Wine And Diabetes: ಡಯಾಬಿಟಿಸ್​ ಇರುವವರು ವೈನ್ ಕುಡಿಯೋ ಮುಂಚೆ ಈ ಸ್ಟೋರಿ ಓದಿ

Wine And Diabetes: ಮಧುಮೇಹ ಇರುವಾಗ ವೈನ್‌ ಕುಡಿಯುವುವಾಗ ಕೇವಲ ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ಮಾತ್ರ ಅಲ್ಲದೇ ನಿಮ್ಮ ತೂಕದ ಬಗ್ಗೆಯೂ ಕೂಡ ನೀವು ಗಮನಹರಿಸಬೇಕಾಗುತ್ತದೆ. ಐದು ಔನ್ಸ್ ಗ್ಲಾಸ್‌ ವೈನ್‌ ಪ್ರತಿ 100 ರಿಂದ 150 ಕ್ಯಾಲೊರಿಗಳನ್ನು ಹೊಂದಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿಗೆ ಮದ್ಯಪಾನ (Drinks) ಮಾಡುವುದು ಒಂದು ಟ್ರೆಂಡ್‌ (Trend) ಆಗಿದೆ. ಸ್ನೇಹಿತರ (Friends) ಜೊತೆ ಹರಟೆ ಹೊಡಿತಾ ಕುತ್ಕೊಂಡ್ರೆ ಒಂದು ಗ್ಲಾಸ್‌ ವೈನ್‌ (Glass Wine), ಇನ್ನು ಸಂಗಾತಿ ಜೊತೆ ಮಾತನಾಡ್ತಾ ಕುಳಿತರೂ ಬೇಕು ಒಂದು ಗ್ಲಾಸ್‌ ಬಿಯರ್‌, ವಾರಾಂತ್ಯದ ಸಮಯದಲ್ಲಿ ವಿಶ್ರಾಂತಿ (Rest) ತೆಗೆದುಕೊಳ್ಳಬೇಕೆಂದರೆ ಮೊದಲು ಮಾಡೋದು ಒಂದು ಗ್ಲಾಸ್‌ ಬಿಯರ್‌ ಅಥವಾ ವೈನ್‌ ಕುಡೀತಾ ಕುಳಿತು ಸಮಯ ಕಳೆಯುವುದು. ಒಟ್ಟಾರೆಯಾಗಿ ಎಲ್ಲದಕ್ಕೂ ಮದ್ಯಪಾನ ಒಂದು ದಾರಿ ಆಗಿದೆ. ಆದರೆ ನೀವು ಡಯಾಬಿಟಿಸ್‌ ರೋಗಿ ಆಗಿದ್ದರೆ ವೈನ್‌ ಕುಡಿಬಹುದಾ? ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ಹೌದು ಡಯಾಬಿಟಿಸ್‌ (Diabetes)  ರೋಗಿಗಳು ಊಟದ ನಂತರ ಒಂದು ಗ್ಲಾಸ್‌ ವೈನ್‌ ಕುಡಿಬಹುದು ಎಂದು ವೈದ್ಯರೇ ಹೇಳುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ. 

ಮದ್ಯಪಾನ ಎಂದರೆ ಕೇವಲ ಕೆಟ್ಟದು ಎನ್ನುವವರಿಗೆ ಇಲ್ಲೊಂದು ಆಶ್ಚರ್ಯಕರ ಸಂಗತಿ ಇದೆ. "ಮಧುಮೇಹದಿಂದ ಬಳಲುತ್ತಿರುವವರಿಗೆ ವೈನ್ ಸೇವನೆ ಬಹಳಷ್ಟು ಸುರಕ್ಷಿತವಾಗಿದೆ" ಎಂದು ಎನ್ವೈ ನ್ಯೂಟ್ರಿಷನ್ ಗ್ರೂಪ್‌ನ ಸಿಇಒ ಮತ್ತು ದಿ ಕೋರ್ 3 ಹೆಲ್ತಿ ಈಟಿಂಗ್ ಪ್ಲಾನ್‌ನ ಲೇಖಕಿ ಲಿಸಾ ಮೊಸ್ಕೊವಿಟ್ಜ್ ಹೇಳುತ್ತಾರೆ.

"ಮಧುಮೇಹ ಇಲ್ಲದ ವ್ಯಕ್ತಿಯು ತಿನ್ನಬಹುದಾದ ಯಾವುದೇ ಆಹಾರವನ್ನು ಸಹ ಮಧುಮೇಹ ಇರುವವರು ಕೂಡ ಸೇವನೆ ಮಾಡಬಹುದು” ಎಂದು ಲಿಸಾ ಮೊಸ್ಕೊವಿಟ್ಜ್ ಅವರು ಹೇಳುತ್ತಾರೆ. ಆದರೆ ನಿಮಗೆ ನೀವೆ ನಿರ್ಧಾರ ತೆಗೆದುಕೊಳ್ಳುವುದು  ಆರೋಗ್ಯದ ವಿಷಯದಲ್ಲಿ ಸೂಕ್ತವಲ್ಲ. ಆದ್ದರಿಂದ ನಿಮ್ಮ ವೈದ್ಯರನ್ನು ಒಮ್ಮೆ ಸಂಪರ್ಕಿಸಿ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ವೈನ್‌ನ ಪ್ರಭಾವ ಹೇಗೆ ಬೀರುತ್ತದೆ. ಇದರಿಂದ ನೀವು ಮಧುಮೇಹ ರೋಗಿಯಾಗಿದ್ದರೆ, ನೀವು ಅದನ್ನು ಕುಡಿಯಬಹುದೇ ಅಥವಾ ಬಿಡುವುದೇ ಎಂಬುದರ ಕುರಿತು ತಿಳಿದುಕೊಳ್ಳುವುದು ನಿಮಗೆ ಹಾಗೂ ಆರೋಗ್ಯಕ್ಕೆ ಉತ್ತಮ ಎಂಬುದುಯ ನೆನಪಿಡಿ.

ವೈನ್ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮೊದಲು ವೈನ್ ಅನ್ನು ದ್ರಾಕ್ಷಿ ಮತ್ತು ಯೀಸ್ಟ್‌ನಿಂದ ತಯಾರಿಸಲಾಗುತ್ತದೆ. ವೈನ್ ಹುದುಗುತ್ತಿದ್ದಂತೆ, ಯೀಸ್ಟ್ ದ್ರಾಕ್ಷಿಯಿಂದ ಸಕ್ಕರೆಯನ್ನು ಹೀರಿಕೊಳ್ಳುತ್ತದೆ. ಇದು ನಂತರ ಆಲ್ಕೋಹಾಲ್ ಅಂಶವನ್ನು ರಚಿಸುತ್ತದೆ. ಕೆಲವು ವೈನ್‌ಗಳನ್ನು ಕಡಿಮೆ ಹುದುಗಿಸಲಾಗುತ್ತದೆ ಅಥವಾ ಸುವಾಸನೆಯನ್ನು ಹೆಚ್ಚು ಮಾಡಲು ಸಕ್ಕರೆಯನ್ನು ಹೆಚ್ಚು ಸೇರಿಸಲಾಗುತ್ತದೆ. ಹಾಗಾಗಿ ಬಹಳ ಎಚ್ಚರವಾಗಿರಬೇಕು.

ನೀವು ಕೆಂಪು ಮತ್ತು ಬಿಳಿ ವೈನ್‌ಗಳನ್ನು ಸೇವನೆ ಮಾಡಲು ಬಯಸಿದರೆ ನಿಜಕ್ಕೂ ಒಳ್ಳೆಯದು. ಏಕೆಂದರೆ ಅದರಲ್ಲಿ ಸಕ್ಕರೆ ಅಂಶವು ಕಡಿಮೆ ಇರುತ್ತದೆ. ಒಂದು ಗ್ಲಾಸ್‌ ಕೆಂಪು ವೈನ್, 5-ಮಿ.ಲೀ ಗೆ ಸುಮಾರು 1 ಗ್ರಾಂ ನಷ್ಟು ಸಕ್ಕರೆ ಅಂಶವನ್ನು ಹೊಂದಿರುತ್ತದೆ ಮತ್ತು ಬಿಳಿ ವೈನ್ ಒಂದು ಗ್ರಾಂಗಿಂತ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತದೆ ಎನ್ನುತ್ತಾರೆ ಲೀಸಾ ಮೊಸ್ಕೊವಿಟ್ಜ್.

“ಕೆಂಪು ಅಥವಾ ಬಿಳಿ ವೈನ್ ಅನ್ನು ಸೇವಿಸುವಾಗ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ನೀವು ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಆದರೆ ನಿಮ್ಮ ರಕ್ತದಲ್ಲಿ ಎಷ್ಟು ಸಕ್ಕರೆ ಅಂಶವಿದೆ ಎಂದು ಕೂಡ ಅಷ್ಟೆ ಮುಖ್ಯವಾಗುತ್ತದೆ. ಏಕೆಂದರೆ, ವೈನ್‌ಗಳು ಹೆಚ್ಚಿನ ಸಕ್ಕರೆ ಅಥವಾ ಹೆಚ್ಚಿನ ಕಾರ್ಬೋಹೈಡ್ರೇಟ್‌ ಅಂಶಗಳನ್ನು ಹೊಂದಿರುವುದಿಲ್ಲ. ಒಂದು ಗ್ಲಾಸ್ ವೈನ್ ಕೇವಲ ಐದು ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ” ಎಂದು ಬ್ರೂಕ್ಲಿನ್, ಎನ್‌ .ವೈ ನಲ್ಲಿ ನೋಂದಾಯಿತ ಆಹಾರ ಪದ್ಧತಿ ಮತ್ತು ಪ್ರಮಾಣೀಕೃತ ವೈಯಕ್ತಿಕ ತರಬೇತುದಾರ ಅಲಿಕ್ಸ್ ಟ್ಯುರೊಫ್ ಹೇಳುತ್ತಾರೆ.

ಹಾಗಾದರೆ ಸಮಸ್ಯೆ ಏನು? ವೈನ್‌ ಸೇವಿಸಬಹುದಲ್ಲವೇ? ಎಂದು ಕೇಳುತ್ತಿರುವಿರಿ. ಹೌದು ತಾನೇ. ಅದಕ್ಕೆ ಉತ್ತರ ಇಲ್ಲಿದೆ. “ನೀವು ಹೆಚ್ಚಿನ ಪ್ರಮಾಣದಲ್ಲಿ ವೈನ್ ಅನ್ನು ಸೇವಿಸುವುದರಿಂದ ನಿಮಗೆ ಹೈಪೊಗ್ಲಿಸಿಮಿಯಾ ಅಥವಾ ಕಡಿಮೆ ರಕ್ತದ ಸಕ್ಕರೆ ಮಟ್ಟದ ಅಪಾಯ ಬರಬಹುದು. ಆದ್ದರಿಂದ ಅತಿಯಾಗಿ ಸೇವಿಸಿದರೆ, ನಿಮ್ಮ ಯಕೃತ್ತು ರಕ್ತದ ಸಕ್ಕರೆಗಿಂತ ಆಲ್ಕೋಹಾಲ್ ಅಂಶಕ್ಕೆ ಹೆಚ್ಚಿನ ಆದ್ಯತೆ ನೀಡಲು ಪ್ರಾರಂಭಿಸುತ್ತದೆ" ಎಂದು ಟ್ಯುರೊಫ್ ಹೇಳುತ್ತಾರೆ.

ಇದನ್ನೂ ಓದಿ: ಪದೇ ಪದೇ ಉಗುರು ಕಟ್​ ಆಗ್ಬಾರ್ದು ಅಂದ್ರೆ ಮನೆಯಲ್ಲಿಯೇ ಈ ಸಿಂಪಲ್ ಹ್ಯಾಕ್ಸ್​ ಟ್ರೈ ಮಾಡಿ

“ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಕಡಿಮೆಯಾದಾಗ ರಕ್ತ ಹರಿವಿಗೆ ಗ್ಲೂಕೋಸ್ ಅನ್ನು ಬಿಡುಗಡೆ ಮಾಡಲು ಯಕೃತ್ತು ಹೆಚ್ಚಾಗಿ ಕಾರಣವಾಗಿದೆ. ಇದು ನಿಮ್ಮ ದೇಹದ ವ್ಯವಸ್ಥೆಯಿಂದ ಆಲ್ಕೋಹಾಲ್ ಅನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹದಲ್ಲಿ ಆಲ್ಕೋಹಾಲ್‌ನೊಂದಿಗೆ ಅದರ ಕಾರ್ಯಗಳು ಸಹ ಬದಲಾಗುವ ಸಾಧ್ಯತೆ  ಹೆಚ್ಚಿರುತ್ತದೆ. ಆಲ್ಕೋಹಾಲ್ ಕುಡಿಯುವುದು ನಿಮ್ಮ ಯಕೃತ್ತನ್ನು ಹಾಳುಮಾಡಬಹುದು. ಇದು ಕಡಿಮೆ ಗ್ಲೂಕೋಸ್ ಉತ್ಪಾದನೆಗೆ ಕಾರಣವಾಗಬಹುದು ಮತ್ತು ಇದೇ ಕಾರಣಕ್ಕೆ,ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆ ಆಗುತ್ತದೆ" ಎಂದು ಮೊಸ್ಕೊವಿಟ್ಜ್ ಹೇಳುತ್ತಾರೆ.

ಆಲ್ಕೋಹಾಲ್ ಸೇವನೆಯಿಂದ ದೇಹದಲ್ಲಿ ಆಗುವ ದುಷ್ಟಪರಿಣಾಮಗಳಾವುವು?

ಮಧುಮೇಹ ಇರುವಾಗ ವೈನ್‌ ಕುಡಿಯುವುವಾಗ ಕೇವಲ ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ಮಾತ್ರ ಅಲ್ಲದೇ ನಿಮ್ಮ ತೂಕದ ಬಗ್ಗೆಯೂ ಕೂಡ ನೀವು ಗಮನಹರಿಸಬೇಕಾಗುತ್ತದೆ. ಐದು ಔನ್ಸ್ ಗ್ಲಾಸ್‌ ವೈನ್‌ ಪ್ರತಿ 100 ರಿಂದ 150 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದರೆ ನೀವು ಹೆಚ್ಚು ಆಹಾರ ಸೇವನೆ ಮಾಡುತ್ತಿದ್ದರೆ, ನಿಮ್ಮ ತೂಕವನ್ನು ನಿರ್ವಹಿಸುವುದು ಸ್ವಲ್ಪ ಕಷ್ಟವೇ ಸರಿ” ಎಂದು ಮೊಸ್ಕೊವಿಟ್ಜ್ ಹೇಳುತ್ತಾರೆ.

ನೀವು ಮಧುಮೇಹವನ್ನು ಹೊಂದಿಲ್ಲದಿದ್ದರೂ ಸಹ, ಆಲ್ಕೋಹಾಲ್ ನಿಮ್ಮ ಹೃದಯಕ್ಕೆ ಅಪಾಯಕಾರಿ ಎಂದು ಮೊಸ್ಕೊವಿಟ್ಜ್ ಹೇಳುತ್ತಾರೆ. ವರ್ಲ್ಡ್ ಹಾರ್ಟ್ ಫೆಡರೇಶನ್ ಇತ್ತೀಚೆಗೆ ಹೃದಯದ ಆರೋಗ್ಯಕ್ಕೆ ಯಾವುದೇ ಪ್ರಮಾಣದ ಆಲ್ಕೋಹಾಲ್ ಉತ್ತಮವಲ್ಲ ಎಂದು ಘೋಷಣೆ ಮಾಡಿದೆ. ಏಕೆಂದರೆ ಇದು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಕೆಲವು ಸಂಸ್ಥೆಗಳು ಆಲ್ಕೋಹಾಲ್ ಅನ್ನು ಕಾರ್ಸಿನೋಜೆನ್ ಎಂದು ವರ್ಗೀಕರಿಸುತ್ತವೆ. ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಕ್ಯಾನ್ಸರ್‌ನ ಇತ್ತೀಚಿನ ಒಂದು ಅಧ್ಯಯನವು ಆಲ್ಕೋಹಾಲ್ ಕ್ಯಾನ್ಸರ್‌ಗೆ ನೇರ ಕಾರಣವಾಗಿರಬಹುದು ಎಂದು ಕಂಡುಹಿಡಿದಿದೆ.

ಕ್ಯಾನ್ಸರ್ ರಿಸರ್ಚ್ ಯುಕೆ ಪ್ರಕಾರ, “ಸ್ತನ, ಕೊಲೊನ್, ಬಾಯಿ, ಯಕೃತ್ತು ಮತ್ತು ಮೂರು ವಿಧದ ಗಂಟಲು ಕ್ಯಾನ್ಸರ್ ಸೇರಿದಂತೆ ಏಳು ವಿಭಿನ್ನ ರೀತಿಯ ಕ್ಯಾನ್ಸರ್‌ಗಳಿಗೆ ಆಲ್ಕೋಹಾಲ್ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ. ನೀವು ಮಿತವಾಗಿ ಕುಡಿಯುತ್ತಿದ್ದರೂ ಸಹ, ಆಲ್ಕೋಹಾಲ್ ಒಂದು ವಿಷ" ಎಂದು ಟುರೊಫ್ ಹೇಳುತ್ತಾರೆ.

ವೈನ್ ಸೇವನೆಯ ಆರೋಗ್ಯ ಪ್ರಯೋಜನಗಳು :

ಅದರ ಜೊತೆಗೆ ಕೆಲವು ಅಧ್ಯಯನಗಳು ವೈನ್ ಮತ್ತು ಸುಧಾರಿತ ಆರೋಗ್ಯದ ನಡುವೆ ಧನಾತ್ಮಕ ಸಂಬಂಧಗಳನ್ನು ತೋರಿಸುತ್ತವೆ ಎಂದು ಹೇಳಲಾಗುತ್ತದೆ. ಉದಾಹರಣೆಗೆ, ವೈನ್ ಹೆಚ್ಚಿನ ಪ್ರಮಾಣದ ಪೋಲ್ ಅನ್ನು ಹೊಂದಿರುತ್ತದೆ.

ಇದನ್ನೂ ಓದಿ: ಹಲ್ಲುಗಳ ಆರೋಗ್ಯ ಕಾಪಾಡುತ್ತವೆ ಈ ಎರಡು ಪದಾರ್ಥಗಳು, ಮಿಸ್​ ಮಾಡದೇ ಸೇವಿಸಿ"ಆರೋಗ್ಯ ಪ್ರಯೋಜನಗಳಿಗಾಗಿ ವೈನ್‌ ಕುಡಿಯಿರಿ ಎಂದು ಆಲ್ಕೋಹಾಲ್ ಸೇವನೆ ಮಾಡದವರಿಗೆ ನಾನು ಎಂದಿಗೂ ಶಿಫಾರಸು ಮಾಡುವುದಿಲ್ಲ. ಮುಂಚೆಯಿಂದಲೇ ವೈನ್‌ ಅಥವಾ ಆಲ್ಕೊಹಾಲ್‌ ಸೇವನೆ ಮಾಡುತ್ತಿರುವವರಿಗೆ ಮಾತ್ರ ನಾನು ಈ ಸಲಹೆಯನ್ನು ಸೂಚಿಸುತ್ತೆನೆ. ವಾಕಿಂಗ್, ಧ್ಯಾನ, ಮತ್ತು ಹೆಚ್ಚು ತರಕಾರಿಗಳ ಸೇವನೆಯೇ ಆರೋಗ್ಯಕ್ಕೆ ಬಹಳ ಮುಖ್ಯ” ಎಂದು ಟುರೊಫ್ ಹೇಳುತ್ತಾರೆ.
Published by:Sandhya M
First published: