• Home
  • »
  • News
  • »
  • lifestyle
  • »
  • Bistro Claytopia: ಬೆಂಗಳೂರಿನ ಮೊದಲ ಆರ್ಟ್​ ಕೆಫೆ ಇದು, ಆಹಾರ ಸವಿಯೋ ಜೊತೆ ನಿಮ್ಮ ಈ ಪ್ರತಿಭೆಗೆ ತುಂಬುತ್ತೆ ಶಕ್ತಿ

Bistro Claytopia: ಬೆಂಗಳೂರಿನ ಮೊದಲ ಆರ್ಟ್​ ಕೆಫೆ ಇದು, ಆಹಾರ ಸವಿಯೋ ಜೊತೆ ನಿಮ್ಮ ಈ ಪ್ರತಿಭೆಗೆ ತುಂಬುತ್ತೆ ಶಕ್ತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Cafe Bistro Claytopia Near Me: ಅಲ್ಲದೇ, ನಿಮಗೆ ಮೌನವಾಗಿ ಕುಳಿತು, ಒಬ್ಬರೇ ಇರಲು ಇಷ್ಟವಿದ್ದರೆ ಕುಳಿತುಕೊಂಡು ಪೇಯ್ಟಿಂಗ್ ಮಾಡಬಹುದು. ಇನ್ನು ಈ ಕ್ಲೇಟೋಪಿಯಾ ಅವರ ಬರ್ಗರ್‌ಗಳಿಗೆ ಬಹಳ ಹೆಸರುವಾಸಿಯಾಗಿದೆ.

  • Share this:

ಬೆಂಗಳೂರಿನಲ್ಲಿ (Bengaluru) ವಿಭಿನ್ನ ಕೆಫೆಗಳಿಗೆ (Cafe) ಕಡಿಮೆಯೇನಿಲ್ಲ. ಒಂದೊಂದು ನಗರದಲ್ಲಿ ಒಂದೊಂದು ಏರಿಯಾದಲ್ಲಿ (Area) ಒಂದೊಂದು ಕೆಫೆಗಳು ಸಹ ವಿಭಿನ್ನವಾಗಿದೆ. ಈ ಕೆಫೆಗಳಲ್ಲಿ ನಿಮ್ಮ ಆಸಕ್ತಿಗೆ, ಹವ್ಯಾಸಕ್ಕೆ (Habits) ಒಂದು ವೇದಿಕೆ ಸಹ ಸಿಗುತ್ತದೆ. ಇಲ್ಲಿ ಆಹಾರಗಳು ಮಾತ್ರವಲ್ಲದೇ, ನಮ್ಮ ಮನಸ್ಸಿಗೆ ಖುಷಿ ಕೊಡುವ ಕೆಲಸಗಳನ್ನು ಸಹ ಮಾಡಬಹುದು. ಆ ರೀತಿಯ ಕೆಫೆಯೊಂದು ಬೆಂಗಳೂರಿನಲ್ಲಿದ್ದು, ಇಲ್ಲಿ ನೀವು ಪೇಯ್ಟಿಂಗ್ (Painting) ಮಾಡಬಹುದು. ಯಾವುದು ಆ ಕೆಫೆ, ಎಲ್ಲಿದೆ? ಹೇಗೆ ಹೋಗಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.


ಬೆಂಗಳೂರಿನ ಮೊದಲ ಆರ್ಟ್​ ಕೆಫೆ ಇದು


ಕೋರಮಂಗಲದಲ್ಲಿರುವ ಈ ಗಾರ್ಡನ್ ಕೆಫೆ ಸುತ್ತ ಮುತ್ತಲಿನ ಜನರ ಫೇವರೇಟ್​ ಸ್ಥಳವಾಗಿದೆ. ಕೇವಲ ಅದರ ಆಹಾರಕ್ಕಾಗಿ ಅಲ್ಲ ಆದರೆ ಅದರ ವಿಶಿಷ್ಟ ಪರಿಕಲ್ಪನೆಯಿಂದಾಗಿ ಇದು ಬಹಳ ಫೇಮಸ್​ ಆಗಿದೆ. ಬಿಸ್ಟ್ರೋ ಕ್ಲೇಟೋಪಿಯಾ ಕೆಫೆಯಲ್ಲಿ ನೀವು ಕಾಫಿ ಕಪ್​ಗಳ ಮೇಲೆ ಪೇಯ್ಟಿಂಗ್ ಮಾಡಬಹುದು. ಮಗ್‌ಗಳು, ಆಭರಣಗಳು, ಆಭರಣ ಪೆಟ್ಟಿಗೆಗಳು, ಸಣ್ಣ ಪ್ರತಿಮೆಗಳು ಹೀಗೆ ಹಲವಾರು ವಸ್ತುಗಳ ಮೇಲೆ ನೀವು ಪೇಯ್ಟಿಂಗ್ ಮಾಡಬಹುದು.




ನಿಮಗೆ ಪೇಯ್ಟಿಂಗ್ ಮಾಡುವ ಬಳಸಲು ಬ್ರಷ್‌ಗಳು ಮತ್ತು ಬಣ್ಣವನ್ನು ಇದೇ ಕೆಫೆ ಒದಗಿಸುತ್ತದೆ. ಇಲ್ಲಿ ನಿಮಗೆ ನಿಮ್ಮ ಬಾಲ್ಯ ನೆನಪಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.  ಮಕ್ಕಳಿರುವ ಫ್ಯಾಮಿಲಿಗೆ ಅಥವಾ ಮಕ್ಕಳ ರಿತಿ ಸಮಯ ಕಳೆಯಲು ಬಯಸುವ ವಯಸ್ಕರಿಗೆ ಸಹ ಇದು ಪರಿಪೂರ್ಣ ಸ್ಥಳವಾಗಿದೆ.




ಇಲ್ಲಿ ಬರ್ತ್ ಡೇ ಪಾರ್ಟಿಗಳು ಸೇರಿದಂತೆ ವಿವಿಧ ಪಾರ್ಟಿಗಳನ್ನು ಸಹ ನೀವು ಇಲ್ಲಿ ಮಾಡಬಹುದು. ಅಲ್ಲದೇ, ನೀವು ಇಲ್ಲಿ ಪೇಯ್ಟ್​ ಮಾಡಿದ ವಸ್ತುಗಳನ್ನು ಅವರು ಒಣಗಿಸಿ ನೀಡುತ್ತಾರೆ. ಅದು ಸಂಪೂರ್ಣವಾಗಿ ಒಣಗಿದ ನಂತರ ಒಂದು ವಾರ ಅಥವಾ ಎರಡು ವಾರಗಳ ನಂತರ ನೀವು ಮನೆಗೆ ತೆಗೆದುಕೊಂಡು ಹೋಗಬಹುದು.


ಡೇಟ್​ ನೈಟ್​ಗೆ ಇದು ಪರ್ಫೆಕ್ಟ್​ ಜಾಗ


ನೀವು ಸಂಜೆ ಅಲ್ಲಿಗೆ ಹೋದರೆ, ಅದು ರೋಮ್ಯಾಂಟಿಕ್ ಸ್ಥಳ ಎಂಬುದರಲ್ಲಿ  ಯಾವುದೇ ಅನುಮಾನವಿಲ್ಲ.


ಇದನ್ನೂ ಓದಿ: ಹಣ್ಣು ಮಾತ್ರವಲ್ಲ, ಪಪ್ಪಾಯಿ ಎಲೆಯ ಜ್ಯೂಸ್​ ಕೂಡಾ ಬೆಸ್ಟ್​, ಪ್ರಯೋಜನಗಳು ಹಲವಾರು




ಏಕೆಂದರೆ ಪ್ರತಿ ಟೇಬಲ್ ಅನ್ನು ಸಣ್ಣ ಮೇಣದಬತ್ತಿಯಿಂದ ಅಲಂಕರಿಸಲಾಗಿರುತ್ತದೆ. ಇದು ಸುಂದರ ಹೊಳಪನ್ನು ನೀಡುತ್ತದೆ. ನೀವು ಮೊದಲ ಬಾರಿಗೆ ಡೇಟಿಂಗ್​ಗೆ ಬಂದಿದ್ದರೆ ಈ ಸ್ಥಳ ನಿಜಕ್ಕೂ ಸೂಕ್ತವಾಗಿದೆ.  ಅಲ್ಲದೇ, ನಿಮಗೆ ಮೌನವಾಗಿ ಕುಳಿತು, ಒಬ್ಬರೇ ಇರಲು ಇಷ್ಟವಿದ್ದರೆ ಕುಳಿತುಕೊಂಡು ಪೇಯ್ಟಿಂಗ್ ಮಾಡಬಹುದು. ಇನ್ನು ಈ ಕ್ಲೇಟೋಪಿಯಾ ಅವರ ಬರ್ಗರ್‌ಗಳಿಗೆ ಬಹಳ ಹೆಸರುವಾಸಿಯಾಗಿದೆ.


ಬೆಂಗಳೂರಿನ ಮೊದಲ ಸ್ವಂತ ಪಾಟರಿ ಸ್ಟುಡಿಯೋ ಮತ್ತು ಕೆಫೆಯಾಗಿದ್ದು, ಬಿಸ್ಟ್ರೋ ಕ್ಲೇಟೋಪಿಯಾ ಎಂಬುದು ವಿವಿಧ ಸಂಸ್ಕೃತಿಗಳ ಜನರ ನೆಚ್ಚಿನ ಸ್ತಳವಾಗಿದೆ. ಇಲ್ಲಿ ಕಲೆಯನ್ನು ಆಹಾರದೊಂದಿಗೆ ಬೆರೆಸುವ ಮೂಲಕ ಜನರ ಜೊತೆ ಬೆರೆತು, ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.


ಇದನ್ನೂ ಓದಿ: ಕಾಂತಾರ ಸಿನಿಮಾದ ಧಣಿಗಳ ಮನೆಯಲ್ಲಿ ನೀವೂ ಉಳ್ಕೋಬೋದು, ಬಾಡಿಗೆ ಎಷ್ಟು? ಬುಕಿಂಗ್ ಹೇಗೆ? ಫುಲ್ ಡೀಟೆಲ್ಸ್


ವಿಳಾಸ: SBI ಪಾರ್ಕ್, 11, 80 ಅಡಿ ರಸ್ತೆ, ವಿಪ್ರೋ ಪಾರ್ಕ್ ಹತ್ತಿರ, 3 ನೇ ಬ್ಲಾಕ್, ಕೋರಮಂಗಲ 1A ಬ್ಲಾಕ್, SBI ಕಾಲೋನಿ, ಕೋರಮಂಗಲ, ಬೆಂಗಳೂರು, ಕರ್ನಾಟಕ 560034


ಮೊಬೈಲ್ ನಂಬರ್: 081976 32201


ಸಮಯ: 11am–11pm

Published by:Sandhya M
First published: