ಮನುಷ್ಯನ ದೇಹದಲ್ಲಿ ಅತಿ ಸೂಕ್ಷ್ಮವಾದ ಮತ್ತು ಅತ್ಯಂತ ಸುಂದರವಾದ ಭಾಗಗಳು ಎಂದರೆ ಕಣ್ಣುಗಳು (Eyes) ಆಗಿವೆ. ನಾವು ಈ ಜಗತ್ತಿನ ಸುಂದರತೆಯನ್ನು ನೋಡುವುದಕ್ಕೆ ಸಹಾಯಕಾರಿಯಾಗಿವೆ. ಆದರೆ ಪ್ರಚಲಿತ ದಿನಗಳಲ್ಲಿ ಎಲ್ಲರ ಕಣ್ಣುಗಳು ತಮ್ಮ ಆರೋಗ್ಯವನ್ನು (Healthy) ಮತ್ತು ಸಹಜ ಸುಂದರತೆಯನ್ನು ಕಳೆದುಕೊಳ್ಳುತ್ತಿವೆ ಎಂದರೆ ತಪ್ಪಾಗಲಾರದು. ಇತ್ತಿಚೀಗೆ ಹೈಪರ್ ಪಿಂಗ್ಮಟೇಷನ್ನಿಂದ (Hyperpigmentation) ಎಲ್ಲರ ಕಣ್ಣುಗಳ ಸುತ್ತ ಕಪ್ಪಾಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿರುವ ಸಾಮಾನ್ಯ ಲಕ್ಷಣವಾಗಿದೆ. ಕಣ್ಣುಗಳು ಮುಖದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿವೆ. ಆದರೆ ಪರದೆಯ ಮುಂದೆ ಗಂಟೆಗಟ್ಟಲೆ ಕೂರುವುದು ಮತ್ತು ದೇಹಕ್ಕೆ ಸಾಕಷ್ಟು ನಿದ್ದೆ ಸಾಕಾಗದೇ ಇರುವುದು ನಮ್ಮನ್ನು ದಣಿದಂತೆ ಮತ್ತು ದಣಿಯುವಂತೆ ಮಾಡುತ್ತದೆ.
ಡಾ. ಸ್ವಾತಿ ಟಕ್ಕರ್, ಕಾಸ್ಮೆಟಾಲಜಿಸ್ಟ್, ಡರ್ಮಾ ಎಸೆನ್ಷಿಯಾ, HT ಲೈಫ್ಸ್ಟೈಲ್ನೊಂದಿಗೆ ಮಾತನಾಡಿದ ಇವರು “ಆಧುನಿಕ ಕಾಯಿಲೆಗಳಾದ ಒತ್ತಡ, ನಿದ್ರೆಯ ಕೊರತೆ ಮತ್ತು ದೀರ್ಘಕಾಲದ ಕಂಪ್ಯೂಟರ್ ಬಳಕೆಯು ನಿಮ್ಮ ಕಣ್ಣುಗಳು ಜೋತು ಬೀಳುವ ಹಾಗೆ ಮಾಡುತ್ತವೆ ಎಂದು ಹೇಳುತ್ತಾರೆ. ಕಣ್ಣುಗಳು ಅತಿ ಹೆಚ್ಚು ದಣಿದರೆ ಕಣ್ಣಿನ ಕೆಳಗಿರುವ ತೆಳ್ಳಗಿನ ಚರ್ಮದಲ್ಲಿರುವ ರಕ್ತನಾಳಗಳು ಮತ್ತು ಸ್ನಾಯುಗಳಿಗೆ ವಿಶ್ರಾಂತಿಯೇ ದೊರಕುವುದಿಲ್ಲ. ಆಗ ಕಣ್ಣುಗಳ ಸುತ್ತ ಕಪ್ಪಾಗಿ ಅಥವಾ ಪಿಗ್ಮಟೆಂಷನ್ ನಿಂದ ಕೂಡಿದ ರೀತಿ ಕಾಣುತ್ತವೆ.
ಮತ್ತೊಬ್ಬ ಡಾ. ಜಾನೆಟ್ ಅಲೆಕ್ಸಾಂಡರ್ ಕ್ಯಾಸ್ಟೆಲಿನೊ, ಡರ್ಮಟಾಲಜಿಸ್ಟ್, ಡರ್ಮಝೀಲ್ ಕ್ಲಿನಿಕ್, ಇವರು HT ಲೈಫ್ಸ್ಟೈಲ್ಗೆ ನೀಡಿದ ಸಂದರ್ಶನದಲ್ಲಿ , ಕಣ್ಣುಗಳು ಟೊಳ್ಳಾದ, ಮಂದ ಮತ್ತು ಗುಳಿಬಿದ್ದಂತೆ ಕಾಣುವುದಕ್ಕೆ ಕೆಲವು ಕಾರಣಗಳನ್ನು ಇಲ್ಲಿ ಪಟ್ಟಿಮಾಡಿದ್ದಾರೆ. ಅವುಗಳನ್ನು ನಾವು ನಿಮಗೆ ಹೊತ್ತು ತಂದಿದ್ದೇವೆ:
ನಿರ್ಜಲೀಕರಣ
ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವುದಕ್ಕೆ ನಿರ್ಜಲೀಕರಣ ಎಂದು ಹೇಳುತ್ತಾರೆ. ಈ ಕಣ್ಣುಗಳ ಕೆಳಗೆ ಮಂದ, ಟೊಳ್ಳಾದ ಮತ್ತು ಗುಳಿಬಿದ್ದಂತೆ ಕಂಡು ಬಂದರೆ ನೀವು ಕೂಡಲೇ ಹೆಚ್ಚು ನೀರು ಕುಡಿಯುವುದು ಅವಶ್ಯಕ ಆಗಿರುತ್ತದೆ. ದಿನವಿಡೀ ಹೈಡ್ರೇಟೆಡ್ ಆಗಿರುವುದು ಇಲ್ಲಿ ಮುಖ್ಯವಾಗುತ್ತದೆ..
ಅಟೊಪಿಕ್ ಡರ್ಮಟೈಟಿಸ್
"ನೀವು ಧೂಳಿನ ಅಲರ್ಜಿ ಅಥವಾ ಉಬ್ಬಸ ಸ್ಥಿತಿಯನ್ನು ಹೊಂದಿದ್ದರೆ, ಅಟೊಪಿಕ್ ಡರ್ಮಟೈಟಿಸ್ ಎಂಬ ಚರ್ಮದ ಪ್ರಕಾರದ ಸ್ಥಿತಿಯನ್ನು ನೀವು ಹೊಂದಿರುತ್ತೀರಿ ಎಂದರ್ಥವಾಗಿದೆ. ಇದು ಶುಷ್ಕ ಮತ್ತು ಕಿರಿಕಿರಿಯುಂಟುಮಾಡುವ ಚರ್ಮವಾಗಿದೆ. ಇದರಿಂದ ನಿಮಗೆ ಪದೇ-ಪದೇ ಕಣ್ಣುಗಳನ್ನು ಉಜ್ಜಿಕೊಳ್ಳಬೇಕು ಎಂದು ಅನಿಸಬಹುದು" ಎಂದು ಡಾ. ಜಾನೆಟ್ ಅಲೆಕ್ಸಾಂಡರ್ ಕ್ಯಾಸ್ಟೆಲಿನೊ ಹೇಳಿದ್ದಾರೆ. ಇದರಿಂದ ಕಣ್ಣಿನ ಈ ಸ್ಥಿತಿಯು ಇನ್ನು ಹೆಚ್ಚು ಕಪ್ಪು ವಲಯಗಳನ್ನು ಉಂಟು ಮಾಡುತ್ತದೆ.
ಕಣ್ಣಿನ ದೋಷಗಳು
ಇದರಿಂದ ಜನರಲ್ಲಿ ಮತ್ತಷ್ಟು ಒತ್ತಡ ಜಾಸ್ತಿಯಾಗಬಹುದು ಅವರು ಇದರಿಂದ ಕಣ್ಣುಗಳನ್ನು ಹೆಚ್ಚು ಉಜ್ಜಿಕೊಳ್ಳಬಹುದು. ಇದು ಕೂಡ ಕಣ್ಣಿನ ಕೆಳಗೆ ಕಪ್ಪಾಗುವುದಕ್ಕೆ ಮುಖ್ಯ ಕಾರಣ. ಇದನ್ನು ತಪ್ಪಿಸಲು ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
ಹೈಪರ್ ಪಿಗ್ಮೆಂಟೆಷನ್
ಕೆಲವು ಸೌಂದರ್ಯವರ್ಧಕಗಳು ಮತ್ತು ಕಣ್ಣಿಗೆ ಹಾಕುವ ಹನಿಗಳು ಸಹ ಕಣ್ಣಿನ ಕೆಳಗಿರುವ ಸೂಕ್ಷ್ಮ ಚರ್ಮವನ್ನು ಹಾಳು ಮಾಡಬಹುದು ಮತ್ತು ಇದು ಹೈಪರ್ಪಿಗ್ಮೆಂಟೇಶನ್ ಗೆ ಕಾರಣವಾಗಬಹುದು.
ಪೌಷ್ಠಿಕಾಂಶದ ಕೊರತೆ
ಕೆಲವು ಪೌಷ್ಟಿಕಾಂಶದ ಕೊರತೆಗಳು ಕಣ್ಣು ಕಪ್ಪಾಗುವುದಕ್ಕೆ ಮುಖ್ಯವಾಗಿ ನೇರ ಸಂಬಂಧವನ್ನು ಹೊಂದಿವೆ. ಈ ಸಂದರ್ಭದಲ್ಲಿ ಚರ್ಮರೋಗ ವೈದ್ಯರೊಂದಿಗೆ ಸಮಾಲೋಚಿಸಿ ರಕ್ತ ಪರೀಕ್ಷೆ ಮಾಡಿಸಿ ಅವರ ಸಲಹೆಯನ್ನು ಪಡೆಯುವುದು ಉತ್ತಮ, ಇದು ಇದನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಕಣ್ಣೀರಿನ ತೊಟ್ಟಿ
ಕಣ್ಣೀರಿನ ತೊಟ್ಟಿ ಎಂದು ಕರೆಯಲ್ಪಡುವ ಕಣ್ಣಿನ ಸುತ್ತವಿರುವ ಆ ಟೊಳ್ಳಾದ ಮೂಳೆ ರಚನೆಯು ಕಪ್ಪಾಗಿರುವ ಪರಿಣಾಮವನ್ನು ಉಂಟುಮಾಡುತ್ತದೆ. ಇದು ನೇರವಾಗಿ ಡಾರ್ಕ್ ಸರ್ಕಲ್ ಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ, ಕಣ್ಣಿನ ಫಿಲ್ಲರ್ಗಳು ಈ ಪ್ರದೇಶವನ್ನು ಸುಧಾರಿಸುವ ಮತ್ತು ಬೆಳ್ಳಗಾಗಿಸಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: Health Tips: ದಿಢೀರ್ ಫುಡ್ ಪಾಯ್ಸನ್ ಆದ್ರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ
ಡಾ. ಸ್ವಾತಿ ಟಕ್ಕರ್ ಅವರು ಕಣ್ಣಿನ ಕೆಳಗಿರುವ ಪ್ರದೇಶವನ್ನು ಪ್ರಕಾಶಮಾನವಾಗಿ ಮತ್ತು ಉತ್ತಮಗೊಳಿಸಲು ಸಹಾಯ ಮಾಡುವ ಕೆಲವು ಸಲಹೆಗಳನ್ನು ಹೇಳಿದ್ದಾರೆ, ಇಲ್ಲಿ ಕೇಳಿ. ಇವೆಲ್ಲವನ್ನು ಮಾಡಿದ ನಂತರ ಈ ಸಲಹೆಗಳು ನಮ್ಮ ಕಣ್ಣುಗಳು ತಾಜಾ ಮತ್ತು ಯಂಗ್ ಆಗಿ ಕಾಣುವಂತೆ ಮಾಡುತ್ತವೆ.
ಕೋಲ್ಡ್ ಟೀ ಬ್ಯಾಗ್ಗಳು
ಟೀ ಬ್ಯಾಗ್ಗಳ ಉತ್ಕರ್ಷಣ ನಿರೋಧಕಗಳು ಮತ್ತು ಕೆಫೀನ್ ಅಂಶವು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಮತ್ತು ದ್ರವದ ಧಾರಣವನ್ನು ಕಡಿಮೆ ಮಾಡಲು ಈ ಕೆಲಸ ಮಾಡುತ್ತದೆ, ಇದು ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೀ ಅಲ್ಲಿರುವ ಟ್ಯಾನಿನ್ಗಳು ಬಣ್ಣವನ್ನು ಕಡಿಮೆ ಮಾಡುತ್ತದೆ.
ತಣ್ಣಗಿರುವ ಸೌತೆಕಾಯಿ
ಕೆಲವು ಸೌತೆಕಾಯಿ ಚೂರುಗಳನ್ನು ಕತ್ತರಿಸಿ ಫ್ರೀಜರ್ನಲ್ಲಿ ತಣ್ಣಗಾಗಲು ಇಡಬೇಕು. ತಣ್ಣಗಾದ ಸೌತೆಕಾಯಿಯ ಈ ಹೋಳುಗಳನ್ನು ನಿಮ್ಮ ಕಣ್ಣುರೆಪ್ಪೆಗಳ ಮೇಲೆ ಇರಿಸಿಕೊಂಡು ಸ್ವಲ್ಪ ಸಮಯ ರೆಸ್ಟ್ ತೆಗೆದುಕೊಳ್ಳುವುದರಿಂದ ನೀವು ಡಾರ್ಕ್ ಸರ್ಕಲ್ ಇಲ್ಲವಾಗಿಸಿಕೊಳ್ಳಬಹುದು. ನಿಮ್ಮ ಕಣ್ಣುಗಳ ಸುತ್ತಲಿನ ಎಡಿಮಾ ಮತ್ತು ಪಫಿನೆಸ್ ಅಂಶವು ಕೂಡ ಸಹ ಕಡಿಮೆಯಾಗುತ್ತದೆ. ಸೌತೆಕಾಯಿಗಳು ಪ್ರಬಲವಾದ ಫ್ಲೇವನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಕಣ್ಣುಗಳ ಸುತ್ತಲಿನ ಪ್ರದೇಶವನ್ನು ಬೆಳ್ಳಗಾಗಿಸುತ್ತದೆ ಮತ್ತು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ.
ಹಿತವಾದ ಮಸಾಜ್
ನೀವು ಸಮಯ ಸಿಕ್ಕಾಗೆಲ್ಲ ಕಣ್ಣಿನ ಸುತ್ತಲೂ ಆಗಾಗ ಮಸಾಜ್ ಮಾಡುತ್ತಿದ್ದರೆ, ಕಣ್ಣುಗಳ ಸುತ್ತಲೂ ಆಗುವ ಊತ ಕಡಿಮೆ ಆಗುತ್ತದೆ ಮತ್ತು ಸೂಕ್ಷ್ಮವಾದ ಕಣ್ಣಿನ ಪ್ರದೇಶಕ್ಕೆ ಮಿತವಾಗಿ ರಕ್ತದ ಹರಿವನ್ನು ಹರಿಸುತ್ತದೆ. ನಿಮ್ಮ ತೋರು ಬೆರಳಿನಿಂದ ಮೃದುವಾಗಿ ಮಸಾಜ್ ಮಾಡಿ. ಆಗ ಉತ್ತಮ ರಿಸಲ್ಟ್ ನಿಮ್ಮದಾಗುತ್ತದೆ.
ಟೊಮ್ಯಾಟೊ ಬಳಸಿ
ತ್ವಚೆ, ದೃಷ್ಟಿ ಮತ್ತು ಹೃದಯರಕ್ತನಾಳದ ಆರೋಗ್ಯಕ್ಕೆ ಉತ್ತಮವಾದ ಲೈಕೋಪೀನ್ ಟೊಮೆಟೊಗಳಲ್ಲಿ ಹೇರಳವಾಗಿದೆ. ಹತ್ತಿ ಪ್ಯಾಡ್ ಬಳಸಿ, ಮತ್ತು ಸಮ ಪ್ರಮಾಣದಲ್ಲಿ ಟೊಮೆಟೊ ರಸ ಮತ್ತು ನಿಂಬೆ ರಸವನ್ನು ಹಚ್ಚಿ.
ಎಣ್ಣೆ ಮಸಾಜ್
ನಿಮ್ಮ ಕಣ್ಣುಗಳ ಕೆಳಗೆ ತೆಂಗಿನ ಎಣ್ಣೆ, ಅರ್ಗಾನ್ ಎಣ್ಣೆ ಅಥವಾ ವಿಟಮಿನ್ ಇ ಎಣ್ಣೆಯಿಂದ ಎಣ್ಣೆ ಮಸಾಜ್ ಮಾಡಿ ಇದರಿಂದ ಅದ್ಭುತ ಪರಿಹಾರ ನಿಮಗೆ ಸಿಗುವುದರಲ್ಲಿ ಡೌಟೇ ಬೇಡ.
ತಣ್ಣನೆಯ ಹಾಲು
ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಹಗುರವಾಗಿಸಲು ಮತ್ತು ಸುಕ್ಕುಗಳು ಮತ್ತು ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಣ್ಣನೆಯ ಹಾಲಿನಲ್ಲಿ ಅದ್ದಿದ ಹತ್ತಿ ಉಂಡೆಗಳನ್ನು ಕಣ್ಣಿನ ಸುತ್ತ ಹಚ್ಚಿ, ನಂತರ ಸುಮಾರು 20 ನಿಮಿಷಗಳ ನಂತರ ತೊಳೆಯಿರಿ.
ಇದನ್ನೂ ಓದಿ: Strong Hair Tips: ಕೂದಲು ಉದುರುವುದು ತಡೆಯಲು, ಆಂತರಿಕ ಪೋಷಣೆಗೆ ತಜ್ಞರು ಹೇಳಿದ ಆಹಾರ ಪದಾರ್ಥಗಳು ಹೀಗಿವೆ
ಸಾಕಷ್ಟು ನಿದ್ದೆ ಮಾಡಿ
ರಾತ್ರಿ ಯಾವುದೇ ಕಾರಣಕ್ಕೂ ನಿದ್ದೆ ಮಾಡುವುದು ಬಿಡಬೇಡಿ. ರಾತ್ರಿ ನಿದ್ದೆ ಉತ್ತಮವಾಗಿದ್ದರೆ ನಮ್ಮ ದೇಹವು ಆರೋಗ್ಯದಿಂದ ಇರುತ್ತದೆ.
ಹೀಗೆ ಕಣ್ಣುಗಳ ರಕ್ಷಣೆ ನಮಗೆಲ್ಲ ತುಂಬಾನೇ ಮುಖ್ಯವಾದ ವಿಷಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ