ಕೋಸುಗಡ್ಡೆ ಸೇವನೆಯಿಂದ ಕುತ್ತಿಗೆಯ ಕ್ಯಾನ್ಸರ್ ನಿವಾರಣೆ: ಅಧ್ಯಯನ

news18
Updated:June 28, 2018, 2:04 PM IST
ಕೋಸುಗಡ್ಡೆ ಸೇವನೆಯಿಂದ ಕುತ್ತಿಗೆಯ ಕ್ಯಾನ್ಸರ್ ನಿವಾರಣೆ: ಅಧ್ಯಯನ
news18
Updated: June 28, 2018, 2:04 PM IST
ನ್ಯೂಸ್ 18 ಕನ್ನಡ

ಬ್ರೊಕೋಲಿ ಅಥವಾ ಕೋಸುಗಡ್ಡೆ ಎಂಬ ಹೆಸರಿನ ಹಸಿರು ತರಕಾರಿ ಇಟಲಿ ಮೂಲದ್ದಾಗಿದ್ದು, ಇದನ್ನು ಚೀನಾ ಹಾಗೂ ಭಾರತ ದೇಶದಲ್ಲೂ ಹೆಚ್ಚಾಗಿ ಬೆಳೆಯುತ್ತಾರೆ. ವಿಜ್ಞಾನಿಗಳು ಈ ಹಸಿರು ತರಕಾರಿಯ ಮೇಲೆ ಸಾಕಷ್ಟು ಅಧ್ಯಯನ ನಡೆಸಿದ್ದು, ಅನೇಕ ಪ್ರಯೋಜನಗಳಿವೆ ಎಂದು ತಿಳಿದುಬಂದಿದೆ. ಅದರಲ್ಲಿ ಪ್ರಮುಖವಾಗಿ ಕೋಸು ಗಡ್ಡೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್​ನಿಂದ ಪಾರಾಗಬಹುದು.

ವಿಜ್ಞಾನಿಗಳು ಮೊದಲಿಗೆ ಈ ಪ್ರಯೋಗವನ್ನು ತಲೆ ಮತ್ತು ಕುತ್ತಿಗೆ ಕ್ಯಾನ್ಸರ್​ಗಳಿರುವ ಇಲಿಗಳ ಮೇಲೆ ನಡೆಸಿದ್ದು, ಧನಾತ್ಮಕ ಪಲಿತಾಂಶ ದೊರಕಿವೆಯಂತೆ. ಇದರಿಂದ ಕುತ್ತಿಗೆ ಮತ್ತು ತಲೆಯಲ್ಲಿ ಕ್ಯಾನ್ಸರ್ ಕೋಶಗಳು ಬೆಳವಣಿಗೆ ಆಗುವುದನ್ನು ತಡೆಯಬಹುದು ಎಂದು ಅಧ್ಯಯನದಿಂದ ಸಾಬೀತಾಗಿದೆ. ಅಲ್ಲದೆ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣುವ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್​ಗೆ ಬ್ರೊಕೋಲಿ ರಾಮಬಾಣ. ಇದರಲ್ಲಿ ಕ್ಯಾನ್ಸರ್​ಕಾರಕವಾದ ಕಾರ್ಸಿನೋಜೆನ್‍ಗಳನ್ನು ನಾಶ ಮಾಡುವಂತಹ ಅಧಿಕ ಪ್ರಮಾಣದ ಸಲ್ಫೋಪೋನ್ ಕೋಶದಲ್ಲಿ ಬಿಡುಗಡೆ ಮಾಡುತ್ತದೆ. ಇದರಿಂದ ಆ ಭಾಗದಲ್ಲಿ ಆರೋಗ್ಯವಂತ ಕೋಶಗಳು ಕಾಣಿಸಿಕೊಳ್ಳುತ್ತವೆ.

ಕೋಸುಗಡ್ಡೆಯನ್ನು ಬೇಯಿಸಿ ಅಥವಾ ಹಸಿಯಾಗಿಯೇ ಸೇವಿಸಬಹುದು. ಅಲ್ಲದೆ ಇದರಲ್ಲಿ ಫೊಲೇಟ್ ಎಂಬ ವಿಟಮಿನ್ ಬಿ ಅಂಶ ಅಧಿಕವಾಗಿದ್ದು, ಡಿ.ಎನ್‍.ಎ. ಅನ್ನು ರಕ್ಷಿಸುತ್ತದೆ.

ಎಲ್ಲಾದರು ನಿಮ್ಮ ಶರೀರದಲ್ಲಿ ಧೂಮಪಾನ ಸೇವನೆಯಿಂದ ಬಂದಿರುವ ಕಾರ್ಸಿನೋಜೆನ್‍ಗಳಿದ್ದರೆ ಬ್ರೊಕೋಲಿ ಹೊರಹಾಕುತ್ತದೆ. ಅಲ್ಲದೆ ಮಹಿಳೆಯರಿಗೆ ಹೆರಿಗೆಯ ಬಳಿಕ ಆಗುವ ಕೆಲ ಸಮಸ್ಯೆಗಳನ್ನು ಕೂಡ ನಿವಾರಿಸುತ್ತದೆ.

ಇದರ ಸೇವನೆಯಿಂದ ನಿಮ್ಮ ಮುಖದ ಸೌಂದರ್ಯವನ್ನು ಕಾಪಾಡಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ಸ್ ಇದ್ದು, ಮುಖದ ಸುಕ್ಕನ್ನು ನಿವಾರಣೆ ಮಾಡುತ್ತದೆ. ಜತೆಗೆ ಕೂದಲ ಬೆಳವಣಿಗೆಗೂ ಸಹಾಯ ಮಾಡುತ್ತದೆ.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...