Health Tips: ಪೋಷಕಾಂಶಗಳ ಕೊರತೆಯು ನಡುವಳಿಕೆಯ ಬದಲಾವಣೆಗಳಿಗೆ ಕಾರಣವಾಗಬಹುದೇ?

Lack of Nutrients : ಮಕ್ಖಳಲ್ಲಿ ಉಂಟಾಗುವ ಪೋಷಕಾಂಶದ ಕೊರತೆ ಅವರ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ದೇಹದಲ್ಲಿ ಕಬ್ಬಿಣ, ವಿಟಮಿನ್ ಎ, ಅಯೋಡಿನ್ ಸೇರಿದಂತೆ ಹಲವು ಪೋಷಕಾಂಶಗಳು ಕೊರತೆಯಾಗದಂತೆ ಗಮನಹರಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆರೋಗ್ಯಕರ ದೇಹಕ್ಕೆ ಪೋಷಕಾಂಶಯುಕ್ತ ಆಹಾರ ಕಡ್ಡಾಯ ಎಂಬುದು ಸಾರ್ವತ್ರಿಕ ಸತ್ಯ. ಪೌಷ್ಠಿಕಾಂಶದ ಕೊರತೆಯು ವಿವಿಧ ರೋಗಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಯಾವುದೇ ಪೋಷಕಾಂಶಗಳ ಕೊರತೆಯು ದೈಹಿಕ, ಮಾನಸಿಕ ಮತ್ತು  ನಿಮ್ಮ ನಡವಳಿಕೆಯ  ಮೇಲೆ ಹಲವು ಪರಿಣಾಮಗಳನ್ನು ಉಂಟುಮಾಡಬಹುದು. ಅದರಲ್ಲೂ ಮಕ್ಕಳಲ್ಲಿ ಉಂಟಾಗುವ ಪೋಷಕಾಂಶಗಳ ಕೊರತೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಕಬ್ಬಿಣದ ಕೊರತೆ

ನಿಮ್ಮ ಮಗು  ಹೆಚ್ಚು ಸುಸ್ತು, ಆಯಾಸದಿಂದ ಬಳಲುತ್ತಿದ್ದರೆ ಮತ್ತು ಆಗಾಗ್ಗೆ ಕಿರಿಕಿರಿಯುಂಟುಮಾಡುವುದನ್ನು ನೀವು ಕಂಡುಕೊಂಡರೆ, ಅದರ ಕಾರಣವನ್ನು ತಿಳಿದುಕೊಳ್ಳುವುದು ಮುಖ್ಯ. ಇಂಥಹ ಮಕ್ಕಳಲ್ಲಿ ಗಮನ  ಮತ್ತು ಆಸಕ್ತಿ ಕಡಿಮೆ ಇರುತ್ತದೆ. ಇದು ಕಬ್ಬಿಣದ ಅಂಶದ ಕೊರತೆಯಿಂದ ಉಂಟಾಗುವ ನಡುವಳಿಕೆಯ ಬದಲಾವಣೆಗಳು ಎಂದು ತಜ್ಞರು ಹೇಳುತ್ತಾರೆ. ಅವರಿಗೆ ಸುತ್ತಮುತ್ತಲಿನ ವಸ್ತುಗಳಲ್ಲಿ ಮತ್ತು ವಿಚಾರಗಳಲ್ಲಿ ಆಸಕ್ತಿ ಇರುವುದಿಲ್ಲ. ಅಲ್ಲದೆ, ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ನಿಮ್ಮ ದೇಹದ ಅಂಗಾಂಶಗಳಿಗೆ ಸಾಕಷ್ಟು ಆಮ್ಲಜನಕವನ್ನು ಸಾಗಿಸಲು ನಿಮ್ಮಲ್ಲಿ ಸಾಕಷ್ಟು ಆರೋಗ್ಯಕರ ಕೆಂಪು ರಕ್ತಕಣಗಳಿಲ್ಲದ ಪರಿಸ್ಥಿತಿ ಈ ಕಬ್ಬಿಣ ಕೊರತೆಯಿಂದ ಉಂಟಾಗುತ್ತದೆ. ಪ್ರಿಸ್ಕೂಲ್ ಮಕ್ಕಳಲ್ಲಿ ಕಬ್ಬಿಣದ ಕೊರತೆಯು ಸಾಮಾನ್ಯವಾಗಿ ಕಂಡುಬರುತ್ತದೆ ಮತ್ತು ಅವರಿಗೆ ಕಬ್ಬಿಣದ ಅಂಶವಿರುವ ಆಹಾರವನ್ನು ನೀಡದಿದ್ದರೆ ಅವರು ಸುಲಭವಾಗಿ ಈ ತೊಂದರೆಗೆ ಒಳಾಗಾಗುತ್ತಾರೆ.

ಇದನ್ನೂ ಓದಿ: ನಮ್ಮ ಆರೋಗ್ಯದ ಮೇಲೆ ಖರ್ಜೂರ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

ವಿಟಮಿನ್ ಎ ಕೊರತೆ

ನೀವು ಹೆಚ್ಚಾಗಿ ಗಮನಿಸರಬಹುದು ಬಹಳ ಪೋಷಕರು ತಮ್ಮ ಮಕ್ಕಳು ಹೇಳುವುದನ್ನ ಕೇಳುವುದಿಲ್ಲ, ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ ಎಂದು ದೂರು ಹೇಳುತ್ತಾರೆ. ಇಂಥಹ ಮಕ್ಕಳಲ್ಲಿ ವಿಟಮಿನ್ ಕೊರತೆಯಾಗಿರುತ್ತದೆ. ಈ ಮಕ್ಕಳಿಗೆ ವಿಟಮಿನ್ ಎ ಕೊರತೆಯಿಂದಾಗಿ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ ಮತ್ತು ನೆನಪಿನ ಶಕ್ತಿ ಸಹ ಕ್ಷೀಣಿಸುತ್ತದೆ.  ಹಾಗಾಗಿ ಮಕ್ಕಳಿಗೆ ಹೆಚ್ಚು ಪೋಷಕಾಂಶ ನೀಡುವುದು ಅಗತ್ಯ. ಕೇವಲ ಮಕ್ಕಳಿಗಲ್ಲದೆ, ಇದು ಪುರುಷರು ಮತ್ತು ಮಹಿಳೆಯರಲ್ಲಿ ಆರೋಗ್ಯಕರ ಸಂತಾನೋತ್ಪತ್ತಿ ವ್ಯವಸ್ಥೆಗೆ  ವಿಟಮಿನ್ ಎ ಅಗತ್ಯವಾಗಿರುತ್ತದೆ. ಹಸಿರು ಮತ್ತು ಕಿತ್ತಳೆ ತರಕಾರಿಗಳು ವಿಟಮಿನ್ ಎ ಪೋಷಕಾಂಶಗಳ ಉತ್ತಮ ಮೂಲ.  ಇನ್ನು ನವಜಾತ ಶಿಶುಗಳಿಗೆ, ಎದೆ ಹಾಲನ್ನು ವಿಟಮಿನ್ ಎ  ಇರುವ ಅತ್ಯುತ್ತಮ ಆಹಾರ  ಪರಿಗಣಿಸಲಾಗುತ್ತದೆ.

ಅಯೋಡಿನ್ ಕೊರತೆ

ಅನೇಕ ಸಂದರ್ಭಗಳಲ್ಲಿ ಮಕ್ಕಳು  ಮಾನಸಿಕ ಮತ್ತು, ಬೌದ್ಧಿಕ ಬೆಳವಣಿಗೆಯಲ್ಲಿ ತೊಂದರೆ ಅಥವಾ ದೇಹದ ದೌರ್ಬಲ್ಯವನ್ನು ಅನುಭವಿಸುತ್ತಿರುವುದನ್ನ ನೋಡಿರುತ್ತೇವೆ. ಈ ಸಮಸ್ಯೆಗಳಿಗೆ ದೇಹದಲ್ಲಿ ಅಯೋಡಿನ್ ಅಂಶ ಕಡಿಮೆಯಾಗುವುದೇ ಕಾರಣ. ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ.  ಇನ್ನು ಥೈರಾಯ್ಡ್ ಹಾರ್ಮೋನುಗಳು ಮೆದುಳಿನ ಬೆಳವಣಿಗೆ, ಮೂಳೆಗಳಲ್ಲಿ ಶಕ್ತಿ ಮತ್ತು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವಂತಹ ವಿವಿಧ ದೈಹಿಕ ಬೆಳವಣಿಗೆಯ ಒಂದು ಭಾಗವಾಗಿದೆ. ಆದರೆ ಅಯೋಡಿನ್ ಕೊರತೆ ಥೈರಾಯ್ಡ್ ಹಾರ್ಮೋನ್ಗಳಿಗೆ ಸಮಸ್ಯೆ ಸೃಷ್ಟಿ ಮಾಡುತ್ತದೆ. ಅಯೋಡಿನ್ ಕೊರತೆ ಇದ್ದವರಲ್ಲಿ ಹೃದಯ ಬಡಿತ ಹೆಚ್ಚಾಗುತ್ತದೆ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮತ್ತು ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ.

ಕ್ಯಾಲ್ಸಿಯಂ ಕೊರತೆ

ಒಬ್ಬ ವ್ಯಕ್ತಿಗೆ ದೇಹ ದೌರ್ಬಲ್ಯ ಕಾಣಿಸಿದರೆ, ಆಯಾಸ ಹೆಚ್ಚಾದರೆ  ಅದಕ್ಕೆ ಕಾರಣ ಕ್ಯಾಲ್ಸಿಯಂ ಕೊರತೆ.  ಕ್ಯಾಲ್ಸಿಯಂ ಕೊರತೆಯಿಂದಾಗಿ ಆಯಾಸ ತಲೆನೋವು ಮತ್ತು ತಲೆ ತಿರುಗುವ ಸಾಧ್ಯತೆ ಹೆಚ್ಚು. ಇದು ಗಮನದ ಕೊರತೆ, ಮರೆವಿನ ಸಮಸ್ಯೆಮತ್ತು ಗೊಂದಲಗಳನ್ನು ಸೃಷ್ಟಿ ಮಾಡುತ್ತದೆ. ಇದಲ್ಲದೆ, ಕ್ಯಾಲ್ಸಿಯಂ ಸಂವಹನ ಕಣವಾಗಿ ಕೆಲಸ ಮಾಡುತ್ತದೆ. ಇದು ಇಲ್ಲದೆ, ನಿಮ್ಮ ಹೃದಯ, ಸ್ನಾಯುಗಳು ಮತ್ತು ನರಗಳು ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಡೈರಿ ಉತ್ಪನ್ನಗಳು ಮತ್ತು ಹಸಿರು ತರಕಾರಿಗಳು ಕ್ಯಾಲ್ಸಿಯಂನ ಉತ್ತಮ ಮೂಲ.

ಮೆಗ್ನೀಸಿಯಮ್ ಕೊರತೆ

ಮಗುವಿನಲ್ಲಿ ಕೈ ಅಥವಾ ಕಾಲುಗಳಿಂದ ಚಡಪಡಿಸುವ ಅಥವಾ, ಹೈಪರ್ಆಕ್ಟಿವಿಟಿಯಂತಹ ಗುಣಗಳು ಕಂಡು ಬಂದರೆ ಅದು ಮೆಗ್ನೀಸಿಯಮ್ ಕೊರತೆಯ ಲಕ್ಷಣ. ಅಲ್ಲದೆ ಅವರು  ಬಹು ಬೇಗನೆ ಉದ್ವೇಗಕ್ಕೆ ಒಳಗಾಗುತ್ತಾರೆ ಮತ್ತು ಅವರು ತಮ್ಮ ಕೋಪದ ಮೇಲೆ ಮತ್ತು ನಡುವಳಿಕೆಯ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ.ಮೆಗ್ನೀಸಿಯಮ್ ಕೊರತೆಯು ಟೈಪ್ 2 ಡಯಾಬಿಟಿಸ್, ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ಹೃದ್ರೋಗದಂತಹ ಹಲವಾರು  ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
Published by:Sandhya M
First published: