Dating App: ಡಿವೋರ್ಸ್‌ ಆದವರು ಡೇಟಿಂಗ್ ಆ್ಯಪ್‌ಗಳನ್ನು ಬಳಸಬಹುದಾ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮಧ್ಯವಯಸ್ಸಿನಲ್ಲಿ ಸಂಗಾತಿಗಳಿಂದ ದೂರವಾದವರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸಲು ಮುಂದಾಗ್ತಾರೆ. ಆದರೆ ಈ ಡೇಟಿಂಗ್​ ಆ್ಯಪ್​​ಗಳು ಯಾರಿಗೆ ಸೂಕ್ತ ಎಂಬುದು ಈ ಲೇಖನದಲ್ಲಿದೆ ಓದಿ.

  • Share this:

ಮಧ್ಯವಯಸ್ಸಿನಲ್ಲಿ ಸಂಗಾತಿಗಳಿಂದ ದೂರವಾದವರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು (Dating Apps) ಬಳಸಿ ತಮ್ಮ ಒಂಟಿತನವನ್ನು ದೂರವಾಗಿಸಿಕೊಳ್ಳಬಹುದೇ ಎಂಬುದು ಇಂದಿನ ಲೇಖನದಲ್ಲಿ ಪ್ರಮುಖವಾಗಿರುವ ವಿಷಯವಾಗಿದೆ. ಹೆಚ್ಚಿನ ವಿಚ್ಛೇದಿತ ಮಧ್ಯವಯಸ್ಕರು ಇದು ಸಾಧ್ಯವಿಲ್ಲದ ಮಾತು ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಆಧುನಿಕ ಮನೋಭಾವದವರ ಬೇಡಿಕೆ ಹಾಗೂ ಅನಿಸಿಕೆಗಳು (Opinion) ವಿಭಿನ್ನವಾಗಿರುತ್ತವೆ ಎಂಬುದು ಅವರ ವಾದವಾಗಿದೆ.


ನಡುವಯಸ್ಸಿನವರು ಡೇಟಿಂಗ್ ಆ್ಯಪ್‌ ಬಳಸಬಹುದೇ?


ವಿವಾಹ ವಿಚ್ಛೇದನಕ್ಕೊಳಗಾದವರು ಡೇಟಿಂಗ್ ಆ್ಯಪ್‌ಗಳ ನೆರವಿನಿಂದ ಉತ್ತಮ ಬಾಳಸಂಗಾತಿಯನ್ನು ಅನ್ವೇಷಿಸಬಹುದೇ ಎಂಬುದು ಇಂದಿನ ಲೇಖನದಲ್ಲಿ ಚರ್ಚೆಯಾಗಿರುವ ವಿಷಯವಾಗಿದೆ. 40 ರ ಹರೆಯದ ನಂತರ ತಮ್ಮ ಪತಿಯಿಂದ ದೂರವಾದ ಪತ್ನಿಯರು ಅಥವಾ ಪತ್ನಿಯಿಂದ ದೂರವಾದ ಪತಿಯಂದಿರು ಒಂಟಿತನದ ಕೊರಗಿಗೆ ಬಲಿಯಾಗುತ್ತಾರೆ ಹಾಗೂ ತಮಗೂ ಒಬ್ಬರು ಸಂಗಾತಿ ಬೇಕೆಂಬ ಆಶಯಕ್ಕೆ ಒಳಗಾಗುತ್ತಾರೆ.


ಆದರೆ ಡೇಟಿಂಗ್ ಆ್ಯಪ್‌ಗಳು ತಮ್ಮಂತಹ ಮಧ್ಯವಯಸ್ಕರಿಗಲ್ಲ ಎಂಬುದು ಇವರ ಅಭಿಪ್ರಾಯವಾಗಿದೆ. ಹಾಗಾದರೆ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳೋಣ.


ಇದನ್ನೂ ಓದಿ: ಇನ್ಮುಂದೆ ಮನೆಯಲ್ಲೇ ತಯಾರಿಸಿ ಬಿಯರ್​, ಮಾರುಕಟ್ಟೆಗೆ ಬಂದಿದೆ ಪೌಡರ್​!


ಆ್ಯಪ್‌ಗಳಲ್ಲಿನ ಮೂಲ ಅಂಶಗಳು ನಾಪತ್ತೆಯಾಗಿವೆ


ಡೇಟಿಂಗ್ ಆ್ಯಪ್‌ಗಳು ಇಂದು ನಡುಹರೆಯದವರಿಗೆ ಸೂಕ್ತ ಸಂಗಾತಿಗಳನ್ನು ಒದಗಿಸಿಕೊಡುವಲ್ಲಿ ವಿಫಲಗೊಳ್ಳುತ್ತಿದೆ ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಕ್ಯಾಥರೀನ್ ಡನ್ 2018 ರಲ್ಲಿ ವಿವಾಹ ವಿಚ್ಛೇದನಕ್ಕೆ ಒಳಗಾದಾಗ ತಮ್ಮ ಒಂಟಿತನವನ್ನು ದೂರವಾಗಿಸಲು ಸೂಕ್ತ ಸಂಗಾತಿಯ ಅನ್ವೇಷಣೆಗಾಗಿ ಡೇಟಿಂಗ್ ಆ್ಯಪ್‌ಗಳತ್ತ ಒಲವು ತೋರುತ್ತಾರೆ.


ಆದರೆ ಇಂದಿನ ದಿನಗಳಲ್ಲಿ ಈ ಆ್ಯಪ್‌ಗಳು ತಾವಂದುಕೊಂಡಷ್ಟು ಸುರಕ್ಷಿತವಾಗಿಲ್ಲ ಅಂತೆಯೇ ನಿಜವಾದ ಪ್ರೀತಿ ಕೂಡ ಅಲ್ಲಿ ಕಂಡುಬರುವುದಿಲ್ಲ ಎಂದು ತಿಳಿಸುತ್ತಾರೆ.


ನಿಜವಾದ ಪ್ರೀತಿಯ ಹುಡುಕಾಟ ವ್ಯರ್ಥ


ತಮ್ಮ ಡೇಟಿಂಗ್ ದಿನಗಳನ್ನು ನೆನಪಿಸಿಕೊಂಡಿರುವ ಕ್ಯಾಥರೀನ್ ಇಂದಿನ ದಿನಗಳಲ್ಲಿ ಡೇಟಿಂಗ್ ಆ್ಯಪ್‌ಗಳ ಮೂಲಕ ಪರಿಚಯವಾಗುವ ಸಂಗಾತಿಗಳೊಂದಿಗೆ ಅಸಹ್ಯಕರವಾದ ಸನ್ನಿವೇಶಗಳನ್ನು ಎದುರಿಸಿದ್ದೂ ಇದೆ ಎಂದು ತಿಳಿಸುತ್ತಾರೆ. ಬರಿಯ ಕಾಮ ಮಾತ್ರವೇ ಈ ಆ್ಯಪ್‌ಗಳಲ್ಲಿ ಮೇಳೈಸುತ್ತದೆ ಎಂದು ಹೇಳುವ ಕ್ಯಾಥರೀನ್ ನಿಜವಾದ ಪ್ರೀತಿಯ ಹುಡುಕಾಟ ವ್ಯರ್ಥ ಎಂದೇ ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಒಂದೊಮ್ಮೆ ಡೇಟಿಂಗ್ ಎಂಬುದು ಯುವಜನರಿಗೆ ರಕ್ಷಾಕವಚವಾಗಿತ್ತು ಹಾಗೂ ಇಲ್ಲಿ ದೊರಕುವ ಸಂಗಾತಿಯಿಂದ ಪೂರ್ಣ ಪ್ರಮಾಣದ ನಂಬಿಕೆ ಹಾಗೂ ಪ್ರಾಮಾಣೀಕತೆ ದೊರೆಯುತ್ತಿತ್ತು. ಆದರೀಗ ಅಂತಹ ಯಾವುದೇ ಅಂಶಗಳು ನಿಮಗೆ ಕಾಣಸಿಗದು ಎಂಬ ತಮ್ಮ ಸ್ವಂತ ಅನಿಸಿಕೆಯನ್ನು ಕ್ಯಾಥರೀನ್ ಹಂಚಿಕೊಂಡಿದ್ದಾರೆ.


ಏರಿಕೆಯಾಗುತ್ತಿರುವ ವಯಸ್ಕ ವಿಚ್ಛೇದಿತರ ಪ್ರಮಾಣ


20 ನೇ ಶತಮಾನದಲ್ಲಿ ವಿಚ್ಛೇದನ ದರಗಳು ಏರಿತು, ನಂತರ 1990 ರ ದಶಕದ ಗರಿಷ್ಠ ನಂತರ ಕಡಿಮೆಯಾಯಿತು ಈ ನಡುವೆ ಸಾಂಕ್ರಾಮಿಕ ರೋಗದ ನಂತರ ಮತ್ತೆ ಏರಿಕೆಯಾಗಿದೆ. PwC ಪ್ರಕಾರ, ಕಳೆದ ವರ್ಷ UK ಯ ಅಂಕಿಅಂಶಗಳು ವಿಚ್ಛೇದನವು 50 ವರ್ಷಗಳಲ್ಲಿ ಅತ್ಯಂತ ವೇಗವಾಗಿ ಏರಿಕೆಯಾಗಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ.


ಈ ಹಿಂದೆ ವಿಚ್ಛೇದನಗಳು ನ್ಯಾಯಾಲಯದ ಮೆಟ್ಟಿಲೇರಿದರೂ ಅದನ್ನು ಪರಿಹರಿಸುವ ಪ್ರಯತ್ನಗಳು ನಡೆಯುತ್ತಿತ್ತು ಹಾಗೂ ಸಂಗಾತಿಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದರು. ಆದರೀಗ ದೋಷಾರೂಪಣೆ ಆರೋಪಗಳ ಅಗತ್ಯವಿಲ್ಲದೆಯೇ 20 ವಾರಗಳ ಅಂತರದಲ್ಲಿ ವಿಚ್ಛೇದನ ದೊರೆಯುತ್ತಿದೆ ಎಂಬುದು ಸಮೀಕ್ಷೆಗಳಿಂದ ವರದಿಯಾಗಿದೆ.


ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯ ಪ್ರಕಾರ ಒಟ್ಟಾರೆಯಾಗಿ, 41% ವಿವಾಹಗಳು ತಮ್ಮ 25 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಚ್ಛೇದನದೊಂದಿಗೆ ಕೊನೆಗೊಳ್ಳುತ್ತವೆ ಎಂದಾಗಿದೆ. ನಡುವಯಸ್ಸಿನಲ್ಲೂ ವಿಚ್ಛೇದನದ ಪ್ರಮಾಣ ಹೆಚ್ಚಾಗಿದೆ. ಇದೆಲ್ಲಾ ಡೇಟಿಂಗ್ ಪರಿಣಾಮ ಎಂದು ತಿಳಿಸುವ ಕ್ಯಾಥರೀನ್ ದಾಂಪತ್ಯವೆಂಬುದು ಅರ್ಥಹೀನವೆಂದೆನಿಸುತ್ತಿದೆ ಎಂದು ತಿಳಿಸುತ್ತಾರೆ.


ಸಾಂಕೇತಿಕ ಚಿತ್ರ


ಲೈಂಗಿಕ ಸೋಂಕುಗಳ ಪ್ರಮಾಣ ಹೆಚ್ಚಾಗಿದೆ


ಟಿಷ್ ಅಸೋಸಿಯೇಶನ್ ಆಫ್ ಸೆಕ್ಷುಯಲ್ ಹೆಲ್ತ್ ಮತ್ತು ಎಚ್‌ಐವಿ ಅಧ್ಯಕ್ಷರು ತಿಳಿಸಿರುವಂತೆ ವಯಸ್ಸಾದವರಲ್ಲಿ ಲೈಂಗಿಕ ನಡವಳಿಕೆಯ ಮಾದರಿಗಳಲ್ಲಿ ಬದಲಾವಣೆಯಾಗುತ್ತಿದೆ ಎಂದಾಗಿದೆ.


65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಲೈಂಗಿಕವಾಗಿ ಹರಡುವ ಸೋಂಕುಗಳ ಸಂಖ್ಯೆಯು 2017 ಮತ್ತು 2019 ರ ನಡುವೆ 20% ರಷ್ಟು ಹೆಚ್ಚಾಗಿದೆ ಎಂದು ಸ್ಥಳೀಯ ಸರ್ಕಾರಿ ಸಂಘದ ವರದಿ ತಿಳಿಸಿದೆ. ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವುದು ಅಪಾಯಕಾರಿ ಲೈಂಗಿಕ ನಡವಳಿಕೆಗೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ಎಚ್ಚರಿಸಿವೆ.


ಡೇಟಿಂಗ್ ತರಬೇತುದಾರರಿಗೆ ಹಣ ಸುರಿಯುತ್ತಿರುವ ವಿಚ್ಛೇದಿತರು


2023 ರ ಡೇಟಿಂಗ್ ವಿಧಾನಗಳಿಗೆ ನಡುವಯಸ್ಸಿನ ವಿಚ್ಛೇದಿತರು ಹೊಂದಿಕೊಳ್ಳುವುದಕ್ಕಾಗಿ ತರಬೇತುದಾರರಿಗೆ ಡಾಲರ್‌ಗಟ್ಟಲೆ ಹಣ ಸುರಿಸುತ್ತಾರೆ ಎಂಬುದು ಕೆಲವೊಂದು ವರದಿಗಳಿಂದ ಬಹಿರಂಗವಾಗಿದೆ.


ಆಧುನಿಕ ಡೇಟಿಂಗ್ ವಿಧಾನಗಳನ್ನು ತಿಳಿದುಕೊಳ್ಳುವುದಕ್ಕಾಗಿಯೇ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ನಿಮಗೆ ವಯಸ್ಸಾದಂತೆ, ಸಂಗಾತಿಯ ಅನ್ವೇಷಣೆಯಲ್ಲಿ ವಿವಾಹಿತರಲ್ಲದವರು ಹಾಗೂ ಮಕ್ಕಳನ್ನು ಹೊಂದಿಲ್ಲದವರನ್ನು ಹುಡುಕುವುದು ತುಂಬಾ ಕಷ್ಟವಾಗಿರುತ್ತದೆ ಎಂದು ವಿಚ್ಛೇದನ ತರಬೇತುದಾರ ನವಲ್ ಹೌಟನ್ ತಿಳಿಸುತ್ತಾರೆ.


top videos



    ವಿಚ್ಛೇದನದ ನಂತರ ಜನರು ವಿಭಿನ್ನ ವಿಷಯಗಳನ್ನು ಬಯಸಬಹುದು, ಕೆಲವರಿಗೆ ಹೊಸ ಸಂಬಂಧದೊಂದಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂಬುದು ಅವರ ಮಾತಾಗಿದೆ. ವಿಚ್ಛೇದನದ ನಂತರದ ಸಂಬಂಧಗಳು ವಿಭಿನ್ನ ರೂಪಗಳನ್ನು ತೆಗೆದುಕೊಳ್ಳಬಹುದು ಎಂಬುದು ಡಿಕ್ಸನ್ ಮಾತಾಗಿದೆ.

    First published: