Buttermilk: ಅತಿಯಾದ ಮಜ್ಜಿಗೆ ಸೇವನೆ ಈ ಮೂರು ದುಷ್ಪರಿಣಾಮ ಉಂಟು ಮಾಡುತ್ತೆ!

ಅತಿಯಾದರೆ ಅಮೃತವೂ ವಿಷ ಅನ್ನೋ ಮಾತಿದೆ. ಯಾವುದೇ ಆಹಾರವಾದರೂ ಅದು ಅತಿಯಾಗಬಾರದು. ರುಚಿ ಚೆನ್ನಾಗಿದೆ ಎಂದು ನಮ್ಮ ನಾಲಿಗೆ ಸವಿ ಬಯಸಿದರೂ, ನಮ್ಮ ದೇಹ ಹೆಚ್ಚುವರಿಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮ ಸಂಭವಿಸುತ್ತದೆ.

ಮಜ್ಜಿಗೆ

ಮಜ್ಜಿಗೆ

  • Share this:
ಮಜ್ಜಿಗೆ (ButterMilk) ನಮ್ಮ ಅಡುಗೆ ಮನೆಗಳಲ್ಲಿ (Kitchen) ಸಾಮಾನ್ಯವಾಗಿ ಕಂಡುಬರುವ ಪಾನೀಯಗಳಲ್ಲಿ ಒಂದಾಗಿದೆ. ಇದು ತನ್ನ ರುಚಿ ಮತ್ತು ಆರೋಗ್ಯ (Taste And Health Benefits) ಪ್ರಯೋಜನಗಳ ಕಾರಣದಿಂದ ಎಲ್ಲರಿಗೂ ಇಷ್ಟವಾಗುತ್ತದೆ. ಮಜ್ಜಿಗೆ ಇಲ್ಲದೆ ಕೆಲವರಿಗೆ ಊಟನೇ (Meal) ಅಪೂರ್ಣ, ಅದರಲ್ಲೂ ಬೇಸಿಗೆಯಲ್ಲಿ (Summer) ಈ ಸಮೃದ್ಧ ಪಾನೀಯ (Drink) ಕುಡಿಯದ ದಿನವೇ ಇಲ್ಲ. ಮಜ್ಜಿಗೆ ಬೇಸಿಗೆಯ ದಿನಗಳಲ್ಲಿ ನಮ್ಮನ್ನು ತಂಪಾಗಿರಿಸುತ್ತದೆ, ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುತ್ತದೆ. ಇದು ನಮ್ಮ ಚರ್ಮದ ಆರೋಗ್ಯಕ್ಕೂ (Skin Health) ಸಹ ಅತ್ಯಂತ ಪ್ರಯೋಜನಕಾರಿ ಪಾನೀಯವಾಗಿದೆ.

ಮಜ್ಜಿಗೆ ಹಲವಾರು ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಇದು ಬಲವಾದ ಮೂಳೆಗಳನ್ನು ಬೆಂಬಲಿಸುತ್ತದೆ, ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ. ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಮಜ್ಜಿಗೆ ಸಹ ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿದೆ. ಒಂದು ಪದಾರ್ಥ, ವಸ್ತು ಎಂದರೆ ಒಳ್ಳೆಯದು, ಕೆಟ್ಟದ್ದು ಇರುವಂತೆ ಮಜ್ಜಿಗೆಯೂ ಕೆಲ ದುಷ್ಪರಿಣಾಮಗಳನ್ನು ಹೊಂದಿದೆ. ಅದರ ಅಡ್ಡ ಪರಿಣಾಮಗಳನ್ನು ತಿಳಿಯುವುದಕ್ಕೂ ಮುಂಚೆ ಅದರ ಪ್ರಯೋಜನಗಳ ಬಗ್ಗೆ ಒಮ್ಮೆ ಕಣ್ಣಾಡಿಸಿ ಬರೋಣ.

ಇದನ್ನೂ ಓದಿ:  Beetroot Juice: ಬೇಸಿಗೆಯಲ್ಲಿ 13 ವಿಧದ ಬೀಟ್ರೂಟ್ ಜ್ಯೂಸ್! ಆರೋಗ್ಯಕ್ಕೆ ಬೆಸ್ಟ್ ಇದು

1)ತಂಪು ಪಾನೀಯ

ಮಜ್ಜಿಗೆ ಬೇಸಿಗೆ ದಿನದ ಪಾನೀಯ ಅಂತಾಲೇ ಖ್ಯಾತಿ ಪಡೆದಿದೆ. ಈ ದಿನಗಳಲ್ಲಿ ದೇಹದ ಉಷ್ಣವನ್ನು ಇದು ಕಡಿಮೆ ಮಾಡುತ್ತದೆ. ಮತ್ತು ನಿಮ್ಮ ಹೊಟ್ಟೆಯಲ್ಲಿ ಯಾವುದೇ ಉರಿ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುತ್ತದೆ.

2) ಮಲಬದ್ಧತೆಯ ವಿರುದ್ಧ ಹೋರಾಡುತ್ತದೆ

ಮಜ್ಜಿಗೆ ಮಲಬದ್ಧತೆ ಮತ್ತು ಸಂಬಂಧಿತ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ. ಮಜ್ಜಿಗೆಯಲ್ಲಿರುವ ಹೆಚ್ಚಿನ ಫೈಬರ್ ಅಂಶ ಕರುಳಿನ ಚಲನೆಯನ್ನು ಸುಗಮಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.

3) ಡಿಟಾಕ್ಸ್ ಮಾಡುತ್ತದೆ

ಮಜ್ಜಿಗೆಯ ಗಮನಾರ್ಹ ಪ್ರಯೋಜನವೆಂದರೆ ಅದರಲ್ಲಿರುವ ರೈಬೋಫ್ಲಾವಿನ್ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇದು ಕೆಲವು ಹಾರ್ಮೋನುಗಳ ಸ್ರವಿಸುವಿಕೆಗೂ ಸಹಾಯ ಮಾಡುತ್ತದೆ. ರಿಬೋಫ್ಲಾವಿನ್ ಯಕೃತ್ತಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ನಿರ್ವಿಶೀಕರಣವನ್ನು ಉತ್ತೇಜಿಸುತ್ತದೆ. ಮಜ್ಜಿಗೆ ಸೇವನೆ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ.

ಮಜ್ಜಿಗೆ ಸಾಕಷ್ಟು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಒಂದು ಕಪ್ (245 ಮಿಲಿ) ಮಜ್ಜಿಗೆಯು 98 ಕ್ಯಾಲೋರಿಗಳು, 8 ಗ್ರಾಂ ಪ್ರೋಟೀನ್, 3 ಗ್ರಾಂ ಫೈಬರ್, 22% ಕ್ಯಾಲ್ಸಿಯಂ, 16% ಸೋಡಿಯಂ ಮತ್ತು 22% ವಿಟಮಿನ್ ಬಿ 12, ಸಕ್ಕರೆ 4.8 ಗ್ರಾಂ ಅನ್ನು ಒದಗಿಸುತ್ತದೆ. ಆದರೆ ಮಜ್ಜಿಗೆಯು ಕೆಲವು ವ್ಯಕ್ತಿಗಳಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುವ ಉಪ್ಪಿನ ಅಂಶಕ್ಕೆ ಸಂಬಂಧಿಸಿದ ಹಲವಾರು ದುಷ್ಪರಿಣಾಮಗಳನ್ನು ಸಹ ಹೊಂದಿದೆ.

ಇದನ್ನೂ ಓದಿ:  Health Tips: ದೀರ್ಘಾಯುಷ್ಯಕ್ಕಾಗಿ ಈ ಡಯೆಟ್ ಫಾಲೋ ಮಾಡಿ, ಇಲ್ಲಿದೆ ಆಯಸ್ಸು ಹೆಚ್ಚಿಸುವ ಆರೋಗ್ಯ ಕ್ರಮ

ಕಡಿಮೆ-ಕೊಬ್ಬಿನ ಮಜ್ಜಿಗೆಯು ಹೆಚ್ಚಿನ ಕೊಬ್ಬಿನ ಆವೃತ್ತಿಗಳಿಗಿಂತ ಹೆಚ್ಚಿನ ಸೋಡಿಯಂ ಅನ್ನು ಹೊಂದಿದೆ. ಇದರ ಜೊತೆ ಮಜ್ಜಿಗೆಯ ಇನ್ನೂ ಕೆಲವು ಅಡ್ಡಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ನೀವು ಪ್ರತಿದಿನ ಮಜ್ಜಿಗೆ ಕುಡಿಯುವುದರ ದುಷ್ಪರಿಣಾಮಗಳು:

ಅತಿಯಾದರೆ ಅಮೃತವೂ ವಿಷ ಅನ್ನೋ ಮಾತಿದೆ. ಯಾವುದೇ ಆಹಾರವಾದರೂ ಅದು ಅತಿಯಾಗಬಾರದು. ರುಚಿ ಚೆನ್ನಾಗಿದೆ ಎಂದು ನಮ್ಮ ನಾಲಿಗೆ ಸವಿ ಬಯಸಿದರೂ, ನಮ್ಮ ದೇಹ ಹೆಚ್ಚುವರಿಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮ ಸಂಭವಿಸುತ್ತದೆ.

1) ಶೀತ, ಜ್ವರ ಅಥವಾ ಅಲರ್ಜಿಯ ಸಮಯದಲ್ಲಿ ರಾತ್ರಿಯಲ್ಲಿ ಮಜ್ಜಿಗೆ ಕುಡಿಯಲು ಶಿಫಾರಸು ಮಾಡುವುದಿಲ್ಲ.

2) ಬೆಣ್ಣೆಯಿಂದ ಕೆನೆ (ಮಲಾಯಿ) ತೆಗೆದ ನಂತರ ಮಜ್ಜಿಗೆ ತಯಾರಿಸಲಾಗುತ್ತದೆ ಮತ್ತು ಕೆನೆ ಗಟ್ಟಿಯಾಗಲು ದಿನಗಳವರೆಗೆ ಇಡಬೇಕು, ಆದ್ದರಿಂದ ಬೆಣ್ಣೆಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬಂದು ಗಂಟಲಿನ ಸೋಂಕು ಮತ್ತು ಶೀತವನ್ನು ಉಂಟುಮಾಡುವ ಕಾರಣ ಮಕ್ಕಳಿಗೆ ಮಜ್ಜಿಗೆ ನೀಡದಂತೆ ಸಲಹೆ ನೀಡಲಾಗುತ್ತದೆ.

3) ಮಜ್ಜಿಗೆಯಲ್ಲಿ ಹೆಚ್ಚಿನ ಸೋಡಿಯಂ ಅಂಶ ಇರುತ್ತದೆ. ಹೀಗಾಗಿ ಮೂತ್ರಪಿಂಡದ ಕಾಯಿಲೆಗಳು ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳು ಮಜ್ಜಿಗೆಯನ್ನು ಸೇವಿಸಬಾರದು.

ಅಲರ್ಜಿ, ಕಿಡ್ನಿ ಸಮಸ್ಯೆ, ಅಧಿಕ ರಕ್ತದೊತ್ತಡ ಇರುವವರು ಆದಷ್ಟು ಮಜ್ಜಿಗೆಯಿಂದ ದೂರವಿರುವುದು ಉತ್ತಮ. ಹೆಚ್ಚು ಹೆಚ್ಚು ಮಜ್ಜಿಗೆ ಸೇವಿಸುವುದಕ್ಕಿಂತ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಸೇವಿಸಿ.
Published by:Mahmadrafik K
First published: