Lemon Water: ನಿಂಬೆ ರಸ ಹಾಕಿ ನೀರು ಕುಡಿಯೋದ್ರಿಂದ ಮೂತ್ರಪಿಂಡಕ್ಕೆ ತೊಂದರೆ ಆಗುತ್ತಾ?

Lemon Water Side Effects: ಮೂತ್ರಪಿಂಡಗಳಿಂದ ತೆರವುಗೊಳಿಸಲ್ಪಟ್ಟ ಕ್ರಿಯಾಟಿನೈನ್ ನ ಪರಿಮಾಣವನ್ನು ಕ್ರಿಯಾಟಿನೈನ್ ಕ್ಲಿಯರೆನ್ಸ್ ಎಂದು ಕರೆಯಲಾಗುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ, ಕ್ರಿಯಾಟಿನೈನ್ ಮಹಿಳೆಯರಿಗೆ ನಿಮಿಷಕ್ಕೆ 95 ಮಿಲಿಲೀಟರ್ ಮತ್ತು ಪುರುಷರಿಗೆ ಸುಮಾರು 120 ಮಿಲಿಲೀಟರ್ ಆಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನಲ್ಲಿ(Hot water) ನಿಂಬೆಯ ಹುಳಿ(Lemon)ಯನ್ನು ಹಿಂಡಿಕೊಂಡು ಕುಡಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ನಮ್ಮ ನಿಮ್ಮೆಲ್ಲರ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ ನಮ್ಮಲ್ಲಿ ಎಷ್ಟು ಜನರು ಅದನ್ನು ಬೆಳಿಗ್ಗೆ ಎದ್ದ ತಕ್ಷಣ ಕುಡಿದಿರುತ್ತೇವೆ ಹೇಳಿ.ಈ ನಿಂಬೆ ರಸದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ ಮತ್ತು ಇದು ಕ್ಯಾಲ್ಸಿಯಂ(Calcium) ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ, ದೇಹದಲ್ಲಿ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ. ನಿಂಬೆ ನೀರು ಅನೇಕರಿಗೆ ಪ್ರಿಯವಾದ ಒಂದು ತಾಜಾ ಪಾನೀಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಈ ಮೂತ್ರಪಿಂಡಗಳ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳು ಏನು ತಿನ್ನಬೇಕು ಮತ್ತು ಕುಡಿಯಬೇಕು ಮತ್ತು ಅವರು ಏನನ್ನು ಸೇವಿಸಬಾರದು ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಅರೇ ಏನಿದು ನಿಂಬೆ ನೀರಿನ ಬಗ್ಗೆ ಮಾತಾಡುತ್ತಾ, ದಿಢೀರ್ ಅಂತಾ ಮೂತ್ರಪಿಂಡಗಳ ಸಮಸ್ಯೆಯಿಂದ ಬಳಲುವರ ಬಗ್ಗೆ ಮಾತಾಡಲು ಶುರು ಮಾಡಿದ್ದಾರೆ ಎಂದು ನಿಮಗೆ ಅನ್ನಿಸಬಹುದು.

ಅದಕ್ಕೆ ಕಾರಣ ಎಂದರೆ ಅನೇಕ ಮೂತ್ರಪಿಂಡಗಳ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಈ ನಿಂಬೆ ನೀರು ಕುಡಿಯುವುದು ಅವರ ಆರೋಗ್ಯಕ್ಕೆ ಒಳ್ಳೆಯದೆ ಎಂದು ಆಗಾಗ್ಗೆ ಕೇಳುತ್ತಲೇ ಇರುತ್ತಾರೆ ಎಂದು ಅನೇಕ ವೈದ್ಯರು ಹೇಳಿದ್ದಾರೆ. ಹಾಗಾದರೆ ಬನ್ನಿ ಈ ನಿಂಬೆ ನೀರು ಇವರಿಗೆ ಒಳ್ಳೆಯದೇ ಎಂದು ತಿಳಿದುಕೊಳ್ಳೋಣ.

ಮೂತ್ರಪಿಂಡದ ಕಾಯಿಲೆಗೆ ಈ ನಿಂಬೆ ನೀರು ಒಳ್ಳೆಯದೆ?

ಇದನ್ನೂ ಓದಿ: ಕೂದಲಿನ ಸಮಸ್ಯೆಗೆ ಶಾಂಪೂ ಒಂದೇ ಸಾಕಾಗಲ್ಲ,ಇವುಗಳನ್ನು ಕೂಡ ತಿನ್ನಿ

ನಮ್ಮ ದೇಹದಲ್ಲಿರುವ ಮೂತ್ರಪಿಂಡಗಳು ರಕ್ತದಲ್ಲಿರುವ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕುವ ಕಾರ್ಯವನ್ನು ನಿರ್ವಹಿಸುತ್ತವೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ, ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಕ್ರಿಯಾಟಿನೈನ್ ಮತ್ತು ಯೂರಿಕ್ ಆಮ್ಲದಂತಹ ರಾಸಾಯನಿಕಗಳ ಮಟ್ಟವನ್ನು ನಿರ್ವಹಿಸುವಲ್ಲಿ ಮೂತ್ರಪಿಂಡಗಳು ಸಹ ಪಾತ್ರ ವಹಿಸುತ್ತವೆ.

ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯೆಂದರೆ ನಿಮ್ಮ ಮೂತ್ರಪಿಂಡಗಳು ನಿಮ್ಮ ರಕ್ತವನ್ನು ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ, ಅಂದರೆ ವಿಷಗಳು ಮತ್ತು ತ್ಯಾಜ್ಯ ಉತ್ಪನ್ನಗಳು ರಕ್ತದಲ್ಲಿ ನಿರ್ಮಾಣಗೊಳ್ಳುತ್ತವೆ. ಇದರಿಂದ ಪಾರ್ಶ್ವವಾಯು ಮತ್ತು ಹೃದ್ರೋಗಗಳಂತಹ ಅಪಾಯಕಾರಿ ಆರೋಗ್ಯ ಸಮಸ್ಯೆಗಳು ಬರಬಹುದು.

ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಗಳು ಮತ್ತು ಸಿಟ್ರಿಕ್ ಆಮ್ಲದಿಂದ ಸಮೃದ್ಧವಾಗಿರುವ ನಿಂಬೆ ನೀರನ್ನು ಕುಡಿಯುವುದರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ರೋಗಿಗಳಿಗೆ ಯಾವುದೇ ಅಪಾಯವಿಲ್ಲ.

ನಿಂಬೆ ನೀರು ಕ್ರಿಯಾಟಿನೈನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡಬಹುದೇ?

ನಿಂಬೆ ನೀರನ್ನು ಸೇವಿಸುವುದರಿಂದ ಕ್ರಿಯಾಟಿನೈನ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ತುಂಬಾ ಕಡಿಮೆ ಪರಿಣಾಮವನ್ನು ಬೀರಬಹುದು. ಕ್ರಿಯಾಟಿನೈನ್ ಒಂದು ತ್ಯಾಜ್ಯ ರಾಸಾಯನಿಕ ಉತ್ಪನ್ನವಾಗಿದೆ, ಇದು ನಮ್ಮ ಸ್ನಾಯುಗಳ ಸವೆತದ ಉಪ ಉತ್ಪನ್ನವಾಗಿದೆ. ಒಬ್ಬ ವ್ಯಕ್ತಿಯು ಹೆಚ್ಚು ಸ್ನಾಯುಗಳನ್ನು ಹೊಂದಿರುವಂತೆ, ರಕ್ತದಲ್ಲಿ ಹೆಚ್ಚು ಕ್ರಿಯಾಟಿನೈನ್ ಇರುತ್ತದೆ.

ಮೂತ್ರಪಿಂಡಗಳಿಂದ ತೆರವುಗೊಳಿಸಲ್ಪಟ್ಟ ಕ್ರಿಯಾಟಿನೈನ್ ನ ಪರಿಮಾಣವನ್ನು ಕ್ರಿಯಾಟಿನೈನ್ ಕ್ಲಿಯರೆನ್ಸ್ ಎಂದು ಕರೆಯಲಾಗುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ, ಕ್ರಿಯಾಟಿನೈನ್ ಮಹಿಳೆಯರಿಗೆ ನಿಮಿಷಕ್ಕೆ 95 ಮಿಲಿಲೀಟರ್ ಮತ್ತು ಪುರುಷರಿಗೆ ಸುಮಾರು 120 ಮಿಲಿಲೀಟರ್ ಆಗಿರುತ್ತದೆ.

ಕ್ರಿಯಾಟಿನೈನ್ ಕ್ಲಿಯರೆನ್ಸ್ ವ್ಯಕ್ತಿಯ ವಯಸ್ಸು, ಗಾತ್ರ ಮತ್ತು ಮೂತ್ರಪಿಂಡಗಳ ಸ್ಥಿತಿಯನ್ನು ಸಹ ಅವಲಂಬಿಸಿರುತ್ತದೆ. ನಿಂಬೆ ನೀರು ಅಥವಾ ರಸವನ್ನು ಸೇವಿಸುವುದರಿಂದ ಕ್ರಿಯೇಟಿನೈನ್ ಮಟ್ಟವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಸಾಧ್ಯವಿಲ್ಲ.

ಮೂತ್ರಪಿಂಡಗಳಿಗೆ ನಿಂಬೆ ಒಳ್ಳೆಯದಲ್ಲವೇ?

ನಿಂಬೆ ನೀರು ಅಥವಾ ನಿಂಬೆ ರಸವನ್ನು ಕುಡಿಯುವುದರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸ್ಥಿತಿಯನ್ನು ಹದಗೆಡಿಸುವುದಿಲ್ಲ. ಅತಿಯಾಗಿ ಸೇವಿಸಿದಾಗ, ಅದು ಇತರ ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚು ನಿಂಬೆ ನೀರು ವಾಕರಿಕೆ, ಅತಿಸಾರ ಮತ್ತು ವಾಂತಿಗೆ ಕಾರಣವಾಗಬಹುದು. ಇದು ಮೂತ್ರವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ.

ನಿಂಬೆ ನೀರನ್ನು ಕುಡಿಯಲು ಸರಿಯಾದ ಸಮಯ ಯಾವುದು ಗೊತ್ತೇ?

ನಿಂಬೆ ನೀರನ್ನು ಕುಡಿಯಲು ಯಾವುದೇ ರೀತಿಯ ನಿರ್ದಿಷ್ಟವಾದ ಸರಿಯಾದ ಸಮಯವಿಲ್ಲ. ಇದನ್ನು ನೀವು ಬೆಳಿಗ್ಗೆ ಕುಡಿದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ನೀವು ರಾತ್ರಿ ನಿದ್ರೆ ಮಾಡಿ ವಿಶ್ರಾಂತಿ ಪಡೆದು ಬೆಳಿಗ್ಗೆ ಎದ್ದಾಗ, ನಿಂಬೆ ನೀರನ್ನು ಕುಡಿದರೆ ನಿಮ್ಮ ದೇಹದಲ್ಲಿನ ಪಿಎಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

ಇದನ್ನೂ ಓದಿ: ರಾತ್ರಿ ಊಟವಾದ ತಕ್ಷಣ ಮಲಗುವ ಅಭ್ಯಾಸವಿದ್ರೆ ಇದನ್ನ ಓದಲೇ ಬೇಕು

ಶುಂಠಿ ಮತ್ತು ಜೇನುತುಪ್ಪದೊಂದಿಗೆ ನೀವು ನಿಂಬೆ ನೀರನ್ನು ಸೇವಿಸಬಹುದು. ಪಾನೀಯದಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿಮೈಕ್ರೊಬಿಯಲ್ ಅಂಶಗಳು ಮೂತ್ರಪಿಂಡಗಳ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಹಾಯಕವಾಗುತ್ತವೆ.
Published by:Sandhya M
First published: