• Home
  • »
  • News
  • »
  • lifestyle
  • »
  • Lumpy Skin Disease: ಲಂಪಿ ವೈರಸ್​ ಮನುಷ್ಯರಿಗೂ ಹರಡುತ್ತಾ? ರೋಗ ಬಂದ ಹಸುಗಳ ಹಾಲು ಎಷ್ಟು ಸುರಕ್ಷಿತ?

Lumpy Skin Disease: ಲಂಪಿ ವೈರಸ್​ ಮನುಷ್ಯರಿಗೂ ಹರಡುತ್ತಾ? ರೋಗ ಬಂದ ಹಸುಗಳ ಹಾಲು ಎಷ್ಟು ಸುರಕ್ಷಿತ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Can Lumpy Skin Disease Transmit: ಇದು ಸೋಂಕಿತ ಜಾನುವಾರುಗಳ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿತ ಪ್ರಾಣಿಗಳಲ್ಲಿ ಗರ್ಭಪಾತಗಳು ಉಂಟಾಗಿರುವುದು ಸಹ ಕಂಡು ಬಂದಿವೆ.

  • Share this:

ಈಗಂತೂ ಒಂದಲ್ಲ ಒಂದು ವೈರಸ್ (Virus) ಜನರನ್ನು ಬೆಂಬಿಡದೆ ಕಾಡುತ್ತಿದೆ ಅಂತ ಹೇಳಬಹುದು. ಎರಡೂವರೆ ವರ್ಷಗಳಿಂದ ಕೋವಿಡ್-19 9Corona) ಸಾಂಕ್ರಾಮಿಕ ರೋಗವು (Pandemic) ಮನುಷ್ಯರನ್ನು ಬೆಂಬಿಡದೆ ಕಾಡುತ್ತಲೇ ಇರುವಾಗ, ಜಾನುವಾರುಗಳಿಗೆ ಚರ್ಮಗಂಟು ರೋಗ ಎಂದರೆ ಲಂಪಿ ಸ್ಕಿನ್ ಡಿಸೀಸ್ (Lumpy Skin Disease) ಕೆಲವು ತಿಂಗಳುಗಳಿಂದ ಕಾಡಲು ಶುರು ಮಾಡಿದೆ. ಈಗಾಗಲೇ ಭಾರತದಲ್ಲಿ ಅನೇಕ ರಾಜ್ಯಗಳಲ್ಲಿ ಈ ವೈರಸ್ ನಿಂದಾಗಿ ಅಸಂಖ್ಯಾತ ಜಾನುವಾರುಗಳು (Cattles) ಸಾವನ್ನಪ್ಪಿದ್ದು, ಇದೀಗ ಜಾನುವಾರುಗಳಿಗೆ ಲಸಿಕೆಗಳನ್ನು ಹಾಕಿಸುವುದರ ಮೂsಲಕ ಸ್ವಲ್ಪ ಮಟ್ಟಿಗಾದರೂ ವೈರಸ್ ಹಾವಳಿ ನಿಯಂತ್ರಣದಲ್ಲಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಈಗ ಇದರ ಬಗ್ಗೆ ತುಂಬಾನೇ ಗೊಂದಲಗಳು ಸಹ ಎದ್ದಿವೆ, ಜಾನುವಾರುಗಳಿಂದ ಮನುಷ್ಯರಿಗೆ ಈ ವೈರಸ್ ಹರಡುತ್ತದೆಯೇ? ಜಾನುವಾರುಗಳ ಹಾಲು ಕುಡಿಯಲು ಸುರಕ್ಷಿತವಾಗಿದೆಯೇ? ಹೀಗೆ ಅನೇಕ ಪ್ರಶ್ನೆಗಳು ಕಾಡಲು ಶುರುವಾಗಿವೆ ಅಂತ ಹೇಳಬಹುದು.


ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿಜ್ಞಾನಿಗಳು ಭಾರತದಲ್ಲಿ 65,000ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿರುವ ಚರ್ಮಗಂಟು ರೋಗದ ವೈರಸ್ ಮಾನವ ಜನಸಂಖ್ಯೆಗೆ ಹರಡುವ ಯಾವುದೇ ಸಾಧ್ಯತೆ ಇದೆಯೇ ಎಂದು ಕಂಡುಹಿಡಿಯಲು ಅಧ್ಯಯನವನ್ನು ನಡೆಸುತ್ತಿದ್ದಾರೆ.


ಅಪಾಯಕಾರಿ ವೈರಸ್ ಸೋಂಕಿಗೆ ಒಳಗಾದ ಜಾನುವಾರುಗಳ ತಲೆಗಳ ಮಾದರಿಗಳನ್ನು ಪರೀಕ್ಷೆಗಳಿಗಾಗಿ ಸಂಗ್ರಹಿಸಲಾಗಿದೆ. ನೀವು ಸೋಂಕಿತ ಜಾನುವಾರುಗಳ ಹಾಲನ್ನು ಸೇವಿಸಿದರೆ, ನೀವು ಸೋಂಕಿಗೆ ಒಳಗಾಗುತ್ತೀರಾ ಅಂತಾನೂ ಸಹ ಪರೀಕ್ಷೆಗಳು ನಡೆಯುತ್ತಿವೆ.


ನೀವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ಇಲ್ಲಿಯವರೆಗೆ, ಭಾರತದ 18 ರಾಜ್ಯಗಳಲ್ಲಿ 1.5 ಮಿಲಿಯನ್ ಚರ್ಮಗಂಟು ರೋಗ ಪ್ರಕರಣಗಳು ವರದಿಯಾಗಿದ್ದರೂ, ಯಾವುದೇ ಜಾನುವಾರುಗಳಿಂದ ಮನುಷ್ಯನಿಗೆ ಹರಡಿರುವಂತಹ ಪ್ರಕರಣಗಳಿಲ್ಲ ಅಥವಾ ಹರಡಿರುವುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ.


ದನಕರುಗಳಿಂದ ಮನುಷ್ಯನಿಗೆ ಈ ವೈರಸ್ ಹರಡುವುದಿಲ್ಲವಂತೆ!


ಗುರು ಅಂಗದ್ ದೇವ್ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ತಜ್ಞರು ಇತ್ತೀಚೆಗೆ ಈ ರೀತಿಯ ದನಕರುಗಳಿಂದ ಮನುಷ್ಯನಿಗೆ ಈ ವೈರಸ್ ಹರಡುವುದಿಲ್ಲ, ಇದು ಒಂದು ಸುಳ್ಳು ಎಂದು ಹೇಳುವ ಮೂಲಕ ಆ ಭಯವನ್ನು ಹೋಗಲಾಡಿಸಿದ್ದಾರೆ.


ಸೆಂಟರ್ ಫಾರ್ ಒನ್ ಹೆಲ್ತ್ ನಿರ್ದೇಶಕ ಡಾ.ಜಸ್ಬೀರ್ ಸಿಂಗ್ ಬೇಡಿ, ವೈರಸ್ ನೇರ ಸಂಪರ್ಕದ ಮೂಲಕ ಅಥವಾ ಬಾಧಿತ ಪ್ರಾಣಿಗಳ ಹಾಲನ್ನು ಸೇವಿಸುವುದರಿಂದ ಮನುಷ್ಯರಿಗೆ ಸೋಂಕು ತಗುಲುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ನೀವು ಅದನ್ನು ಕುಡಿಯುವ ಮೊದಲು ಹಾಲನ್ನು ಕುದಿಸಬೇಕು ಎಂದು ಅವರು ಒತ್ತಿ ಒತ್ತಿ ಹೇಳಿದ್ದಾರೆ.
ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್‌ಐ) ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಮೊಹಾಂತಿ ಅವರು ಮಾತನಾಡಿ ಸೋಂಕಿತ ಜಾನುವಾರುಗಳ ಹಾಲು ಸೇವಿಸುವುದು ಸುರಕ್ಷಿತವಾಗಿದೆ. ನೀವು ಕುದಿಸಿದ ನಂತರ ಅಥವಾ ಕುದಿಸದೆ ಸೇವಿಸಿದರೂ ಸಹ ಅದರ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಅಂತ ಹೇಳಿದ್ದಾರೆ.


ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


ಸೋಂಕಿತ ಹಸುವಿನ ಹಸಿ ಹಾಲನ್ನು ಕರು ಸೇವಿಸಿದರೆ, ಅದು ವೈರಸ್ ಸೋಂಕಿಗೆ ಒಳಗಾಗಬಹುದು ಎಂದು ಬರೇಲಿಯ ಐಸಿಎಂಆರ್ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ವಿಜ್ಞಾನಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೆ ಸತ್ತ ಪ್ರಾಣಿಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಸಹ ಅನಿವಾರ್ಯವಾಗಿದೆ.


ಈ ವೈರಸ್ ಬಗ್ಗೆ ವಿಜ್ಞಾನಿಗಳು ಹೇಳುವುದೇನು?


ಹೆಚ್ಚಿನ ವಿಜ್ಞಾನಿಗಳು ಇದು ಪ್ರಾಣಿಗಳಿಂದ ಮಾನವರಿಗೆ ಹರಡಬಹುದು ಎಂಬ ವಿಷಯವನ್ನು ತಳ್ಳಿಹಾಕುತ್ತಾರೆ. ಸಂಶೋಧನೆ ನಡೆಸಲು ವಿಜ್ಞಾನಿಗಳನ್ನು ಪಶುವೈದ್ಯರು ಒತ್ತಾಯ ಮಾಡಿದ ನಂತರ ಐಸಿಎಂಆರ್ ಅಧ್ಯಯನವು ಹೊರ ಬಂದಿದೆ.


ಅಕ್ಟೋಬರ್ 7 ರ ಹೊತ್ತಿಗೆ, ಐವಿಆರ್‌ಐ ಸಂಶೋಧಕರು 850 ಮಾದರಿಗಳನ್ನು ಪರೀಕ್ಷಿಸಿದ್ದರು ಮತ್ತು ಅವುಗಳಲ್ಲಿ 300 ಪಾಸಿಟಿವ್ ಎಂದು ಕಂಡು ಬಂದಿದ್ದವು. ಆದರೆ, ಚರ್ಮಗಂಟು ರೋಗ ಮನುಷ್ಯರಿಗೂ ಸೋಂಕು ತಗುಲಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಎಮ್ಮೆಗಳು, ಹಸುಗಳು, ಮೇಕೆಗಳು ಮತ್ತು ಕುರಿಗಳು ಮಾತ್ರ ಈ ರೋಗದಿಂದ ತೊಂದರೆ ಅನುಭವಿಸುತ್ತವೆ ಅಂತ ಹೇಳಲಾಗುತ್ತಿದೆ.


ಚರ್ಮಗಂಟು ರೋಗ ಯಾವ ವೈರಸ್ ನಿಂದ ಬರುತ್ತದೆ?


ಸಿಡುಬಿನ ವೈರಸ್ ಮತ್ತು ಮಂಕಿಪಾಕ್ಸ್ ವೈರಸ್ ನಂತಹ ಒಂದೇ ಕುಟುಂಬದಿಂದ ಬಂದ ಕ್ಯಾಪ್ರಿಪಾಕ್ಸ್ ವೈರಸ್ ಪ್ರಭೇದದಿಂದ ಈ ವೈರಸ್ ಅನ್ನು ಪತ್ತೆ ಹಚ್ಚಲಾಗಿದೆ.


ನೊಣಗಳು, ಸೊಳ್ಳೆಗಳು, ಕಣಜಗಳು ಅಥವಾ ಉಣ್ಣೆಗಳಂತಹ ರಕ್ತವನ್ನು ತಿನ್ನುವ ಕೀಟಗಳಿಂದ ವೈರಸ್ ಹರಡುತ್ತದೆ. ಇದರ ಆರಂಭಿಕ ಲಕ್ಷಣಗಳೆಂದರೆ ಆಯಾಸ, ಜ್ವರ. ಇದಲ್ಲದೇ, ಇನ್ನೂ ಹಲವಾರು ಲಕ್ಷ ಣಗಳಿವೆ.


ಅಲ್ಲದೇ,  ಇದು ಸೋಂಕಿತ ಜಾನುವಾರುಗಳ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿತ ಪ್ರಾಣಿಗಳಲ್ಲಿ ಗರ್ಭಪಾತಗಳು ಉಂಟಾಗಿರುವುದು ಸಹ ಕಂಡು ಬಂದಿವೆ. ಇದಲ್ಲದೆ, ಅವು ನೀಡುವ ಹಾಲಿನ ಪ್ರಮಾಣದಲ್ಲೂ ಸಹ ಗಣನೀಯ ಇಳಿಮುಖ ಕಂಡುಬಂದಿದೆ.


ದಕ್ಷಿಣ, ಪೂರ್ವ ಮತ್ತು ಆಗ್ನೇಯ ದೇಶಗಳಲ್ಲಿ ಈ ಚರ್ಮಗಂಟು ರೋಗದಿಂದ ಜಾನುವಾರುಗಳು ಮತ್ತು ಉತ್ಪಾದನೆಯ ವಿಚಾರದಲ್ಲಿ ಸುಮಾರು 1.45 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಎಫ್ಎಒ ಅಧ್ಯಯನವು ಬಹಿರಂಗಪಡಿಸಿದೆ. ಗಾಳಿಯ ವೇಗ ಹೆಚ್ಚಾಗುವುದು, ನಿರಂತರವಾಗಿ ಮಳೆಯಾಗುವುದು ಮತ್ತು ಆರ್ದ್ರ ಹವಾಮಾನವು ಈ ರೋಗಕ್ಕೆ ಕಾರಣವಾಗುವ ಅಂಶಗಳಾಗಿವೆ.


ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಮಗುವಿನ ಆಗಮನವಾಗಲಿದೆಯೇ? ಹಾಗಿದ್ರೆ ಈ ಎಂಟು ವಸ್ತುಗಳು ತಪ್ಪದೆ ಇಟ್ಕೊಂಡಿರಿ


ಇದಕ್ಕೆ ಲಸಿಕೆಯೇ ರಾಮಬಾಣವೇ?


ಸರಿಯಾಗಿ ಎರಡು ತಿಂಗಳ ಹಿಂದೆ ಆಗಸ್ಟ್ 10 ರಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಜಾನುವಾರುಗಳನ್ನು ಚರ್ಮದ ಕಾಯಿಲೆಯಿಂದ ರಕ್ಷಿಸಲು ಲಂಪಿ-ಪ್ರೊವ್ಯಾಸಿಂಡ್ ಎಂಬ ಸ್ವದೇಶಿ ಲಸಿಕೆಗೆ ಚಾಲನೆ ನೀಡಿದ್ದಾರೆ.


ಹಿಸ್ಸಾರ್ (ಹರಿಯಾಣ) ನ ನ್ಯಾಷನಲ್ ಈಕ್ವಿನ್ ರಿಸರ್ಚ್ ಸೆಂಟರ್, ಐವಿಆರ್‌ಐ, ಇಝತ್‌ನಗರ್ (ಬರೇಲಿ) ಸಹಯೋಗದೊಂದಿಗೆ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಮೊದಲು, ಗೋಟ್ ಪೋಕ್ಸ್ ಲಸಿಕೆಯನ್ನು ಜಾನುವಾರುಗಳಿಗೆ ನೀಡಲಾಗುತ್ತಿತ್ತು. ಲಂಪಿ- ಪ್ರೊವ್ಯಾಸಿಂಡ್ ಲಸಿಕೆಯು ಜಾನುವಾರುಗಳ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗುತ್ತದೆಯೇ ಅಂತ ಕಾದು ನೋಡಬೇಕಿದೆ.

Published by:Sandhya M
First published: