ಎದೆಹಾಲುಣಿಸಿದರೆ ಸ್ಟ್ರೋಕ್ ಸಮಸ್ಯೆಯಿಂದ ಮುಕ್ತಿ

news18
Updated:August 23, 2018, 3:44 PM IST
ಎದೆಹಾಲುಣಿಸಿದರೆ ಸ್ಟ್ರೋಕ್ ಸಮಸ್ಯೆಯಿಂದ ಮುಕ್ತಿ
news18
Updated: August 23, 2018, 3:44 PM IST
-ನ್ಯೂಸ್ 18 ಕನ್ನಡ

ತಾಯಿಯ ಎದೆಹಾಲನ್ನು ಅಮೃತ ಸಮಾನ ಎನ್ನಲಾಗುತ್ತದೆ. ಏಕೆಂದರೆ ಮಗುವು ಆರೋಗ್ಯವಾಗಿ ಬೆಳೆಯಲು ಮತ್ತು ಭವಿಷ್ಯದಲ್ಲಿ ರೋಗರುಜಿನಗಳಿಂದ ಪಾರಾಗಲು ತಾಯಿಯ ಎದೆಹಾಲು ಮುಖ್ಯವಾಗಿರುತ್ತದೆ. ಅಷ್ಟೇ ಅಲ್ಲದೆ ಈಗ ಎದೆಹಾಲುಣಿಸುವ ತಾಯಿಗೂ ಇದರಿಂದ ಪ್ರಯೋಜನವಾಗಲಿದೆ ಎಂದು ಅಧ್ಯಯನ ತಂಡವೊಂದು ತಿಳಿಸಿದೆ. ಸ್ತನಪಾನ ಮಾಡುವ ಮಹಿಳೆಯರಿಗೆ ಸ್ಟ್ರೋಕ್ (ಲಕ್ವ) ಉಂಟಾಗುವ ಅಪಾಯ ಕಡಿಮೆ ಇರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಎದೆಹಾಲು ಮಾಡಿದ ಮಹಿಳೆಯರಲ್ಲಿ  ಸ್ಟ್ರೋಕ್​ನ ಅಪಾಯ ಶೇ.23 ರಷ್ಟು ಕಡಿಮೆ ಇರುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದೆ.

ಎದೆಹಾಲುಣಿಸುವುದರಿಂದ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ಟೈಪ್2 ಡಯಾಬಿಟೀಸ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಹೃದ್ರೋಗ ಮತ್ತು ಇತರೆ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವಲ್ಲಿಯು ಸ್ತನಪಾನವು ಪ್ರಮುಖ ಪಾತ್ರವಹಿಸುತ್ತದೆ ಎಂದು ಸಂಶೋಧಕ ಜಾಕೋಬ್ಸನ್ ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಸಂಶೋಧನಾ ತಂಡವು 80,191 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರು. 1993 ಮತ್ತು 1998ರ ನಡುವೆ ಋತುಬಂಧಕ್ಕೊಳಗಾದ ಮಹಿಳೆಯರ ಆರೋಗ್ಯವನ್ನು ಪರಿಶೀಲಿಸಿ ಈ ಮಹತ್ವದ ಅಂಶವನ್ನು ಪತ್ತೆ ಹಚ್ಚಲಾಗಿದೆ.

ಈ ಅಧ್ಯಯನದಲ್ಲಿ ಭಾಗವಹಿಸಿದ್ದ ಮಹಿಳೆಯರು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದಾರೆ. ಅಲ್ಲದೆ ಇದರಲ್ಲಿ ಶೇ. 58ರಷ್ಟು ಮಂದಿ ತಮ್ಮ ಮಕ್ಕಳಿಗೆ ಎದೆಹಾಲನ್ನು ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಶೇ.51 ರಷ್ಟು ಮಹಿಳೆಯರು ಆರು ತಿಂಗಳುಗಳ ಕಾಲ ಎದೆಹಾಲುಣಿಸಿದ್ದರೆ, ಶೇ. 22ರಷ್ಟು ಜನರು 12 ತಿಂಗಳು ಮತ್ತು ಶೇ.27 ರಷ್ಟು ಮಂದಿ 13 ತಿಂಗಳಿಗಿಂತ ಹೆಚ್ಚಿನ ಸಮಯ ಸ್ತನಪಾನ ಮಾಡಿದ್ದಾರೆ. ಹನ್ನೆರೆಡುವರೆ ವರ್ಷಗಳ ಕಾಲ ನಡೆಸಲಾದ ಈ ಅಧ್ಯಯನದಿಂದ ಈ ಮಹತ್ವದ ಅಂಶವನ್ನು ಪತ್ತೆ ಹಚ್ಚಲಾಗಿತ್ತು.

'ದೀರ್ಘಾವಧಿಯ ಸ್ತನಪಾನದಿಂದ ಸ್ಟ್ರೋಕ್ ಅಪಾಯವು ಕಡಿಮೆ ಇರುತ್ತದೆ . ಇದರೊಂದಿಗೆ ಉತ್ತಮ ವ್ಯಾಯಾಮ, ರಕ್ತದೊತ್ತಡ, ಕೊಲೆಸ್ಟ್ರಾಲ್​ನ್ನು ನಿಯಂತ್ರಿಸುವುದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದು' ಎಂದು ಜಾಕೋಬ್ಸನ್ ತಿಳಿಸಿದ್ದಾರೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ