• Home
 • »
 • News
 • »
 • lifestyle
 • »
 • Osteoarthritis: ಶಸ್ತ್ರಚಿಕಿತ್ಸೆಯಿಲ್ಲದೆಯೇ ಗುಣವಾಗುತ್ತಾ ಮೊಣಕಾಲಿನ ಅಸ್ಥಿಸಂಧಿವಾತ? ವೈದ್ಯರು ಏನ್ ಹೇಳ್ತಾರೆ ನೋಡಿ

Osteoarthritis: ಶಸ್ತ್ರಚಿಕಿತ್ಸೆಯಿಲ್ಲದೆಯೇ ಗುಣವಾಗುತ್ತಾ ಮೊಣಕಾಲಿನ ಅಸ್ಥಿಸಂಧಿವಾತ? ವೈದ್ಯರು ಏನ್ ಹೇಳ್ತಾರೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Osteoarthritis: ಹಿರಿಯ ವಯಸ್ಕರಲ್ಲಿ ಮೊಣಕಾಲು ನೋವು ಮತ್ತು ಅಂಗವೈಕಲ್ಯಕ್ಕೆ ಇದು ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಮೊಣಕಾಲಿನ ಅಸ್ಥಿಸಂಧಿವಾತವು ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚು ಕಂಡು ಬರುತ್ತದೆ.

 • Share this:

ನಿಮ್ಮ ಮನೆಯಲ್ಲಿ ವಯಸ್ಸಾದ (Age) ಹಿರಿಯರು ಇದ್ದರೆ, ಅವರಿಗೆ ಮೊಣಕಾಲಿನಲ್ಲಿ ವಿಪರೀತ ನೋವು ಅಂತ ವೈದ್ಯರ ಬಳಿ ಕರೆದುಕೊಂಡು ಹೋದಾಗ ನೀವು ‘ಆಸ್ಟಿಯೋ ಅರ್ಥ್ರೈಟೀಸ್’ ಎಂಬ ಪದವನ್ನು ವೈದ್ಯರ ಬಾಯಿಂದ (Mouth) ಕೇಳಿರುತ್ತೀರಿ. ಇದನ್ನು ಕನ್ನಡದಲ್ಲಿ ಮೊಣಕಾಲು ಅಸ್ಥಿಸಂಧಿವಾತ ಅಥವಾ ಮೊಣಕಾಲಿನ ಕೀಲು ನೋವು (Pain) ಅಂತಾನೂ ಕರೆಯುತ್ತಾರೆ.ಇದು ಒಂದು ಕ್ಷೀಣಿಸುವ ಕೀಲು ರೋಗವಾಗಿದ್ದು, ಇದರಿಂದ ಆರ್ಟಿಕ್ಯುಲರ್ ಮೃದ್ವಸ್ಥಿಗೆ ಹಾನಿಯಾಗುತ್ತದೆ (Damage). "ಮೃದ್ವಸ್ಥಿಯು ಬಲವಾದ, ಹೊಂದಿಕೊಳ್ಳುವ ಅಂಗಾಂಶವಾಗಿದ್ದು, ಮೂಳೆಗಳು ಪರಸ್ಪರ ಉಜ್ಜುವುದನ್ನು ತಡೆಯುವ ಮೂಲಕ ಗಾಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ" ಎಂದು ನವದೆಹಲಿಯ (New Delhi) ಇಂಡಿಯನ್ ಸ್ಪೈನಲ್ ಇಂಜುರಿ ಸೆಂಟರ್ ನ ಕನ್ಸಲ್ಟೆಂಟ್ ಪೇನ್ ಫಿಜಿಶಿಯನ್ ಡಾ ವಿವೇಕ್ ಲೂಂಬಾ ಹೇಳಿದ್ದಾರೆ.


ಹಿರಿಯ ವಯಸ್ಕರಲ್ಲಿ ಮೊಣಕಾಲು ನೋವು ಮತ್ತು ಅಂಗವೈಕಲ್ಯಕ್ಕೆ ಇದು ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.


ಇದು ಹೆಚ್ಚಾಗಿ ಯಾರಲ್ಲಿ ಕಾಣಿಸಿಕೊಳ್ಳುತ್ತದೆ?


ಮೊಣಕಾಲಿನ ಅಸ್ಥಿಸಂಧಿವಾತವು ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚು ಕಂಡು ಬರುತ್ತದೆ. "ಮೊಣಕಾಲಿನಲ್ಲಿ ಕಾಣಿಸುವ ಈ ಸ್ಥಿತಿಗೆ ಮುಖ್ಯವಾದ ಕಾರಣಗಳು ಎಂದರೆ ಅದು ವಯಸ್ಸಾಗುವಿಕೆ, ಅಧಿಕ ತೂಕ ಅಥವಾ ಬೊಜ್ಜು, ಮೊಣಕಾಲು ಗಾಯಗಳು ಅಥವಾ ಶಸ್ತ್ರಚಿಕಿತ್ಸೆ ಮತ್ತು ನಿರಂತರ ಮೊಣಕಾಲು ಬಾಗುವಿಕೆಯ ಅಗತ್ಯವಿರುವ ಕೆಲವು ಕೆಲಸಗಳನ್ನು ಮಾಡುವುದರಿಂದ ಉಂಟಾಗುತ್ತದೆ" ಎಂದು ಅವರು ಹೇಳಿದ್ದಾರೆ.


ಮೊಣಕಾಲು ಅಸ್ಥಿಸಂಧಿವಾತದ ಪ್ರಾಥಮಿಕ ಲಕ್ಷಣ


ಮೊಣಕಾಲು ಅಸ್ಥಿಸಂಧಿವಾತದ ಪ್ರಾಥಮಿಕ ಲಕ್ಷಣವೆಂದರೆ ಮೊಣಕಾಲು ನೋವು ಮತ್ತು ಆ ನೋವಿನ ಜೊತೆಗೆ ರೋಗಿಗಳಿಗೆ ಊತ ಕಾಣಿಸಿಕೊಳ್ಳುವುದು, ಮೊಣಕಾಲು ಬಿಗಿತವಾಗುವುದು, ಕಾರ್ಯನಿರ್ವಹಣೆಯನ್ನು ಸೀಮಿತಗೊಳಿಸುವ ಮೊಣಕಾಲಿನ ಅಸ್ವಸ್ಥತೆ, ನಮ್ಯತೆಯ ನಷ್ಟ, ವಿಶ್ರಾಂತಿ ಪಡೆಯುವಾಗ ಅಥವಾ ರಾತ್ರಿಯಲ್ಲಿ ನೋವು, ತಮ್ಮ ಮೊಣಕಾಲನ್ನು ಚಲಿಸುವಾಗ ಬಿರುಕು ಬಿಡುವುದು ಅಥವಾ ರುಬ್ಬುವ ಶಬ್ದ ಮತ್ತು ನಡೆದಾಡುವ ದೂರಗಳ ಮೇಲೆ ಸಹ ಇದು ಪರಿಣಾಮ ಬೀರಬಹುದು.


ಮೊಣಕಾಲಿನ ಅಸ್ಥಿಸಂಧಿವಾತವನ್ನು ಹೇಗೆ ಕಂಡು ಹಿಡಿಯಲಾಗುತ್ತದೆ?


ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ಇತಿಹಾಸ ಮತ್ತು ದೈಹಿಕ ಪರೀಕ್ಷೆಯ ಜೊತೆಗೆ, ರೋಗಿಗಳಿಗೆ ಈ ಕೆಳಗಿನ ಹೆಚ್ಚಿನ ಪರೀಕ್ಷೆಗಳ ಅಗತ್ಯ ಬೀಳಬಹುದು:


- ರಕ್ತ ಪರೀಕ್ಷೆಗಳನ್ನು ಮಾಡಿಸುವುದು


- ಕ್ಷ-ಕಿರಣ ಮಾಡಿಸುವುದು


- ಆರ್ಥ್ರೋಸೆಂಟೆಸಿಸ್ ಮಾಡುವುದು: ಎಂದರೆ ಸಂಧಿವಾತದ ಕಾರಣವನ್ನು ಕಂಡು ಹಿಡಿಯಲು ಸೈನೋವಿಯಲ್ ದ್ರವವನ್ನು ಪಡೆಯಲು, ಸ್ಟೆರೈಲ್ ಸೂಜಿಯನ್ನು ಬಳಸಿ ಮಾಡುವ ಒಂದು ವೈದ್ಯಕೀಯ ಕಾರ್ಯವಿಧಾನ.


ಇದನ್ನೂ ಓದಿ: ನೀವು ಕಾಫಿ ಪ್ರಿಯರಾ? ಹಾಗಾದ್ರೆ ಇಲ್ಲಿದೆ ನೋಡಿ ನಿಮಗೆ ಸಂತಸದ ಸುದ್ದಿ!


ಆರ್ಥ್ರೋಸ್ಕೋಪಿ: ಒಎಯಿಂದಾಗಿ ಕೀಲುಗಳಿಗೆ ಉಂಟಾಗುವ ಅವನತಿಯ ದೃಶ್ಯ ಡೇಟಾವನ್ನು ಪಡೆಯಲು ಪೀಡಿತ ಕೀಲಿನೊಳಗೆ ಕ್ಯಾಮೆರಾವನ್ನು ಸೇರಿಸುವ ಒಂದು ಶಸ್ತ್ರಚಿಕಿತ್ಸಾ ವಿಧಾನ


- ಎಂ ಆರ್ ಐ (ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್) ಮಾಡಿಸುವುದು


ಡಾ. ಲೂಂಬಾ ಅವರ ಪ್ರಕಾರ, "ಮೊಣಕಾಲು ಅಸ್ಥಿಸಂಧಿವಾತವು ದಿನದಿಂದ ದಿನಕ್ಕೆ ನಿಧಾನವಾಗಿ ಬೆಳೆಯುತ್ತದೆ, ಇದು ದೈನಂದಿನ ಚಟುವಟಿಕೆಗಳು ಮತ್ತು ಕೆಲಸ ಮಾಡುವ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಆದ್ದರಿಂದ, ಆರಂಭಿಕ ಚಿಕಿತ್ಸೆಯನ್ನು ಪಡೆಯುವ ಮೂಲಕ ಪರಿಸ್ಥಿತಿ ಹದಗೆಡುವುದನ್ನು ತಡೆಯಲು ಪ್ರಯತ್ನಿಸಬಹುದು" ಎಂದು ಅವರು ಹೇಳಿದರು.


ಶಸ್ತ್ರಚಿಕಿತ್ಸೆಯಿಲ್ಲದೆ ಇದನ್ನು ಗುಣಪಡಿಸಬಹುದೇ?


ಮೊಣಕಾಲು ಅಸ್ಥಿಸಂಧಿವಾತದಿಂದ ಬಳಲುತ್ತಿರುವ ಹೆಚ್ಚಿನ ಜನರು ನೋವು ಮತ್ತು ಅಸ್ವಸ್ಥತೆಯಿಂದ ಪರಿಹಾರ ಪಡೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎಂದು ಭಯಪಡುತ್ತಾರೆ. ಆದಾಗ್ಯೂ, ನೋವನ್ನು ನಿವಾರಿಸಲು ಸಹಾಯ ಮಾಡುವ ಹಲವಾರು ನೋವು ನಿರ್ವಹಣಾ ಆಯ್ಕೆಗಳಿವೆ ಅಂತ ಡಾ. ಲೂಂಬಾ ಹೇಳುತ್ತಾರೆ.


ಇದನ್ನೂ ಓದಿ: ಮುಖಕ್ಕೆ ಹೊಳಪು ನೀಡೋ ಕಲ್ಪತರು ಫೇಷಿಯಲ್, ಮನೆಯಲ್ಲೇ ಹೀಗೆ ತಯಾರಿಸಿ


 • ವಾಕ್ ಮಾಡುವುದು, ಸೈಕ್ಲಿಂಗ್ ಮಾಡುವುದು, ಐಸೋಮೆಟ್ರಿಕ್ ಮತ್ತು ಐಸೊಟೋನಿಕ್ ಅಂತಹ ಮೊಣಕಾಲು ವ್ಯಾಯಾಮಗಳನ್ನು ಮಾಡುವುದು.

 • ತೂಕ ಇಳಿಸುವುದು: ತೂಕದಲ್ಲಿ 2-5 ಕಿಲೋಗ್ರಾಂಗಳಷ್ಟು ಸ್ವಲ್ಪ ಕಡಿಮೆಯಾದರೂ ಸಹ, ಮೊಣಕಾಲು ಕೀಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 • ಅಕ್ವಾಟಿಕ್ (ನೀರು ಆಧಾರಿತ) ಚಿಕಿತ್ಸೆಗಳನ್ನು ಪಡೆಯುವುದು.


ವೈದ್ಯಕೀಯ ಚಿಕಿತ್ಸೆಗಳು

 • ಅಸೆಟಮಿನೋಫೆನ್, ಐಬುಪ್ರೊಫೆನ್ ಅಥವಾ ಎಟೋಸೀನ್ ನಂತಹ ಮತ್ತು ವೊಲಿನಿ ಜೆಲ್ ನಂತಹ ಸ್ಥಳೀಯ ಔಷಧಿಗಳನ್ನು ಮೊದಲ ಸಾಲಿನ ನಿರ್ವಹಣೆಗಾಗಿ ಬಳಸಲಾಗುತ್ತದೆ.

 • ನೋವು ಹಾಗೆಯೇ ಮುಂದುವರಿದರೆ, ಟ್ರಾಮಡಾಲ್ (ಅಲ್ಟ್ರಾಸೆಟ್) ನಂತಹ ಓಪಿಯಾಡ್ ಗಳನ್ನು ಸೂಚಿಸಬಹುದು.

 • ನೋವು ತೀವ್ರವಾದ ಸಂದರ್ಭಗಳಲ್ಲಿ, ಮಾರ್ಫಿನ್ ನಂತಹ ಬಲವಾದ ಒಪಿಯಾಡ್ ಗಳನ್ನು ಚಿಕಿತ್ಸಾ ಕ್ರಮಕ್ಕೆ ಸೇರಿಸಬಹುದು.

 • ಇಂಟ್ರಾ ಆರ್ಟಿಕ್ಯುಲರ್ ಮೊಣಕಾಲಿನ ಕೀಲು ಚುಚ್ಚುಮದ್ದುಗಳು - ಇದು ಮೊಣಕಾಲಿನ ಕೀಲಿಗೆ ನೀಡಲಾದ ಕಾರ್ಟಿಕೋಸ್ಟೆರಾಯ್ಡ್ ಮತ್ತು ಹೈಲುರೋನಿಡೇಸ್ ಇಂಜೆಕ್ಷನ್ ಗಳನ್ನು ಒಳಗೊಂಡಿರುತ್ತದೆ. ಕಾರ್ಟಿಕೊಸ್ಟೆರಾಯ್ಡ್ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೈಲುರೋನಿಡೇಸ್ ಲ್ಯೂಬ್ರಿಕೇಶನ್ ಅನ್ನು ಒದಗಿಸುತ್ತದೆ.

 • ರೇಡಿಯೋ ಫ್ರೀಕ್ವೆನ್ಸಿ ಅಬ್ಲೇಶನ್: ಮೊಣಕಾಲು ಕೀಲುಗಳನ್ನು ಪೂರೈಸುವ ನರಗಳ ರೇಡಿಯೋ ಫ್ರೀಕ್ವೆನ್ಸಿ ಅಬ್ಲೇಶನ್ ಅನ್ನು ವಕ್ರೀಭವನ ಪ್ರಕರಣಗಳಿಗೆ ಕಾಯ್ದಿರಿಸಲಾಗಿರುತ್ತದೆ ಮತ್ತು 1 ವರ್ಷದವರೆಗೆ ನೋವು ನಿವಾರಕವನ್ನು ಒದಗಿಸಬಹುದು. ಈ ವಿಧಾನವು ಅನರ್ಹ ಅಥವಾ ಮೊಣಕಾಲು ಶಸ್ತ್ರಚಿಕಿತ್ಸೆ ಬೇಡ ಅಂತ ಹೇಳುವ ರೋಗಿಗಳಿಗೆ ಒಂದು ವರದಾನವಾಗಿ ಕೆಲಸ ಮಾಡಬಹುದು.

First published: