ಗಾಂಜಾ ಪ್ರಕರಣಗಳಿಗೆ ತಿಲಾಂಜಲಿ ಹಾಡಲು ಮುಂದಾದ ಸರ್ಕಾರ

news18
Updated:August 26, 2018, 5:21 PM IST
ಗಾಂಜಾ ಪ್ರಕರಣಗಳಿಗೆ ತಿಲಾಂಜಲಿ ಹಾಡಲು ಮುಂದಾದ ಸರ್ಕಾರ
news18
Updated: August 26, 2018, 5:21 PM IST
-ನ್ಯೂಸ್ 18 ಕನ್ನಡ

ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದರಲ್ಲೂ ಗಾಂಜಾ ಸೇವನೆಯಿಂದ ಅನೇಕ ಸಮಸ್ಯೆಗಳು ತಲೆದೂರುತ್ತದೆ. ಆದರೆ ವೈದ್ಯಕೀಯ ಬಳಕೆಗಾಗಿ ಗಾಂಜಾ ಮೇಲಿನ ನಿಷೇಧವನ್ನು ತೆಗೆದು ಹಾಕಿರುವ ಹಲವಾರು ದೇಶಗಳಿವೆ. ಅದರಲ್ಲಿ ಯುಎಸ್​ಎ ದೇಶದ ಕ್ಯಾಲಿಫೋರ್ನಿಯಾ ರಾಜ್ಯ ಕೂಡ ಒಂದು. ಇದೀಗ ಕ್ಯಾಲಿಫೋರ್ನಿಯಾ ಸರ್ಕಾರ ತನ್ನ ಕಾನೂನಿನಲ್ಲಿ ಮತ್ತೊಂದು ಮಹತ್ತರ ತಿದ್ದುಪಡಿಗೆ ಮುಂದಾಗಿದೆ. ಈ ಹಿಂದಿನ ಗಾಂಜಾ ಪ್ರಕರಣಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಅಳಿಸಿ ಹಾಕುವ ಹೊಸ ಮರಿಜುವಾನಾ(ಗಾಂಜಾ) ಕಾನೂನನ್ನು ಜಾರಿಗೊಳಿಸಿದೆ. ಎಬಿ 1793 ಕಾಯ್ದೆಯನ್ನು ಕಳೆದ ಬುಧವಾರ ಕ್ಯಾಲಿಫೋರ್ನಿಯಾ ಸೆನೆಟ್​​ನಲ್ಲಿ ಅಂಗೀಕರಿಸಲಾಗಿದ್ದು, ಇದು ಪ್ರಸ್ತುತ ಗಾಂಜಾ ಪ್ರಕರಣಗಳ ಶಿಕ್ಷೆಯನ್ನು ವಜಾಗೊಳಿಸುವ ಮತ್ತು ಅಪರಾಧ ಪ್ರಕರಣವನ್ನು ಪುನರ್ ಪರಿಶೀಲಿಸುವ ಮಸೂದೆಯಾಗಿದೆ.

ಯುನೈಟೆಡ್ ಸ್ಟೇಟ್ಸ್​ನ ಹೆಚ್ಚಿನ ದೇಶಗಳು ಗಾಂಜಾವನ್ನು ಕಾನೂನುಬದ್ದಗೊಳಿಸಿದ್ದು, ಹಾಗಾಗಿ ಈ ಹಿಂದಿನ ಪ್ರಕರಣಗಳನ್ನು ತೆಗೆದು ಹಾಕುವಂತೆ ಕ್ಯಾಲಿಫೋರ್ನಿಯಾದ ವಕೀಲರು ಒತ್ತಾಯಿಸಿದ್ದರು. ಇದರ ಪರಿಣಾಮ ರಾಜ್ಯದ ಕಾನೂನಿನಲ್ಲಿ ತಿದ್ದುಪಡಿ ತಂದಿರುವ ಅಲ್ಲಿನ ಸರ್ಕಾರ ಹಿಂದಿನ ಪ್ರಕರಣಗಳನ್ನು ಮರು ಪರಿಶೀಲಿಸುವ ಅವಕಾಶ ನೀಡಲಾಗಿದೆ.2006 ಮತ್ತು 2015ರ ನಡುವೆ ಕ್ಯಾಲಿಫೋರ್ನಿಯಾದಲ್ಲಿ 5 ಲಕ್ಷಕ್ಕೂ ಹೆಚ್ಚಿನವರನ್ನು ಗಾಂಜಾ ಅಪರಾಧದ ಅಡಿಯಲ್ಲಿ ಬಂಧಿಸಲಾಗಿತ್ತು. 1996ರಲ್ಲಿ ಔಷಧೀಯ ಉದ್ದೇಶಗಳಿಗಾಗಿ ಗಾಂಜಾ ಬಳಸಲು ಕ್ಯಾಲಿಫೋರ್ನಿಯಾ ಸರ್ಕಾರ ಅನುಮತಿ ನೀಡಲಾಗಿತ್ತಾದರೂ ಮಾರಾಟ ಅವಕಾಶ ನೀಡಿರಲಿಲ್ಲ. ಆದರೆ 2016 ರಲ್ಲಿ ಮತ್ತೆ ಕಾನೂನಿನಲ್ಲಿ ತಿದ್ದುಪಡಿ ತಂದು ಮನರಂಜನಾ ಬಳಕೆಗೆ ಭಂಗಿ ಸೇದುವ ಮುಕ್ತ ಅವಕಾಶ ನೀಡಲಾಗಿತ್ತು.

ಸಿಎನ್ಎನ್ ಪ್ರಕಾರ ಕ್ಯಾಲಿಪೋರ್ನಿಯಾದಲ್ಲಿ ಹೊಸ ಕಾನೂನು ಜಾರಿಯಾದರೆ 218,000 ಖೈದಿಗಳು ಗಾಂಜಾ ಪ್ರಕರಣದಿಂದ ದೋಷಮುಕ್ತರಾಗಿ ಹೊರ ಬರಲಿದ್ದಾರೆ. ಕ್ಯಾಲಿಫೋರ್ನಿಯಾ ಗವರ್ನರ್ ಜೆರ್ರಿ ಬ್ರೌನ್ (ಡಿ) ಈ ಹೊಸ ಮಸೂದೆಯನ್ನು ಅಂಗೀಕರಿಸಿದರೆ 2019 ರಲ್ಲಿ ಎಲ್ಲ ಪ್ರಕರಣಗಳನ್ನು ಮುಚ್ಚಿ ಹಾಕಲು ಸರ್ಕಾರ ಬಯಸಿದೆ ಎಂದು ಹೇಳಲಾಗಿದೆ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...