• Home
  • »
  • News
  • »
  • lifestyle
  • »
  • Weight Loss Tips: ಗ್ರಿಲ್ಡ್‌ ಚಿಕನ್‌ ತಿಂದ್ರೆ ತೂಕ ಕಡಿಮೆಯಾಗುತ್ತಂತೆ! ಅರೇ, ಹೇಗೆ ಅಂದ್ರೆ ಹೀಗೆ ಅಂತಿದ್ದಾರೆ ತಜ್ಞರು!

Weight Loss Tips: ಗ್ರಿಲ್ಡ್‌ ಚಿಕನ್‌ ತಿಂದ್ರೆ ತೂಕ ಕಡಿಮೆಯಾಗುತ್ತಂತೆ! ಅರೇ, ಹೇಗೆ ಅಂದ್ರೆ ಹೀಗೆ ಅಂತಿದ್ದಾರೆ ತಜ್ಞರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Grilled Chicken Help You Lose Weight: ಹಿತಮಿತವಾಗಿ ಯಾವುದನ್ನೇ ತಿಂದರೂ ತೂಕ ಏರಿಕೆ ಆಗೋದಿಲ್ಲ. ಹಾಗಾಗಿ ತಿನ್ನುವಾಗಿನ ಗಮನ ಅತ್ಯಂತ ಮುಖ್ಯ. ಇನ್ನು ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಿದರಂತೂ ತೂಕ ಕಂಟ್ರೋಲ್‌ ಆಗಿಯೇ ಆಗುತ್ತೆ. ಇದನ್ನೆಲ್ಲ ನೆನಪಿಟ್ಟುಕೊಂಡು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದೇ ಆರೋಗ್ಯಕ್ಕೆ ಒಳ್ಳೆಯದು.

ಮುಂದೆ ಓದಿ ...
  • Share this:

ಈಗಂತೂ ತೂಕ ಇಳಿಕೆ (Weight Loss) ಅನ್ನೋದು ಎಲ್ಲರ ಮನದಲ್ಲಿರುವ ಕಾಮನ್‌ ವಿಷಯವಾಗಿದೆ. ಮೊದಲೆಲ್ಲ ತಮಗೆ ಬೇಕಾದನ್ನು ಬೇರೆ ಆಲೋಚನೆಯಿಲ್ಲದೇ ತಿನ್ನುತ್ತಿದ್ದವರು ಇಂದು ಆರೋಗ್ಯದ ವಿಚಾರದಲ್ಲಿ, ತೂಕದ ವಿಚಾರದಲ್ಲಿ ಕಾನ್ಶಿಯಸ್‌ ಆಗಿದ್ದಾರೆ. ಯಾವುದು ತಿಂದರೆ ಸರಿ, ಎಷು ತಿಂದರೆ ಸರಿ, ಯಾವ ಸಮಯದಲ್ಲಿ ತಿನ್ನಬೇಕು ಎಂಬ ಎಲ್ಲದರ ಬಗ್ಗೆ ತಿನ್ನುವ ಮೊದಲು ಆಲೋಚಿಸುತ್ತಾರೆ. ಆದರೆ ಕೆಲವೊಂದಷ್ಟು ತುಂಬಾ ಇಷ್ಟವಾಗಿರೋ ಡಿಶ್‌ ಗಳನ್ನು ಬಿಟ್ಟು ಬಿಡೋದು ಕಷ್ಟ. ಅದ್ರಲ್ಲೂ ಹೈ ಪ್ರೋಟೀನ್‌ (Protein) ಹೊಂದಿರುವಂಥ ಆಹಾರಗಳನ್ನು (food) ತಿನ್ನುವ ಮೊದಲು ಅನುಮಾನದಿಂದ ನೋಡುತ್ತಾರೆ ಜನ. ಅದರಲ್ಲೊಂದು ಹೈ ಪ್ರೋಟೀನ್‌ ಹೊಂದಿರುವ ಗ್ರಿಲ್ಡ್‌ ಚಿಕನ್ (Grilled Chicken) .‌ ಹಾಗಿದ್ರೆ ಅಧಿಕ ಪ್ರೊಟೀನ್‌ ಹೊಂದಿರುವ ಗ್ರಿಲ್ಡ್ ಚಿಕನ್ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆಯೇ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.


ಏಷಿಯನ್‌ ಆಸ್ಪತ್ರೆಯ ಮುಖ್ಯ ಡಯೆಟಿಶಿಯನ್‌ ಆಗಿರುವ ಕೋಮಲ್‌ ಮಲಿಕ್‌ ಅವರು ಈ ಬಗ್ಗೆ ವಿವರಿಸ್ತಾರೆ.


ಗ್ರಿಲ್ಡ್‌ ಚಿಕನ್‌ ನಿಂದ ತೂಕ ಇಳಿಕೆ ಸಾಧ್ಯ!


ಬೇಯಿಸಿದ ಚಿಕನ್ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ಕಡಿಮೆ ಕೊಬ್ಬಿನಂಶ ಮತ್ತು ಪೋಷಕಾಂಶಗಳು ಹೆಚ್ಚಾಗಿರುತ್ತವೆ. ಚರ್ಮರಹಿತ, ಮೂಳೆಗಳಿಲ್ಲದ ಚಿಕನ್ನಿನ 85 ಗ್ರಾಂ ಭಾಗವು ಕೇವಲ 102 ಕ್ಯಾಲೊರಿಗಳನ್ನು ನೀಡುತ್ತದೆ. ಅಧಿಕ-ಪ್ರೋಟೀನ್ ಆಹಾರವು ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ತೂಕ ನಷ್ಟಕ್ಕೆ ಬಹಳ ಪರಿಣಾಮಕಾರಿಯಾಗಿದೆ. ಆದರೆ ಎಷ್ಟು ತಿನ್ನುತ್ತೇವೆ ಅನ್ನೋದು ಬಹಳ ಮುಖ್ಯವಾಗುತ್ತದೆ. ಯಾವುದೇ ಆಹಾರವನ್ನಾದರೂ ಹಿತ ಮಿತವಾಗಿ ತಿಂದರೆ ಆರೋಗ್ಯಕರ ತೂಕ ನಷ್ಟಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು.


ವಾರಕ್ಕೊಮ್ಮೆ ತೂಕ ಚೆಕ್‌ ಮಾಡಿ!


ತೂಕದ ಜಾಡನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಆದರೆ ವಾರಕ್ಕೊಮ್ಮೆ ತೂಕ ಚೆಕ್‌ ಮಾಡಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಆರು ತಿಂಗಳಲ್ಲಿ ನಿಮ್ಮ ಪ್ರಸ್ತುತ ತೂಕದ ಸುಮಾರು 5 ರಿಂದ 10 ಪ್ರತಿಶತವನ್ನು ಕಳೆದುಕೊಳ್ಳಲು ಶಿಫಾರಸು ಮಾಡಲಾಗಿದೆ. ಆದಾಗ್ಯೂ, ವಾರದ ನಂತರ ಸಣ್ಣ ಪ್ರಮಾಣದ ಏರುಪೇರುಗಳಿದ್ದರೆ ಅದು ನೀರಿನ ಪ್ರಮಾಣದಿಂದಾಗಬಹುದು. ಒತ್ತಡಕ್ಕೆ ಒಳಗಾಗಬೇಡಿ ಅನ್ನೋದು ಡಯೆಟಿಶಿಯನ್‌ ಸಲಹೆ.
ಊಟಕ್ಕೆ ಮೊದಲು ನೀರು ಕುಡಿಯುವುದು ಒಳ್ಳೆಯದಾ?


ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಊಟಕ್ಕೆ ಮುಂಚಿತವಾಗಿ ನೀರು ಕುಡಿಯಬೇಕೇ ಅನ್ನೋ ಹಲವರ ಪ್ರಶ್ನೆಗೆ ನಿಖರವಾದ ಉತ್ತರ ಇನ್ನು ಸಿಕ್ಕಿಲ್ಲ. ಜಲಸಂಚಯನಕ್ಕೆ ಕುಡಿಯುವ ನೀರು ಮುಖ್ಯವಾಗಿದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕೆಲವು ವ್ಯಕ್ತಿಗಳು ಹಸಿವಿನ ಸಂಕಟವನ್ನು ಕೊಲ್ಲಲು ಊಟಕ್ಕೆ ಮುಂಚಿತವಾಗಿ ನೀರನ್ನು ಕುಡಿಯುತ್ತಾರೆಯಾದರೂ, ಈ ಅಭ್ಯಾಸವನ್ನು ಬೆಂಬಲಿಸುವ ಸಂಶೋಧನಾ ಮಾಹಿತಿಯ ಕೊರತೆಯಿದೆ.


ಇದನ್ನೂ ಓದಿ: ಡಯೆಟ್‌ ಮಾಡುವಾಗ ಹಾಲು ಕುಡಿಯೋದು ತೂಕ ಹೆಚ್ಛಾಗೋಕೆ ಕಾರಣವಾಗುತ್ತಾ? ತಜ್ಞರು ಹೇಳಿದ್ದೇನು ನೋಡಿ


ಇನ್ನು ಭಾರೀ ಊಟ ಮಾಡಿದ್ದರೆ ರಾತ್ರಿಯ ಊಟವನ್ನು ಬಿಟ್ಟುಬಿಡಬೇಕೇ ಅನ್ನೋ ಹಲವರ ಪ್ರಶ್ನೆಗಳಿಗೆ ಉತ್ತರವಾಗಿ ಇಲ್ಲ ಎನ್ನುತ್ತಾರೆ ಆಹಾರ ತಜ್ಞರು. ನೀವು ಭೋಜನವನ್ನು ತ್ಯಜಿಸಿದಾಗ, ಅದು ಉಪವಾಸದ ಅವಧಿಯನ್ನು ಹೆಚ್ಚಿಸುತ್ತದೆ. ಇದು ಕಡಿಮೆ ಶಕ್ತಿಯ ಮಟ್ಟಗಳು ಮತ್ತು ಪೋಷಕಾಂಶಗಳ ಕೊರತೆಯೊಂದಿಗೆ ಸಂಬಂಧ ಹೊಂದಿದೆ. ಇದು ದೇಹದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದ್ದು, ತೂಕ ಹೆಚ್ಚಾಗಲು ಕಾರಣವಾಗುತ್ತದೆ.


• ನೀವು ಸರಿಯಾಗಿ ಊಟವನ್ನು ಯೋಜಿಸಿದಾಗ ಮತ್ತು ಸಾಮಾನ್ಯಕ್ಕಿಂತ ಕಡಿಮೆ ಕ್ಯಾಲೋರಿಗಳನ್ನು ಸೇವಿಸಿದಾಗ ತೂಕ ನಷ್ಟ ಸಂಭವಿಸುತ್ತದೆ.


• ಧಾನ್ಯಗಳು, ತರಕಾರಿಗಳು, ಹಣ್ಣುಗಳು ಮತ್ತು ನೇರ ಮಾಂಸಗಳು ಸೇರಿದಂತೆ ಸ್ಮಾರ್ಟ್ ಆಹಾರ ಆಯ್ಕೆಗಳನ್ನು ಮಾಡಿ.


• ಸಕ್ಕರೆಯ ಸೇವನೆಯನ್ನು ಮಿತಗೊಳಿಸಿ.


• ಕಡಿಮೆ ಕೊಬ್ಬಿನ ಅಡುಗೆ ವಿಧಾನಗಳನ್ನು ಬಳಸಿ.


• ಸ್ನ್ಯಾಕಿಂಗ್ ಪರ್ಯಾಯಗಳನ್ನು ಯೋಜಿಸಿ.


• ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿ.


ಇದನ್ನೂ ಓದಿ: ಮಗುವಿನ ನಡವಳಿಕೆಯಲ್ಲಿ ಈ ಬದಲಾವಣೆ ಅಪಾಯದ ಸೂಚನೆ, ನೆಗ್ಲೆಕ್ಟ್​ ಮಾಡ್ಲೇಬೇಡಿ


ಒಟ್ಟಾರೆ, ಹಿತಮಿತವಾಗಿ ಯಾವುದನ್ನೇ ತಿಂದರೂ ತೂಕ ಏರಿಕೆ ಆಗೋದಿಲ್ಲ. ಹಾಗಾಗಿ ತಿನ್ನುವಾಗಿನ ಗಮನ ಅತ್ಯಂತ ಮುಖ್ಯ. ಇನ್ನು ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಿದರಂತೂ ತೂಕ ಕಂಟ್ರೋಲ್‌ ಆಗಿಯೇ ಆಗುತ್ತೆ. ಇದನ್ನೆಲ್ಲ ನೆನಪಿಟ್ಟುಕೊಂಡು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದೇ ಆರೋಗ್ಯಕ್ಕೆ ಒಳ್ಳೆಯದು.

Published by:Sandhya M
First published: