HOME » NEWS » Lifestyle » CAN DEODORANT GIVE YOU BREAST CANCER BUSTS THIS MYTH STG KVD

ನಿತ್ಯ ಬಳಸುವ ಡಿಯೋಡರೆಂಟ್​​​ನಿಂದ ಸ್ತನ ಕ್ಯಾನ್ಸರ್ ಬರುತ್ತದೆಯೇ? ಆದರೆ ಸತ್ಯವೇನು ಗೊತ್ತಾ?

ಸ್ತನ ಕ್ಯಾನ್ಸರ್ ಮತ್ತು ಡಿಯೋಡರೆಂಟ್‌ಗೂ ಇರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಹಲವಾರು ಸಂಶೋಧನೆಗಳನ್ನು ಮಾಡಲಾಗಿದೆ. ಆದರೆ ಯಾವುದೇ ಅಧ್ಯಯನವೂ ಕೂಡ ಇವೆರಡಕ್ಕೂ ಸಂಬಂಧ ಇದೆ ಎನ್ನುವ ಅಂಶವನ್ನು ಪುಷ್ಠೀಕರಿಸಿಲ್ಲ.

Trending Desk
Updated:June 18, 2021, 6:54 AM IST
ನಿತ್ಯ ಬಳಸುವ ಡಿಯೋಡರೆಂಟ್​​​ನಿಂದ ಸ್ತನ ಕ್ಯಾನ್ಸರ್ ಬರುತ್ತದೆಯೇ? ಆದರೆ ಸತ್ಯವೇನು ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ನಾವು ಬಳಸುವ ಸುಗಂಧ ದ್ರವ್ಯಗಳು ದುರ್ಗಂಧ ನಿವಾರಕಗಳು. ಬೆವರಿನ ವಾಸನೆಯಿಂದ ಬಚಾವ್ ಆಗಲು ಎಲ್ಲರೂ ಮೊರೆ ಹೋಗುವುದು ಡಿಯೋಡರೆಂಟ್ಗಳಿಗೆ. ಸಾಮಾನ್ಯವಾಗಿ ಡಿಯೋಡರೆಂಟ್, ಪರ್ಫ್ಯೂಮ್ ಎಂದು ಕರೆಯಲ್ಪಡುವ ಸೌಂದರ್ಯ ಉತ್ಪನ್ನಗಳ ಬಳಕೆಯಿಂದ ಸ್ತನ ಕ್ಯಾನ್ಸರ್ ಬರುತ್ತದೆ ಎನ್ನುವ ಮಾತಿದೆ. ಈ ಮಾತು ಸತ್ಯವೇ? ಅಥವಾ ಇದೆಲ್ಲಾ ತಪ್ಪು ಕಲ್ಪನೆಗಳೇ ? ಎನ್ನುವ ಪ್ರಶ್ನೆಗಳಿಗೆ ಡಾ. ಕ್ಯುಟರಸ್ ಎಂದೇ ಇನ್ಸ್ಟಾಗ್ರಾಂನಲ್ಲಿ ಖ್ಯಾತಿ ಗಳಿಸಿರುವ ತನಯ ನರೇಂದ್ರ ಅವರು ಒಂದಷ್ಟು ವಿವರಣೆಗಳನ್ನು ನೀಡಿದ್ದಾರೆ.

ಆರೋಗ್ಯ ಮತ್ತು ಫಿಟ್ನೆಸ್ ಲೋಕದಲ್ಲಿ ಅಂತೆ ಕಂತೆಗಳು ಮತ್ತು ತಪ್ಪು ಮಾಹಿತಿಗಳು ಈಗ ಪರಿಶೀಲನೆಗೆ ಒಳಪಡದೆ ಸುಲಭವಾಗಿ ಹರಡುತ್ತಿವೆ. ಅನೇಕ ಪೀಳಿಗೆಗಳಿಂದಲೂ ಹೀಗೆ ನಿಖರತೆ ಇಲ್ಲದ ಮಾಹಿತಿಯೊಂದು ಸೌಂದರ್ಯ ಸಾಧನಗಳ ವಿಷಯದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಡಿಯೋಡರೆಂಟ್ ಬಳಕೆ ಸ್ತನ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎನ್ನುವುದೂ ಒಂದು.

ಇದೇ ವಿಷಯದ ಬಗ್ಗೆ ಡಾ. ಕ್ಯುಟರಸ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದಷ್ಟು ಚಿಂತಿಸಲೇಬೇಕಾದ ಅಂಶಗಳ ಬಗ್ಗೆ ಚರ್ಚಿಸಿದ್ದಾರೆ. ತಮ್ಮ ಅನುಯಾಯಿಗಳಿಗೆ ದುರ್ಗಂಧ ನಿವಾರಕ ದ್ರವ್ಯಗಳ ಬಗ್ಗೆ ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಅನೇಕ ಮಾಹಿತಿಯನ್ನು ನೀಡಿ ಸರಿಯಾದ ಆಯ್ಕೆ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಕಲಿಸಿಕೊಟ್ಟಿದ್ದಾರೆ.

ನನಗೆ ಗೊತ್ತು ನೀವು ಡಿಯೋಡರೆಂಟ್ ಸ್ತನ ಕ್ಯಾನ್ಸರ್ ಕಾರಕ ಎನ್ನುವ ಅಂತೆ ಕಂತೆಗಳನ್ನು ಕೇಳಿಯೇ ಇರುತ್ತೀರಿ. ಇದೇ ಅಂಶವನ್ನು ಬಂಡವಳವನ್ನಾಗಿಸಿಕೊಂಡು ಕೆಲವು ಕಂಪನಿಗಳು ನೈಸರ್ಗಿಕ, ಅಲ್ಯೂಮಿನಿಯಂ ಮುಕ್ತ ಡಿಯೋಡರೆಂಟ್ ಎಂದು ತಮ್ಮ ದುಬಾರಿ ಉತ್ಪನ್ನವನ್ನು ಮಾರಾಟ ಮಾಡುವುದನ್ನು ಕೂಡ ನಾನು ಚೆನ್ನಾಗಿ ಬಲ್ಲೆ. ನೈಸರ್ಗಿಕ ಉತ್ಪನ್ನಗಳ ಬಳಕೆಯ ಬಗ್ಗೆ ನನಗೆ ವಿರೋಧವಿಲ್ಲ. ನಾನು ಕೂಡ ಅವುಗಳನ್ನು ಖರೀದಿಸುವೆ. ಆದರೆ ಅದಕ್ಕೆ ಮೂರ್ಖ ಕಾರಣಗಳನ್ನು ಮುಖ್ಯವಾಗಿಸಿಕೊಂಡು ದುಬಾರಿ ಉತ್ಪನ್ನಗಳ ಕಡೆ ಒಲವು ತೋರುವುದು ಬೇಡವೆನ್ನುವುದು ನನ್ನ ಅನಿಸಿಕೆ. ವಿಜ್ಞಾನವನ್ನು ಅರ್ಥಮಾಡಿಕೊಳ್ಳಿ ಮತ್ತು ಇಂತಹ ದಾರಿ ತಪ್ಪಿಸುವ ಮಾಹಿತಿ ಪ್ರವಾಹದೊಳಗೆ ಕೊಚ್ಚಿ ಹೋಗದಿರಿ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮುಟ್ಟಿನ ದಿನಗಳಲ್ಲಿ ಸೆಕ್ಸ್ ಮಾಡುವುದರಿಂದ ಗರ್ಭಿಣಿಯಾಗುವ ಸಾಧ್ಯತೆಗಳು ಎಷ್ಟಿರುತ್ತೆ.. ಪರಿಹಾರವೇನು?

ಇದೊಂದು ತಪ್ಪು ಕಲ್ಪನೆ ಎನ್ನುವುದಕ್ಕೆ ಇಲ್ಲಿದೆ ಅಸಲಿ ಕಾರಣ
ಸ್ತನ ಕ್ಯಾನ್ಸರ್ ಮತ್ತು ಡಿಯೋಡರೆಂಟ್‌ಗೂ ಇರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಹಲವಾರು ಸಂಶೋಧನೆಗಳನ್ನು ಮಾಡಲಾಗಿದೆ. ಆದರೆ ಯಾವುದೇ ಅಧ್ಯಯನವೂ ಕೂಡ ಇವೆರಡಕ್ಕೂ ಸಂಬಂಧ ಇದೆ ಎನ್ನುವ ಅಂಶವನ್ನು ಪುಷ್ಠೀಕರಿಸಿಲ್ಲ. ಅಲ್ಲದೇ 1990 ರಲ್ಲಿ ಒಂದು ಇ ಮೇಲ್ ಹರಿದಾಡಿತ್ತು. ತೋಳಿನ ಸಂಧಿಯ ಕೆಳಗೆ ಶೇವ್ ಮಾಡಿದ ಬಳಿಕ ಡಿಯೋಡರೆಂಟ್ ಸಿಂಪಡಿಸಿಕೊಂಡರೆ ಸ್ತನ ಕ್ಯಾನ್ಸರ್ ಬರುತ್ತದೆ ಎನ್ನುವ ವದಂತಿಯನ್ನು ಆ ಇ ಮೇಲ್ ಒಳಗೊಂಡಿತ್ತು.ಶೇವಿಂಗ್ನಿಂದ ಚರ್ಮದ ಮೇಲೆ ಸಣ್ಣ ಸಣ್ಣ ಬಿರುಕುಗಳು ಮೂಡಿರುತ್ತವೆ. ಈ ಮೂಲಕ ಡಿಯೋಡರೆಂಟ್ ದುಗ್ದರಸ ಗ್ರಂಥಿಗಳನ್ನು ಸೇರುತ್ತದೆ. ಡಿಯೋಡರೆಂಟ್ ಬೆವರುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಕಾರಣ ನೀವು ಇದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಆ ಸಂದೇಶದಲ್ಲಿ ಇತ್ತು ಎನ್ನುತ್ತಾರೆ ಡಾ. ತನಯ ನರೇಂದ್ರ.

ಡಾ. ತನಯ ನರೇಂದ್ರ ಅವರು ಈ ವದಂತಿಯನ್ನು ಅಲ್ಲಗಳೆಯುತ್ತಾರೆ. ಇದೊಂದು ತಪ್ಪು ಮಾಹಿತಿ ಎಂದು ಒತ್ತಿ ಹೇಳುತ್ತಾರೆ. ದುಗ್ಧರಸ ಗ್ರಂಥಿಗಳು ಪ್ರತಿರಕ್ಷಣಾ ವ್ಯವಸ್ಥೆಯ ಒಂದು ಭಾಗವಾಗಿದೆ . ಅವು ನಿಮ್ಮ ದೇಹವು ಸೂಕ್ಷ್ಮಜೀವಿಗಳು ಮತ್ತು ದುರ್ಮಾಂಸ(ಕ್ಯಾನ್ಸರ್ ಕೋಶಗಳನ್ನು ಒಳಗೊಂಡಂತೆ)ಗಳನ್ನು ಫಿಲ್ಟರ್ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ದೇಹದೊಳಗಿನ ಸೂಪರ್ ಹೈವೇ ಬಳಸಿ ದುಗ್ಧರಸ ಗ್ರಂಥಿಗಳು ಪರಸ್ಪರ ಸಂಪರ್ಕ ಹೊಂದಿರುತ್ತವೆ. ಆದರೆ ಅವು ನಿಮ್ಮ ಬೆವರು ಗ್ರಂಥಿಗಳಿಗೆ ಸಂಪರ್ಕ ಹೊಂದಿಲ್ಲ.
ಈ ದುರ್ಗಂಧ ನಿಯಂತ್ರಣ ದ್ರವ್ಯಗಳು ನಿಮ್ಮ ಬೆವರು ಗ್ರಂಥಿಗಳ ಮೇಲೆ ನಿಯಂತ್ರಣ ಸಾಧಿಸುತ್ತವೆ ಹೊರತು, ದುಗ್ದರಸ ಗ್ರಂಥಿಗಳ ಮೇಲಲ್ಲ. ಅಲ್ಲದೇ ಹಲವಾರು ಅಧ್ಯಯನಗಳು ಸಣ್ಣ ಪ್ರಮಾಣದ ಅಲ್ಯೂಮಿನಿಯಂ ಚರ್ಮದ ಮೂಲಕ ಹೀರಿಕೊಳ್ಳುತ್ತದೆ ಎನ್ನುತ್ತವೆ.

ಆದರೆ ಒಂದು ಪ್ರತ್ಯೇಕ ಅಧ್ಯಯನದ ಪ್ರಕಾರ ಶೇಕಡಾ 0.012 ರಷ್ಟು ಮಾತ್ರ ಎಂದಿದೆ. ಅಲ್ಯೂನಿಮಿಯಂ ತ್ವಚೆಯ ಮೇಲ್ಮೈಯಲ್ಲಿ ಉಳಿದುಕೊಳ್ಳುವುದರಿಂದ ಬೆವರನ್ನು ನಿಯಂತ್ರಿಸುತ್ತದೆ ಎಂದು ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ದೇಹವನ್ನು ಸೇರಿದಾಗ ಮಾತ್ರ ಕ್ಯಾನ್ಸರ್ ಕಾರಕವಾಗಬಹುದು. ನಿಮ್ಮ ರೋಲ್ ಆನ್ನಲ್ಲಿರುವ ಸಣ್ಣ ಪ್ರಮಾಣದಿಂದ ಇದು ಸಾಧ್ಯವಿಲ್ಲ ಎಂದಿದ್ದಾರೆ.

ಒಂದು ವೇಳೆ ನಿಮ್ಮ ದೇಹದೊಳಗೆ ಅಲ್ಯೂಮಿನಿಯಂ ಪ್ರವೇಶ ಮುಕ್ತ ಮಾಡಬೇಕೆಂದರೆ, ನೀವು ಅಲ್ಯೂಮಿನಿಯಂ ಫಾಯಿಲ್, ಕುಕ್ಕರ್, ಧೂಮಪಾನ ಮತ್ತು ಮಾದಕ ವಸ್ತುಗಳನ್ನು ತ್ಯಜಿಸಬೇಕು ಎಂದಿದ್ದಾರೆ. ಅಲ್ಲದೇ ಡಿಯೋಗಳನ್ನು ನೆಮ್ಮದಿಯಿಂದ ಬಳಸಬಹುದು ಎಂದಿದ್ದಾರೆ.
Published by: Kavya V
First published: June 18, 2021, 6:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories