ್ನು ಬಳಸಿದ್ರೆ ಯಾವ್ದೇ ಆರೋಗ್ಯ ಸಮಸ್ಯೆ ಬರಲ್ವಂತೆ

Alternative to Sugar: ಹಣ್ಣು, ಹಾಲು ಮತ್ತು ಇತರ ಮೂಲಗಳಿಂದ ದೊರೆಯುವ ಪ್ರಾಕೃತಿಕ ಸಕ್ಕರೆ ನಿಜಕ್ಕೂ ಶರೀರಕ್ಕೆ ಪ್ರಯೋಜನಕಾರಿ. ಆದರೆ, ಪ್ಯಾಕೇಜ್ ಪದಾರ್ಥದಲ್ಲಿರುವ ಸಕ್ಕರೆ ಅಪಾಯ ಉಂಟುಮಾಡುತ್ತದೆ, ಹೆಚ್ಚಿನ ಜನರು ತಮ್ಮ ಆಹಾರದಲ್ಲಿ ಎಷ್ಟು ಸಕ್ಕರೆ ಇದೆ ಎಂದು ತಿಳಿದುಕೊಳ್ಳದೇ ತಮ್ಮ ಆರೋಗ್ಯ ಅಪಾಯವನ್ನು ಹೆಚ್ಚಿಸಿ ಕೊಳ್ಳುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಕ್ಕರೆಯು (Sugar) ಆಧುನಿಕ ಆಹಾರದಲ್ಲಿ ಅತ್ಯಂತ ಸಮಸ್ಯಾತ್ಮಕ ಪದಾರ್ಥಗಳಲ್ಲಿ ಒಂದಾಗಿದೆ. ಸಿಹಿಯಾದ ಕೊಲ್ಲುವ ಆಹಾರ (Killing Food) ಎಂದರೂ ತಪ್ಪಾಗಲಾರದು. ಸಕ್ಕರೆಯ ಹೆಚ್ಚು ಸೇವನೆ ಸ್ಥೂಲಕಾಯತೆ (Heavy Gain), ಮಧುಮೇಹ (Diabetes)  ಮತ್ತು ಹೃದ್ರೋಗ ಸೇರಿದಂತೆ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ. ಸಕ್ಕರೆ ಸೇವನೆಯ ಪರಿಣಾಮ ಆಘಾತಕಾರಿಯಾಗಿದೆ ಎಂದು ತಿಳಿದಿದ್ದರೂ ಹೆಚ್ಚಿನ ಜನರು ಸಕ್ಕರೆಗೆ ಪರ್ಯಾಯವನ್ನು ಕಂಡುಕೊಳ್ಳುವ ಗೋಜಿಗೆ ಹೋಗದೆ ಅದೇ ಸಕ್ಕರೆಯನ್ನೇ ಸೇವಿಸುತ್ತಾರೆ. ಸಕ್ಕರೆ ಸಿಹಿ ಬದಲಿಗೆ ನಿಮ್ಮ ಆಹಾರಗಳಲ್ಲಿ ನೀವು ಆರೋಗ್ಯಕರ ಸಿಹಿ ಪರ್ಯಾಯಗಳನ್ನು ಸೇರಿಸಬಹುದು. ನೈಸರ್ಗಿಕ ಸಿಹಿಕಾರಕಗಳು ಸಂಸ್ಕರಿಸಿದ ಸಕ್ಕರೆಗಿಂತ ಕ ಉತ್ತಮ. ಆದರೆ ಆರೋಗ್ಯ ಪ್ರಯೋಜನಗಳನ್ನು(Health Benefits)  ಹೊಂದಿವೆ.

ಹೆಚ್ಚು ಸಕ್ಕರೆ ತಿನ್ನುವುದು ಏಕೆ ಅಪಾಯಕಾರಿ?
ಹಣ್ಣು, ಹಾಲು ಮತ್ತು ಇತರ ಮೂಲಗಳಿಂದ ದೊರೆಯುವ ಪ್ರಾಕೃತಿಕ ಸಕ್ಕರೆ ನಿಜಕ್ಕೂ ಶರೀರಕ್ಕೆ ಪ್ರಯೋಜನಕಾರಿ. ಆದರೆ, ಪ್ಯಾಕೇಜ್ ಪದಾರ್ಥದಲ್ಲಿರುವ ಸಕ್ಕರೆ ಅಪಾಯ ಉಂಟುಮಾಡುತ್ತದೆ, ಹೆಚ್ಚಿನ ಜನರು ತಮ್ಮ ಆಹಾರದಲ್ಲಿ ಎಷ್ಟು ಸಕ್ಕರೆ ಇದೆ ಎಂದು ತಿಳಿದುಕೊಳ್ಳದೇ ತಮ್ಮ ಆರೋಗ್ಯ ಅಪಾಯವನ್ನು ಹೆಚ್ಚಿಸಿ ಕೊಳ್ಳುತ್ತಾರೆ.

ಸಕ್ಕರೆಯಿಂದ ಈ ಕೆಳಗಿನ ಕಾಯಿಲೆಗಳು ಉಂಟಾಗುತ್ತವೆ.

• ತೂಕ ಹೆಚ್ಚಾಗುವುದು
• ಹೃದಯರೋಗ
• ಮೊಡವೆ
• ಕೊಬ್ಬಿನ ಯಕೃತ್ತು
• ಕ್ಯಾನ್ಸರ್
• ಖಿನ್ನತೆಯ ಅಪಾಯ

• ಟೈಪ್ II ಮಧುಮೇಹ

• ಸೆಲ್ಯುಲಾರ್ ವಯಸ್ಸಾಗುವಿಕೆ ಮತ್ತು ಉರಿಯೂತ

• ಹಲ್ಲಿನ ಸಮಸ್ಯೆಗಳು

ಸಕ್ಕರೆಗೆ 6 ಅತ್ಯುತ್ತಮ ಪರ್ಯಾಯಗಳು

ಇದನ್ನೂ ಓದಿ: ಚಾಕೊಲೇಟ್ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ

1) ಕ್ಸಿಲಿಟಾಲ್ (Xylitol)

ಕ್ಸಿಲಿಟಾಲ್ ಒಂದು ಸಕ್ಕರೆ ಆಲ್ಕೋಹಾಲ್ ಆಗಿದ್ದು, ಇದನ್ನು ಕಾರ್ನ್ ಅಥವಾ ಬರ್ಚ್ ಮರದಿಂದ ಹೊರತೆಗೆಯಲಾಗುತ್ತದೆ ಮತ್ತು ಸಕ್ಕರೆಯಂತೆಯೇ ರುಚಿಯನ್ನು ಹೊಂದಿರುತ್ತದೆ.

ಇದು ಪ್ರತಿ ಗ್ರಾಂಗೆ 2.4 ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ಸಕ್ಕರೆಗಿಂತ 40% ಕಡಿಮೆ ಕ್ಯಾಲೊರಿ ಹೊಂದಿದೆ. ಆದರೆ ಇದು ಫ್ರಕ್ಟೋಸ್ ಅನ್ನು ಹೊಂದಿರುವುದಿಲ್ಲ. ಸಕ್ಕರೆಗೆ ವ್ಯತಿರಿಕ್ತವಾಗಿ, ಕ್ಸಿಲಿಟಾಲ್ ನಿಮ್ಮ ಗ್ಲೂಕೋಸ್ ಅಥವಾ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಇದು ಸುಧಾರಿತ ಮೂಳೆ ಮತ್ತು ಹಲ್ಲಿನ ಆರೋಗ್ಯದಂತಹ ಕೆಲವು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.

2) ಸ್ಟೀವಿಯಾ (Stevia)
ಸ್ಟೀವಿಯಾ ಎಂಬುದು ಸಸ್ಯ-ಆಧಾರಿತ ಸಿಹಿಯಾಗಿದ್ದು, ಇದನ್ನು ವೈಜ್ಞಾನಿಕವಾಗಿ ಸ್ಟೀವಿಯಾ ರೆಬೌಡಿಯಾನಾ ಎಂದು ಕರೆಯಲಾಗುತ್ತದೆ ಮತ್ತು ದಕ್ಷಿಣ ಅಮೆರಿಕದ ಬುಷ್‌ನ ಎಲೆಗಳಿಂದ ಹೊರತೆಗೆಯಲಾಗುತ್ತದೆ.

ಈ ಸಕ್ಕರೆ ಬದಲಿಯನ್ನು ಸ್ಟೀವಿಯೋಸೈಡ್ ಮತ್ತು ರೆಬಾಡಿಯೋಸೈಡ್ ಯಿಂದ ಬೇರ್ಪಡಿಸಬಹುದು, ಮತ್ತು ಶೂನ್ಯ ಕ್ಯಾಲೊರಿಗಳನ್ನು ಹೊಂದಿರುವುದಲ್ಲದೇ ಸಕ್ಕರೆಗಿಂತ ಸಿಹಿಯಾಗಿರುತ್ತದೆ.

ಸ್ಟೀವಿಯಾ ರೆಬೌಡಿಯಾನಾದ ಎಲೆಗಳು ಪೋಷಕಾಂಶಗಳಿಂದ ತುಂಬಿರುತ್ತವೆ, ಆದ್ದರಿಂದ ಸ್ಟೀವಿಯಾ ಕಡಿಮೆ ರಕ್ತದೊತ್ತಡಕ್ಕೆ ಸಂಬಂಧಿಸಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

3) ಮಾಂಕ್ ಹಣ್ಣು
ಮಾಂಕ್ ಹಣ್ಣಿನಿಂದ ಹೊರತೆಗೆಯಲಾದ ಈ ನೈಸರ್ಗಿಕ ಸಿಹಿಯು ಶೂನ್ಯ ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಸಕ್ಕರೆಗಿಂತ ಸಿಹಿಯಾಗಿರುತ್ತದೆ.

ಇದು ಫ್ರಕ್ಟೋಸ್ ಮತ್ತು ಗ್ಲೂಕೋಸ್ ಹಾಗೂ ಮೊಗ್ರೋಸೈಡ್ ಅನ್ನು ಸಹ ಹೊಂದಿದೆ. ಮೊಗ್ರೋಸೈಡ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಉತ್ಕರ್ಷಣ ನಿರೋಧಕವಾಗಿದ್ದು ಅದು ಕೆಲವು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

4) ತೆಂಗಿನಕಾಯಿ ಸಕ್ಕರೆ
ತೆಂಗಿನಕಾಯಿ ಸಕ್ಕರೆಯನ್ನು ತೆಂಗಿನಕಾಯಿಯ ರಸದಿಂದ ತೆಗೆಯಲಾಗುತ್ತದೆ. ಕಬ್ಬಿಣ, ಸತು, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಸೇರಿದಂತೆ ಹಲವು ಖನಿಜಗಳನ್ನು ಹೊಂದಿರುತ್ತದೆ. ಇದು ಸಕ್ಕರೆಗಿಂತ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ ಹೊಂದಿದೆ.

5) ಜೇನು ತುಪ್ಪ
ಜೇನುತುಪ್ಪವು ಹಲವಾರು ಪೋಷಕಾಂಶಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಫೀನಾಲಿಕ್ ಆಮ್ಲಗಳು ಮತ್ತು ಫ್ಲೇವನಾಯ್ಡ್‌ಗಳು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ, ಇದು ಉರಿಯೂತ, ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ.
ಜೇನುತುಪ್ಪವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಇದು ಫ್ರಕ್ಟೋಸ್ ಅನ್ನು ಹೊಂದಿರುತ್ತದೆ ಆದ್ದರಿಂದ ಮಿತವಾಗಿ ಸೇವಿಸಬೇಕು.

6) ಮ್ಯಾಪಲ್ ಸಿರಪ್ (Maple syrup)

ಮೇಪಲ್ ಸಿರಪ್ ಅನ್ನು ಮೇಪಲ್ ಮರಗಳ ರಸದಿಂದ ತಯಾರಿಸಲಾಗುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸತು, ಕಬ್ಬಿಣ ಮತ್ತು ಮ್ಯಾಂಗನೀಸ್ ಅನ್ನು ಹೊಂದಿರುತ್ತದೆ.

ಇದನ್ನೂ ಓದಿ: ಓಮೈಕ್ರಾನ್ ರೋಗಿಗಳಿಗೇಕೆ ಭಿನ್ನ ಲಕ್ಷಣಗಳು ಕಾಡುತ್ತವೆ ?

ಜೇನುತುಪ್ಪದಂತೆ, ಮೇಪಲ್ ಸಿರಪ್ ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಂಸ್ಕರಿಸಿದ ಸಕ್ಕರೆಗಿಂತ ಇದು ಉತ್ತಮ ಆಯ್ಕೆಯಾಗಿದ್ದರೂ, ಅದನ್ನು ಅಧಿಕವಾಗಿ ಸೇವಿಸಬಾರದು.
Published by:Sandhya M
First published: