Bulletproof coffee​ ಸೇವಿಸಿದ್ದೀರಾ?; ಕಿಟೋ ಕಾಫಿಯ ಒಂದು ಗುಟುಕಿನಲ್ಲಿದೆ ಚಮತ್ಕಾರ!

Bullet Coffee: ಬುಲೆಟ್ ಕಾಫಿ ಅಥವಾ ಕೀಟೋ ಕಾಫಿ ಈಗ ಅತ್ಯಂತ ಜನಪ್ರಿಯ. ಅಧಿಕ ಕ್ಯಾಲೋರಿ ಹೊಂದಿರುವ ಈ ಮಿಶ್ರಣ ಫಿಟ್‍ನೆಸ್ ಬಗ್ಗೆ ಆಸಕ್ತಿ ಉಳ್ಳವರನ್ನು ಮಾತ್ರವಲ್ಲ ಸೆಲೆಬ್ರಿಟಿಗಳನ್ನು ಕೂಡ ಆಕರ್ಷಿಸುತ್ತಿದೆ.

Bulletproof coffee

Bulletproof coffee

 • Share this:

  ನೀವು ಕಾಫಿ ಪ್ರಿಯರೇ? ಹಾಗಾದರೆ ನಿಮ್ಮ ದಿನ ಖಂಡಿತಾ ಬಿಸಿಬಿಸಿ ಕಾಫಿ ಸೇವನೆಯೊಂದಿದೆ ಆರಂಭವಾಗುತ್ತದೆ ಅಲ್ಲವೇ? ನೀವು ಮಾತ್ರವಲ್ಲ, ಬಹಳಷ್ಟು ಮಂದಿಯ ದಿನ ಆರಂಭವಾಗುವುದೇ ಒಂದು ಮಗ್ ಕಾಫಿಯಿಂದ. ಅಂತವರ ಹೊಟ್ಟೆಗೊಂದಿಷ್ಟು ಕಾಫಿ ಗುಟುಕು ಬಿದ್ದರೆ ಸಾಕು, ನಿತ್ಯದ ಚಟುವಟಿಕೆಗಳಿಗೆ ದೇಹ ಸನ್ನದ್ಧವಾಗುತ್ತದೆ. ಕೆಲವರು ಒಂದು ಅಥವಾ ಎರಡು ಚಮಚ ಸಕ್ಕರೆ ಹಾಕಿ ಕಾಫಿ ಸವಿದರೆ, ಇನ್ನು ಕೆಲವರು ಹಾಲೇ ಹಾಕದೆ ಕೇವಲ ಕಾಫಿ ಡಿಕಾಕ್ಷನ್ ಕುಡಿಯುವುದನ್ನು ಇಷ್ಟ ಪಡುತ್ತಾರೆ. ಹಾಲು, ಸಕ್ಕರೆ, ಕಾಫಿ ಪುಡಿ, ನೀರು ಇದೆಲ್ಲಾ ಇದ್ದರೆ ಸಾಮಾನ್ಯ ಕಾಫಿ ಕ್ಷಣಮಾತ್ರದಲ್ಲಿ ಸಿದ್ಧ. ಆದರೆ ಕಾಫಿ ಡಿಕಾಕ್ಷನ್‍ಗೆ ಬೆಣ್ಣೆ ಅಥವಾ ತುಪ್ಪ ಹಾಕಿದರೆ? ಯಪ್ಪಾ..ಇದೇನಪ್ಪಾ ಅಂತೀರಾ? ಹೌದು, ಈಗ ಬ್ಲಾಕ್ ಕಾಫಿಗೆ ಬೆಣ್ಣೆ ಅಥವಾ ತುಪ್ಪ ಹಾಕುವುದು ಒಂದು ಟ್ರೆಂಡ್! ಆ ಕಾಫಿಯ ಹೆಸರು ಬುಲೆಟ್ ಫ್ರೂಫ್ ಕಾಫಿ.


  ಅಧಿಕ ಕ್ಯಾಲೊರಿ ಹೊಂದಿರುವ ಈ ಮಿಶ್ರಣವನ್ನು, ಬುಲೆಟ್ ಫ್ರೂಫ್ ಕಾಫಿ ಎನ್ನಿ ಅಥವಾ ಸರಳವಾಗಿ ಬುಲೆಟ್ ಕಾಫಿ ಎಂದಾದರೂ ಅನ್ನಿ, ಈಗ ಕೀಟೋಜೆನಿಸಿಸ್ ಸಾಧನೆಗೆ ಈಗ ಹೆಚ್ಚಿನ ಮಂದಿ ಇದರ ಮೊರೆ ಹೋಗುತ್ತಿದ್ದಾರೆ. ಏಕೆಂದರೆ ಈ ಕಾಫಿ, ಕಾರ್ಬೋಹೈಡ್ರೇಟ್ಸ್‍ನ ಅನುಪಸ್ಥಿತಿಯಲ್ಲಿ ದೇಹದ ಕೊಬ್ಬನ್ನು ಕರಗಿಸಲು ಇದು ಸಹಾಯ ಮಾಡುತ್ತದೆ.


  ಬುಲೆಟ್ ಕಾಫಿ ಬಹುಬೇಗ ಎಲ್ಲೆಡೆ ಜನಪ್ರಿಯವಾಗಿದ್ದು, ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕೆಲಿನ್ ಫೆರ್ನಾಂಡಿಸ್‍ನಂತಹ ಬಾಲಿವುಡ್ ತಾರೆಯರನ್ನೂ ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
  “ಬುಲೆಟ್ ಪ್ರೋಫ್ ಕಾಫಿ, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಮತ್ತು ಕಡಿಮೆ ಕಾರ್ಬ್‍ಯುಕ್ತ ಆಹಾರ ಕ್ರಮಕ್ಕೆ ಆದ್ಯತೆ ಕೊಡುವ ಈಗಿನ ಯುವ ಜನರಲ್ಲಿ ಅತ್ಯಂತ ಸಾಮಾನ್ಯವಾಗಿದೆ” ಎನ್ನುತ್ತಾರೆ ಆಹಾರ ತಜ್ಞೆ ನೇಹಾ ಪಥಾನಿಯ.


  “ಅದು ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ ಮತ್ತು ನೀವು ದಿನವಿಡೀ ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳುತ್ತದೆ.ಅದು ತೂಕ ಇಳಿಸಲು ಸಹಕಾರಿ ಮತ್ತು ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅದು ಲೀನ್ ಮಸಲ್ ಮಾಸ್ ಅನ್ನು ಹೆಚ್ಚಿಸುತ್ತದೆ” ಎನ್ನುತ್ತಾರೆ ಅವರು.


  ಬುಲೆಟ್ ಕಾಫಿಯ ಸೇವನೆ ಸಹನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ವ್ಯಾಯಾಮ ಮಾಡುವವರು, ಅದನ್ನು ಆರಂಭಿಸುವ ಮುನ್ನ ಬುಲೆಟ್ ಕಾಫಿ ಕುಡಿಯುವುದು ಒಳ್ಳೆಯದು.


  “ ಬೆಣ್ಣೆಯಲ್ಲಿರುವ ಕೊಬ್ಬು ಕರಗಿಸಬಲ್ಲ ವಿಟಮಿನ್‍ಗಳು (ಎ,ಡಿ ಮತ್ತು ಕೆ) ದೇಹದ ಕೊಬ್ಬು ಸಂಯೋಜನೆಯ ಬೆಳವಣಿಗೆಗೆ ಸಹಕಾರಿ ಆಗಬಲ್ಲವು. ಇದನ್ನು ತಯಾರಿಸಲು ಬಳಸಲ್ಪಡುವ ತೈಲವು ಲಿವರ್​ನಿಂದ ಬೇಗ ಚಯಾಪಚಯಗೊಳ್ಳುತ್ತದೆ ಮತ್ತು ದೇಹ ಅದನ್ನು ಬೇಗ ಹೀರಿಕೊಳ್ಳುತ್ತದೆ. ಅದು ತೂಕ ಇಳಿಸಲು ಸಹಕಾರಿ ಆಗಬಹುದು” ಎನ್ನುತ್ತಾರೆ ಆಹಾರ ಮತ್ತು ಫಿಟ್‍ನೆಸ್ ತಜ್ಞೆ ಮನೀಷಾ ಚೋಪ್ರಾ.


  ಆದರೆ ಕೆಲವು ತಜ್ಞರ ಪ್ರಕಾರ, ಈ ಕಾಫಿಯನ್ನು ಪದೇ ಪದೇ ಸೇವಿಸಿದರೆ, ಒಳ್ಳೆಯದಾಗುವುದಕ್ಕಿಂತ ಕೆಟ್ಟದಾಗುವುದೇ ಹೆಚ್ಚು.


  “ಬುಲೆಟ್ ಪ್ರೂಫ್ ಕಾಫಿಯನ್ನು ನಿತ್ಯವೂ ಸೇವಿಸುವುದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಈ ಮಿಶ್ರಣದಲ್ಲಿ ಎಣ್ಣೆ ಮತ್ತು ಬೆಣ್ಣೆ ಅಧಿಕವಾಗಿ ಇರುವುದರಿಂದ, ನಿತ್ಯ ಸೇವಿಸಿದರೆ ವ್ಯಕ್ತಿ ಸ್ಯಾಚುರೇಟೆಡ್ ಫ್ಯಾಟ್‍ಗಳನ್ನು ಹೆಚ್ಚು ಸೇವಿಸಿದಂತಾಗುತ್ತದೆ, ಅದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಬಹುದು. ಇದು ಪಾಶ್ರ್ವವಾಯು ಮತ್ತು ಹೃದಯದ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು” ಎನ್ನುತ್ತಾರೆ ಆಹಾರ ತಜ್ಞೆ ಶಾಲಿನಿ ಗರ್ವಿನ್ ಬ್ಲಿಸ್.


  ಬುಲೆಟ್ ಕಾಫಿಯ ಪ್ರಚಾರಕರು ಅದು ಬೆಳಗ್ಗಿನ ಉಪಹಾರಕ್ಕೆ ಪರ್ಯಾಯ ಎಂದು ಹೇಳುತ್ತಾರೆ, ಆದರೆ ಈ ವಿಷಯದಲ್ಲಿ ಪಥಾನಿಯಾ ಅವರ ಅಭಿಪ್ರಾಯ ಭಿನ್ನವಾಗಿದೆ. “ಬುಲೆಟ್ ಪ್ರೂಫ್ ಕಾಫಿಯಲ್ಲಿ ಅಧಿಕ ಕೊಬ್ಬು ಇದೆ ಅದು ನಿಮ್ಮ ಹಸಿವನ್ನು ಕಡಿಮೆ ಮಾಡಿ, ನಿಮಗೆ ದಿನವಿಡೀ ಶಕ್ತಿ ನೀಡುತ್ತದೆ.ಆದರೆ ಅದು ಬೆಳಗ್ಗಿನ ಉಪಹಾರಕ್ಕೆ ಪರ್ಯಾವಲ್ಲ, ಏಕೆಂದರೆ ಬೆಳಗ್ಗಿನ ಉಪಹಾರದಲ್ಲಿ ಕೇವಲ ಕೊಬ್ಬಿಗಿಂತ ಹೆಚ್ಚಾಗಿ ಅತ್ಯಧಿಕ ಪೋಷಕಾಂಶಗಳು ಇರುತ್ತವೆ” ಎನ್ನುತ್ತಾರೆ ಅವರು.


  ನೀವು ಬುಲೆಟ್ ಪ್ರೂಫ್ ಕಾಫಿ ಕುಡಿಯಬೇಕೆ? ಹಾಗಾದರೆ ಹೀಗೆ ಮಾಡಿ;


  ಹಂತ 1- ಕುದಿಯುವ ನೀರಿಗೆ ಒಂದು ಟೇಬಲ್ ಸ್ಪೂನ್ (ನಿಮ್ಮ ಇಷ್ಟಕ್ಕೆ ತಕ್ಕಂತೆ ಪ್ರಮಾಣವನ್ನು ಬದಲಾಯಿಸಬಹುದು) ಕಾಫಿ ಪುಡಿ ಹಾಕಿ.
  ಹಂತ 2- 1 ದೊಡ್ಡ ಚಮಚ ದೇಸಿ ತುಪ್ಪ, ಬೆಣ್ಣೆ, ತೆಂಗಿನೆಣ್ಣೆ ಅಥವಾ ಎಂಸಿಟಿ ಎಣ್ಣೆ ಹಾಕಿ.
  ಹಂತ 3- ಫ್ಲೇವರ್‍ಗಾಗಿ(ಬೇಕಿದ್ದರೆ) ಏಲಕ್ಕಿ ಅಥವಾ ದಾಲ್ಚಿನಿ ಪುಡಿ ಸೇರಿಸಬಹುದು.
  ಹಂತ4- ಈ ಮಿಶ್ರಣವನ್ನು ಸರಿಯಾಗಿ ಕಲಸಿ ಮತ್ತು ಬಿಸಿ ಇರುವಾಗಲೆ ಕುಡಿಯಿರಿ.


  First published: