• Home
  • »
  • News
  • »
  • lifestyle
  • »
  • Health Care: ವಿಟಮಿನ್​ ಹೆಚ್ಚಲು ಗರ್ಭಿಣಿಯರು ಹಾಗೂ ಮಕ್ಕಳು ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

Health Care: ವಿಟಮಿನ್​ ಹೆಚ್ಚಲು ಗರ್ಭಿಣಿಯರು ಹಾಗೂ ಮಕ್ಕಳು ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವ ಆಹಾರ ಪದಾರ್ಥಗಳು ನೈಸರ್ಗಿಕವಾಗಿ ಪೋಷಕಾಂಶ ಹೊಂದಿರುವುದಿಲ್ಲವೋ ಅಂತಹ ಆಹಾರವೇ ಬಲವರ್ಧಿತ ಆಹಾರವಾಗಿದೆ. ಈ ಆಹಾರಗಳು ಪೌಷ್ಟಿಕಾಂಶ ಸುಧಾರಿಸಲು ಮತ್ತು ಆರೋಗ್ಯ ಪ್ರಯೋಜನ ನೀಡುತ್ತವೆ. ಈ ಪದಾರ್ಥಗಳಲ್ಲಿ ಪೋಷಕಾಂಶಗಳನ್ನು ಸೇರಿಸಲಾಗಿರುತ್ತದೆ.

  • Share this:

    ನೀವು ದಿನಾಲೂ ಹಾಲಿನ ಪ್ಯಾಕೆಟ್ (Milk Packet) ಕೊಂಡು ತರ್ತೀರಾ? ಯಾವತ್ತಾದ್ರೂ ನೀವು ಕೊಂಡು ತರುವ ಹಾಲಿನ ಪ್ಯಾಕೆಟ್ ಮೇಲೆ ಏನ್ ಬರ್ದಿರ್ತಾರೆ ಅಂತಾ ಓದಿದ್ದೀರಾ? ಇಲ್ಲ ಅಲ್ವಾ? ನೀವು ತರುವ ಹಾಲಿನ ಪ್ಯಾಕೆಟ್‌ ನ ಒಂದು ಮೂಲೆಯಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಡಿ (Vitamin D) ಎಂದು ಬರೆದಿರ್ತಾರೆ. ಇದನ್ನು ನೀವು ಗಮನಿಸಿ. ಹಾಗೆಯೇ ಕೆಲವೊಮ್ಮೆ ವೈದ್ಯರ ಪ್ರಿಸ್ಕ್ರಿಪ್ಷನ್‌ ನಲ್ಲಿಯೂ ಬಲವರ್ಧಿತ ಆಹಾರ (Food) ಸೇವಿಸಿ ಎಂದು ಬರೆದಿರ್ತಾರೆ. ಬಲವರ್ಧಿತ ಆಹಾರಕ್ಕಾಗಿ ಸಾಕಷ್ಟು ಆಹಾರ ಪದಾರ್ಥಗಳ ಆಯ್ಕೆ ಇದೆ. ಬಲವರ್ಧಿತ ಆಹಾರವನ್ನು ಫೋರ್ಟಿಫೈಡ್ ಫುಡ್ (Fortified Food) ಎಂದು ಕರೆಯುತ್ತಾರೆ. ಇದರ್ಥ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾದ ಬಲವರ್ಧಿತ ಆಹಾರ ಎಂದಾಗಿದೆ.


    ಫೋರ್ಟಿಫೈಡ್ ಫುಡ್ ಆರೋಗ್ಯಕರವೇ?


    ಫೋರ್ಟಿಫೈಡ್ ಫುಡ್ ಪದಾರ್ಥಗಳು ಆರೋಗ್ಯಕರ ಆಹಾರವಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಕೆಲವು ತಜ್ಞರು ಸೀಮಿತ ಪ್ರಮಾಣದಲ್ಲಿ ಫೋರ್ಟಿಫೈಡ್ ಫುಡ್ ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ನಿರ್ದಿಷ್ಟ ಜೀವಸತ್ವ ಮತ್ತು ಖನಿಜಗಳ ಜೊತೆಗೆ ಹೆಚ್ಚಿನ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.


    ಬಲವರ್ಧಿತ ಆಹಾರ ಎಂದರೇನು


    ಯಾವ ಆಹಾರ ಪದಾರ್ಥಗಳು ನೈಸರ್ಗಿಕವಾಗಿ ಪೋಷಕಾಂಶ ಹೊಂದಿರುವುದಿಲ್ಲವೋ ಅಂತಹ ಆಹಾರವೇ ಬಲವರ್ಧಿತ ಆಹಾರವಾಗಿದೆ. ಈ ಆಹಾರಗಳು ಪೌಷ್ಟಿಕಾಂಶ ಸುಧಾರಿಸಲು ಮತ್ತು ಆರೋಗ್ಯ ಪ್ರಯೋಜನ ನೀಡುತ್ತವೆ. ಈ ಪದಾರ್ಥಗಳಲ್ಲಿ ಪೋಷಕಾಂಶಗಳನ್ನು ಸೇರಿಸಲಾಗಿರುತ್ತದೆ. ಮೊಟ್ಟೆ, ಮಾಂಸವನ್ನು ಸಹ ಬಲವರ್ಧನೆ ಮಾಡಬಹುದು ಎಂದು ಹೇಳಲಾಗಿದೆ.


    ಇದನ್ನೂ ಓದಿ: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ


    ಹಾಲು ಹೆಚ್ಚಾಗಿ ವಿಟಮಿನ್ ಡಿ ಜೊತೆ ಬಲವರ್ಧನೆ ಆಗುತ್ತದೆ. ಹಣ್ಣಿನ ರಸಗಳಿಗೆ ಕ್ಯಾಲ್ಸಿಯಂ  ಸೇರಿಸಲಾಗುತ್ತದೆ. ಆಹಾರ ಸಂಸ್ಕರಣೆ ವೇಳೆ ನಾಶವಾಗುವ ಪೋಷಕಾಂಶಗಳನ್ನು ಬಲವರ್ಧಿತ ಆಹಾರಕ್ಕೆ ಸೇರಿಸಲಾಗುತ್ತದೆ.


    ಫೋಲಿಕ್ ಆಮ್ಲ, ರೈಬೋಫ್ಲಾವಿನ್ ಮತ್ತು ಕಬ್ಬಿಣ ಸಂಸ್ಕರಿಸಿದ ನಂತರ ಗೋಧಿ ಹಿಟ್ಟಿಗೆ ಮತ್ತೆ ಸೇರಿಸಬಹುದು. ವಿಟಮಿನ್ ಮಟ್ಟ ಪುನಃಸ್ಥಾಪಿಸುವುದು ಇದರ ಉದ್ದೇಶ ಆಗಿದೆ. ಕೆಲವು ಸಂದರ್ಭಗಳಲ್ಲಿ, ಅವು ಪೋಷಕಾಂಶಗಳ ಕೊರತೆ ಪೂರೈಸುತ್ತವೆ. ಕೆಲವು ವೇಳೆ ಹೆಚ್ಚುವರಿ ಪೋಷಕಾಂಶಗಳು ಆರೋಗ್ಯ ಸಮಸ್ಯೆ ಉಂಟು ಮಾಡುತ್ತವೆ.


    ಮಕ್ಕಳು ಮತ್ತು ವಯಸ್ಕರರು ಬಲವರ್ಧಿತ ಆಹಾರ ಸೇವನೆ ಮೊದಲು ಎಚ್ಚರಿಕೆ ವಹಿಸಿ


    ಮಕ್ಕಳು ವಿಶೇಷವಾಗಿ ಪೌಷ್ಟಿಕಾಂಶದ ಕೊರತೆ ಅನುಭವಿಸುತ್ತಾರೆ. ಯಾಕಂದ್ರೆ ಮಕ್ಕಳು ಸರಿಯಾಗಿ ಆರೋಗ್ಯಕರ ಪದಾರ್ಥಗಳ ಸೇವನೆ ಮಾಡುವುದಿಲ್ಲ. ಹಾಗಾಗಿ ಮಕ್ಕಳು ಮತ್ತು ಹದಿಹರೆಯದವರು ದೈನಂದಿನ ಪೌಷ್ಟಿಕಾಂಶದ ಅಗತ್ಯತೆ ಪೂರೈಸಲು ಸಾಧ್ಯವಾಗುವುದಿಲ್ಲ. ಮಕ್ಕಳಿಗೆ ಬಲವರ್ಧಿತ ಆಹಾರಗಳು ಕಬ್ಬಿಣ, ಸತು ಮತ್ತು ವಿವಿಧ ಜೀವಸತ್ವಗಳ ಪ್ರಮುಖ ಮೂಲ ಆಗಿವೆ.


    ಅನೇಕ ಬಲವರ್ಧಿತ ಆಹಾರಗಳನ್ನು ಹೆಚ್ಚು ಸಂಸ್ಕರಿಸಿ ಪ್ಯಾಕ್ ಮಾಡುತ್ತಾರೆ. ಇದು ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ, ಕೊಬ್ಬು ಮತ್ತು ಸಕ್ಕರೆ ಹೊಂದಿರುತ್ತದೆ. ಹಾಗಾಗಿ ಅನೇಕ ಚಿಕ್ಕ ಮಕ್ಕಳಿಗೆ ಹೆಚ್ಚುವರಿ ಜೀವಸತ್ವ ಅಪಾಯ ತರುತ್ತದೆ.


    ಹೆಚ್ಚಿನ ಮಟ್ಟದ ವಿಟಮಿನ್‌ ಮತ್ತು ಸತು ಮತ್ತು ಕೆಲವು ಬಲವರ್ಧಿತ ಆಹಾರಗಳು ಮಕ್ಕಳಿಗೆ ಸೂಕ್ತವಲ್ಲ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಅವುಗಳ ಮಿತಿಮೀರಿದ ಸೇವನೆ ಅಪಾಯ ಉಂಟು ಮಾಡುತ್ತವೆ.


    ಹದಿಹರೆಯದವರು ಸಮತೋಲಿತ ಆಹಾರದ ಜೊತೆ ಸೇವಿಸಬಹುದು


    ಹದಿಹರೆಯದವರು ಸಮತೋಲಿತ ಆಹಾರದ ಜೊತೆ ಬಲವರ್ಧಿತ ಆಹಾರ ಸೇವಿಸಬಹುದು. ವಯಸ್ಕರರು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಫೈಬರ್, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಸಿ ಹೊಂದಿರುವ ಆಹಾರ ಸೇವನೆ ಮಾಡದಿದ್ದರೆ ಬಲವರ್ಧಿತ ಆಹಾರ ತೆಗೆದುಕೊಳ್ಳಬಹುದು.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಒಂದು ಮೂಲಿಕೆ ಪರಿಣಾಮಕಾರಿ!


    ಗರ್ಭಿಣಿಯರು ಬಲವರ್ಧಿತ ಆಹಾರ ಸೇವನೆ ಮೊದಲು ವೈದ್ಯರನ್ನು ಸಂಪರ್ಕಿಸಿ


    ಗರ್ಭಿಣಿಯರು ವೈದ್ಯರ ಸಲಹೆ ಪಡೆದು ಬಲವರ್ಧಿತ ಆಹಾರ ಸೇವನೆ ಮಾಡಿ. ಇದು ಹಟ್ಟುವ ಮಗುವಿನ ಜನ್ಮ ದೋಷ ಅಪಾಯ ಹೆಚ್ಚಿಸುತ್ತದೆ. ಹೆಚ್ಚಿನ ಮಟ್ಟದ ವಿಟಮಿನ್ ಎ ವಯಸ್ಕರು ಮತ್ತು ವಯಸ್ಸಾದವರಲ್ಲಿ ಸೊಂಟ ಮುರಿತ ಅಪಾಯ ಹೆಚ್ಚಿಸುತ್ತದೆ.

    Published by:renukadariyannavar
    First published: