Diabetes: ಮಧುಮೇಹಿಗಳು ಆಲ್ಕೋಹಾಲ್​ ಸೇವನೆ ಮಾಡಿದ್ರೆ ಸಮಸ್ಯೆಗಳು ಹೆಚ್ಚಾಗುತ್ತಂತೆ

ಈ ಮಧುಮೇಹದಿಂದ ಬಳಲುತ್ತಿರುವ ಜನರಲ್ಲಿ ಯಾವ ಆಹಾರ ತಿಂದರೆ ಆರೋಗ್ಯಕ್ಕೆ (Health) ಒಳ್ಳೆಯದು, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಮತ್ತು ಯಾವ ಆಹಾರಗಳನ್ನು ತಿನ್ನಲೇಬಾರದು ಎಂಬ ಅನೇಕ ರೀತಿಯ ಗೊಂದಲಗಳಿರುವುದನ್ನು ನಾವು ನೋಡಿರುತ್ತೇವೆ. ಸಕ್ಕರೆ ಕಾಯಿಲೆಯಿಂದ ಬಳಲುವ ಜನರು ಆಗಾಗ್ಗೆ ಕೇಳುವ ಕೆಲವು ಪ್ರಶ್ನೆಗಳಲ್ಲಿ ಒಂದು ಸಾಮಾನ್ಯವಾದ ಪ್ರಶ್ನೆ ಎಂದರೆ ಅದು ‘ನಾನು ಆಲ್ಕೋಹಾಲ್ (Alcohol) ಕುಡಿಯಬಹುದೇ ಅಥವಾ ಇಲ್ಲವೇ? ಎಷ್ಟು ಕುಡಿಯಬಹುದು? ಹೀಗೆ ಅನೇಕ ಪ್ರಶ್ನೆಗಳು ತಲೆಯಲ್ಲಿ ಓಡಾಡುತ್ತಿರುತ್ತವೆ. ಇವೆಲ್ಲದಕ್ಕೆ ಉತ್ತರ ಇಲ್ಲಿದೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಮಧುಮೇಹ (Diabetes) ಎನ್ನುವುದು ಪ್ರತಿ ಮನೆ ಮನೆಯಲ್ಲೂ ಇದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಟೈಪ್ 2 ಡಯಾಬಿಟಿಸ್ ನಿಂದ ಬಳಲುತ್ತಿರುವಂತಹ ವ್ಯಕ್ತಿ ತಮ್ಮ ನೆಚ್ಚಿನ ಆಹಾರಗಳು ಮತ್ತು ಪಾನೀಯಗಳನ್ನು ಕಡಿತಗೊಳಿಸಿಕೊಂಡು ಜೀವನ ನಡೆಸಬೇಕಾಗುತ್ತದೆ. ಈ ಮಧುಮೇಹದಿಂದ ಬಳಲುತ್ತಿರುವ ಜನರಲ್ಲಿ ಯಾವ ಆಹಾರ ತಿಂದರೆ ಆರೋಗ್ಯಕ್ಕೆ (Health) ಒಳ್ಳೆಯದು, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಮತ್ತು ಯಾವ ಆಹಾರಗಳನ್ನು ತಿನ್ನಲೇಬಾರದು ಎಂಬ ಅನೇಕ ರೀತಿಯ ಗೊಂದಲಗಳಿರುವುದನ್ನು ನಾವು ನೋಡಿರುತ್ತೇವೆ. ಸಕ್ಕರೆ ಕಾಯಿಲೆಯಿಂದ ಬಳಲುವ ಜನರು ಆಗಾಗ್ಗೆ ಕೇಳುವ ಕೆಲವು ಪ್ರಶ್ನೆಗಳಲ್ಲಿ ಒಂದು ಸಾಮಾನ್ಯವಾದ ಪ್ರಶ್ನೆ ಎಂದರೆ ಅದು ‘ನಾನು ಆಲ್ಕೋಹಾಲ್ (Alcohol) ಕುಡಿಯಬಹುದೇ ಅಥವಾ ಇಲ್ಲವೇ? ಎಷ್ಟು ಕುಡಿಯಬಹುದು? ಹೀಗೆ ಅನೇಕ ಪ್ರಶ್ನೆಗಳು ತಲೆಯಲ್ಲಿ ಓಡಾಡುತ್ತಿರುತ್ತವೆ. ಇವೆಲ್ಲದಕ್ಕೆ ಉತ್ತರ ಇಲ್ಲಿದೆ. 

ಮೊದಲಿಗೆ ಟೈಪ್ 2 ಮಧುಮೇಹವನ್ನು ಪತ್ತೆ ಹಚ್ಚಿದಾಗ, ಅನೇಕ ಆಲ್ಕೋಹಾಲ್ ಕುಡಿಯುವವರು ತಮ್ಮ ಮಧುಮೇಹಕ್ಕೆ ಆಲ್ಕೋಹಾಲ್ ಕಾರಣವೇ ಎಂದು ಚಿಂತಿಸುತ್ತಾರೆ. ಟೈಪ್ 2 ಮಧುಮೇಹಕ್ಕೆ ಸಾಮಾನ್ಯವಾಗಿ ತಿಳಿದಿರುವ ಅಪಾಯದ ಅಂಶಗಳು ಕುಟುಂಬ ಇತಿಹಾಸ, ಬೊಜ್ಜು, ವೃದ್ಧಾಪ್ಯ ಮತ್ತು ಜಡ ಜೀವನಶೈಲಿ ಎಂದು ಹೇಳಲಾಗುತ್ತದೆ.

ಆಲ್ಕೋಹಾಲ್ ನ ಮಿತ ಸೇವನೆಯು (ಉದಾಹರಣೆಗೆ ಮಹಿಳೆಯರಿಗೆ ದಿನಕ್ಕೆ 30 ಮಿಲಿ ಲೀಟರ್ ಕ್ಕಿಂತಲೂ ಕಡಿಮೆ ವಿಸ್ಕಿ, ಪುರುಷರಿಗೆ ದಿನಕ್ಕೆ 60 ಮಿಲಿ ಲೀಟರ್ ಕ್ಕಿಂತಲೂ ಕಡಿಮೆ) ಮಧುಮೇಹ ಉಂಟಾಗುವ ಅಪಾಯವನ್ನು ಹೆಚ್ಚಿಸುವುದಿಲ್ಲ. ಆದಾಗ್ಯೂ, ಅತಿಯಾದ ಆಲ್ಕೋಹಾಲ್ ಸೇವನೆಯು ಮಧುಮೇಹವನ್ನು ಬೆಳೆಸುವ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ, ಏಕೆಂದರೆ ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಆಲ್ಕೋಹಾಲ್ ಸೇವನೆಯು ಮೇದೋಜ್ಜೀರಕ ಗ್ರಂಥಿಯ (ಪ್ಯಾಂಕ್ರಿಯಾಟೈಟಿಸ್) ಉರಿಯೂತಕ್ಕೆ ಕಾರಣವಾಗಬಹುದು, ಇದು ಮಧುಮೇಹಕ್ಕೆ ಕಾರಣವಾಗಬಹುದು.

ಮಧುಮೇಹಿಗಳು ಆಲ್ಕೋಹಾಲ್ ನಿಂದ ದೂರವಿರಬೇಕೇ?
ಸಾಮಾನ್ಯವಾಗಿ, ಮಧುಮೇಹ ಹೊಂದಿರುವ ಜನರು ಆಲ್ಕೋಹಾಲ್ ನಿಂದ ದೂರವಿರುವುದು ಒಳ್ಳೆಯದು. ಮಧುಮೇಹವನ್ನು ಸರಿಯಾಗಿ ನಿಯಂತ್ರಿಸದವರಿಗೆ ಇದು ವಿಶೇಷವಾಗಿ ನಿಜವಾಗಿದೆ. ಒಂದೇ ಸಂದರ್ಭದಲ್ಲಿ ಅಥವಾ ಕಾಲಾನಂತರದಲ್ಲಿ ಅತಿಯಾಗಿ ಮದ್ಯಪಾನ ಮಾಡುವುದರಿಂದ ಒಬ್ಬರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದಂತೂ ನಿಜ. ಆಲ್ಕೊಹಾಲ್ ಅತಿಯಾದ ಸೇವನೆಯು ನಡವಳಿಕೆಯಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತದೆ ಮತ್ತು ಸ್ಪಷ್ಟವಾಗಿ ಯೋಚಿಸುವುದನ್ನು ಕಷ್ಟಕರವಾಗಿಸುತ್ತದೆ, ಇದು ಯಾದೃಚ್ಛಿಕ, ಅನಿಯಂತ್ರಿತ ಆಹಾರ ಮತ್ತು ಅಸುರಕ್ಷಿತ ಚಟುವಟಿಕೆಗಳಿಗೆ ಕಾರಣವಾಗುತ್ತದೆ.

ಮಧುಮೇಹಿಗಳು ಆಲ್ಕೋಹಾಲ್ ಅತಿಯಾಗಿ ಕುಡಿದರೆ ಏನಾಗಬಹುದು?  
ಅತಿಯಾಗಿ ಆಲ್ಕೋಹಾಲ್ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗುವುದು, ಕಾರು ಅಪಘಾತಗಳು ಮತ್ತು ಇತರ ಸಣ್ಣ ಪುಟ್ಟ ಗಾಯಗಳಿಗೂ ಸಹ ಇದು ಕಾರಣವಾಗಬಹುದು. ಕಾಲಾನಂತರದಲ್ಲಿ ಅತಿಯಾಗಿ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಉಂಟಾಗಬಹುದು, ಹೃದಯ, ಯಕೃತ್ತು, ಮೇದೋಜೀರಕ ಗ್ರಂಥಿಯನ್ನು ಹಾನಿಗೊಳಿಸಬಹುದು ಮತ್ತು ಕೆಲವು ಕ್ಯಾನ್ಸರ್ ಗಳ ಅಪಾಯವನ್ನು ಸಹ ಹೆಚ್ಚಿಸಬಹುದು.

ಮಧುಮೇಹ ಹೊಂದಿರುವ ಜನರಿಗೆ, ಆಲ್ಕೋಹಾಲ್ ಸೇವನೆಯು ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಆದಾಗ್ಯೂ, ಆಲ್ಕೋಹಾಲ್ ಕಡಿಮೆ ರಕ್ತದ ಸಕ್ಕರೆ ಮತ್ತು ಅಂಗಗಳಿಗೆ ಹಾನಿಯ ದೀರ್ಘಕಾಲೀನ ಅಪಾಯದೊಂದಿಗೆ ಸಂಬಂಧ ಹೊಂದಿದೆ ಎಂದು ತೋರಿಸಲಾಗಿದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳ ಮೇಲೆ ಆಲ್ಕೋಹಾಲ್ ನ ಪರಿಣಾಮವು ಅದನ್ನು ಆಹಾರದೊಂದಿಗೆ ಸೇವಿಸಲಾಗುತ್ತದೆಯೇ ಅಥವಾ ಇಲ್ಲದೆ ಸೇವಿಸಲಾಗುತ್ತದೆಯೇ ಎಂಬುದರ ಮೇಲೆ ಸಹ ಅವಲಂಬಿತವಾಗಿರುತ್ತದೆ.

ಆಲ್ಕೋಹಾಲ್ ಕುಡಿದ ನಂತರ ಇದರ ಅಪಾಯ ಎಷ್ಟು ಹೊತ್ತು ಇರುತ್ತದೆ?
ಉಪವಾಸದ ಸ್ಥಿತಿಯಲ್ಲಿ, ಯಕೃತ್ತು ಸಂಗ್ರಹಿಸಿದ ಗ್ಲುಕೋಸ್ ಅನ್ನು ರಕ್ತದ ಹರಿವಿಗೆ ಸುರಿಯುತ್ತದೆ ಮತ್ತು ರಕ್ತದ ಗ್ಲುಕೋಸ್ ಅಪಾಯಕಾರಿ ಮಟ್ಟಕ್ಕೆ ಕುಸಿಯುವುದನ್ನು ತಡೆಯುತ್ತದೆ. ನಮ್ಮ ಯಕೃತ್ತು ಆಲ್ಕೋಹಾಲ್ ಗೆ ಒಡ್ಡಿಕೊಂಡಾಗ, ಅದು ಮೊದಲು ಆಲ್ಕೋಹಾಲ್ ಅನ್ನು ಚಯಾಪಚಯಗೊಳಿಸಲು ಬಯಸುತ್ತದೆ ಮತ್ತು ಗ್ಲೂಕೋಸ್ ಬಿಡುಗಡೆಗೆ ಅಡ್ಡಿಯಾಗುತ್ತದೆ. ಆಲ್ಕೋಹಾಲ್ ಕುಡಿಯುವುದನ್ನು ಮಧುಮೇಹಕ್ಕೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ ಔಷಧಿಗಳೊಂದಿಗೆ ಸಂಯೋಜಿಸಿದರೆ-ವಿಶೇಷವಾಗಿ ಇನ್ಸುಲಿನ್ ಮತ್ತು ಸಲ್ಫೋನೈಲುರಿಯಾಸ್ - ಇದು ಕಡಿಮೆ ರಕ್ತದ ಗ್ಲೂಕೋಸ್ ಮಟ್ಟಗಳಿಗೆ ಕಾರಣವಾಗಬಹುದು. ಆಲ್ಕೋಹಾಲ್ ಕುಡಿದ ನಂತರ ಈ ಅಪಾಯವು 24 ಗಂಟೆಗಳವರೆಗೆ ಇರುತ್ತದೆ.

ಇದನ್ನೂ ಓದಿ:  Kidneys Health: ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ?

ನೀವು ಊಟದೊಂದಿಗೆ ಆಲ್ಕೋಹಾಲ್ ಸೇವಿಸಿದ್ದರೆ, ನೀವು ಮಲಗುವ ಮೊದಲು ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ರಕ್ತದಲ್ಲಿನ ಸಕ್ಕರೆ 100 ಮಿಲಿ ಗ್ರಾಂ/ಡಿಎಲ್ ಗಿಂತ ಕಡಿಮೆಯಿದ್ದರೆ, ಒಂದು ಸಣ್ಣದಾಗಿ ಯಾವುದಾದರೂ ತಿಂಡಿಯನ್ನು ತಿನ್ನುವುದು ಒಳ್ಳೆಯದು. ಎಂದರೆ ಹಣ್ಣು, ಹಾಲು, ಅಥವಾ ಅರ್ಧ ಸ್ಯಾಂಡ್ ವಿಚ್ ಅನ್ನು ನೀವು ತಿನ್ನಬಹುದು. ಕಡಿಮೆ ರಕ್ತದ ಸಕ್ಕರೆಯ ರೋಗಲಕ್ಷಣಗಳನ್ನು ಕುಡಿತದ ಸ್ಥಿತಿಯಲ್ಲಿರುವುದರ ಜೊತೆಗೆ ಗೊಂದಲಗೊಳಿಸಬಹುದು, ಇದು ಕಡಿಮೆ ರಕ್ತದ ಸಕ್ಕರೆ ಪ್ರತಿಕ್ರಿಯೆಯನ್ನು ಅಪಾಯಕಾರಿ ಪರಿಣಾಮಗಳೊಂದಿಗೆ ತಪ್ಪಿಸಿಕೊಳ್ಳುವುದಕ್ಕೆ ಕಾರಣವಾಗಬಹುದು.

ಎಷ್ಟು ಮಿಲಿ ಲೀಟರ್ ಕುಡಿಯಲು ಅನುಮತಿ ನೀಡಲಾಗಿದೆ?
ವಿವಿಧ ರೀತಿಯ ಆಲ್ಕೋಹಾಲ್ ಗಳಲ್ಲಿನ ಕ್ಯಾಲೋರಿಗಳಿಗೆ ಸಂಬಂಧಿಸಿದಂತೆ, ಅಂತಿಮವಾಗಿ ಆಲ್ಕೋಹಾಲ್ ನ ಪ್ರಮಾಣವು ಸಹ ಮುಖ್ಯವಾಗಿದೆ. ಒಂದು ಆಲ್ಕೋಹಾಲ್ ಯೂನಿಟ್ ಅನ್ನು 10 ಗ್ರಾಂ ಎಂದು ಅಳೆಯಲಾಗುತ್ತದೆ. ಇದು ಸುಮಾರು 275 ml ಬಿಯರ್, 100 ml ವೈನ್ ಮತ್ತು 30 ml ಸ್ಪಿರಿಟ್ಸ್ (ಹಾರ್ಡ್ ಲಿಕ್ಕರ್) ಗೆ ಸಮನಾಗಿರುತ್ತದೆ. ಪಾನೀಯದಲ್ಲಿ ಎಷ್ಟು ಯೂನಿಟ್ ಗಳಿವೆ ಎಂದು ಕಂಡು ಹಿಡಿಯಲು, ಲೇಬಲ್ ಮೇಲೆ ಆಲ್ಕೋಹಾಲ್ ಬೈ ವಾಲ್ಯೂಮ್ (ಎಬಿವಿ) ಯನ್ನು ಪರಿಶೀಲಿಸಿ. ಒಂದು ಪಾನೀಯದಲ್ಲಿನ ದ್ರವದ ಒಟ್ಟು ಪರಿಮಾಣದ ಶೇಕಡಾವಾರು ಪ್ರಮಾಣವಾಗಿ ಶುದ್ಧ ಆಲ್ಕೋಹಾಲ್ ನ ಪ್ರಮಾಣವನ್ನು ಇದು ಅಳೆಯುತ್ತದೆ.

ಒಂದು ಪಾನೀಯದ ಒಟ್ಟು ಪರಿಮಾಣವನ್ನು (ಮಿಲೀ ಯಲ್ಲಿ) ಅದರ ಎಬಿವಿ ಯಿಂದ ಗುಣಿಸುವ ಮೂಲಕ (ಶೇಕಡಾವಾರು ಎಂದು ಅಳೆಯಲಾಗುತ್ತದೆ) ಮತ್ತು ಫಲಿತಾಂಶವನ್ನು 1,000 ದಿಂದ ಭಾಗಿಸುವ ಮೂಲಕ ಪಾನೀಯ ಎಷ್ಟು ಯೂನಿಟ್ ಗಳನ್ನು ಹೊಂದಿದೆ ಎಂಬುದನ್ನು ನೀವು ಕಂಡು ಹಿಡಿಯಬಹುದು. ನೀವು 5 ಪ್ರತಿಶತ ಬಿಯರ್ ನ 500 ಮಿಲೀ ಅನ್ನು ಹೊಂದಿದ್ದರೆ, ನೀವು 2.5 ಯೂನಿಟ್ ಆಲ್ಕೋಹಾಲ್ ಅನ್ನು ತೆಗೆದುಕೊಳ್ಳುತ್ತಿದ್ದೀರಿ ಅಂತ ಅರ್ಥ.

ಆಲ್ಕೋಹಾಲ್ ಯುಕ್ತ ಪಾನೀಯಗಳನ್ನು (ಉದಾಹರಣೆಗೆ ವೋಡ್ಕಾ) ಜ್ಯೂಸ್ ಅಥವಾ ಸಕ್ಕರೆ ಕಾಕ್ಟೈಲ್ ಮಿಶ್ರಣಗಳೊಂದಿಗೆ ತೆಗೆದುಕೊಂಡರೆ, ಅವು ಅತಿಯಾದ ಕ್ಯಾಲೊರಿಗಳನ್ನು ಒದಗಿಸುತ್ತವೆ. ಆದ್ದರಿಂದ, ಈ ಅತಿಯಾದ ಕ್ಯಾಲೋರಿಗಳನ್ನು ತಪ್ಪಿಸಲು, ಹಣ್ಣಿನ ರಸ, ನಿಯಮಿತ ಸೋಡಾ, ಹಾಲು ಅಥವಾ ಐಸ್ ಕ್ರೀಮ್ ಇಲ್ಲದೆ ತಯಾರಿಸಿದ ಕಾಕ್ ಟೇಲ್ ಗಳು ಅಥವಾ ಮಿಶ್ರ ಪಾನೀಯಗಳನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ, ಡಯಟ್ ಟಾನಿಕ್ ವಾಟರ್ ಅಥವಾ ರಮ್ ಮತ್ತು ಡಯಟ್ ಕೋಲಾದೊಂದಿಗೆ ಜಿನ್.

ಕರಿದ ತಿಂಡಿಗಳನ್ನು ಸೇವಿಸಬೇಡಿ
ಆಲ್ಕೋಹಾಲ್ ನೊಂದಿಗೆ ಕರಿದ ತಿಂಡಿಗಳನ್ನು ಸೇವಿಸುವ ಅಭ್ಯಾಸವು ಬಹುತೇಕರಿಗೆ ಇರುತ್ತದೆ. ಹೀಗೆ ಕರಿದ ತಿಂಡಿಗಳನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಅನಾರೋಗ್ಯಕರ ಕೊಬ್ಬು ಸಂಗ್ರಹವಾಗುತ್ತದೆ. ಹುರಿದ ತಿಂಡಿಗಳನ್ನು ಸಲಾಡ್ ಗಳು ಮತ್ತು ಹುರಿದ ತಿಂಡಿಗಳಾದ ಮಖಾನಾ, ಕಡಲೆ ಅಥವಾ ಮೊಟ್ಟೆಯ ಬಿಳಿ ಭಾಗದಿಂದ ಬದಲಿಸಿಕೊಳ್ಳಿರಿ. ಕುಡಿತದ ವೇಗವೂ ಸಹ ಅಷ್ಟೇ ಮುಖ್ಯವಾಗುತ್ತದೆ. ದೇಹವು ಆಲ್ಕೋಹಾಲ್ ಅನ್ನು ಚಯಾಪಚಯಗೊಳಿಸಲು ಅನುವು ಮಾಡಿಕೊಡಲು ಪ್ರತಿ ಗಂಟೆಗೆ ಒಂದು ಪಾನೀಯಕ್ಕೆ ನಿಮ್ಮನ್ನು ಸೀಮಿತಗೊಳಿಸಿಕೊಳ್ಳುವುದು ಉತ್ತಮ. ಅತಿಯಾಗಿ ಕುಡಿಯುವುದು ಹಾನಿಕಾರಕವಾಗಿದೆ.

ಯಾವ ಪಾನೀಯನ್ನು ಕುಡಿಯುವುದು ಉತ್ತಮ?
ಪಾನೀಯದ ಆಯ್ಕೆಯು ನಿಮ್ಮ ವೈಯಕ್ತಿಕ ಆಯ್ಕೆಯ ಮೇಲೆ ಅವಲಂಬಿತವಾಗಿರುತ್ತದೆ ಆದರೆ ಸಿಹಿ ವೈನ್ ಗಳನ್ನು ಮಾತ್ರ ಕುಡಿಯಬೇಡಿ. ಕಡಿಮೆ ಕಾರ್ಬ್ ಹೊಂದಿರುವ ಬಿಯರ್ ಗಳು ಉತ್ತಮವಾಗಿವೆ. ವಿಸ್ಕಿ ಅಥವಾ ರಮ್ ಗಿಂತ ವೋಡ್ಕಾ ಅಥವಾ ಜಿನ್ ಸುರಕ್ಷಿತ ಎಂಬ ಜನಪ್ರಿಯ ಕಲ್ಪನೆ ಮಾತ್ರ ಸುಳ್ಳು.

ಇದನ್ನೂ ಓದಿ: Weight Loss Tips: ತೂಕ ಇಳಿಸಲು ಟ್ರೈ ಮಾಡ್ತಿದ್ರೆ ಈ ಹಣ್ಣುಗಳಿಂದ ದೂರವಿರಿ

ನೀವು ಆಲ್ಕೋಹಾಲ್ ಅನ್ನು ಪ್ರತಿರೋಧಿಸಲು ಸಾಧ್ಯವಾಗದಿದ್ದರೆ, ದಯವಿಟ್ಟು ಮಿತಗೊಳಿಸುವ ನಿಯಮವನ್ನು ನೆನಪಿಡಿ ಮತ್ತು ಕಡಿಮೆ ರಕ್ತದ ಗ್ಲೂಕೋಸ್ ಗೆ ಸೂಕ್ತವಾದ ಚಿಕಿತ್ಸೆಯನ್ನು ತೆಗೆದುಕೊಳ್ಳಿರಿ.

ಮಧುಮೇಹ ಹೊಂದಿರುವ ಜನರಿಗೆ ಆಲ್ಕೋಹಾಲ್ ಸೇವನೆಯ ಮಾರ್ಗಸೂಚಿಗಳು

  • ನೀವು ಒಂದು ದಿನದ ಅವಧಿಯಲ್ಲಿ ಎರಡಕ್ಕಿಂತ ಹೆಚ್ಚು ಯೂನಿಟ್ ಗಿಂತ ಹೆಚ್ಚು ಆಲ್ಕೋಹಾಲ್ ಅನ್ನು ಕುಡಿಯಬೇಡಿ.

  • ಅಧಿಕ ರಕ್ತದೊತ್ತಡ, ಹೃದಯ, ಯಕೃತ್ತು, ಮೂತ್ರಪಿಂಡ, ಕಣ್ಣು, ನರ ಅಥವಾ ಮೇದೋಜ್ಜೀರಕ ಗ್ರಂಥಿ ರೋಗಗಳಿಂದ ನೀವು ಬಳಲುತ್ತಿದ್ದರೆ ಆಲ್ಕೋಹಾಲ್ ನಿಂದ ದೂರವಿರುವುದು ಒಳ್ಳೆಯದು.

  • ನಿರ್ಜಲೀಕರಣ ಮತ್ತು ಹ್ಯಾಂಗೋವರ್ ಅನ್ನು ತಡೆಗಟ್ಟಲು ಆಲ್ಕೋಹಾಲ್ ನೊಂದಿಗೆ ಸಾಕಷ್ಟು ನೀರನ್ನು ಕುಡಿಯಿರಿ.

  • ಆಲ್ಕೋಹಾಲ್ ನೊಂದಿಗೆ ಕಡಿಮೆ ಕ್ಯಾಲೋರಿಯ ತಿಂಡಿಗಳನ್ನು ಆರಿಸಿಕೊಳ್ಳಿ.

  • ಖಾಲಿ ಹೊಟ್ಟೆಯಲ್ಲಿ ಮದ್ಯವನ್ನು ಕುಡಿಯಬೇಡಿ.

  • ನಿಧಾನವಾಗಿ ಮದ್ಯ ಸೇವನೆ ಮಾಡಿ.

  • "ಸಕ್ಕರೆ ಮಿಶ್ರಿತ" ಪಾನೀಯಗಳು, ಸಿಹಿ ವೈನ್ ಗಳು ಅಥವಾ ಕಾರ್ಡಿಯಲ್ ಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು.


ಇದನ್ನೂ ಓದಿ: Diabetes Problem: ಮಧುಮೇಹ ಚಿಕಿತ್ಸೆಯಲ್ಲಿ ಆಯುರ್ವೇದ ಸಲಹೆ ಎಷ್ಟು ಸಹಾಯಕ?

  • ನೀರು, ಕ್ಲಬ್ ಸೋಡಾ ಅಥವಾ ಡಯಟ್ ತಂಪು ಪಾನೀಯಗಳೊಂದಿಗೆ ಮದ್ಯವನ್ನು ಮಿಶ್ರಣ ಮಾಡಿ.

  • ಆಲ್ಕೋಹಾಲ್ ಸೇವಿಸಿದ ಕೆಲವು ಗಂಟೆಗಳ ನಂತರ ರಕ್ತದ ಗ್ಲುಕೋಸ್ ಅನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.

Published by:Ashwini Prabhu
First published: