ಹಣ್ಣುಗಳ ರಾಜನೆಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ..? ಹೆಚ್ಚು ಕಡಿಮೆ ವಿಶ್ವಾದ್ಯಂತ ಬೆಳೆಯುವ ಈ ಹಣ್ಣು ತನ್ನದೇ ಆದ ರುಚಿ, ಬಣ್ಣ, ಸುವಾಸನೆಯಿಂದ ಖ್ಯಾತಿಪಡೆದಿದೆ. ಮಾವಿನ ಹಣ್ಣಿನ ಸೀಸನ್ ಇರುವಾಗ ಈ ಹಣ್ಣಿನ ಯಾವುದಾದರೊಂದು ಖಾದ್ಯ ಮನೆಯಲ್ಲಿ ತಯಾರಾಗಲೇಬೇಕು. ಇಲ್ಲದಿದ್ದರೆ ಸಂಪೂರ್ಣ ಮಾವಿನ ಹಣ್ಣನ್ನು ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತಹ ಅನುಭವ. ನೈಸರ್ಗಿಕ ಸಕ್ಕರೆಯನ್ನೊಳಗೊಂಡಿರುವ ಮಾವನ್ನು ಮಧುಮೇಹಿಗಳು ಮಾತ್ರ ತಿನ್ನಲೇಬಾರದು ಎಂದು ಹೇಳುತ್ತಾರೆ. ಕೆಲವು ವೈದ್ಯರು ಒಂದೆರಡು ತುಂಡು ಮಾವಿನ ಹಣ್ಣನ್ನು ಸೇವಿಸಬಹುದು ಎಂದು ಸಲಹೆ ನೀಡಿದರೆ ಇನ್ನು ಕೆಲವರು ಮಾವಿನ ಹಣ್ಣನ್ನು ಮುಟ್ಟಲೇಬಾರದು ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಈ ಲೇಖನದಲ್ಲಿ ಮಧುಮೇಹಿಗಳು ಮಾವಿನ ಹಣ್ಣನ್ನು ಸೇವಿಸಬಹುದೇ? ಸೇವಿಸಬಾರದೇ ಎಂಬ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.
ಮಾವಿನ ಹಣ್ಣು ಪೋಷಕಾಂಶಗಳ ಆಗರ
ಸಾಕಷ್ಟು ಪ್ರಮಾಣದ ವಿಟಮಿನ್, ಮಿನರಲ್ಗಳನ್ನು ಮಾವಿನ ಹಣ್ಣು ಒಳಗೊಂಡಿದ್ದು ಕ್ಯಾಲೋರಿ, ಫ್ಯಾಟ್, ಕಾರ್ಬ್ ಹೀಗೆ ಪ್ರತಿಯೊಂದು ಅಂಶವನ್ನು ಸರಿಸಮನಾಗಿ ಮಿಳಿತಗೊಂಡಿದೆ. ವಿಟಮಿನ್ ಎ, ವಿಟಮಿನ್ ಇ ಕೂಡ ಈ ಹಣ್ಣುಗಳಲ್ಲಿದ್ದು ಪೊಟ್ಯಾಶಿಯಮ್ ಅನ್ನೂ ಒಳಗೊಂಡಿದೆ.
ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮವೇನು?
ಮಾವಿನ ಹಣ್ಣಿನಲ್ಲಿರುವ 90% ಕ್ಯಾಲೊರಿ ಅದರಲ್ಲಿರುವ ಸಕ್ಕರೆ ಅಂಶದಿಂದ ಬಂದಿದೆ. ಹಾಗಾಗಿಯೇ ಇದು ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೂ ಫೈಬರ್ ಮತ್ತು ಬೇರೆ ಬೇರೆ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಮಾವಿನ ಗ್ಲೂಕೋಸ್ ಮಟ್ಟ
ರಕ್ತದ ಸಕ್ಕರೆ ಮಟ್ಟದ ಮೇಲೆ ಹಣ್ಣುಗಳು ಪರಿಣಾಮ ಬೀರುತ್ತವೆಯೇ ಎಂಬುದನ್ನು ಪರಿಶೀಲಿಸಲು ಗ್ಲೂಕೋಸ್ ಮಟ್ಟವನ್ನು ನೋಡಲಾಗುತ್ತದೆ. ಮಾವಿನ ಗ್ಲುಕೋಸ್ ಮಟ್ಟ 51 ಆಗಿದ್ದು ಇದನ್ನು ಕಡಿಮೆ ಗ್ಲೂಕೋಸ್ ಇರುವ ಹಣ್ಣೆಂದು ಪರಿಗಣಿಸಲಾಗಿದೆ. ಆದರೆ ಮಾವಿನ ಹಣ್ಣನ್ನು ಸೇವಿಸುವಾಗ ಅದರ ಪ್ರಮಾಣವನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ.
ಮಾವಿನ ಹಣ್ಣನ್ನು ಮಧುಮೇಹಿ ಸ್ನೇಹಿಯನ್ನಾಗಿ ಪರಿವರ್ತಿಸುವುದು ಹೇಗೆ
ಒಂದೇ ಬಾರಿಗೆ ಹೆಚ್ಚು ಹಣ್ಣುಗಳನ್ನು ಸೇವಿಸದೇ ಅಲ್ಪ ಪ್ರಮಾಣದಲ್ಲಿ ಸೇವಿಸುವುದರ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಏರದಂತೆ ನೋಡಿಕೊಳ್ಳಬಹುದಾಗಿದೆ. ನೀವು ಮಧುಮೇಹಿಗಳಾಗಿದ್ದರೆ 82.5 ಗ್ರಾಮ್ನಷ್ಟು ಹಣ್ಣು ಸೇವಿಸಿ ನಂತರ ನಿಮ್ಮ ರಕ್ತದ ಸಕ್ಕರೆಯು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸಿ. ಹೀಗೆ ನೀವು ಮಾವಿನ ಹಣ್ಣನ್ನು ಎಷ್ಟು ಸೇವಿಸಬಹುದು ಎಂಬುದನ್ನು ಪರಿಶೋಧಿಸಿಕೊಳ್ಳಬಹುದು.
ಮಾವಿನ ಹಣ್ಣಿನೊಂದಿಗೆ ಬೇಯಿಸಿದ ಮೊಟ್ಟೆ, ಒಂದು ತುಂಡು ಚೀಸ್, ಮುಷ್ಟಿಯಷ್ಟು ಒಣ ಹಣ್ಣುಗಳನ್ನು ಸೇರಿಸಿ ಜೊತೆಯಾಗಿ ಸೇವಿಸಿ. ಹೀಗೆ ಪ್ರೋಟೀನ್ ಮೂಲಗಳನ್ನು ಮಾವಿನೊಂದಿಗೆ ಸೇರಿಸಿ ಸೇವಿಸುವುದರಿಂದ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣಲ್ಲಿಟ್ಟುಕೊಳ್ಳಬಹುದು.
ಮಾವಿನ ಹಣ್ಣು ಕಡಿಮೆ ಗ್ಲೂಕೋಸ್ ಮಟ್ಟ, ಫೈಬರ್ ಹಾಗೂ ಆ್ಯಂಟಿಆ್ಯಕ್ಸಿಡೆಂಟ್ಗಳನ್ನು ಒಳಗೊಂಡಿರುವುದರಿಂದ ಇದು ಮಧುಮೇಹಿ ಸ್ನೇಹಿ ಹಣ್ಣಾಗಿದೆ ಎಂಬುದಂತೂ ನಿಜ. ಆದರೂ, ಮಾವಿನ ಹಣ್ಣಿನ ಸೇವನೆಯಲ್ಲಿ ನಿಯಂತ್ರಣ ಅತ್ಯಗತ್ಯವಾದುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ