Calcium Rich Food: ಮಕ್ಕಳಿಗೆ ಪ್ರತಿದಿನ ಮಿಸ್​ ಮಾಡ್ದೇ ಕ್ಯಾಲ್ಸಿಯಂ ಭರಿತ ಈ ಆಹಾರಗಳನ್ನು ಕೊಡಿ

ಯಾವೆಲ್ಲಾ ಆಹಾರದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ ಮಕ್ಕಳು ಸೇವಿಸಬಹುದಾದ ಕ್ಯಾಲ್ಸಿಯಂ ಖನಿಜಯುಕ್ತ ಆಹಾರಗಳು ಯಾವುವು ಎಂದು ನಾವಿಲ್ಲಿ ತಿಳಿಸಿಕೊಡುತ್ತೇವೆ. ಈ ಆಹಾರಗಳನ್ನು ಪ್ರತಿನಿತ್ಯ ಅವರ ಮೆನುವಿನಲ್ಲಿ ಸೇರಿಸುವುದರಿಂದ ನೈಸರ್ಗಿಕವಾಗಿ ಕ್ಯಾಲ್ಸಿಯಂ ಅನ್ನು ಮಕ್ಕಳು ಪಡೆಯುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಳೆಯುವ ಮಕ್ಕಳಿಗೆ (Children) ಹಲವಾರು ರೀತಿಯ ಪೋಷಕಾಂಶಯುಕ್ತವಾದ (nutrient) ಆಹಾರ ಅಭ್ಯಾಸಗಳನ್ನು ಮಾಡಿಸುವುದು ಉತ್ತಮ. ಸಿಹಿ ತಿಂಡಿ, ಕುರುಕಲು ತಿಂಡಿಗಳನ್ನು ಹೆಚ್ಚಾಗಿ ನೀಡುವುದರಿಂದ ಅನಾರೋಗ್ಯವೇ (Illness) ಹೆಚ್ಚು, ಹೀಗಾಗಿ ಮಕ್ಕಳಿಗೆ ನೀಡುವ ಆಹಾರದ ಮೇಲೆ ಪೋಷಕರು (Parents) ವಿಶೇಷವಾದ ಗಮನ ವಹಿಸಬೇಕು. ಅದರಲ್ಲೂ ಈ ಸಾಂಕ್ರಾಮಿಕ ರೋಗದಂತಹ ಸಂದರ್ಭದಲ್ಲಿ ಅವರನ್ನು ಬಲಪಡಿಸುವಂತಹ ಆಹಾರಗಳನ್ನೇ ನೀಡಬೇಕು. ಪೋಷಕಾಂಶಭರಿತ ಆಹಾರಗಳು ಅವರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಪ್ರೋಟಿನ್, ವಿಟಮಿನ್ ಡಿ ಆಹಾರದ ಜೊತೆ ಮಕ್ಕಳ ಸಂಪೂರ್ಣ ಬೆಳವಣಿಗೆಯಲ್ಲಿ ಕ್ಯಾಲ್ಸಿಯಂ ಪರಿಪೂರ್ಣವಾದ ಪಾತ್ರ ವಹಿಸುತ್ತದೆ.

ಕ್ಯಾಲ್ಸಿಯಂ ಅಗತ್ಯತೆಯ ಬಗ್ಗೆ ಹೆಚ್ಚೇನೂ ಹೇಳುವುದೇ ಬೇಡ.  ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಇದು ಅವಶ್ಯಕವಾದ ಪೋಷಕಾಂಶವಾಗಿದೆ. ಅದರಲ್ಲೂ ವಿಶೇಷವಾಗಿ ಬೆಳೆಯುವ ಮಕ್ಕಳ ಮೂಳೆ, ಹಲ್ಲು, ಶಕ್ತಿ ಹೀಗೆ ಎಲ್ಲವಕ್ಕೂ ಕ್ಯಾಲ್ಸಿಯಂ ಪ್ರಮುಖವಾಗಿದೆ.

ಹಾಗಾದರೆ ಯಾವೆಲ್ಲಾ ಆಹಾರದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ ಮಕ್ಕಳು ಸೇವಿಸಬಹುದಾದ ಕ್ಯಾಲ್ಸಿಯಂ ಖನಿಜಯುಕ್ತ ಆಹಾರಗಳು ಯಾವುವು ಎಂದು ನಾವಿಲ್ಲಿ ತಿಳಿಸಿಕೊಡುತ್ತೇವೆ. ಈ ಆಹಾರಗಳನ್ನು ಪ್ರತಿನಿತ್ಯ ಅವರ ಮೆನುವಿನಲ್ಲಿ ಸೇರಿಸುವುದರಿಂದ ನೈಸರ್ಗಿಕವಾಗಿ ಕ್ಯಾಲ್ಸಿಯಂ ಅನ್ನು ಮಕ್ಕಳು ಪಡೆಯುತ್ತಾರೆ.

ಕ್ಯಾಲ್ಸಿಯಂ ಸಮೃದ್ಧ ಆಹಾರ ಪದಾರ್ಥಗಳು
1) ಬಾದಾಮಿ
ಡ್ರೈ ಫ್ರೂಟ್ಸ್ ಗಳಲ್ಲಿಯೇ ಬಾದಾಮಿಗೆ ವಿಶೇಷ ಸ್ಥಾನವಿದೆ. ಬಾದಾಮಿಯಲ್ಲಿರುವ ಹೆಚ್ಚಿನ ಪೋಷಕಾಂಶದಲ್ಲಿ ಕ್ಯಾಲ್ಸಿಯಂನದ್ದೇ ಸಿಂಹಪಾಲು. ಹೀಗಾಗಿ ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಶಕ್ತಿ ಸಿಗುವುದರ ಜೊತೆಗೆ ಮೆದುಳಿನ ಸಂಬಂಧಿಸಿದ ಚುರುಕುತನ, ಜ್ಞಾಪಕ ಶಕ್ತಿ ಸಹ ಹೆಚ್ಚುತ್ತದೆ. ಬಾದಾಮಿಯನ್ನು ಹಾಗೆಯೇ ನೆನೆಸಿ ಕೊಡಬಹುದು, ಹಾಲಿಗೆ ಇದರ ಪೌಡರ್ ಬೆರೆಸಿ ಕೊಡಬಹುದು ಇಲ್ಲವೇ ಬೇರೆ ಬೇರೆ ಡ್ರೈ ಫ್ರೂಟ್ಸ್ ಜೊತೆ ಮಿಕ್ಸ್ ಮಾಡಿ ನಿಮ್ಮ ಮಕ್ಕಳಿಗೆ ನೀಡಬಹುದು.

2) ಸೋಯಾ ಹಾಲು
ಸೋಯಾ ಕೂಡ ಮಕ್ಕಳಿಗೆ ನೀಡಬಹುದಾದ ಒಂದು ಕ್ಯಾಲ್ಸಿಯಂ ಸಹಿತ ಆಹಾರ. ಸೋಯಾ ಬೀನ್ಸ್ ಜೊತೆ ಅದರ ಹಾಲು ಸಹ ಹೆಚ್ಚು ಪ್ರಯೋನಕಾರಿ. ಹಸುವಿನ ಹಾಲು, ಎಮ್ಮೆ ಹಾಲುವಿನಂತೆ, ಸೋಯಾ ಹಾಲು ಕೂಡ ಬಹಳ ಪೌಷ್ಟಿಕ ಮತ್ತು ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಮತ್ತು ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಹೆಚ್ಚುತ್ತದೆ.

ಇದನ್ನೂ ಓದಿ: Black Beans Benefits: ಕಪ್ಪು ಬೀನ್ಸ್ ನ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನೋಡಿ

3) ಡೈರಿ ಆಹಾರಗಳು
ಡೈರಿ ಆಹಾರಗಳು ಮಕ್ಕಳಿಗೆ ವಿಶೇಷವಾಗಿ ನೀಡಬೇಕಾದಂತಹ ಆಹಾರಗಳು. ಹಸುವಿನ ಹಾಲನ್ನು ಕ್ಯಾಲ್ಸಿಯಂನ ತದ್ರೂಪ ಎನ್ನಬಹುದು, ಅಷ್ಟರ ಮಟ್ಟಿಗೆ ಹಾಲು ಕ್ಯಾಲ್ಸಿಯಂಯುಕ್ತವಾಗಿರುತ್ತದೆ. ಕೆಲವು ಮಕ್ಕಳು ಹಾಲನ್ನು ಇಷ್ಟಪಡದೇ ಇರಬಹುದು, ಅಂತಹವರಿಗೆ ಡೈರಿ ಉತ್ಪನ್ನಗಳಾದ ಚೀಸ್, ಪನ್ನೀರ್ ಗಳನ್ನು ನೀಡಬಹುದು. ಹಾಲು ಇಷ್ಟಪಡುವ ಮಕ್ಕಳಿಗೆ ಇದರ ಜೊತೆ ಒಂದು ಕಪ್ ಹಾಲನ್ನು ಕೂಡ ನೀಡಬಹುದು.

4) ಹಸಿರು ಬಟಾಣಿ
ಹಸಿರು ಬಟಾಣಿ ಪ್ರತಿ ಕಪ್‌ಗೆ ಸುಮಾರು 45 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಜೊತೆಗೆ ಹಸಿರು ಬಟಾಣಿಗಳಲ್ಲಿ ವಿಟಮಿನ್ ಕೆ ತುಂಬಿರುತ್ತದೆ. ವಿಟಮಿನ್ ಕೆ ಪೂರಕಗಳು ಮಕ್ಕಳಲ್ಲಿ ಮೂಳೆ ಖನಿಜ ಸಾಂದ್ರತೆ ಮತ್ತು ಮೂಳೆಯ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

5) ಕಿತ್ತಳೆ
ಕ್ಯಾಲ್ಸಿಯಂ ಪಡೆಯಲು ಮಕ್ಕಳಿಗೆ ಕಿತ್ತಳೆ ಪ್ರಮುಖವಾಗಿದೆ. ಒಂದು ಕಿತ್ತಳೆ ಹಣ್ಣಿನಲ್ಲಿ 50 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಪೋಷಕರು ಹೊರಗೆ ಪ್ಯಾಕ್ ಮಾಡಲಾದ ಹಣ್ಣಿನ ಜ್ಯೂಸ್ ಬದಲಾಗಿ ಮನೆಯಲ್ಲಿಯೇ ಕಿತ್ತಳೆ ಹಣ್ಣಿನ ರಸ ಮಾಡಿಕೊಡುವುದು ಉತ್ತಮ. ಬಲವರ್ಧಿತ ಕಿತ್ತಳೆ ರಸವು ಕ್ಯಾಲ್ಸಿಯಂ ಪಡೆಯಲು ಉತ್ತಮ ಮಾರ್ಗವಾಗಿದೆ.

6) ಬೀನ್ಸ್
100 ಗ್ರಾಮ್ ಬೀನ್ಸ್ ನಲ್ಲಿ 113ಮಿಲಿ ಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಹೀಗಾಗಿ ಮಕ್ಕಳಿಗೆ ಬೀನ್ಸ್ ಅನ್ನು ಯಥೇಚ್ಚವಾಗಿ ನೀಡುವುದು ಉತ್ತಮ. ಬೀನ್ಸ್ ನಿಂದ ಮಾಡಬಹುದಾದ ಹಲವಾರು ಪಾಕ ಪದ್ಧತಿಗಳಿದ್ದು ಅವುಗಳ ಮೂಲಕ ಬೀನ್ಸ್ ಅನ್ನು ಸೇವಿಸುವಂತೆ ಮಾಡಬೇಕು.

ಇದನ್ನೂ ಓದಿ:  High Blood Cholesterol: ಅಧಿಕ ರಕ್ತದ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆಹಾರ ಪದ್ಧತಿಯಲ್ಲಿ ಈ ಪದಾರ್ಥಗಳ ಸೇರ್ಪಡೆ ಮಾಡಿ!

ಹೀಗೆ ಈ ಮೇಲಿನ ಆಹಾರಗಳಲ್ಲಿ ಕನಿಷ್ಟ ಒಂದು ಇಲ್ಲ ಎರಡು ಆಹಾರಗಳನ್ನು ಮರೆಯದೇ ನಿಮ್ಮ ಮಕ್ಕಳಿಗೆ ನೀಡಿ.
Published by:Ashwini Prabhu
First published: