• Home
  • »
  • News
  • »
  • lifestyle
  • »
  • Skin Care: ಹೊಳೆಯುವ ಮತ್ತು ಆರೋಗ್ಯಕರ ಚರ್ಮಕ್ಕಾಗಿ ಚಳಿಗಾಲದಲ್ಲಿ ಹೀಗೆ ಪೋಷಣೆ ಮಾಡಿ!   

Skin Care: ಹೊಳೆಯುವ ಮತ್ತು ಆರೋಗ್ಯಕರ ಚರ್ಮಕ್ಕಾಗಿ ಚಳಿಗಾಲದಲ್ಲಿ ಹೀಗೆ ಪೋಷಣೆ ಮಾಡಿ!   

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚರ್ಮದ ಆರೈಕೆ ಮಾಡಲು ನೀವು ಸಿಪ್ಪೆ ಸುಲಿಯದಂತೆ ಕಾಪಾಡುವ ದ್ರಾವಣ ಮತ್ತು ಮುಖದ ಸೀರಮ್ ಬಳಕೆ ಮಾಡಿ. ಇವುಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ನಿಮ್ಮ ಚರ್ಮವನ್ನು ಪಿಗ್ಮೆಂಟೇಶನ್ ಡಾರ್ಕ್ ಸ್ಪಾಟ್‌ ಸಮಸ್ಯೆಯಿಂದ ಇದು ರಕ್ಷಿಸುತ್ತದೆ. ನೀವು ಮನೆಯಲ್ಲಿಯೇ ಸುಲಭವಾಗಿ ಸೀರಮ್ ತಯಾರಿಸಿ ಅನ್ವಯಿಸಬಹುದು.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ತ್ವಚೆಯ ಸಮಸ್ಯೆಗಳು (Skin Problems) ಹೆಚ್ಚು ಕಾಡುತ್ತವೆ. ಒಣ ತ್ವಚೆ (Dry Skin), ತ್ವಚೆ ಬಿರಿಯುವುದು, ತುಟಿ ಒಣಗುವುದು, ಸೀಳು ತುಟಿ, ಮುಖವೆಲ್ಲಾ ಡ್ರೈ ಆಗುವುದು, ಕೈ ಕಾಲು ಗಳ ಚರ್ಮದಲ್ಲಿ ಸಿಪ್ಪೆ ಏಳುವುದು ಸಾಮಾನ್ಯ ಸಮಸ್ಯೆ ಆಗಿದೆ. ಆದರೆ ಇದನ್ನು ಹಾಗೇ ಬಿಡಬೇಡಿ. ಯಾಕಂದ್ರೆ ಇದು ತ್ವಚೆಯನ್ನು ಹಾಳು ಮಾಡುತ್ತದೆ. ಹಾಗಾಗಿ ತ್ವಚೆಯನ್ನು ಹೊಳೆಯುವ ಮತ್ತು ಆರೋಗ್ಯಕರವಾಗಿ (Glowing And Healthy) ಇರಿಸಲು ಕೆಲವು ಮನೆ ಮದ್ದು (Home Remedy) ಟ್ರೈ ಮಾಡಿ. ನೀವು ಚರ್ಮದ ಆರೈಕೆಗೆ ಹಲವು ಉತ್ಪನ್ನಗಳನ್ನು ಬಳಸುತ್ತಿರಬಹುದು. ಆದರೆ ಅವುಗಳು ಹೆಚ್ಚು ಫಲಿತಾಂಶ ನೀಡದೇ ಇರಬಹುದು.


    ಚರ್ಮದ ಅರೈಕೆ


    ಚರ್ಮದ ಆರೈಕೆ ಮಾಡಲು ನೀವು ಸಿಪ್ಪೆ ಸುಲಿಯದಂತೆ ಕಾಪಾಡುವ ದ್ರಾವಣ ಮತ್ತು ಮುಖದ ಸೀರಮ್ ಬಳಕೆ ಮಾಡಿ. ಇವುಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ನಿಮ್ಮ ಚರ್ಮವನ್ನು ಪಿಗ್ಮೆಂಟೇಶನ್, ಡಾರ್ಕ್ ಸ್ಪಾಟ್‌ ಸಮಸ್ಯೆಯಿಂದ ಇದು ರಕ್ಷಿಸುತ್ತದೆ.


    ನೀವು ಮನೆಯಲ್ಲಿಯೇ ಸುಲಭವಾಗಿ ಸೀರಮ್ ತಯಾರಿಸಿ ಅನ್ವಯಿಸಬಹುದು. ತ್ವಚೆಯ ಸಮಸ್ಯೆ ಪರಿಹರಿಸಲು ಸುಲಭವಾದ ವಿಧಾನವಿದೆ. ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ನೀವು ಅದನ್ನು ಸುಲಭವಾಗಿ ತಯಾರಿಸಬಹುದು. ಹಾಗಾದ್ರೆ ಮನೆಯಲ್ಲೇ ಸೀರಮ್ ತಯಾರಿಸುವುದು ಹೇಗೆ ಎಂದು ನೋಡೋಣ.




    ಮನೆಯಲ್ಲಿಯೇ ಸೀರಮ್ ತಯಾರಿಸುವುದು ಹೇಗೆ?


    ಬೇಕಾಗುವ ಪದಾರ್ಥಗಳು


    ಸಕ್ಕರೆ, ಜೇನುತುಪ್ಪ, ಟೊಮ್ಯಾಟೋ ರಸ, ನಿಂಬೆ ರಸ, ನೀರು ಬೇಕು.


    ಮನೆಯಲ್ಲಿ ಸೀರಮ್ ತಯಾರಿಸುವ ವಿಧಾನ


    ಮೊದಲು ಒಂದು ಬಟ್ಟಲಿನಲ್ಲಿ ಕಾಲು ಕಪ್ ನೀರು ಬಿಸಿ ಮಾಡಿ. ಇದಕ್ಕೆ ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ನಿಂಬೆ ರಸ ಸೇರಿಸಿ. ಈಗ ಅದು ಸ್ವಲ್ಪ ಜಿಗುಟಾಗಿ ದಪ್ಪವಾಗುವವರೆಗೆ ಕುದಿಸಿ.


    ನಂತರ ಅದನ್ನು ಹೊರಗೆ ತೆಗೆದು ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಟೊಮೆಟೊ ರಸ ಹಾಕಿ ಮಿಶ್ರಣ ಮಾಡಿ. ಈಗ ದ್ರಾವಣ ಸಿದ್ಧವಾಗಿದೆ. ಅದನ್ನು ಬ್ರಷ್ ಅಥವಾ ಹತ್ತಿ ಸಹಾಯದಿಂದ ಮುಖಕ್ಕೆ ಅನ್ವಯಿಸಿ.


    ಹದಿನೈದು ನಿಮಿಷ ಇರಿಸಿ. ಹತ್ತಿ ಉಂಡೆಯ ಸಹಾಯದಿಂದ ಮುಖವನ್ನು ಸ್ವಚ್ಛಗೊಳಿಸಿ. ದಿನದಲ್ಲಿ ಎರಡು ಬಾರಿ ಅನ್ವಯಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.


    ಸೀರಮ್‌ ತಯಾರಿಸಲು ಆರೋಗ್ಯಕರ ಪಾಕವಿಧಾನ


    ಹಾಲು, ಅಕ್ಕಿ ನೀರು, ಗ್ಲಿಸರಿನ್, ಬಾದಾಮ್ ಎಣ್ಣೆ ತೆಗೆದುಕೊಳ್ಳಿ.


    ಒಂದು ಸಣ್ಣ ಬಟ್ಟಲಿಗೆ 2 ಚಮಚ ಹಾಲು, 2 ಚಮಚ ಅಕ್ಕಿ ನೀರು ಹಾಕಿರಿ. ಇದಕ್ಕೆ 1 ಚಮಚ ಗ್ಲಿಸರಿನ್ ಮತ್ತು 1 ಚಮಚ ಬಾದಾಮಿ ಎಣ್ಣೆ ಹಾಕಿ ಮಿಶ್ರಣ ಮಾಡಿ. ಮುಚ್ಚಿಡಿ.


    ಸಾಂದರ್ಭಿಕ ಚಿತ್ರ


    ಪ್ರತಿದಿನ 4 ರಿಂದ 5 ಹನಿ ಚರ್ಮಕ್ಕೆ ಅನ್ವಯಿಸಿ, ಲಘುವಾಗಿ ಮಸಾಜ್ ಮಾಡಿ. ನಿರಂತರವಾಗಿ ಏಳು ದಿನ ಅನ್ವಯಿಸಿ. ಚರ್ಮದ ಸ್ಥಿತಿಯಲ್ಲಿ ಬದಲಾವಣೆ ಕಾಣಿಸುತ್ತದೆ.


    ಸೀರಮ್‌ ಕೆಲವು ಪ್ರಮುಖ ಪ್ರಯೋಜನಗಳು


    ಸೀರಮ್ ಚರ್ಮವನ್ನು ಆರ್ಧ್ರಕಗೊಳಿಸಿ, ಹೈಡ್ರೀಕರಿಸುತ್ತದೆ. ಅಕ್ಕಿ ನೀರು ವಯಸ್ಸಾದ ವಿರೋಧಿ ಗುಣಲಕ್ಷಣ ಹೊಂದಿದೆ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.


    ಸ್ಕಿನ್ ಟೋನ್ ನಾರ್ಮಲ್ ಆಗಿರಿಸುತ್ತದೆ. ಹಾಲಿನಲ್ಲಿರುವ ಪೋಷಕಾಂಶಗಳು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತವೆ. ಮೊಡವೆಗಳ ಸಮಸ್ಯೆ ನಿವಾರಿಸುತ್ತದೆ. ಚರ್ಮಕ್ಕೆ ತೇವಾಂಶ ನೀಡುತ್ತದೆ.


    ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!


    ಗ್ಲಿಸರಿನ್ ಚರ್ಮದ ಹೊರ ಮೇಲ್ಮೈಯನ್ನು ತೇವಗೊಳಿಸುತ್ತದೆ. ಚಳಿಗಾಲದಲ್ಲಿ ಪ್ರಯೋಜನಕಾರಿ. ಬಾದಾಮಿ ಎಣ್ಣೆ ಆಂಟಿವೈರಲ್ ಮತ್ತು ಆಂಟಿಫಂಗಲ್ ಚಟುವಟಿಕೆ ಚರ್ಮದ ಸೋಂಕಿನಿಂದ ರಕ್ಷಿಸುತ್ತದೆ.

    Published by:renukadariyannavar
    First published: