Relationship Tips: ಹಸೆಮಣೆ ಏರುವ ಮೊದಲು ವಧು ಈ ವಿಷಯ ತಿಳಿದರೆ ದಾಂಪತ್ಯ ಮತ್ತಷ್ಟು ಸುಂದರ

ಹುಡುಗ ಮತ್ತು ಹುಡುಗಿ ಪರಸ್ಪರ ಅನುಕೂಲತೆ ಆಲೋಚನೆ ಇತ್ಯಾದಿಗಳ ಬಗ್ಗೆ ಅರ್ಥ ಮಾಡಿಕೊಂಡರೆ ಮದುವೆಯ ನಂತರ ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತದೆ. ನೀವು ಯಾರನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದು ಮುಖ್ಯವಲ್ಲ. ಮದುವೆಗೆ ಮುನ್ನ ಅನೇಕ ವಿಷಯ ಮತ್ತು ತಿಳುವಳಿಕೆ ಹೊಂದಿರುವುದು ಅವಶ್ಯಕ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದಿನ ದಿನಗಳಲ್ಲಿ ಮದುವೆ (Marriage) ಅಂದ್ರೆ ಮಾರುದ್ದ ದೂರ (Distance) ಓಡುವವರೂ (Run) ಇದ್ದಾರೆ. ಬೇಗ ಮದುವೆಯಾಗಿ ಬಿಡೋಣ ಎಂದುಕೊಳ್ಳುವವರೂ ಇದ್ದಾರೆ. ಇನ್ನು ಕೆಲವರು ಮದುವೆ ಸಹವಾಸನೇ ಬೇಡ ಎಂದು ಸಿಂಗಲ್ಲಾಗೇ (Single) ಇರ್ತಾರೆ. ಆದ್ರೆ ಇಂದಿನ ಕಾಲಘಟ್ಟದಲ್ಲಿ ಹುಡುಗ ಮತ್ತು ಹುಡುಗಿ ಮದುವೆಗೆ ಮೊದಲೇ ಪರಸ್ಪರ ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. ತಮ್ಮ ಸಂಬಂಧದಲ್ಲಿ ಇಬ್ಬರೂ ಒಟ್ಟಿಗೆ ಸಾಕಷ್ಟು ಸಮಯ ಕಳೆಯಲು ನಿರ್ಧರಿಸುತ್ತಾರೆ. ಪರಸ್ಪರ ಸಾಕಷ್ಟು ಅರ್ಥ ಮಾಡಿಕೊಂಡ ನಂತರವಷ್ಟೇ ಮದುವೆಯ ಬಂಧನಕ್ಕೆ ಹೆಜ್ಜೆ ಇಡುತ್ತಾರೆ. ಮದುವೆಗೆ ಮುನ್ನ ಹುಡುಗ ಮತ್ತು ಹುಡುಗಿ ತಮ್ಮ ಇಷ್ಟ, ನ್ಯೂನತೆಗಳ ಬಗ್ಗೆ ಶೇರ್ ಮಾಡಿಕೊಳ್ತಾರೆ.

  ಹುಡುಗ ಮತ್ತು ಹುಡುಗಿ ಪರಸ್ಪರ ಅನುಕೂಲತೆ, ಆಲೋಚನೆ ಇತ್ಯಾದಿಗಳ ಬಗ್ಗೆ ಅರ್ಥ ಮಾಡಿಕೊಂಡರೆ, ಮದುವೆಯ ನಂತರ ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತದೆ. ನೀವು ಯಾರನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದು ಮುಖ್ಯವಲ್ಲ. ಡೇಟಿಂಗ್ ಹೋಗುವುದು ಮತ್ತು ಒಟ್ಟಿಗೆ ಜೀವನಪೂರ್ತಿ ಒಂದು ಸಂಬಂಧ ಮತ್ತು ಬಂಧನದಲ್ಲಿ ವಾಸಿಸುವುದು ಎರಡು ವಿಭಿನ್ನ ವಿಷಯಗಳಾಗಿವೆ.

  ಮದುವೆಗೆ ಮುನ್ನ ಅನೇಕ ವಿಷಯ ಮತ್ತು ತಿಳುವಳಿಕೆ ಹೊಂದಿರುವುದು ಅವಶ್ಯಕ. ಪ್ರತಿ ಹುಡುಗಿಯೂ ತನ್ನ ಸಂಬಂಧ ಮುಂದುವರೆಸುವ ಮೊದಲು ಹಲವರಿಂದ ಸಲಹೆ ಪಡೆಯುತ್ತಾಳೆ. ಮತ್ತು ಮದುವೆಯ ನಂತರ ವೈವಾಹಿಕ ಜೀವನ ನಡೆಸುವ ಬಗ್ಗೆಯೂ ಹಿರಿಯರಿಂದ ಸಲಹೆ

  ಇದನ್ನೂ ಓದಿ: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ

  ಅಥವಾ ಅವರನ್ನು ನೋಡಿ ಕಲಿಯುತ್ತಾಳೆ. ಹಾಗಾದ್ರೆ ಹುಡುಗಿಯರು ಮದುವೆಗೂ ಮೊದಲು ಮತ್ತು ಮದುವೆಯ ನಂತರ ತಮ್ಮ ಸಂಬಂಧದ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು? ಎಂಬುದನ್ನು ಇಲ್ಲಿ ನೋಡೋಣ.

  ಮದುವೆ ನಿಶ್ಚಯಗೊಂಡಿರುವ ವರನೊಂದಿಗೆ ಮುಕ್ತವಾಗಿ ಮಾತನಾಡಿ

  ಮದುವೆ ನಿಶ್ಚಯಗೊಂಡ ಬಳಿಕ ಅಥವಾ ಎಂಗೇಜ್ಮೆಂಟ್ ನಂತರ ಹುಡುಗಿ ತನ್ನ ಮನಸ್ಸಿನಲ್ಲಿರುವ ಸಮಸ್ಯೆಯನ್ನು ಹುಡುಗನ ಜೊತೆ ಮುಕ್ತವಾಗಿ ಶೇರ್ ಮಾಡಬೇಕು. ಭಾವಿ ಪತಿಯೊಂದಿಗೆ ಮಾತನಾಡಬೇಕು. ಏನೇ ವಿಷಯ ಮತ್ತು ಸಂಶಯವಿದ್ದರೆ ಅದನ್ನೂ ಮಾತನಾಡಿ ಕ್ಲಿಯರ್ ಮಾಡಿಕೊಳ್ಬೇಕು.

  ನಿಮ್ಮ ಮನಸ್ಸಿನಲ್ಲಿನ ಸಂದಿಗ್ಧತೆಯನ್ನು ಮದುವೆಗೂ ಮೊದಲು ಕ್ಲಿಯರ್ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಉಳಿಸಿಕೊಂಡರೆ ಮದುವೆ ನಂತರ ಸಂಬಂಧದಲ್ಲಿ ಸಮಸ್ಯೆ ಉಂಟಾಗಬಹುದು. ಹಾಗಾಗಿ ಮೊದಲು ಎಲ್ಲಾ ಸಂದಿಗ್ಧತೆಯನ್ನು ಮಾತನಾಡಿ, ಮುಗಿಸಿ.

  ಮಕ್ಕಳು ಹಾಗೂ ಗಂಡನಿಗೆ ಸಮನಾದ ಪ್ರಾಮುಖ್ಯತೆ ನೀಡಿ

  ಮದುವೆಯ ನಂತರ ಮಕ್ಕಳಾಗುತ್ತವೆ. ಮಕ್ಕಳಾದ ನಂತರ ತಾಯಿಗೆ ಹೆಚ್ಚು ಗಮನ ಮಕ್ಕಳ ಮೇಲೆಯೇ ಇರುತ್ತದೆ. ಮದುವೆಯ ನಂತರ ಮಕ್ಕಳಾದ ನಂತರ ಗಂಡ-ಹೆಂಡತಿ ಪರಸ್ಪರ ಸಮಯ ನೀಡಲು, ಗಮನ ಹರಿಸಲು ಸಾಧ್ಯವಾಗದೇ ಸಾಕಷ್ಟು ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಳ್ತಾರೆ. ಹೆಂಡತಿ ಹೆಚ್ಚು ಮಗುವಿನತ್ತ ಕೇರ್ ಮಾಡುವುದು ಗಂಡನಿಗೆ ಕೇರ್ ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು ಜಗಳ,

  ಮನಸ್ತಾಪಕ್ಕೂ ಕಾರಣವಾಗಬಹುದು. ಹಾಗಾಗಿ ನೀವು ಮಗು ಮತ್ತು ಗಂಡ ಇಬ್ಬರಿಗೂ ಸಮಾನವಾದ ಪ್ರಾಮುಖ್ಯತೆ ನೀಡಿ. ಆರೋಗ್ಯಕರ ಸಂಬಂಧಕ್ಕೆ ಪ್ರಾಮುಖ್ಯತೆ ನೀಡಿ. ಮಕ್ಕಳಾದ ಮೇಲೂ ಗಂಡನಿಗೆ ಮದುವೆಗೆ ಮುಂಚೆ ಕೊಡುತ್ತಿದ್ದ ಪ್ರಾಮುಖ್ಯತೆ ಕೊಡಿ. ಮಗು ಮತ್ತು ಗಂಡನ ನಡುವೆ ಸಮತೋಲನ ಕಾಪಾಡಿ.

  ಸಂಬಂಧದಲ್ಲಿ ಉಂಟಾಗುವ ಜಗಳ, ಮನಸ್ತಾಪವನ್ನು ದೊಡ್ಡದು ಮಾಡಬೇಡಿ

  ಮದುವೆಯ ನಂತರ ದಂಪತಿ ಮಧ್ಯೆ ಜಗಳ, ಮನಸ್ತಾಪ ಕಾಮನ್ ಆಗಿರುತ್ತದೆ. ಆದರೆ ಇದನ್ನೇ ದೊಡ್ಡದು ಮಾಡಬೇಡಿ. ಮಾತಿಗೆ ಮಾತು ಬೆಳೆಸುವ ಮುನ್ನ, ನಾನ್ಯಾಕೆ ಸೋಲಬೇಕು? ನೀನ್ಯಾಕೆ ಗೆಲ್ಲಬೇಕು ಎಂಬ ಭಿನ್ನಾಭಿಪ್ರಾಯ, ಭಾವನೆ ಬಿಟ್ಟು ಸೋತು ಗೆಲ್ಲಿ. ಸದಾ ನಗುತ್ತಾ, ತಾಳ್ಮೆಯಿಂದ ಇರಿ. ಹತ್ತು ಮಾತಿಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ. ಸೋಲು ಗೆಲುವಿನ ಭಾವನೆಯಿಂದ ಸದಾ ದೂರವಿರಿ. ಜಗಳ ಮತ್ತು ಮನಸ್ತಾಪವನ್ನು ಬೇಗ ಕೊನೆಗೊಳಿಸಿ.

  ಮದುವೆಯ ನಂತರ ಸಮಯ ಸಿಕ್ಕಾಗ ಡೇಟಿಂಗ್ ಹೋಗಿ

  ಮದುವೆಯ ನಂತರ ಸಮಯ ಕಳೆದಂತೆ, ದಂಪತಿ ಹೊರಗೆ ಸುತ್ತಾಡಲು ಮತ್ತು ಡೇಟಿಂಗ್ ಹೋಗಲು ಸಮಯ ಸಿಗದೇ ಒದ್ದಾಡುತ್ತಾರೆ. ಕೆಲವೊಮ್ಮೆ ಇದೇ ವಿಷಯವಾಗಿ ಜಗಳ ಮತ್ತು ಮನಸ್ತಾಪ ಕೂಡ ಉಂಟಾಗಬಹುದು. ಇದು ಪ್ರೀತಿಯಲ್ಲಿ ವಿರಸ ಹಾಗೂ ಕೆಟ್ಟ ಭಾವನೆ ಉಂಟು ಮಾಡಬಹುದು.

  ಹಾಗಾಗಿ ಯಾವುದಾದರೊಂದು ದಿನಾಂಕವನ್ನು ಗುರತು ಮಾಡಿ, ಇದೇ ದಿನಾಂಕದಂದು ಹೊರಗೆ, ಪಾರ್ಟಿಗೆ ಮತ್ತು ಡೇಟಿಂಗ್ ಹೋಗಲು ನಿರ್ಧರಿಸುವ ಬದಲು ಸಮಯ ಸಿಕ್ಕಾಗ ಪ್ರೀತಿ ಹಂಚಿ. ಡೇಟಿಂಗ್ ಹೋಗಿ.

  ಪ್ರತಿ ಮುಂಜಾನೆಯನ್ನೂ ಹೊಸದಾಗಿ ಸ್ವಾಗತಿಸಿ

  ರಾತ್ರಿಯ ಜಗಳ ಅಥವಾ ಬೆಳಗಿನ ಮನಸ್ತಾಪ ಯಾವುದೇ ಇರಲಿ, ನಿಮ್ಮ ಮಾರನೇ ದಿನವನ್ನು ಎಲ್ಲಾ ಚಿಂತೆ ಮರೆತು ಹೊಸ ದಿನವನ್ನು ಹೊಸದಾಗಿ ನಗು ನಗುತ್ತ ಸ್ವಾಗತಿಸಿ. ಪ್ರೀತಿಯ ಮಾಧುರ್ಯವನ್ನು ಸಂಬಂಧದಲ್ಲಿ ಮತ್ತೆ ಸೇರಿಸಿ. ರಾತ್ರಿಯ ಜಗಳವನ್ನು ಮುಂಜಾನೆ ಮರೆತು ಪ್ರೀತಿಯಿಂದ ಇರಿ. ಕೋಪ ಬಿಟ್ಟು ಶಾಂತಿಯಿಂದ ಇರಿ.

  ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

  ಪರಸ್ಪರ ಸ್ಥಳಾವಕಾಶ ನೀಡಿ

  ಯಾವುದೇ ಸಂಬಂಧದಲ್ಲಿ ಪರಸ್ಪರ ಪತಿ ಮತ್ತು ಪತ್ನಿ ಸ್ಥಳಾವಕಾಶ ನೀಡಿ. ಪತಿ ಎಲ್ಲೋ ಕೆಲಸ ಮಾಡುತ್ತಿದ್ದರೆ ಮತ್ತು ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಹೊರಗೆ ಹೋಗಲು ಅನುಮತಿ ನೀಡಿ. ಸಂಬಂಧ ಉಸಿರುಗಟ್ಟದಿರಲಿ.
  Published by:renukadariyannavar
  First published: