news18-kannada Updated:February 16, 2021, 11:41 AM IST
ಬ್ರೊಕೊಲಿ
ನಿಮ್ಮ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿಗಳನ್ನು ಸೇರಿಸಿ ಎಂದು ನಿಮಗೆ ಹಲವರು ಹೇಳಿರಬಹುದು. ಅದಕ್ಕೆ ಕಾರಣ ಈ ಹಸಿರು ತರಕಾರಿಗಳಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇವುಗಳಲ್ಲಿ ಬ್ರೊಕೊಲಿ ನಿಮ್ಮ ಆಹಾರದ ಒಂದು ಭಾಗವಾಗಿರಬೇಕು. ಬ್ರೊಕೊಲಿ ವಿವಿಧ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ವಿಟಮಿನ್ ಸಿ, ಝಿಂಕ್, ತಾಮ್ರ, ವಿಟಮಿನ್ ಬಿ, ಪ್ರೋಟೀನ್, ಫೈಬರ್, ಪೊಟ್ಯಾಶಿಯಮ್, ವಿಟಮಿನ್ ಕೆ ಹೊಂದಿದೆ.
ಇದು ಕ್ಯಾಲ್ಸಿಯಂ ಅನ್ನು ಒಳಗೊಂಡಿರುವ ಡೈರಿಯೇತರ ಮೂಲವಾಗಿದೆ. ಬ್ರೊಕೊಲಿಯನ್ನು ನೀವು ಸಲಾಡ್ನಿಂದ ಸೂಪ್ವರೆಗೆ ನಿಮ್ಮ ಆಹಾರ ಕ್ರಮಕ್ಕೆ ವಿವಿಧ ರೀತಿಯಲ್ಲಿ ಸೇರಿಸಬಹುದು. ಈ ಬಗ್ಗೆ ದೆಹಲಿ ಮೂಲದ ಪೌಷ್ಟಿಕಾಂಶ ತಜ್ಞರೊಬ್ಬರು ಈ ತರಕಾರಿಯನ್ನು ನೀವು ಮಿಸ್ ಮಾಡದಿರಲು ಕೆಲವು ಪ್ರಭಾವಶಾಲಿ ಕಾರಣಗಳನ್ನು ಹಂಚಿಕೊಂಡಿದ್ದಾರೆ.
''ಬ್ರೊಕೊಲಿಯಲ್ಲಿ ಸಲ್ಫೊರಾಫೇನ್ ಸಮೃದ್ಧ, ಹೇರಳವಾಗಿರುತ್ತದೆ. ಇದು ನೈಸರ್ಗಿಕವಾಗಿ ಸಂಭವಿಸುವ ಕ್ಯಾನ್ಸರ್ ಸ್ಲೇಯರ್ಸ್ ಅಲ್ಲಿ ಒಂದಾಗಿದೆ. ಸಲ್ಫೊರಾಫೇನ್ ಒಂದು ಫೈಟೋಕೆಮಿಕಲ್ ಆಗಿದ್ದು ಅದು ವಿಷವನ್ನು ಕಡಿಮೆ ಮಾಡುತ್ತದೆ. ಮತ್ತು ಆ ಮೂಲಕ ಅನೇಕ ರೀತಿಯ ಕ್ಯಾನ್ಸರ್ಗಳಿಗೆ ಸಂಬಂಧಿಸಿದ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಕ್ಯಾನ್ಸರ್ ಕೋಶಗಳ ತ್ವರಿತ ಗುಣಾಕಾರವನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಇದು ಇಂಡೋಲ್ -3 ಕಾರ್ಬಿನಾಲ್ ಮತ್ತು ಕೈಂಪ್ಫೆರಾಲ್ ಅನ್ನು ಸಹ ಹೊಂದಿದೆ, ಇದು ಉರಿಯೂತದ ವಿರುದ್ಧ ಹೋರಾಡುತ್ತದೆ ಮತ್ತು ವಿಷವನ್ನು ಕಡಿಮೆ ಮಾಡುತ್ತದೆ" ಎಂದು ಅವರು ಹೇಳುತ್ತಾರೆ.
ಬ್ರೊಕೊಲಿಯಲ್ಲಿ ಪೊಟ್ಯಾಷಿಯಂ ತುಂಬಿದ್ದು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ಕಬ್ಬಿಣ ಮತ್ತು ಪೊಟ್ಯಾಷಿಯಂ ಸೇರಿದಂತೆ ಅಗತ್ಯ ಪೋಷಕಾಂಶಗಳು ಬ್ರೊಕೊಲಿಯಲ್ಲಿ ಅಧಿಕವಾಗಿದೆ. ಪೌಷ್ಠಿಕಾಂಶ ತಜ್ಞರು ಇದು ಇತರ ತರಕಾರಿಗಳಿಗಿಂತ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೋಗಿ ಈ ತಪ್ಪನ್ನು ಮಾಡದಿರಿ
ಈ ಸೂಪರ್ ಗ್ರೀನ್ನಲ್ಲಿ ಫೈಬರ್ ಅಧಿಕವಾಗಿದ್ದು, ಕ್ವೆರ್ಸೆಟಿನ್ ನಂತಹ ಆ್ಯಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿದ್ದು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ತರಕಾರಿ ಮಧುಮೇಹಿಗಳಿಗೆ ಸಹ ಸುರಕ್ಷಿತವಾಗಿದೆ. ಇದು ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಫೈಬರ್ನಿಂದ ತುಂಬಿರುವುದರಿಂದ ಬ್ರೊಕೊಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹ ನಿಯಂತ್ರಣವನ್ನು ಸುಧಾರಿಸುತ್ತದೆ.
ನಿಯಂತ್ರಿತ ಕೊಲೆಸ್ಟ್ರಾಲ್ ಮಟ್ಟವು ಉತ್ತಮ ಹೃದಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಅಧ್ಯಯನಗಳ ಪ್ರಕಾರ, ಬ್ರೊಕೊಲಿಯಂತಹ ಫೈಬರ್ ಭರಿತ ಆಹಾರಗಳು ಒಟ್ಟಾರೆ ಹೃದ್ರೋಗದ ಅಪಾಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಫೈಬರ್ ಸಹಕಾರಿಯಾಗಿದೆ. ಇದು ಉತ್ತಮ ಕರುಳಿನ ಚಲನೆಯನ್ನು ಖಚಿತ ಪಡಿಸುತ್ತದೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
ಬ್ರೊಕೊಲಿಯಲ್ಲಿ ವಿಟಮಿನ್ ಸಿ ಕೂಡ ಇದೆ, ಇದು ನಿಮ್ಮ ರೋಗ ನಿರೋಧಕ ಶಕ್ತಿ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಪೌಷ್ಟಿಕತಜ್ಞರು ನೀವು ಬ್ರೊಕೊಲಿಯನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಹಬೆಯಲ್ಲಿ ಅಥವಾ ಸರಿಯಾಗಿ ಬೇಯಿಸಿದ ನಂತರ ಯಾವಾಗಲೂ ಅವುಗಳನ್ನು ಸೇವಿಸಬೇಕು ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ.
Published by:
Sushma Chakre
First published:
February 16, 2021, 11:41 AM IST