Health Tips: ಮಧುಮೇಹಿಗಳು ಬೆಲ್ಲ ತಿನ್ನೋದು ಬೆಸ್ಟಾ? ಅಥವಾ ಸಕ್ಕರೆ ತಿಂದರೆ ಒಳ್ಳೆಯದಾ?

Jaggery: ಮಧುಮೇಹಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೆಲ್ಲ ಸೇವನೆಯ ಬದಲು ಜೇನುತುಪ್ಪ ಸೇವನೆ ಮಾಡಬಹುದಂತೆ.ಜೇನುತುಪ್ಪ ಬೆಲ್ಲದಷ್ಟು ಹಾನಿಕಾರಕ ಅಲ್ಲ.. ಹೀಗಾಗಿ ಮಧುಮೇಹ ಇದ್ದವರು ಸಕ್ಕರೆ ಸಿಹಿ ಪದಾರ್ಥ ಮಾತ್ರವಲ್ಲ ಬೆಲ್ಲ ದಿಂದಲೂ ದೂರ ಇರಬೇಕು..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಧುಮೇಹ(Diabetes) ಇಂದು ವಿಶ್ವದಾದ್ಯಂತ(World) ಲಕ್ಷಾಂತರ ಜನರನ್ನು ಆವರಿಸಿಬಿಟ್ಟಿದೆ. ಮಧುಮೇಹದ ಆರಂಭಿಕ ಲಕ್ಷಣಗಳು(Symptoms) ಹೆಚ್ಚಿನ ಜನರಿಗೆ ಗೊತ್ತಾಗಿ ಬಿಡುತ್ತವೆ ಎಂದು ನೀವು ಭಾವಿಸಬಹುದು. ದುರದೃಷ್ಟವಶಾತ್, ಮಧುಮೇಹವು ಇನ್ನೂ ಆರಂಭದಲ್ಲಿರುವಾಗ ನೀಡುವ ಸೂಚನೆಗಳು ಸ್ಪಷ್ಟವಾಗಿದ್ದರೂ ಇದನ್ನು ಬೇರೆ ತೊಂದರೆ ಎಂದೇ ತಿಳಿದುಕೊಂಡು ಅಲಕ್ಷಿಸಿದ ಬಳಿಕ ಮಧುಮೇಹದ ಯಾವುದೋ ಒಂದು ಪರಿಣಾಮ ಕಂಡುಬಂದ ಬಳಿಕವೇ ಮಧುಮೇಹ ಆವರಿಸಿರುವುದು ಗೊತ್ತಾಗುತ್ತದೆ.ಹೀಗಾಗಿ ಮಧುಮೇಹಕ್ಕೆ ಯಾವುದೇ ಚಿಕಿತ್ಸೆ(Treatment) ಇಲ್ಲವಾದರೂ, ಸ್ಥಿತಿಯನ್ನು ನಿಯಂತ್ರಿಸಬಹುದು ಮತ್ತು ಉಪಶಮನ ಮಾಡಬಹುದು. ರಕ್ತದಲ್ಲಿನ(Blood) ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹವನ್ನು ನಿರ್ವಹಿಸಲು ನೈಸರ್ಗಿಕವಾಗಿ ಪೋಷಕಾಂಶಗಳು ಮತ್ತು ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುವ ಉತ್ತಮ ಆಹಾರ ಸೇವನೆ ಅತ್ಯಗತ್ಯ.. ಅದರಲ್ಲೂ ಮಧುಮೇಹಿಗಳು ಬೆಲ್ಲ ಹಾಗು ಸಕ್ಕರೆಯನ್ನು ಸೇವಿಸಬಹುದೇ ಎಂಬ ಗೊಂದಲ ಹೆಚ್ಚಿನ ಜನರಲ್ಲಿ ಇರುತ್ತದೆ.. ಹೀಗಾಗಿ ಮಧುಮೇಹಿಗಳು ಬೆಲ್ಲ ಸೇವನೆ ಮಾಡಿದರೆ ಏನಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.. ಅದಕ್ಕೂ ಮುಂಚೆ ಮಧುಮೇಹ ಎಂದರೇನು ಎಂಬ ಬಗ್ಗೆ ತಿಳಿದುಕೊಳ್ಳೋಣ.

  ಮಧುಮೇಹ ಎಂದರೇನು..?

  ನಮ್ಮ ಮೇದೋಜೀರಕ ಗ್ರಂಥಿ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪಾದನೆ ಮಾಡದಿದ್ದರೆ ಅಥವಾ ಉತ್ಪಾದಿಸಿದರೂ ಬಳಸಲು ಸಾಧ್ಯವಾಗದೇ ಇದ್ದಾಗ ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿಯನ್ನು ಮಧುಮೇಹವೆನ್ನುತ್ತೇವೆ. ಆದರೆ ಈ ಸ್ಥಿತಿ ಒಮ್ಮೆಲೇ ಬಂದಿರುವುದಿಲ್ಲ. ವಯಸ್ಸು ಕಳೆದಂತೆ ನಿಧಾನವಾಗಿ ಆವರಿಸುತ್ತದೆ. ನಮ್ಮ ಮೇದೋಜೀರಕ ಗ್ರಂಥಿ ಅಗತ್ಯವಿದ್ದಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸದೇ ಹೋದಾಗ ರಕ್ತದಲ್ಲಿ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ಹೊರ ಹೋಗುತ್ತದೆ. ಇದಕ್ಕೆ ಟೈಪ್ 1 ಮಧುಮೇಹ ಎನ್ನುತ್ತಾರೆ.

  ಇದನ್ನೂ ಓದಿ: ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ರೆ ತೂಕ ಕಡಿಮೆಯಾಗುತ್ತಂತೆ

  ಒಂದು ವೇಳೆ ಮೇದೋಜೀರಕ ಗ್ರಂಥಿ ಇನ್ಸುಲಿನ್ ಅನ್ನು ಉತ್ಪಾದಿಸಿದ್ದರೂ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದೇ ಹೋದಾಗಲೂ ರಕ್ತದಲ್ಲಿರುವ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತದೆ. ಇದನ್ನು ಟೈಪ್ 2 ಮಧುಮೇಹ ಎನ್ನುತ್ತಾರೆ.

  ಮಧುಮೇಹಿಗಳು ಬೆಲ್ಲ ಸೇವನೆ ಮಾಡಬಹುದಾ..?

  ಬಹುತೇಕರಿಗೆ ಮಧುಮೇಹಿಗಳು ಸಕ್ಕರೆ ತಿನ್ನಬೇಕಾ ಅಥವಾ ಬೆಲ್ಲ ಸೇವನೆ ಮಾಡಬೇಕಾ ಎನ್ನುವ ಗೊಂದಲ ಇರುತ್ತದೆ.. ಆದರೆ ಕೆಲವರ ಪ್ರಕಾರ ಮಧುಮೇಹಿಗಳು ಸಕ್ಕರೆ ಸೇವನೆ ಮಾಡುವ ಬದಲು ಬೆಲ್ಲ ಸೇವನೆ ಮಾಡಬಹುದು ಎಂಬ ಅಭಿಪ್ರಾಯ ಹೊಂದಿರುತ್ತಾರೆ..ಆದರೆ ವಾಸ್ತವವಾಗಿ ಸಕ್ಕರೆ ಬದಲು ಬೆಲ್ಲ ಸೇವಿಸುತ್ತಿದ್ದರೆ ಮಧುಮೇಹಿಗಳ ಆರೋಗ್ಯಕ್ಕೆ ಇದು ತುಂಬಾ ಅಪಾಯಕಾರಿ..

  ಮಧುಮೇಹಿಗಳಿಗೆ ಬೆಲ್ಲ ಹಾನಿಕಾರಕವಾಗಬಹುದು..

  ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ಮಧುಮೇಹ ಹೊಂದಿರುವ ರೋಗಿಗಳು ಬೆಲ್ಲವನ್ನು ತಿನ್ನಬಾರದಂತೆ..
  ಶ್ವಾಸಕೋಶದ ಸೋಂಕು, ಗಂಟಲು ನೋವು, ಮೈಗ್ರೇನ್ ಮತ್ತು ಅಸ್ತಮಾ ಸಮಸ್ಯೆಯಲ್ಲಿ ಬೆಲ್ಲದ ಸೇವನೆ ಪ್ರಯೋಜನಕಾರಿಯಾಗಲಿದೆ. , ಮಧುಮೇಹದ ಸಮಸ್ಯೆಯಲ್ಲಿ ಬೆಲ್ಲವನ್ನು ತಿಂದರೆ ಹಾನಿಯುಂಟಾಗಬಹುದು. ಬೆಲ್ಲದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳಿವೆ. ಆದರೆ ಇದು ಮಧುಮೇಹ ರೋಗಿಗಳಿಗೆ ಸೂಕ್ತವಲ್ಲ.

  ಇನ್ನು ಬೆಲ್ಲದಲ್ಲಿ ಶೇಕಡಾ 65 ರಿಂದ 85 ರಷ್ಟು ಸುಕ್ರೋಸ್ ಇರುತ್ತದೆ. ಮಧುಮೇಹ ರೋಗಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ, ಆದರೆ ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಇದರ ಸೇವನೆಯು ಮಧುಮೇಹ ರೋಗಿಗಳಿಗೂ ಅಪಾಯಕಾರಿ.

  ಇದನ್ನೂ ಓದಿ: ಅಡುಗೆಮನೆಯ ಈ ವಸ್ತುಗಳನ್ನು ಬಳಸಿದ್ರೆ ಕರುಳಿನ ಆರೋಗ್ಯ ಅದ್ಭುತವಾಗಿರುತ್ತೆ, ಆಗ ಜೀರ್ಣಕ್ರಿಯೆಯ ಯಾವ ಸಮಸ್ಯೆಯೂ ಬರಲ್ಲ

  ಬೆಲ್ಲ ಸೇವನೆ ಬದಲಿಗೆ ಜೇನುತುಪ್ಪ ಸೇವನೆ ಸೂಕ್ತ..

  ಇನ್ನು ಮಧುಮೇಹಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೆಲ್ಲ ಸೇವನೆಯ ಬದಲು ಜೇನುತುಪ್ಪ ಸೇವನೆ ಮಾಡಬಹುದಂತೆ.ಜೇನುತುಪ್ಪ ಬೆಲ್ಲದಷ್ಟು ಹಾನಿಕಾರಕ ಅಲ್ಲ.. ಹೀಗಾಗಿ ಮಧುಮೇಹ ಇದ್ದವರು ಸಕ್ಕರೆ ಸಿಹಿ ಪದಾರ್ಥ ಮಾತ್ರವಲ್ಲ ಬೆಲ್ಲ ದಿಂದಲೂ ದೂರ ಇರಬೇಕು.. ಅದರ ಬದಲು ಜೇನುತುಪ್ಪ ಸೇವನೆ ಮಾಡಬಹುದು
  Published by:ranjumbkgowda1 ranjumbkgowda1
  First published: