BYJU'S Young Genius: ಈ ವಾರ ಲಿಡಿಯನ್​ ನಾಧಸವರಂ ಮತ್ತು ಮೇಘಾಲಿ ಮಲಬಿಕಾ ಪ್ರತಿಭೆ ಅನಾವರಣ

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಕಾರ್ಯಕ್ರಮದ ಮೊದಲ ಸಂಚಿಕೆ ನಾಳೆ ನೆಟ್​ವರ್ಕ್​ 18ನಲ್ಲಿ ಪ್ರಸಾರವಾಗಲಿದೆ.

ಲಿಡಿಯನ್​ ನಾಧಸವರಂ ಮತ್ತು ಮೇಘಾಲಿ ಮಲಬಿಕಾ

ಲಿಡಿಯನ್​ ನಾಧಸವರಂ ಮತ್ತು ಮೇಘಾಲಿ ಮಲಬಿಕಾ

 • Share this:
  ಮಕ್ಕಳ ಅದ್ಭುತ ಪ್ರತಿಭೆಗಳ ಅನಾವರಣ ಕಾರ್ಯಕ್ರಮವಾದ ಬೈಜೂಸ್​ ಯಂಗ್​ ಜೀನಿಯಸ್ ಕಾರ್ಯಕ್ರಮ ಇದೇ ಜ. 16 ಅಂದರೆ ನಾಳೆಯಿಂದ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿನ ಪ್ರತಿಭೆಗಳು ಇಡೀ ದೇಶಕ್ಕೆ ಅನಾವರಣಗೊಳ್ಳಲಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಕಾರ್ಯಕ್ರಮದ ಮೊದಲ ಸಂಚಿಕೆ ನಾಳೆ ಪ್ರಸಾರವಾಗಲಿದ್ದು, ಮೊದಲಿಗೆ ಸಂಗೀತದಲ್ಲಿ ಅಪ್ರತಿಮಾ ಆಸಕ್ತಿಹೊಂದಿರುವ ಲಿಡಿಯನ್​ ನಾಧಸವರಂ (15) ಮತ್ತು ಅಸಾಮಾನ್ಯ ನೆನಪಿನ ಶಕ್ತಿಯ ಮೇಘಾಲಿ ಮಲಬಿಕಾ (14) ಕಾಣಿಸಿಕೊಳ್ಳಲಿದ್ದಾರೆ. ಈ ಯುವಪ್ರತಿಭೆಗಳಿಗೆ ಖ್ಯಾತ ಗಾಯಕ ಶಂಕರ್​ ಮಹಾದೇವನ್​ ಮಾರ್ಗದರ್ಶನ ನೀಡಲಿದ್ದಾರೆ. ಈ ಸಂಚಿಕೆಯಲ್ಲಿ ಲಿಡಿಯನ್​ ಒಂದು ನಿಮಿಷದಲ್ಲಿ 190 ಬೀಟ್​ಗಳ ವೇಗದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪಿಯಾನೋ ನುಡಿಸಲಿದ್ದಾರೆ. ಈಕೆ ಈಗಾಗಲೇ 2019ರಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಸಂಗೀತಗಾರ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಗೆಲುವಿನ ಬಳಿಕ ಅವರು ಎಲ್ಲೆನ್​ ಡಿಜೆನರೆಸ್​ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿದ್ದರು.

  ಇನ್ನು ಬೈಜೂಸ್​ ಯಂಗ್​ ಜೀನಿಯಸ್ ಕಾರ್ಯಕ್ರಮಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಲಿಡಿಯನ್​, ಇದು ತಮ್ಮ ಕನಸು ನನಸಾಗುವ ಕ್ಷಣವಾಗಿದೆ. ಇದೊಂದು ವಿಶ್ವದ ಪ್ರತಿಷ್ಟಿತ ಕಾರ್ಯಕ್ರಮವಾಗುತ್ತಿದ್ದು, ಒಂದು ದಿನ ನಾವು ಅಲ್ಲಿರುತ್ತೇವೆ ಎಂದು ತಿಳಿಸಿದರು.

   ಲಿಡಿಯನ್​ ಇತ್ತೀಚೆಗೆ ಅಟ್ಕಾನ್​ ಚಟ್ಕಾನ್​ ಚಿತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದಿದ್ದರು. ಅಲ್ಲದೇ ಮೋಹನ್ ಲಾಲ್​ ನಿರ್ದೇಶನದ 3ಡಿ ಚಿತ್ರ ಬರೋಜ್​ಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಲಿಡಿಯಾ, ನಾನು ತನ್ನಪಾಡಿಗೆ ಸ್ವತಃ ಸಂಯೋಜಿಸುತ್ತೇನೆ. ಸಿನಿಮಾಗಳಲ್ಲಿ ಏನಾಗುತ್ತಿದೆ ಎಂಬುದನ್ನು ನಾನು ತಿಳಿಯಬೇಕು. ನಟರು ತೋರಿಸಿದ ಭಾವನೆಗಳನ್ನು ಸಂಗೀತದ ಮೂಲಕ ತೋರಿಸಬೇಕು. ಇದು ನನಗೆ ಸಾಧ್ಯವಾಗಿದ್ದು, ಇದರಿಂದ ಹೆಚ್ಚಿನ ಜ್ಞಾನ ನೀಡಿದೆ ಎಂದಿದ್ದಾರೆ.  ಈ ಕುರಿತು ಮಾತನಾಡಿರುವ ಲಿಡಿಯನ್​ ತಂದೆ, ನಾವು ಅನೇಕ ಯೋಜನೆಗಳಿಗೆ ಸಾಧ್ಯವಿಲ್ಲ ಎಂದೆವು. ಅವನನ್ನು ನಾವು ಶಾಂತಿಯುತವಾಗಿ ಬೆಳೆಯಬೇಕು ಎಂದು ಬಯಸಿದೇವು. ಬರೋಜ್​ ಮುಗಿದ ಬಳಿಕ ಆತನ ಮುಂದಿನ ಯೋಜನೆ ಬಗ್ಗೆ ಚಿಂತಿಸಬಹುದು. ಆತ ಯೋಜನೆಗಳ ಹಿಂದೆ ಓಡುವುದನ್ನು ನಾವು ಬಯಸುವುದಿಲ್ಲ. ನನ್ನ ಮಗಳು ಕೂಡ ಸಂಗೀತಗಾರ್ತಿ. ಅವರು ತಪ್ಪಿ ಮಾಡಿದಾಗ ನಾನು ಅವರ ಸಕಾರತ್ಮಕತೆ ಬಗ್ಗೆ ಚಿಂತಿಸುತ್ತೇನೆ. ಆಗ ಮಕ್ಕಳು ಒತ್ತಡಕ್ಕೆ ಒಳಗಾಗುವುದಿಲ್ಲ ಎಂದರು.

  ಕಾರ್ಯಕ್ರಮದಲ್ಲಿ ಪ್ರದರ್ಶಿನ ನೀಡಲಿರುವ ಎರಡನೇ ಪ್ರತಿಭೆ ಎಂದರೆ ಮೇಘಾಲಿ. ಈಗಾಗಲೇ ಇಂಡಿಯನ್​ ಬುಕ್​ ಆಫ್​ ರೆಕಾರ್ಡ್​ನಲ್ಲಿ ನಾಲ್ಕು ದಾಖಲೆಗಳನ್ನು ಹೊಂದಿದ್ದಾಳೆ. ಈಕೆಯ ನೆನಪಿನ ಶಕ್ತಿಯಿಂದಾಗಿ ಗೂಗಲ್​ ಗರ್ಲ್​ ಆಫ್​ ಇಂಡಿಯಾ ಎಂಬ ಕೀರ್ತಿಗೂ ಭಾಜನಳಾಗಿದ್ದಾಳೆ.  ಈ ಕುರಿತು ಮಾತನಾಡಿರುವ ಮೇಘಾಲಿ ನನಗೆ ಗೂಗಲ್​ ಗರ್ಲ್​ ಆಗಲು ಸಹಾಯ ಮಾಡಿದ ನನ್ನ ತಂದೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. ಏಕ ವ್ಯಕ್ತಿ ಪ್ರದರ್ಶನದ ಪಿಟೀಲು ಸ್ಪರ್ಧೆಯಲ್ಲಿ ನನಗೆ ಚಿನ್ನದ ಪದಕ ಗೆಲ್ಲಬೇಕು. ಸಂಗೀತದಲ್ಲಿ ಕೂಡ ನಾನು ಕೊಂಚ ಗೆಲ್ಲಲ್ಲು ಇಷ್ಟಪಡುತ್ತೇನೆ ಎಂದಿದ್ದಾರೆ.  ಇನ್ನು ಲಾಕ್ಡೌನ್​ ಸಮಯವನ್ನು ಹೇಗೆ ಸದುಪಯೋಗ ಪಡೆಸಿಕೊಂಡೆ ಎಂಬುದರ ಕುರಿತು ಮಾತನಾಡಿರುವ ಮೇಘಾಲಿ, ಕಾದಂಬರಿ ಕೊಂಡು ಓದಿದೆ. ಅಲ್ಲದೇ ಆನ್​ಲೈನ್​ನಲ್ಲಿ ಕೆಲವನ್ನು ಓದಿದ್ದೇನೆ, ನಾನು ಕಾದಂಬರಿಗೆ ಆಡಿಕ್ಟ್​ ಆಗಿದ್ದೇನೆ. ಇದಾದ ಬಳಿಕ ನನ್ನ ಆನ್​ಲೈನ್​ ತರಗತಿಗಳು ಶುರುವಾದವು. ಇದರಿಂದ ಹೆಚ್ಚು ಸಮಯದ ಓದಿನಲ್ಲಿ ಕಳೆದ ಉಳಿದ ಸಮಯದಲ್ಲಿ ಪಿಟೀಲು ನುಡಿಸುತ್ತೇನೆ ಎಂದರು.

  ಮೇಘಾಲಿ ನೆನಪಿನ ಶಕ್ತಿ ಕುರಿತು ಮಾತನಾಡಿರದ ಅವರ ತಂದೆ, ಆಕೆಗೆ ನಾಲ್ಕು ವರ್ಷವಿದ್ದಾಗ 2010ರ ಫಿಫಾ ವಿಶ್ವಕಪ್​ ಸಮಯದಲ್ಲಿ ಶಕೀರಾ ನೃತ್ಯ ಕಂಡು ಮೇಘಾಲಿ ಇಷ್ಟಪಟ್ಟು, ಆಕೆಯನ್ನು ಭೇಟಿಯಾಗಬೇಕು ಎಂದಳು. ಆಗ ನಾನು ಆಕೆ ಇಲ್ಲಿನವಳಲ್ಲ. ಕೊಲಂಬಿಯಾದವಳು ಎಂದಾಗ ಎಲ್ಲಿದೆ ಕೊಲಂಬಿಯಾ ಎಂದು ಪ್ರಶ್ನಿಸಿದಳು. ಆಗ ನಕ್ಷೆ ತೋರಿಸಿ ಕೊಲಂಬಿಯಾ ತೋರಿಸಿದೆ. ಹೀಗೆ ಕೆಲವೇ ತಿಂಗಳಲ್ಲಿ ವಿಶ್ವದ ನಕ್ಷೆಯಲ್ಲಿ ತೋರಿಸಿದವುಗಳನ್ನು ನೆನಪಿಸಿಕೊಳ್ಳಲಾರಂಭಿಸಿದಳು ಎಂದಿದ್ದಾರೆ.

  ನಾಳೆ ಸಂಜೆ ಈ ಕಾರ್ಯಕ್ರಮ ನೆಟ್​ವರ್ಕ್​ 18ನಲ್ಲಿ ಪ್ರಸಾರವಾಗಲಿದೆ. ಪ್ರತಿ ಶನಿವಾರ ಈ ಕಾರ್ಯಕ್ರಮದ ಮೂಲಕ ಪ್ರತಿಭೆ ಅನಾವರಣಗೊಳ್ಳಲಿದೆ. ಕಾರ್ಯಕ್ರಮದ ಮರು ಪ್ರಸಾರ ಭಾನುವಾರ ನಡೆಯಲಿದೆ.
  Published by:Seema R
  First published: