• Home
  • »
  • News
  • »
  • lifestyle
  • »
  • calcium: ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಏನಾಗುತ್ತದೆ?

calcium: ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಏನಾಗುತ್ತದೆ?

ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿದೆ

ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿದೆ

ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿದೆ

  • Share this:

    ಕ್ಯಾಲ್ಸಿಯಂ ದೇಹದಲ್ಲಿ ಪ್ರತಿಯೊಂದು ಅಂಗಗಳ ಫಿಟ್‌ನೆಸ್‌ಗೆ ಅತ್ಯಗತ್ಯವಾಗಿದೆ. ಹಲ್ಲುಗಳು ಹಾಗೂ ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಹೆಚ್ಚು ಮುಖ್ಯವಾದುದು. ಕ್ಯಾಲ್ಸಿಯಂ ಕೊರತೆ ಉಂಟಾದಾಗ ದೇಹದಲ್ಲಿ ನೋವು, ಮಾಂಸಖಂಡ ಹಿಂಡಿದಂತೆ ಭಾಸವಾಗುವುದು ಮೊದಲಾದ ಸಮಸ್ಯೆಗಳು ಉಂಟಾಗುತ್ತಿರುತ್ತವೆ. ನಾವು ಸೇವಿಸುವ ಆಹಾರವು ನಮ್ಮ ಶಕ್ತಿಯ ಪೂರಕವಾಗಿವೆ ಈ ಆಹಾರಗಳಿಂದಲೇ ನಮಗೆ ಕ್ಯಾಲ್ಸಿಯಂ ದೊರೆಯುತ್ತವೆ. ಕ್ಯಾಲ್ಸಿಯಂ ದೇಹದ ಮೂಳೆಗಳನ್ನು ಬಲಿಷ್ಠ ಮಾಡುವಲ್ಲಿ ಸಹಕಾರಿಯಾಗಿದೆ.


    ಕ್ಯಾಲ್ಸಿಯಂ ಶ್ರೀಮಂತವಾಗಿರುವ ಆಹಾರಗಳೆಂದರೆ ಹಸಿ ಸೊಪ್ಪು, ತರಕಾರಿಗಳು, ಡ್ರೈ ಫ್ರೂಟ್ಸ್‌ಗಳು, ಬೀಟ್‌ರೂಟ್, ಎಳ್ಳು, ಚೀಸ್, ಸೋಯಾಬೀನ್ ಮೊದಲಾದವು. ರಾಜ್ಮಾ ಕಾಬೂಲು ಕಡಲೆ, ಚೀಸ್, ಹಾಲು, ಮೊಟ್ಟೆ, ಮೊಸರು ಕೂಡ ಕ್ಯಾಲ್ಸಿಯಂನ ಆಗರಗಳಾಗಿವೆ. ಕ್ಯಾಲ್ಸಿಯಂನ ಪರಿಮಾಣ ಹೆಚ್ಚಾದರೂ ಅನಾರೋಗ್ಯ ನಮ್ಮನ್ನು ಹಿಂಬಾಲಿಸುತ್ತಿರುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಸರಿಯಾದ ಪ್ರಮಾಣದ ಕ್ಯಾಲ್ಸಿಯಂ ಇರಬೇಕಾಗಿರುವುದು ಮುಖ್ಯವಾಗಿದೆ.


    ಇನ್ನು ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿದೆ. ಅವರ ದೇಹದಲ್ಲಿ 1000 ದಿಂದ 1200 ಎಮ್‌ಎಲ್‌ನಷ್ಟು ಕ್ಯಾಲ್ಸಿಯಂ ಇರಬೇಕು. ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ.


    ಕ್ಯಾಲ್ಸಿಯಂ ಕೊರತೆಗೆ ಕಾರಣವೇನು ಎಂಬುದನ್ನು ನೋಡಿದಾಗ ಮುಟ್ಟು ನಿಲ್ಲುವ ಸಮಯದಲ್ಲಿ 40-50ರ ಆಸುಪಾಸಿನ ಮಹಿಳೆಯರಲ್ಲಿ ಹೆಚ್ಚಿನ  ಕ್ಯಾಲ್ಸಿಯಂ ಕೊರತೆ  ಕಂಡುಬರುತ್ತದೆ. ಸ್ತ್ರೀ ಹಾರ್ಮೋನು ಈಸ್ಟ್ರೋಜನ್ ಕುಸಿತವಾಗುವುದೇ ಇದಕ್ಕೆ ಕಾರಣವಾಗಿದೆ. ಕ್ಯಾಲ್ಸಿಯಂ ರಿಚ್ ಆಹಾರಗಳಾದ ಹಾಲು, ಮೊಸರು ಮೊದಲಾದವುಗಳನ್ನು ಸೇವಿಸದೇ ಇರುವುದು ಹಾರ್ಮೋನ್ ಪರಿವರ್ತನೆಗೆ ಕಾರಣವಾಗಿದೆ. ಅನೇಕ ದೈಹಿಕ ಕಾರ್ಯಗಳಿಗೆ ಕ್ಯಾಲ್ಸಿಯಂ ಅವಶ್ಯಕವಾಗಿದೆ, ಆದ್ದರಿಂದ ಕೊರತೆಯು ಸ್ನಾಯುಗಳು, ಮೂಳೆಗಳು ಮತ್ತು ಹಲ್ಲುಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ.


    ಕಡಿಮೆ ಆಹಾರ ಸೇವನೆಯು ಇದರ ಕೊರತೆಗೆ ಕಾರಣವಾಗಿದ್ದರೆ, ಸಾಮಾನ್ಯವಾಗಿ ಯಾವುದೇ ಆರಂಭಿಕ ಲಕ್ಷಣಗಳಿಲ್ಲ. ದೀರ್ಘಾವಧಿಯಲ್ಲಿ, ವ್ಯಕ್ತಿಯು ಆಸ್ಟಿಯೋಪೆನಿಯಾ ಅಥವಾ ಕಡಿಮೆ ಮೂಳೆ ಸಾಂದ್ರತೆಯನ್ನು ಅನುಭವಿಸಬಹುದು. ಚಿಕಿತ್ಸೆಯಿಲ್ಲದೆ, ಇದು ಆಸ್ಟಿಯೋಪೊರೋಸಿಸ್ ಅಥವಾ ಸುಲಭವಾಗಿ ಮೂಳೆ ಮುರಿತಗಳಿಗೆ ಕಾರಣವಾಗಬಹುದು. ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದಲ್ಲಿ ಮೂಳೆಗಳ ಸ್ನಾಯು ನೋವು, ಸೆಳೆತ, ತೊಡೆ ಮತ್ತು ತೋಳುಗಳಲ್ಲಿ ನಡೆದಾಡುವಾಗ ನೋವಿನ ಅನುಭವ ಉಂಟಾಗುವುದು


    ಹೆಚ್ಚಿನ ಆಯಾಸ


    ಕ್ಯಾಲ್ಸಿಯಂ ಕೊರತೆ ಉಂಟಾದಾಗ ಆಯಾಸ ಕಂಡುಬರುತ್ತದೆ. ಕ್ಯಾಲ್ಸಿಯಂ ಕೊರತೆಗೆ ಸಂಬಂಧಿಸಿದ ಆಯಾಸವು ಸಣ್ಣ ತಲೆನೋವು, ತಲೆತಿರುಗುವಿಕೆಯನ್ನು ಒಳಗೊಂಡಿರುತ್ತದೆ – ಮರೆವು ಗೊಂದಲಗಳಿಗೆ ಇದು ಕಾರಣವಾಗಬಹುದು.


    ಉಗುರು ಮತ್ತು ತ್ವಚೆಯಲ್ಲಿ ಕೂಡ ಕೆಲವೊಂದು ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಒಣ ತ್ವಚೆ, ಉಗುರು ತುಂಡಾಗುವುದು, ಉಗುರಿನ ಸುತ್ತಲಿನ ಚರ್ಮ ಎದ್ದುಬರುವುದು ಇತ್ಯಾದಿ. ಮೂಳೆಗಳು ಕ್ಯಾಲ್ಸಿಯಂ ಅನ್ನು ಚೆನ್ನಾಗಿ ಸಂಗ್ರಹಿಸುತ್ತವೆ. ಆದರೆ ಅವು ದೃಢವಾಗಿರಲು ಹೆಚ್ಚಿನ ಮಟ್ಟದ ಅಗತ್ಯವಿರುತ್ತದೆ. ಕ್ಯಾಲ್ಸಿಯಂನ ಒಟ್ಟಾರೆ ಮಟ್ಟವು ಕಡಿಮೆಯಾದಾಗ, ದೇಹವು ಮೂಳೆಗಳನ್ನು ಬೇರೆಡೆಗೆ ತಿರುಗಿಸುತ್ತದೆ, ಇದರಿಂದಾಗಿ ಅವುಗಳು ಸುಲಭವಾಗಿ ಮತ್ತು ಗಾಯಕ್ಕೆ ಒಳಗಾಗುತ್ತವೆ. ಹೀಗೆ ಮೂಳೆ ಮುರಿತಕ್ಕೆ ಒಳಗಾಗುತ್ತೀರಿ. ಹೀಗಾಗಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಸರಿಯಾದ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಿ.


    Keywords: Health, Bones, Good food, Diet, Calcium ಕ್ಯಾಲ್ಶಿಯಂ, ಆರೋಗ್ಯ, ಮೂಳೆ, ಉತ್ತಮ ಆಹಾರ


    Story Link: https://www.medicalnewstoday.com/articles/321865


    Story By: Shwetha PS


    Published by:Seema R
    First published: