• Home
  • »
  • News
  • »
  • lifestyle
  • »
  • Potato: ತೂಕ ಇಳಿಸೋಕೆ ಪ್ರಯತ್ನಿಸುತ್ತಿದ್ರೆ ತಪ್ಪದೇ ಆಲೂಗಡ್ಡೆ ಸೇವಿಸಿ

Potato: ತೂಕ ಇಳಿಸೋಕೆ ಪ್ರಯತ್ನಿಸುತ್ತಿದ್ರೆ ತಪ್ಪದೇ ಆಲೂಗಡ್ಡೆ ಸೇವಿಸಿ

ಆಲೂಗಡ್ಡೆ

ಆಲೂಗಡ್ಡೆ

Weight Loos: ಆಲೂಗಡ್ಡೆಯಲ್ಲಿರುವ ಅಧಿಕ ಪೊಟ್ಯಾಸಿಯಂ ನೀರಿನ ಪೋಷಣೆಯನ್ನು ತಡೆಯಲು ಸಹಾಯಮಾಡುತ್ತದೆ. ಆಹಾರ ತಜ್ಞರ ಪ್ರಕಾರ ಇದು ತೂಕ ಇಳಿಕೆಯಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ. ಆಲೂಗಡ್ಡೆಯು ಕೊಬ್ಬಿನ ಕೋಶಗಳನ್ನು ಕುಗ್ಗಿಸಲು ಕಾರಣವಾಗಬಲ್ಲದು

  • Share this:

    ಆಲೂಗಡ್ಡೆ(Potato) ಅಂದ್ರೆ ಇಂದಿನ ಯುವ ಜನತೆಗೆ ಪಂಚ ಪ್ರಾಣ.. ಯಾಕಂದ್ರೆ ಪರಾಠ, ಫ್ರೆಂಚ್‌ ಫ್ರೈಸ್‌, ಆಲೂ ಚಿಪ್ಸ್‌(Potato Chips), ಆಲೂ ಟಿಕ್ಕಿ, ಡೀಪ್‌ ಫ್ರೈಡ್‌ ಸ್ಟಫ್‌ ಸೇವನೆ ಮಾಡದೆ ಇದ್ರೆ, ಯುವಕರ ದಿನ ಕಂಪ್ಲೀಟ್ ಆಗೋದೇ ಇಲ್ಲ. ಅಲ್ಲದೆ ನಮ್ಮ ದೇಶದಲ್ಲಿಯಂತು ಬೆಳಗ್ಗೆ ಉಪಾಹಾರಕ್ಕೆ(Morning Breakfast) ಆಲೂಗಡ್ಡೆ ಅಥವಾ ಬಟಾಟೆ ವಡೆಯಿಂದ ಹಿಡಿದು ರಾತ್ರಿ ಊಟಕ್ಕೆ(Dinner) ಆಲೂಗಡ್ಡೆ ಪರೋಟ(Parata) ಬೇಕೆ ಬೇಕು. ಆದ್ರೆ ತೂಕ ಇಳಿಕೆ(Weight Loss) ಮಾಡಲು ಪ್ರಯತ್ನ ಮಾಡುತ್ತಿರುವವರು
    ಆಲುಗಡ್ಡೆಯನ್ನು ಸೇವಿಸುತ್ತ ತೂಕವನ್ನು ಇಳಿಸಿಕೊಳ್ಳುತ್ತೇವೆ ಮತ್ತು ಡಯಟ್ ಮಾಡುತ್ತೇವೆ ಎಂಬುದು ಸಾಧ್ಯವೇ ಇಲ್ಲ. ನೀವು ಡಯಟ್ ಮಾಡುವಾಗ ಯಾವುದೇ ಕಾರಣಕ್ಕೂ ಆಲೂಗಡ್ಡೆಯನ್ನು ಸೇವಿಸಬೇಡಿ. ಆಲೂಗಡ್ಡೆಗಳಲ್ಲಿ ಕಾರ್ಬೋಹೈಡ್ರೇಟ್‍ ಗಳು ಮತ್ತು ಕ್ಯಾಲೊರಿಗಳು ಅಧಿಕ ಪ್ರಮಾಣದಲ್ಲಿರುತ್ತವೆ ಎಂಬ ಮಾತುಗಳನ್ನ ಕೇಳಿಯೇ ಇರುತ್ತೆವೆ. ಆದ್ರೆ ತಜ್ಞರ ಪ್ರಕಾರ, ನೀವು ಬೇಯಿಸಿದ ಆಲೂಗಡ್ಡೆಯನ್ನು ಸೇವಿಸಿದರೆ, ಅದು ತೂಕವನ್ನು ಹೆಚ್ಚಿಸುವುದಿಲ್ಲ, ಇದಕ್ಕೆ ವಿರುದ್ಧವಾಗಿ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆಯಂತೆ.


    ತೂಕ ಇಳಿಕೆಯಲ್ಲಿ ಆಲೂಗಡ್ಡೆ ಪಾತ್ರ..


    ಆಲೂಗಡ್ಡೆಯಲ್ಲಿರುವ ಅಧಿಕ ಪೊಟ್ಯಾಸಿಯಂ ನೀರಿನ ಪೋಷಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ಆಹಾರ ತಜ್ಞರ ಪ್ರಕಾರ ಇದು ತೂಕ ಇಳಿಕೆಯಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ. ಆಲೂಗಡ್ಡೆಯು ಕೊಬ್ಬಿನ ಕೋಶಗಳನ್ನು ಕುಗ್ಗಿಸಲು ಕಾರಣವಾಗಬಲ್ಲದು ಎಂದು ತೋರಿಸುವ ಅಧ್ಯಯನಗಳೂ ಇವೆ. ಹೀಗಾಗಿ ಡೀಪ್‌–ಫ್ರೈಡ್‌ ಪೊಟಾಟೋ ಚಿಪ್ಸ್‌ ಅಥವಾ ಫ್ರೈಗಳನ್ನು ಸೇವಿಸು ಬದಲು, ಏರ್‌ ಫ್ರೈಯಿಂಗ್‌, ಬೇಕ್‌ ಮಾಡುವುದು, ಕುದಿಸುವುದು ಮತ್ತು ಹುರಿಯುವಂತಹ ತಂತ್ರಗಳನ್ನು ಅನುಸರಿಸಿ ಆಲೂಗಡ್ಡೆ ತಿಂದು ತೂಕ ಇಳಿಸಿಕೊಳ್ಳಬಹುದು.


    ಇದನ್ನೂ ಓದಿ: ದಿನವೂ ಗೊರಕೆ ಹೊಡೆಯುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!


    ಆಲೂಗಡ್ಡೆ ಸೇವನೆಯಿಂದ ಚಯಾಪಚಯ ಕ್ರಿಯೆ ಉತ್ತಮ


    ದೇಹದಲ್ಲಿ ಚಯಾಪಚಯ ಕ್ರಿಯೆ ಯಾವಾಗ ಉತ್ತಮವಾಗಿರುತ್ತದೆಯೋ ಆಗ, ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಕಡಿಮೆ ಇರುತ್ತದೆ. ದೇಹದ ಮೆಟಬೋಲಿಸಂ ಹೆಚ್ಚಿಸುವುದಕ್ಕೆ ಆಲೂಗಡ್ಡೆ ಉತ್ತಮ ಆಹಾರ. ಆಲೂಗಡ್ಡೆಯ ಸೇವನೆಯಿಂದಾಗಿ ದೇಹದಲ್ಲಿರುವ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ. ಇದರಿಂದಾಗಿ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ.


    ಆಲೂಗಡ್ಡೆ ತಿನ್ನಲು ಸರಿಯಾದ ವಿಧಾನ..?


    ಬೇಯಿಸಿದ ಆಲೂಗಡ್ಡೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ನಂತರ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಅದರ ನಂತರ ಅದನ್ನು ತುಂಡುಗಳಾಗಿ ಕತ್ತರಿಸಿ. ಬೇಯಿಸಿದ ಆಲೂಗಡ್ಡೆಯ ರುಚಿಯನ್ನು ಹೆಚ್ಚಿಸಲು ಕರಿಮೆಣಸನ್ನು ಸೇರಿಸಬಹುದು.


    ಆಲೂಗಡ್ಡೆಯನ್ನು ಮೊಸರು ಅಥವಾ ಮಜ್ಜಿಗೆಯೊಂದಿಗೆ ಬೆರೆಸಿ ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟದಲ್ಲಿ ತಿನ್ನುವುದು ಸಹ ಪ್ರಯೋಜನಕಾರಿಯಾಗಿದೆ. ಬೇಯಿಸಿದ ಆಲೂಗಡ್ಡೆಯ ಸೇವನೆಯು ತೂಕವನ್ನು ನಿಯಂತ್ರಿಸಲು ಸಹಕಾರಿ.


    ಈ ಪದಾರ್ಥವನ್ನ ಆಲೂಗಡ್ಡೆ ಜೊತೆಗೆ ಸೇವಿಸ ಬೇಡಿ


    ಆಲೂಗಡ್ಡೆಯೊಂದಿಗೆ ತುಪ್ಪ, ಎಣ್ಣೆ, ಬೆಣ್ಣೆ, ಕ್ರೀಮ್, ಪನೀರ್ ಮತ್ತು ಕೃತಕ ಸುವಾಸನೆಗಳನ್ನು ಹೆಚ್ಚು ಬಳಸಬೇಡಿ. ಆಲೂಗಡ್ಡೆಯನ್ನು ಬೇಯಿಸಲು ಆಲಿವ್ ಎಣ್ಣೆಯಂತಹ ಆರೋಗ್ಯಕರ ಎಣ್ಣೆಯನ್ನು ಬಳಸಿ. ಹುರಿದ ಆಲೂಗಡ್ಡೆ, ಹೆಚ್ಚು ಸಂಸ್ಕರಿಸಿದ ಆಲೂಗಡ್ಡೆ ಮತ್ತು ಹೆಚ್ಚಿನ ಕ್ಯಾಲೋರಿ ಮಸಾಲೆಗಳೊಂದಿಗೆ ಆಲೂಗಡ್ಡೆ ತಿನ್ನುವುದನ್ನು ತಪ್ಪಿಸಿ.


    ಇದನ್ನೂ ಓದಿ: ಅಮ್ಮಂದಿರ ಗಮನಕ್ಕೆ: ಮಕ್ಕಳಿಗೆ ಬಾಟೆಲ್ ನಲ್ಲಿ ಹಾಲು ಕೊಡ್ತೀರಾ?


    ಆಲೂಗಡ್ಡೆಯ ಇತರ ಪ್ರಯೋಜನ


    ಆಲೂಗಡ್ಡೆಯಲ್ಲಿ ಪ್ರೋಟೀನ್​ಗಳು ಹೇರಳವಾಗಿ ಕಂಡುಬರುತ್ತವೆ. ಈ ತರಕಾರಿಯಲ್ಲಿ ಕಂಡುಬರುವ ಪ್ರೋಟೀನ್ ಅನ್ನು ದೇಹದ ಬಿಲ್ಡಿಂಗ್ ಬ್ಲಾಕ್ ಎಂದು ಕರೆಯಲಾಗುತ್ತದೆ. ನಮ್ಮ ರಕ್ತದ ಅಂಗಾಂಶ ಮತ್ತು ಮೂಳೆಗಳನ್ನು ಬಲಪಡಿಸಲು ಇದು ತುಂಬಾ ಪ್ರಯೋಜನಕಾರಿ .


    ವಿಟಮಿನ್ ಸಿ, ಫೈಬರ್, ಪೊಟ್ಯಾಶಿಯಂ ಮತ್ತು ವಿಟಮಿನ್ ಬಿ 6 ನ ಉತ್ತಮ ಮೂಲವಾಗಿದೆ ಆಲೂಗಡ್ಡೆ..ಆಲೂಗಡ್ಡೆ ತನ್ನಲ್ಲಿ ಆಲ್ಫಾ ಲಿಪೊಯಿಕ್ ಆಸಿಡ್‌ ಪ್ರಮಾಣದಿಂದ ತುಂಬಿರುತ್ತವೆ. ಇದು ನಿಮ್ಮ ಮೆದುಳಿನ ಕಾರ್ಯ ನಿರ್ವಹಣೆಯನ್ನು ಸುಧಾರಿಸಲು ಮತ್ತು ನಿಮ್ಮ ನೆನಪಿನ ಶಕ್ತಿಯ ಕುಸಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    Published by:ranjumbkgowda1 ranjumbkgowda1
    First published: