• Home
  • »
  • News
  • »
  • lifestyle
  • »
  • Weight Loss: ತುಪ್ಪವನ್ನು ಈ ರೀತಿ ತಿಂದರೆ ತೂಕ ಇಳಿಸೋದು ಬಲು ಸುಲಭ

Weight Loss: ತುಪ್ಪವನ್ನು ಈ ರೀತಿ ತಿಂದರೆ ತೂಕ ಇಳಿಸೋದು ಬಲು ಸುಲಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೌಷ್ಟಿಕ ತಜ್ಞ ಆಂಚಲ್ ಸೋಗ್ನಿ ಅವರು ಇನ್ಸ್ಟಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ತುಪ್ಪದ ಜೊತೆಗೆ ಕೊಬ್ಬಿನ ನಂಟಿನ ಬಗ್ಗೆ ಹೇಳಿದ್ದಾರೆ. ಅವರು ತುಪ್ಪವನ್ನು ದೇಹಕ್ಕೆ ಸೂಪರ್‌ ಫುಡ್ ಎಂದು ತಿಳಿಸಿದ್ದಾರೆ. ತುಪ್ಪವನ್ನು ಸೇವನೆ ಮಾಡುವುದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ ಎಂದು ತಜ್ಞರು ಹೇಳ್ತಾರೆ.

ಮುಂದೆ ಓದಿ ...
  • Share this:

    ಮನೆಯಲ್ಲಿ (Home) ಸಿಹಿ ಪದಾರ್ಥ (Sweet Food) ಮಾಡಿದಾಗ ತುಪ್ಪದ (Ghee) ಜೊತೆ ಸೇವಿಸುವುದು ಅದರ ರುಚಿಯನ್ನು (Taste ಡಬಲ್ ಮಾಡುತ್ತದೆ. ಸಾಮಾನ್ಯವಾಗಿ ಭಾರತೀಯ ಎಲ್ಲಾ ಮನೆಗಳಲ್ಲಿ ತುಪ್ಪ ಬಳಸುವ ಪದ್ಧತಿ ಇದೆ. ಕೆಲವರು ದೇವರಿಗೆ ತುಪ್ಪದ ದೀಪ ಹಚ್ಚುತ್ತಾರೆ. ಇದರ ಹಿಂದೆ ಧಾರ್ಮಿಕ ನಂಬಿಕೆ ಇದೆ. ಇನ್ನು ಮನೆಗಳಲ್ಲಿ ತುಪ್ಪದ ಬಳಕೆ ಮತ್ತು ಸೇವನೆ ಆರೋಗ್ಯಕರ ಪ್ರಯೋಜನ (Health Benefits) ನೀಡುತ್ತದೆ ಎಂಬುದು ಗೊತ್ತಿರುವ ವಿಚಾರ. ತುಪ್ಪವು ಹೆಚ್ಚಿನ ಭಾರತೀಯ ಮನೆಗಳಲ್ಲಿ ಬಳಸಲಾಗುವ ಡೈರಿ ಉತ್ಪನ್ನ ಎಂಬುದು ನಿಮಗೆ ಗೊತ್ತಿರುವ ವಿಚಾರ. ತುಪ್ಪವನ್ನು ಉತ್ತರ ಭಾರತದ ಜನರು ಹೆಚ್ಚು ತಿನ್ನುತ್ತಾರೆ.


    ತುಪ್ಪ ತಿಂದರೆ ಬೊಜ್ಜು ಬರುತ್ತಾ?


    ಇನ್ನು ಸಾಮಾನ್ಯವಾಗಿ ಕೆಲವರು ತುಪ್ಪ ತಿಂದರೆ ಸ್ಥೂಲಕಾಯ ಬರುತ್ತದೆ ಎಂದು ಹೇಳ್ತಾರೆ. ಆದರೆ ಇದು ನಿಜವೇ? ಕೆಲವರು ತುಪ್ಪ ತಿನ್ನಬೇಡ, ದಪ್ಪ ಆಗ್ತೀಯಾ ಅಂತಾ ಹೆದರಿಸುತ್ತಾರೆ. ತುಪ್ಪ ತಿಂದರೆ ಬೊಜ್ಜು ಹೆಚ್ಚುತ್ತದೆ ಅನ್ನೋ ಮಾತನ್ನ ನೀವು ನಂಬ್ತೀರಾ? ನಿಜಕ್ಕೂ ತುಪ್ಪವು ಕೊಬ್ಬನ್ನು ಹೆಚ್ಚಿಸುತ್ತಾ? ಅಥವಾ ಇಲ್ವಾ? ಎಂಬ ಪ್ರಶ್ನೆಗಳಿಗೆ ಪೌಷ್ಟಿಕ ತಜ್ಞರು ಉತ್ತರಿಸಿದ್ದಾರೆ.


    ಪೌಷ್ಟಿಕ ತಜ್ಞ ಆಂಚಲ್ ಸೋಗ್ನಿ ಅವರು ಇನ್ಸ್ಟಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ತುಪ್ಪದ ಜೊತೆಗೆ ಕೊಬ್ಬಿನ ನಂಟಿನ ಬಗ್ಗೆ ಹೇಳಿದ್ದಾರೆ. ಅವರು ತುಪ್ಪವನ್ನು ದೇಹಕ್ಕೆ ಸೂಪರ್‌ ಫುಡ್ ಎಂದು ತಿಳಿಸಿದ್ದಾರೆ.




    ತುಪ್ಪವನ್ನು ಸೇವನೆ ಮಾಡುವುದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ ಎಂದು ತಜ್ಞರು ಹೇಳ್ತಾರೆ. ಹಾಗೆಯೇ ತುಪ್ಪದ ಪ್ರಯೋಜನ ಪಡೆಯಲು ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದು ತುಂಬಾ ಮುಖ್ಯ.


    ತೂಕ ಇಳಿಸುವವರು ತುಪ್ಪದ ರೊಟ್ಟಿ ತಿನ್ನಿ


    ತುಪ್ಪವು ಕಾರ್ಬೋಹೈಡ್ರೇಟ್‌ ಹೊಂದಿಲ್ಲ. ಇದು ತೂಕ ನಷ್ಟ ಅಥವಾ ಕಡಿಮೆ ಕಾರ್ಬ್ ಆಹಾರದ ಜನರಿಗೆ ಸುರಕ್ಷಿತ ಆಗಿದೆ.


    ತುಪ್ಪವು ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ


    ರೊಟ್ಟಿಯ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಡಿಮೆ ಮಾಡಲು ತುಪ್ಪ ಕೆಲಸ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಕಡಿಮೆ ಜಿಐ ಹೊಂದಿರುವ ಆಹಾರಗಳು ದೇಹದ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸುತ್ತವೆ ಎಂದು ಅನೇಕ ಅಧ್ಯಯನಗಳು ಹೇಳಿವೆ.


    ಪ್ರತಿದಿನ ತುಪ್ಪ ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ


    ತಜ್ಞರ ಪ್ರಕಾರ, ತುಪ್ಪದಲ್ಲಿರುವ ಕೊಬ್ಬು ವಾಸ್ತವವಾಗಿ ಕರಗುವ ಜೀವಸತ್ವ ಆಗಿವೆ. ಅಂತಹ ಪರಿಸ್ಥಿತಿಯಲ್ಲಿ ತುಪ್ಪದ ನಿಯಮಿತ ಸೇವನೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಮತ್ತು ಹಾರ್ಮೋನುಗಳ ಸಮತೋಲನವಾಗಿರಿಸಲು ಸಹಕಾರಿ.


    ತುಪ್ಪವು ಆಗಾಗ್ಗೆ ಹಸಿವಿನ ಸಮಸ್ಯೆ ಹೋಗಲಾಡಿಸುತ್ತದೆ


    ಆಹಾರದಲ್ಲಿ ತುಪ್ಪವನ್ನು ಆಗಾಗ್ಗೆ ಸೇರಿಸಿದರೆ ಹಸಿವಿನ ಸಮಸ್ಯೆ ಕಡಿಮೆ ಆಗುತ್ತದೆ. ಇದು ಒಮ್ಮೆ ತಿಂದ ನಂತರ ಗಂಟೆಗಟ್ಟಲೆ ಊಟ ಮಾಡದೆ ಉಳಿಯಬಹುದು.


    ದೇಹವನ್ನು ವಿಷದಿಂದ ರಕ್ಷಿಸುತ್ತದೆ


    ತುಪ್ಪವು ದೇಹದಲ್ಲಿ ಉತ್ಪತ್ತಿಯಾಗುವ ವಿಷಕಾರಿ ಅಂಶಗಳಿಂದ ರಕ್ಷಣೆ ನೀಡುತ್ತದೆ. ಇದು ಜೀವಕೋಶಗಳ ಕಾರ್ಯ ನಿರ್ವಹಣೆಗೆ ಆಗುವ ಅಡಚಣೆ ತಡೆಯುತ್ತದೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ಆಹಾರ ಪದಾರ್ಥಗಳಿವು


    ತುಪ್ಪವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?


    ಕೆಲವು ದಿನಗಳ ಮಧ್ಯಂತರದಲ್ಲಿ ತುಪ್ಪ ಸೇವಿಸುವುದು ಪ್ರಯೋಜನಕಾರಿ ಅಂತಾರೆ ತಜ್ಞರು. ನಿಮ್ಮ ದೈನಂದಿನ ಆಹಾರದಲ್ಲಿ ತುಪ್ಪ ಸೇರಿಸಲು ನೀವು ಬಯಸಿದರೆ ಒಂದು ರೊಟ್ಟಿಯಲ್ಲಿ ಅರ್ಧ ಚಮಚಕ್ಕಿಂತ ಹೆಚ್ಚು ತುಪ್ಪ ತಿನ್ನಬೇಡಿ. ಅತಿಯಾದ ತುಪ್ಪ ಸೇವನೆ ದೇಹಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

    Published by:renukadariyannavar
    First published: