ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನಾಗಿ (World Aids Day) ಆಚರಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಏಡ್ಸ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಇಲ್ಲದಿದ್ದರೂ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸಾಗುತ್ತಲೇ ಇದೆ. ಪ್ರತಿ ವರ್ಷ ಏಡ್ಸ್ ದಿನದಂದು ಒಂದೊಂದು ಸ್ಲೋಗೋನ್ನೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಜಾಗೃತಿ ಮೂಡಿಸುತ್ತಿದೆ. ಈ ವರ್ಷ "ನಮ್ಮನ್ನು ಪರೀಕ್ಷೆಗೆ ಒಳಪಡಿಸುವುದು: ಎಚ್ಐವಿಯನ್ನು ಅಂತ್ಯಗೊಳಿಸಲು ಸಮಾನತೆಯನ್ನು ಸಾಧಿಸುವುದು ಎಂಬ ಘೋಷ ವಾಕ್ಯದೊಂದಿಗೆ ವಿಶ್ವದೆಲ್ಲೆಡೆ ಏಡ್ಸ್ ಜಾಗೃತಿಗೆ ಮುಂದಾಗಿದೆ. ಇನ್ನು, ಏಡ್ಸ್ ಹೊಂದಿರುವ ಮಹಿಳೆಯರು ಗರ್ಭಧಾರಣೆ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಏಡ್ಸ್ ಇರುವ ಮಹಿಳೆಯಿಂದ (Women) ಮಗುವಿಗೂ (Child) ಏಡ್ಸ್ ಹರಡಲಿದೆಯೇ ಎಂಬ ಗೊಂದಲ ಈಗಲೂ ಸಾಕಷ್ಟು ಮಹಿಳೆಯರಲ್ಲಿ ಇದೆ. ಹೀಗಾಗಿ ಫೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸನ್ ಸಮಾಲೋಚಕರಾದ ಡಾ. ಅನಂತ ಪದ್ಮನಾಭ ಅವರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.
ಏಡ್ಸ್ ಹೊಂದಿದ ಮಹಿಳೆಯಿಂದ ಮಗುವಿಗೆ ಏಡ್ಸ್ ಹರಡಬಹುದೇ?:
ಏಡ್ಸ್ (ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್) ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ನಿಂದ ಉಂಟಾಗುತ್ತದೆ. ಎಚ್ಐವಿ ಲೈಂಗಿಕವಾಗಿ ಹರಡುವ ಸೋಂಕಾಗಿದೆ. ಲೈಂಗಿಕ ಚಟುವಟಿಕೆಯಷ್ಟೇ ಅಲ್ಲದೆ, ಸೋಂಕಿತರು ಬಳಸಿದ ಸೂಜಿಯ ಮರುಬಳಕೆ, ರಕ್ತದಾನ, ಸೋಂಕಿತ ವ್ಯಕ್ತಿಯಿಂದ ಗರ್ಭಧಾರಣೆ ಹಾಗೂ ಹಾಲುಣಿಸುವ ತಾಯಿಯಿಂದ ಮಗುವಿಗೆ ಸೋಂಕು ಹರಡುತ್ತದೆ. ಆದರೆ, ಗರ್ಭಧರಿಸಿದ ವೇಳೆಯೇ ಮಗುವಿಗೆ ಸೋಂಕು ಹರಡದಂತೆ ನೋಡಿಕೊಳ್ಳುವ ಪ್ರಕ್ರಿಯೆ ಸಹ ಇದೆ. ಈ ವೇಳೆ ಸೋಂಕು ತಡೆ ಔಷಧ ನೀಡುವ ಮೂಲಕ ಮಗುವನ್ನು ಸುರಕ್ಷಿತಗೊಳಿಸಬಹುದು. ಹೀಗಾಗಿ ಗರ್ಭಧರಿಸಿದ ಸೋಂಕಿತ ಮಹಿಳೆಯು ಸೂಕ್ತ ವೈದ್ಯರನ್ನು ಕಾಣುವ ಮೂಲಕ ಮಗುವಿಗೂ ಸೋಂಕು ಹರಡದಂತೆ ತಡೆಗಟ್ಟಬಹುದು.
ಸೋಂಕಿತ ಗಂಡಸಿನಿಂದ ಏಡ್ಸ್ ಹರಡಲಿದೆ:
ಸೋಂಕು ದೃಢಪಟ್ಟ ಗಂಡಸಿನ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದಾಗ ಆ ಮಹಿಳೆಗೂ ಸೋಂಕು ತಗಲುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಸೋಂಕಿನಿಂದ ದೂರ ಉಳಿಯಬಹುದು. ಆದರೆ, ಸೋಂಕಿತರ ಜೊತೆ ಲೈಂಗಿಕ ಸಂಪರ್ಕ ಹೊಂದದೇ ಇರುವುದೇ ಒಳ್ಳೆಯದು. ಸೋಂಕಿತ ಗಂಡಸಿನಿಂದ ಗರ್ಭಧರಿಸಿದರೆ, ಶೇ.900ರಷ್ಟು ಪ್ರಮಾಣದಲ್ಲಿ ಮಗುವಿಗೆ ಸಹ ಸೋಂಕು ತಗುಲಲಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಈ ಹಣ್ಣು ಕೂಡ ಪ್ರಯೋಜನಕಾರಿಯಂತೆ, ಸಿಕ್ರೆ ಮಿಸ್ ಮಾಡ್ಬೇಡಿ
ಸೋಂಕಿತ ಮಹಿಳೆ ಹಾಲುಣಿಸಿದರೆ ಏಡ್ಸ್ ಹರಡಲಿದೆಯೇ?
ಹೌದು, ಸೋಂಕಿತ ಮಹಿಳೆ ಸೋಂಕಿತ ತಾಯಿಯಿಂದ ಮಗುವಿಗೆ ಎಚ್ಐವಿ ಹರಡಬಹುದೇ? ಎನ್ನುವ ಪ್ರಶ್ನೆ ಕಾಡುತ್ತದೆ. ಜರಾಯುವಿನ ಮೂಲಕ ಸೋಂಕಿತ ತಾಯಿಯಿಂದ ಮಗುವಿಗೆ ಎಚ್ಐವಿ ಹರಡಬಹುದು. ತಾಯಿಯ ರಕ್ತ ಅಥವಾ ದ್ರವದ ಮೂಲಕ ಹೆರಿಗೆಯ ಸಮಯದಲ್ಲಿ ಮಗುವಿಗೆ ವೈರಸ್ಗೆ ತಾಗಬಹುದು. ಈ ಸಮಯದಲ್ಲಿ ಮಗುವಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಹೆರಿಗೆಯ ನಂತರ, ಸ್ತನ್ಯಪಾನದ ಮೂಲಕವೂ ವೈರಸ್ ಹರಡಬಹುದು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಬೇರೊಂದು ತಾಯಿ ಸ್ತನ್ಯಪಾನ ಮಾಡಿಸಬಹುದು.
ಇದನ್ನೂ ಓದಿ: ಪ್ರೋಟೀನ್ ಕೊರತೆ ಇದ್ರೆ ಈ ಹಣ್ಣುಗಳೇ ಪರಿಹಾರವಂತೆ
ಹುಟ್ಟಿದ ಮಗುವಿನ ಮೇಲೆ ನಿಗಾ ಇರಲಿ
ಸೋಂಕಿತ ತಾಯಿಯಿಂದ ಜನಿಸಿದ ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸುವ ಅಗತ್ಯವಿದೆ. ಹುಟ್ಟಿದಾಗ ಸೋಂಕುರಹಿತವಾಗಿ ಹುಟ್ಟಿದ್ದರೂ, ಕಾಲ ಕ್ರಮೇಣ, ಇದು ರಕ್ತದ ಮೂಲಕ ಎಚ್ಐವಿ ಹರಡಬಹುದು. ಹೀಗಿ ಮಗುವಿನ ಬೆಳವಣಿಗೆ ಹಾಗೂ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದ್ದರೆ, ಈ ಸೋಂಕಿನ ಬೆಳವಣಿಗೆಯನ್ನು ತಡೆಗಟ್ಟಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ