Health Tips: ಮಧುಮೇಹಿಗಳು ಖರ್ಜೂರ ತಿನ್ನಬಹುದೇ..? ಹೆಚ್ಚು ತಿಂದ್ರೆ ಏನಾಗತ್ತೆ ಗೊತ್ತಾ?

Dates And Diabetes: ಮಧುಮೇಹ ಮತ್ತು ಪೂರ್ವ-ಮಧುಮೇಹದ ತೊಂದರೆಗಳಿಂದ ಬಳಲುತ್ತಿರುವ ಜನರಿಗೆ ಖರ್ಜೂರದ ಸೇವನೆ ಸುರಕ್ಷಿತ ಎಂದು ಭಾವಿಸಲಾಗುತ್ತದೆ. ಆದರೆ, ಅದೇನೇ ಇದ್ದರೂ ಖರ್ಜೂರವನ್ನು ಮಿತವಾಗಿ ತಿನ್ನಬೇಕು ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ 1-2 ಖರ್ಜೂರ ಸೇವಿಸುವುದಕ್ಕಷ್ಟೇ ಸೀಮಿತಗೊಳಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ದಿನಗಳಲ್ಲಿ ಜನರಿಗೆ ಆರೋಗ್ಯದ(Health) ಕುರಿತು ಕಾಳಜಿ ಹೆಚ್ಚಾಗುತ್ತಿದ್ದು, ಅವರು ತಮ್ಮ ಆಹಾರವನ್ನು(Food) ರುಚಿಕರ ಹಾಗೂ ಸಿಹಿಯಾಗಿಸಲು, ಆರೋಗ್ಯಕರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಆಯ್ಕೆಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಖರ್ಜೂರ(Dates). ಸಿಹಿ ಮತ್ತು ಸಂಸ್ಕರಿತ ಸಕ್ಕರೆಗೆ(Sugar) ಪರ್ಯಾಯವಾಗಿ ಖರ್ಜೂರ ಬಳಕೆಯಲ್ಲಿದೆ. ಮುಖ್ಯವಾಗಿ ಮಧುಮೇಹಿಗಳ(Diabetes) ಆಯ್ಕೆ ಇದೇ ಆಗಿದೆ. ಚಾಕೋಲೇಟ್‍ಗಳಿಂದ(Chocolates) ಹಿಡಿದು ಸಿಹಿ ತಿನಿಸುಗಳವರೆಗೆ ಖರ್ಜೂರ ಒಂದು ಅತ್ಯಂತ ಸುರಕ್ಷಿತ ಆಯ್ಕೆ. ಆದರೆ ನಿಜಕ್ಕೂ ಖರ್ಜೂರ ಮಧುಮೇಹಿಗಳಿವೆ ಉತ್ತಮವೇ..? ಮಧುಮೇಹಿಗಳು ನಿತ್ಯವೂ ಎಷ್ಟು ಖರ್ಜೂರಗಳನ್ನು ತಿನ್ನಬೇಕು..? ಇಲ್ಲಿದೆ ಆ ಕುರಿತು ಒಂದಿಷ್ಟು ಮಾಹಿತಿ.

ಮಧುಮೇಹಿಗಳು ಖರ್ಜೂರ ತಿನ್ನಬಹುದೇ?
ಹಲವಾರು ವರ್ಷಗಳಿಂದ ಜನರು ಹೆಚ್ಚಾಗಿ ಸೇವಿಸುವ ಆಹಾರ ಪದಾರ್ಥವಾಗಿರುವ ಖರ್ಜೂರ , ರುಚಿಯಲ್ಲಿ ಸಿಹಿಯಾಗಿರುವುದು ಮಾತ್ರವಲ್ಲ, ಆರೊಗ್ಯಕರ ಕಾರ್ಬೊಹೈಡ್ರೇಟ್‍ಗಳು, ವಿಟಮಿನ್‍ಗಳು ಮತ್ತು ಮಿನರಲ್‍ಗಳನ್ನು ಕೂಡ ಹೊಂದಿದೆ.

ಸುಮಾರು 100 ಗ್ರಾಂ ಖರ್ಜೂರದಲ್ಲಿ 314 ಕ್ಯಾಲೋರಿಗಳಿವೆ. ಅದರಲ್ಲೂ ಮುಖ್ಯವಾಗಿ ಖರ್ಜೂರದ ತಿರುಳು ಹೆಚ್ಚು ಸಿಹಿಯಾಗಿರುತ್ತದೆ ಮತ್ತು ಅಧಿಕ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿದೆ. ಮೆಡ್‍ಜೂಲ್‍ನಂತಹ ಖರ್ಜೂರ ಇತರ ವಿಧಗಳಿಗಿಂತ 2 ಪಟ್ಟು ದೊಡ್ಡದಾಗಿ ಇರುತ್ತದೆ, ಇದರ ಸೇವನೆಯ ಪ್ರಮಾಣದ ಬಗ್ಗೆ ನಿಗಾ ಇಡಬೇಕಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮಧುಮೇಹಿಗಳು ದಿನಕ್ಕೆ 2-3 ಖರ್ಜೂರ ತಿನ್ನುವುದು ಸುರಕ್ಷಿತ, ಆದರೆ ಅವರು ತಮ್ಮ ಆಹಾರಕ್ರಮಕ್ಕೆ ಏನನ್ನೇ ಸೇರಿಸಬೇಕಾದರೂ ವೈದ್ಯಕೀಯ ಮಾರ್ಗದರ್ಶನ ಪಡೆಯುವುದು ಒಳ್ಳೆಯದು.

ಇದನ್ನೂ ಓದಿ: ಕಬ್ಬಿನ ರಸದ ಸೇವನೆಯಿಂದ ಈ 10 ಅದ್ಭುತ ಲಾಭಗಳನ್ನು ಪಡೆಯಬಹುದು

ಖರ್ಜೂರ ಮಧುಮೇಹಿಗಳಿಗೆ ಉತ್ತಮವೇ?
ಖರ್ಜೂರವನ್ನು ಮಿತವಾದ ಪ್ರಮಾಣದಲ್ಲಿ ತಿನ್ನುವುದರಿಂದ ಮಧುಮೇಹಿಗಳಿಗೆ ಪ್ರಯೋಜನ ಆಗಬಹುದು. ಏಕೆಂದರೆ ಅದರಲ್ಲಿ ಫೈಬರ್, ಆ್ಯಂಟಿಆಕ್ಸಿಡೆಂಟ್ ಮತ್ತು ಕಬ್ಬಿಣಾಂಶ, ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ಮತ್ತಿತರ ಮಿನರಲ್‍ಗಳು ಹೇರಳವಾಗಿವೆ. ಖರ್ಜೂರದ ಕಡಿಮೆ ಗ್ಲೈಸಮಿಕ್ ಸೂಚ್ಯಂಕವು ಅದನ್ನು ಪೌಷ್ಟಿಕಾಂಶದ ಉತ್ತಮ ಮೂಲವನ್ನಾಗಿಸುತ್ತದೆ.

ಖರ್ಜೂರದಲ್ಲಿರುವ ಫೈಬರ್ ಅಂಶವು , ರಕ್ತ ಪ್ರವಾಹಕ್ಕೆ ಸಕ್ಕರೆಯನ್ನು ನಿಧಾನವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟದ ಹೆಚ್ಚಳ ತಡೆಯುತ್ತದೆ. ಒಣ ಬೀಜಗಳು ಮತ್ತು ಇತರ ಆರೋಗ್ಯಕರ ಆಹಾರಗಳ ಜೊತೆ ಖರ್ಜೂರ ಸೇವಿಸಿದಾಗ, ಅದು ಪೂರ್ಣ ತೃಪ್ತಿ ಕೊಡುತ್ತದೆ ಹಾಗೂ ಹಸಿವನ್ನು ಕಡಿಮೆ ಮಾಡುತ್ತದೆ. ಅದಲ್ಲದೆ, ಖರ್ಜೂರದಲ್ಲಿರುವ ಆ್ಯಂಟಿಆಕ್ಸಿಡೆಂಟ್‍ಗಳು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಖರ್ಜೂರದಲ್ಲಿರುವ ಫೈಟೋಈಸ್ಟ್ರೋಜನ್‍ಗಳು ದೇಹದ ಪ್ರಮುಖ ಅಂಗಗಳ ಸರಿಯಾದ ಕಾರ್ಯ ನಿರ್ವಹಣೆಗೆ ಸಹಾಯ ಮಾಡುವ ಈಸ್ಟ್ರೋಜನ್‍ಗಳಂತದ್ದೇ ಪರಿಣಾಮ ಹೊಂದಿರುತ್ತವೆ. ಆದರೂ ಇನ್ಸುಲಿನ್ ಪ್ರತಿರೋಧ ಮತ್ತು ಮಧುಮೇಹಕ್ಕೆ ಸಂಬಂಧಿಸಿದಂತೆ ಫೈಟೋಈಸ್ಟ್ರೋಜನ್‍ಗಳ ಪ್ರಯೋಜನಗಳನ್ನು ತಿಳಿಯಲು ಇನ್ನಷ್ಟು ಸಂಶೋಧನೆಗಳ ಅಗತ್ಯ ಇದೆ.

ಮಧುಮೇಹ ಮತ್ತು ಪೂರ್ವ-ಮಧುಮೇಹದ ತೊಂದರೆಗಳಿಂದ ಬಳಲುತ್ತಿರುವ ಜನರಿಗೆ ಖರ್ಜೂರದ ಸೇವನೆ ಸುರಕ್ಷಿತ ಎಂದು ಭಾವಿಸಲಾಗುತ್ತದೆ. ಆದರೆ, ಅದೇನೇ ಇದ್ದರೂ ಖರ್ಜೂರವನ್ನು ಮಿತವಾಗಿ ತಿನ್ನಬೇಕು ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ 1-2 ಖರ್ಜೂರ ಸೇವಿಸುವುದಕ್ಕಷ್ಟೇ ಸೀಮಿತಗೊಳಿಸಬೇಕು.

ಇದನ್ನೂ ಓದಿ: ಚಳಿಗಾಲದ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಕಾಳುಮೆಣಸಿನ ಸೂಪ್​ನಲ್ಲಿದೆ ಪರಿಹಾರ

ಖರ್ಜೂರದಲ್ಲಿ ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಇದ್ದು, ಮಿತವಾಗಿ ಸೇವಿಸಿದಾಗ ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಿಲ್ಲ. ಆದರೂ ಮಧುಮೇಹಿಗಳು ಖರ್ಜೂರ ಸೇವಿಸುವ ವಿಷಯದಲ್ಲಿ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
Published by:Sandhya M
First published: