• Home
  • »
  • News
  • »
  • lifestyle
  • »
  • Health Tips: ಕೊಲೆಸ್ಟ್ರಾಲ್​ ಹೆಚ್ಚಿದ್ರೆ ಮೀನು ತಿನ್ನಬಾರದಾ? ಡಾಕ್ಟರ್​ ಹೇಳೋದೇನು ಕೇಳಿ

Health Tips: ಕೊಲೆಸ್ಟ್ರಾಲ್​ ಹೆಚ್ಚಿದ್ರೆ ಮೀನು ತಿನ್ನಬಾರದಾ? ಡಾಕ್ಟರ್​ ಹೇಳೋದೇನು ಕೇಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

High Cholesterol: ಆದರೆ ಇಲ್ಲಿ ಒಂದು ಗಮನಿಸಬೇಕಾದ ಅಂಶವೆಂದರೆ ಮೀನನ್ನು ತಿನ್ನುವ ಮೊದಲು ಅದರಲ್ಲಿರುವ ಮರ್ಕ್ಯೂರಿ ಪ್ರಮಾಣಗಳ ಬಗ್ಗೆ ಗಮನವಿರಿಸುವುದು. ಕೆಲವು ಮೀನುಗಳಲ್ಲಿ ಹೆಚ್ಚು ಮರ್ಕ್ಯೂರಿ ಪ್ರಮಾಣವಿದ್ದು ಅದರ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ.

  • Share this:

ಇಂದು ಸಾಕಷ್ಟು ವೈವಿಧ್ಯಮಯ ಆಹಾರ (Food) ಲಭ್ಯವಿದೆ. ಅದರಂತೆ ಕೊಬ್ಬು (Cholesterol) ಜಾಸ್ತಿಯಿರುವ ಆಹಾರಗಳು ಹೇರಳವಾಗಿವೆ. ಆದರೆ,ದೇಹದ ಆರೋಗ್ಯ (Health) ಕಾಯ್ದುಕೊಳ್ಳುವ ವಿಷಯ ಬಂದಾಗ ಕೊಲೆಸ್ಟ್ರಾಲ್ ಅಥವಾ ಕೊಬ್ಬು ಒಂದು ಪ್ರಮುಖ ಅಂಶವಾಗಿರುತ್ತದೆ. ಹಾಗಾಗಿ ಹೆಚ್ಚು ಪ್ರಮಾಣದ ಕೊಬ್ಬನ್ನು ಹೊಂದಿರುವ ಜನರು ಅದನ್ನು ನಿಯಂತ್ರಿಸಿಟ್ಟುಕೊಂಡಿರುವ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಆಹಾರ ಸೇವನೆ ಮಾಡುವುದು ಉತ್ತಮ. ಹಾಗಾದರೆ ಅಂತಹ ಜನರು ಮೀನನ್ನು (Fish)  ಸೇವಿಸಬಹುದೇ? ಎಂಬ ಪ್ರಶ್ನೆ ಮೂಡುವುದು ಸಹಜ. ಸಾಮಾನ್ಯವಾಗಿ ಮೀನುಗಳಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬು ಇರುತ್ತದೆಯಾದರೂ ಅದು ಸ್ಯಾಚುರೇಟೆಡ್ ಫ್ಯಾಟ್ ರೂಪದಲ್ಲಿರುತ್ತದೆ. ಹಾಗಾಗಿ ಕೊಬ್ಬಿನ ಬಗ್ಗೆ ನಿಯಮಿತವಾಗಿ ಗಮನವಿರಿಸಿಕೊಂಡವರು ಮೀನನ್ನು ತಿನ್ನಬಹುದೆಂದು ಹೇಳಲಾಗುತ್ತದೆ.


ಅಷ್ಟಕ್ಕೂ ಮನುಷ್ಯನಿಗೆ ಕೊಲೆಸ್ಟ್ರಾಲ್ ಬೇಕೆ? ಹೌದು, ಖಂಡಿತ ಬೇಕು. ಏಕೆಂದರೆ ಕೊಬ್ಬು ಎಂಬುದು ಒಂದು ರೀತಿಯ ಮೇಣದಂತಹ ವಸ್ತುವಾಗಿದ್ದು ದೇಹದಲ್ಲಿ ಹಾರ್ಮೋನುಗಳು ಹಾಗೂ ಜೀವಸತ್ವಗಳ ಉತ್ಪತ್ತಿಗೆ ಅವಶ್ಯಕವಾಗಿದೆ. ಇದರಿಂದಾಗಿಯೇ ಆರೋಗ್ಯಕರ ಜೀವಕೋಶಗಳು ಉತ್ಪತ್ತಿಯಾಗುತ್ತಿರುತ್ತವೆ. ಆದರೆ, ತಪ್ಪಾದ ಕೊಬ್ಬು ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಅದು ಮುಂದೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದು ಸುಳ್ಳಲ್ಲ. ಹಾಗಾದರೆ ತಪ್ಪಾದ ಕೊಬ್ಬು ಯಾವುದು ಎಂಬ ಪ್ರಶ್ನೆ ಮೂಡಬಹುದು.


ವೈದ್ಯರ ಪ್ರಕಾರ, ಎರಡು ರೀತಿಯ ಕೊಬ್ಬುಗಳಿವೆ ಒಂದು ಲೋವ್ ಡೆನ್ಸಿಟಿ ಲಿಪೊಪ್ರೊಟೀನ್ (ಎಲ್‍ಡಿಎಲ್) ಹಾಗೂ ಹೈ ಡೆನ್ಸಿಟಿ ಲಿಪೊಪ್ರೊಟೀನ್ (ಹೆಚ್‍ಡಿಎಲ್). ಇದರಲ್ಲಿ ವೈದ್ಯರು ಹೇಳುವಂತೆ ಎಲ್‍ಡಿಎಲ್ ಕೊಬ್ಬು ಘಾತಕ ಅಥವಾ ಕೆಟ್ಟದ್ದು ಎಂದು ಹೇಳಲಗಿದ್ದರೆ ಹೆಚ್‍ಡಿಎಲ್ ಅನ್ನು ಒಳ್ಳೆಯ ಕೊಲೆಸ್ಟ್ರಾಲ್ ಎಂದು ಕರೆದಿದ್ದಾರೆ.


ಸಾಮಾನ್ಯವಾಗಿ ಲಿಪೊಪ್ರೊಟೀನುಗಳು ರಕ್ತನಾಳಗಳ ಮೂಲಕ ದೇಹದಲ್ಲೆಲ್ಲ ಕೊಲೆಸ್ಟ್ರಾಲ್ ಅನ್ನು ಕೊಂಡೊಯ್ಯುತ್ತವೆ. ಇದರ ಪರಿಣಾಮದಿಂದಾಗಿ ಹೃದಯದ ಆರ್ಟರಿಗಳಲ್ಲಿ ಒಮ್ಮೊಮ್ಮೆ ಈ ಕೊಬ್ಬುಗಳು (ಎಲ್‍ಡಿಎಲ್) ಶೇಖರಣೆಯಾಗಿ ಸಮಸ್ಯೆಯನ್ನು ತಂದೊಡ್ಡುತ್ತವೆ. ಅದೇ ರೀತಿ ಲಿಪೊಪ್ರೊಟೀನುಗಳು ಹೆಚ್‍ಡಿಎಲ್ ಅನ್ನು ಯಕೃತ್ತಿಗೆ ಕೊಂಡೊಯ್ಯುತ್ತದೆ ಹಾಗೂ ಅಲ್ಲಿ ಅದು ಸಂಸ್ಕರಿಸಲ್ಪಡುತ್ತದೆ. ಹಾಗಾಗಿ ಅದು ಆರ್ಟರಿಗಳಲ್ಲಿ ಸೇರುವ ಅವಕಾಶವೇ ಇರುವುದಿಲ್ಲ.


ಇದನ್ನೂ ಓದಿ: ಗರ್ಭಧರಿಸುವ ಆಲೋಚನೆಯಲ್ಲಿದ್ರೆ ಈ ಅಂಶಗಳನ್ನು ಮರೆಯಬೇಡಿ


ನಾವು ಸೇವಿಸುವ ಆಹಾರ, ನಮ್ಮ ಅನುವಂಶಿಕತೆ ಹಾಗೂ ನಾವು ತೆಗೆದುಕೊಳ್ಳುವ ಕೆಲವು ಔಷಧಿಗಳಿಂದ ನಮ್ಮ ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರುಪೇರಾಗುತ್ತಿರುತ್ತದೆ. ದಿ ನ್ಯಾಶನಲ್ ಹಾರ್ಟ್, ಲಂಗ್ ಆಂಡ್ ಬ್ಲಡ್ ಇನ್ಸ್ಟಿಟ್ಯೂಟ್ ಹೇಳುವ ಪ್ರಕಾರ, ಟ್ರಾನ್ಸ್ ಫ್ಯಾಟ್ ಅಥವಾ ಸ್ಯಚುರೇಟೆಡ್ ಫ್ಯಾಟ್ ಹೆಚ್ಚಾಗಿರುವ ಆಹಾರವನ್ನು ಸೇವಿಸುವುದರಿಂದ ಎಲ್‍ಡಿಎಲ್ ಪ್ರಮಾಣ ನಮ್ಮ ದೇಹದಲ್ಲಿ ಹೆಚ್ಚಾಗುತ್ತದೆ.


ಅಮೆರಿಕನ್ ಹಾರ್ಟ್ ಅಸೋಸಿಯೇಷನ್, ಫೈಬರ್ ಅಂಶವಿರುವ ತರಕಾರಿಗಳನ್ನೊಳಗೊಂಡ ಸಮತೋಲನ ಆಹಾರ ಸೇವಿಸುವ ಸಲಹೆ ನೀಡುತ್ತದೆ. ಇದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸಬಹುದಾಗಿದೆ ಎಂದು ಅದರ ವಾದವಾಗಿದೆ. ಮಾಂಸ ಮೀನುಗಳ ಚರ್ಮ ತೆಗೆದು ಅದನ್ನು ಎಣ್ಣೆಯಲ್ಲಿ ಕರಿಯದೆ ಬೇಯಿಸಿ ತಿಂದಾಗ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ನಮ್ಮ ದೇಹ ಸೇರುತ್ತದೆ ಎನ್ನಲಾಗಿದೆ.


ಮೀನುಗಳಲ್ಲಿ ಕೊಲೆಸ್ಟ್ರಾಲ್ ಇದೆಯೆ?


ದಪ್ಪ ಅಥವಾ ತೆಳು ಯಾವುದೇ ಮೀನಿರಲಿ ಅದು ಕಡಿಮೆ ಪ್ರಮಾಣದ ಸ್ಯಾಚುರೇಟೆಡ್ ಫ್ಯಾಟ್ ಹೊಂದಿರುತ್ತವೆ. ಹಾಗಾಗಿ ಮೀನು ಆರೋಗ್ಯಕ್ಕೆ ಒಳ್ಳೆಯ ಆಹಾರವಾಗಿದೆ. ಅಂದರೆ ಜನರು ಅದರಲ್ಲೂ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಿರುವಂತೆ ಎಚ್ಚರಿಕೆವಹಿಸುವವರು ಮೀನುಗಳನ್ನು ತಿನ್ನಬಹುದಾಗಿದೆ.


ಇದನ್ನೂ ಓದಿ: Reiki ಚಿಕಿತ್ಸೆ ನಿಮ್ಮ ಆರೋಗ್ಯದ ಈ ಸಮಸ್ಯೆಗಳಿಗೆ ಪರಿಹಾರವಂತೆ


ಆದರೆ ಇಲ್ಲಿ ಒಂದು ಗಮನಿಸಬೇಕಾದ ಅಂಶವೆಂದರೆ ಮೀನನ್ನು ತಿನ್ನುವ ಮೊದಲು ಅದರಲ್ಲಿರುವ ಮರ್ಕ್ಯೂರಿ ಪ್ರಮಾಣಗಳ ಬಗ್ಗೆ ಗಮನವಿರಿಸುವುದು. ಕೆಲವು ಮೀನುಗಳಲ್ಲಿ ಹೆಚ್ಚು ಮರ್ಕ್ಯೂರಿ ಪ್ರಮಾಣವಿದ್ದು ಅದರ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ. ಹಾಗಾಗಿ ಕಡಿಮೆ ಮರ್ಕ್ಯೂರಿ ಪ್ರಮಾಣದ ಮೀನುಗಳು ಉತ್ತಮ ಆರೋಗ್ಯಕರ ಡಯಟ್ ಎಂದೇ ಹೇಳಬಹುದು.

Published by:Sandhya M
First published: