Weight Loss Tips: ಹೆಚ್ಚು ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತಾ..? ಇಲ್ಲಿದೆ ಸತ್ಯ!

Drinking water for weight loss: ಅಧಿಕ ತೂಕದಿಂದ ಬಳಲುತ್ತಿದ್ದ 50 ಹುಡುಗಿಯರು ಬೆಳಗಿನ ಉಪಾಹಾರ, ಊಟ ಮತ್ತು ಭೋಜನಕ್ಕೆ 30 ನಿಮಿಷಗಳ ಮೊದಲು ಎರಡು ಕಪ್ ನೀರು ಕುಡಿದು, ತಮ್ಮ ತೂಕದಲ್ಲಿ ಬದಲಾವಣೆಗಳನ್ನು ಕಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀರು ಕುಡಿಯುವುದು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ದಿನವೀಡಿ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯುವುದು ತೂಕ ನಷ್ಟಕ್ಕೆ ಉತ್ತಮ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಆದರೆ ಇದು ನಿಜವೇ?  ಹೌದು, ಸಹಜವಾಗಿ ನಿಮ್ಮ ದೇಹವು ಸಾಕಷ್ಟು ನೀರನ್ನು ಪಡೆದಾಗ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿನ ಕೊಬ್ಬು ಕರಗುತ್ತದೆ. ಸಣ್ಣಗಾಗಲು ನೀರು ಕೂಡ ಸಹಕಾರಿ, ಆದರೆ ಇದೊಂದನ್ನೇ ನೆಚ್ಚಿಕೊಂಡು ಲೀಟರ್ ಗಟ್ಟಲೆ ನೀರನ್ನು ಮಾತ್ರ ಕುಡಿದು ಸಣ್ಣಗಾಗುತ್ತೇನೆ ಎಂದುಕೊಳ್ಳಬೇಡಿ. ​​ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಉತ್ತಮ ಆಹಾರ ಮತ್ತು ವ್ಯಾಯಾಮ ಸೇರಿದಂತೆ ಹಲವಾರು ಅಂಶಗಳು ಮುಖ್ಯವಾಗುತ್ತವೆ.

ನೀರು ನಿಮ್ಮ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವುದು ನಿಮ್ಮ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಕ್ರಿಯೆ ವೇಗವನ್ನು ಚುರುಕುಗೊಳಿಸುತ್ತದೆ ಮತ್ತು ವ್ಯಾಯಾಮವನ್ನು ಸುಲಭಗೊಳಿಸುತ್ತದೆ. ತೂಕ ಇಳಿಸಲು ನೀರು ಹೇಗೆಲ್ಲಾ ಸಹಾಯಕಾರಿ ಎಂದು ತಿಳಿಯೋಣ ಬನ್ನಿ

1. ನೀರು ಹಸಿವನ್ನು ನಿಗ್ರಹಿಸುತ್ತದೆ

ನಮ್ಮಲ್ಲಿ ಹೆಚ್ಚಿನವರು ಹಸಿವಿನಿಂದ ಬಳಲುತ್ತಿರುವಾಗ ಆಹಾರವನ್ನು ಹುಡುಕುತ್ತೇವೆ. ಆದರೆ ನಮಗೆ ನೀರನ್ನು ಹೊರತುಪಡಿಸಿ ಬೇರೇನೂ ಬೇಕಾಗಿಲ್ಲ. ಬಾಯಾರಿಕೆಯನ್ನು ಮೆದುಳು ಹಸಿವು ಎಂದು ತಪ್ಪಾಗಿ ಗ್ರಹಿಸಬಹುದು. ಅದಕ್ಕಾಗಿಯೇ ಸ್ವಲ್ಪ ನೀರು ಕುಡಿಯುವುದು ಉತ್ತಮ, ತದನಂತರ ನಿಮಗೆ ಹಸಿವಾಗಿದೆಯೇ ಎಂದು ನೋಡಲು ಕಾಯಿರಿ. ಇದು ನಿಮ್ಮ ಮೆದುಳಿಗೆ ತೃಪ್ತಿಯ ಸಂದೇಶಗಳನ್ನು ಕಳುಹಿಸುತ್ತದೆ. ಅದಕ್ಕಾಗಿಯೇ ಊಟ ಮಾಡುವ ಮೊದಲು ಕೆಲವು ಸಿಪ್ಸ್ ನೀರನ್ನು ಕುಡಿಯಲು ಸೂಚಿಸಲಾಗುತ್ತದೆ.

ಇದನ್ನೂ ಓದಿ: Weight Loss tips: ತೂಕ ಇಳಿಸಬೇಕೆಂದರೆ ಯಾವುದೇ ಕಾರಣಕ್ಕೂ ಈ 7 ತಪ್ಪುಗಳನ್ನು ಮಾಡಬೇಡಿ!

2. ನೀರು ಕುಡಿಯುವುದರಿಂದ ನಿಮ್ಮ ಜೀರ್ಣ ಕ್ರಿಯೆ ವೇಗಗೊಳ್ಳುತ್ತದೆ

ಹೌದು ಇದು ನಿಜ. ನಿಮ್ಮನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವುದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿಯಾಗಿ, ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. 2013 ರಲ್ಲಿ ಎಂಟು ವಾರಗಳ ಅಧ್ಯಯನದಲ್ಲಿ, ಅಧಿಕ ತೂಕದಿಂದ ಬಳಲುತ್ತಿದ್ದ 50 ಹುಡುಗಿಯರು ಬೆಳಗಿನ ಉಪಾಹಾರ, ಊಟ ಮತ್ತು ಭೋಜನಕ್ಕೆ 30 ನಿಮಿಷಗಳ ಮೊದಲು ಎರಡು ಕಪ್ ನೀರು ಕುಡಿದು, ತಮ್ಮ ತೂಕದಲ್ಲಿ ಬದಲಾವಣೆಗಳನ್ನು ಕಂಡಿದ್ದಾರೆ. ನೀರು ದೇಹದಲ್ಲಿ ಶಾಖ ಉತ್ಪಾದನೆಯನ್ನು ಉಂಟುಮಾಡುತ್ತದೆ. ನಿಮ್ಮ ದೇಹವು ಹೆಚ್ಚು ಶಕ್ತಿಯನ್ನು ವ್ಯಯಿಸುತ್ತದೆ, ನಿಮ್ಮ ಚಯಾಪಚಯವು ವೇಗವಾಗಿರುತ್ತದೆ.

3.  ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ

ನೀವು ಕೋಲಾಗಳು ಅಥವಾ ಸಕ್ಕರೆ ಪಾನೀಯಗಳನ್ನು ಆನಂದಿಸಲು ಬಯಸಬಹುದು. ಆದರೆ ನಿಮ್ಮ ಉತ್ತಮ ಆಯ್ಕೆ ಎಂದರೆ ನೀರು. ಇದು ಝಿರೋ ಕ್ಯಾಲೊರಿಗಳನ್ನು ಹೊಂದಿದೆ. ಆದ್ದರಿಂದ ಸಕ್ಕರೆ ತುಂಬಿದ ದ್ರವಗಳನ್ನು ತ್ಯಜಿಸಿ ಮತ್ತು ನೀರನ್ನೇ ಹೆಚ್ಚಾಗಿ ಸೇವಿಸಿ. ಇದು ನಿಮ್ಮ ಒಟ್ಟಾರೆ ದ್ರವ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಬಹುದು.

4. ನೀರು ಕುಡಿಯುವುದು ವ್ಯಾಯಾಮಕ್ಕೆ ಸಹಾಯಕ

ವ್ಯಾಯಾಮದ ಸಮಯದಲ್ಲಿ ನಿಮ್ಮ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ಇದು ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಎಲೆಕ್ಟ್ರೋಲೈಟ್‌ಗಳನ್ನು ಕರಗಿಸುತ್ತದೆ. ನೀರು ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಕ್ಲಿನಿಕಲ್, ಕಾಸ್ಮೆಟಿಕ್ ಮತ್ತು ಇನ್ವೆಸ್ಟಿಗೇಷನಲ್ ಡರ್ಮಟಾಲಜಿ ಜರ್ನಲ್‌ನಲ್ಲಿ ಪ್ರಕಟವಾದ 2015 ರ ಅಧ್ಯಯನದಲ್ಲಿ, ನೀರಿನ ಸೇವನೆಯು ಹೆಚ್ಚಾಗುವುದು ನಿಮಗೆ ಹೊಳೆಯುವ ಚರ್ಮವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ನೀವು ಎಷ್ಟು ನೀರು ಕುಡಿಯಬೇಕು?

ಹೆಚ್ಚಿನ ಜನರು ದಿನಕ್ಕೆ ಕನಿಷ್ಠ 6-8 ಗ್ಲಾಸ್‌ಗಳ ಅಗತ್ಯ ಎಂದು ಹೇಳುತ್ತಾರೆ. ಆದರೆ ಇದು ನಿಮ್ಮ ವಯಸ್ಸು, ಲಿಂಗ, ಆರೋಗ್ಯ ಮತ್ತು ದೈಹಿಕ ಚಟುವಟಿಕೆಯ ಮಟ್ಟವನ್ನು ಅವಲಂಬಿಸಿದೆ. ತಜ್ಞರು ಮಹಿಳೆಯರಿಗೆ 11 ಕಪ್ ನೀರು ಮತ್ತು ಪುರುಷರಿಗೆ ಸುಮಾರು 15 ಕಪ್‌ಗಳನ್ನು ಸೂಚಿಸುತ್ತಾರೆ. ಅಲ್ಲದೆ, ನಿಮ್ಮ ದೇಹದಲ್ಲಿ ಸಾಕಷ್ಟು ನೀರು ಇದೆಯೇ ಎಂದು ತಿಳಿಯಲು ಒಂದು ಮಾರ್ಗವಿದೆ - ನಿಮ್ಮ ಮೂತ್ರದ ಬಣ್ಣವನ್ನು ಪರೀಕ್ಷಿಸಿ. ಇದು ಹಳದಿಯಾಗಿದ್ದರೆ, ನಿಮ್ಮ ನೀರಿನ ಸೇವನೆಯನ್ನು ನೀವು ಹೆಚ್ಚಿಸಿಕೊಳ್ಳಬೇಕು. ತಿಳಿಯಾಗಿದ್ದರೆ ಈಗ ಸೇವಿಸುತ್ತಿರುವ ನೀರಿನ ಪ್ರಮಾಣವನ್ನೇ ಮುಂದುವರೆಸಿ.
Published by:Kavya V
First published: