ಮಗು(Baby) ಹುಟ್ಟಿದ ಬಳಿಕ ತಾಯಿಯ ಜೀವನ(Mother's Life) ಬದಲಾದಂತೆ ಆಹಾರ(Food) ಸೇವನೆಯಲ್ಲೂ ಒಂದಿಷ್ಟು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಅವರು ಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರಗಳನ್ನು (Protein Food) ಸೇವಿಸಬೇಕಾಗುತ್ತದೆ. ಜೊತೆಗೆ ಒಂದಷ್ಟು ಆಹಾರಗಳನ್ನು ತ್ಯಜಿಸಬೇಕಾಗುತ್ತದೆ. ಅವರು ಮಗುವಿಗೆ ಹಾಲುಣಿಸುವುದರಿಂದ (Breastfeeding) ತಾಯಂದಿರು ಸೇವಿಸುವ ಆಹಾರ ಮಗುವಿನ ಮೇಲೂ ಪರಿಣಾಮ ಬೀರುತ್ತದೆ.
ಅಂದಹಾಗೆ ಎದೆ ಹಾಲು ತುಂಬಾ ಪೋಷಕಾಂಶ ಹೊಂದಿರುತ್ತದೆ. ಇದು ನಿಮ್ಮ ಮಗುವಿಗೆ ಮೊದಲ ಆರು ತಿಂಗಳವರೆಗೆ ಅಗತ್ಯವಿರುವ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತದೆ.
ನಿಮ್ಮ ದೇಹವು ಎದೆ ಹಾಲಿನ ಸಂಯೋಜನೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತದೆ. ನೀವು ಏನು ಸೇವಿಸುತ್ತೀರೋ ಅದು ಎದೆ ಹಾಲಿನಲ್ಲಿರುವ ಪದಾರ್ಥಗಳ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆಯಲ್ಲದೇ ಮಗುವಿಗೆ ತಲುಪುತ್ತದೆ. ಹಾಗಾಗಿ ಆರೋಗ್ಯಕರವಾದ ಆಹಾರವನ್ನು ಸೇವಿಸುವಂತೆ ಹಾಲುಣಿಸುವ ಮಹಿಳೆಯರಿಗೆ ಸಲಹೆ ನೀಡಲಾಗುತ್ತದೆ.
ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಹೇಳುವ ಪ್ರಕಾರ, ಸ್ತನ್ಯಪಾನ ಮಾಡುವ ಮಹಿಳೆಯರಿಗೆ ಆಹಾರಗಳ ಕಟ್ಟುನಿಟ್ಟಾದ ಪಟ್ಟಿ ಇಲ್ಲ. ಆದರೆ ಹಾಲುಣಿಸುವ ಸಮಯದಲ್ಲಿ ನಿಮ್ಮ ಹಾಲು ಉತ್ಪಾದನೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಮಗು ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸೇವಿಸುವ ಆಹಾರದ ಮೇಲೆ ಗಮನ ಹರಿಸಬೇಕು.
ಇದನ್ನೂ ಓದಿ: Health Tips: ದಾಲ್ ತಿಂದ ಬಳಿಕ ಹೊಟ್ಟೆ ಉಬ್ಬರಿಸಿದರೆ ಹೀಗೆ ಮಾಡಿ- ಆರಾಮಾಗುತ್ತೆ!
ಹಾಲುಣಿಸುವ ತಾಯಿಯ ಈ ಪದಾರ್ಥಗಳನ್ನು ಸೇವಿಸಬಾರದು ಎಂಬ ಬಗ್ಗೆ ತಜ್ಞರು ಸಲಹೆ ನೀಡುತ್ತಾರೆ. ಹಾಗಿದ್ರೆ ಆ ಪದಾರ್ಥಗಳು ಯಾವವು ಅನ್ನೋದನ್ನು ನೋಡೋದಾದ್ರೆ,
ಸ್ತನ್ಯಪಾನ ಮಾಡುವ ಹೊಸ ತಾಯಂದಿರು ಸೇವಿಸಲೇಬಾರದ 5 ಆಹಾರಗಳು
1.ಕಾಫಿ: ಕಾಫಿ ಕೆಫೀನ್ನ ಸಾಮಾನ್ಯ ಮೂಲವಾಗಿದೆ. ಶಿಶುಗಳು ಕೆಫೀನ್ ಅನ್ನು ಒಡೆಯಲು ಮತ್ತು ತೊಡೆದು ಹಾಕಲು ಕಷ್ಟಪಡುತ್ತಾರೆ. ಪರಿಣಾಮವಾಗಿ, ಕಾಲಾನಂತರದಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ನಿಮ್ಮ ಮಗುವಿನ ಶರೀರದಲ್ಲಿ ಸಂಗ್ರಹವಾಗಬಹುದು. ಇದು ಕಿರಿಕಿರಿ ಮತ್ತು ಮಗುವಿನ ನಿದ್ರೆಗೆ ತೊಂದರೆ ಉಂಟುಮಾಡುತ್ತದೆ.
2.ಪುದೀನಾ: ಪುದೀನಾದಂತಹ ಗಿಡಮೂಲಿಕೆಗಳ ಸೇವನೆಯು ತಾಯಿಯಲ್ಲಿ ಹಾಲು ಪೂರೈಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಇವುಗಳನ್ನು ಆಂಟಿ-ಗ್ಯಾಲಕ್ಟಾಗೋಗ್ಸ್ ಎಂದು ಕರೆಯಲಾಗುತ್ತದೆ. ಇವುಗಳನ್ನು ಹಾಲುಣಿಸುವ ತಾಯಂದಿರು ಸೇವಿಸದೇ ಹೋದರೇ ಒಳ್ಳೆಯದು.
3.ಆಲ್ಕೋಹಾಲ್: ಹಾಲುಣಿಸುವ ಸಮಯದಲ್ಲಿ ಆಲ್ಕೋಹಾಲ್ ಅನ್ನು ತ್ಯಜಿಸುವುದು ಸುರಕ್ಷಿತ ಆಯ್ಕೆಯಾಗಿದೆ. ಆಲ್ಕೋಹಾಲ್ ನಿಮ್ಮ ಹಾಲಿನ ಎಜೆಕ್ಷನ್ ರಿಫ್ಲೆಕ್ಸ್ ಅನ್ನು ಪ್ರತಿಬಂಧಿಸುತ್ತದೆ.
ಇದರಿಂದ ಮಗುವಿಗೆ ಹಾಲು ಸಿಗುವುದು ಕಷ್ಟವಾಗುತ್ತದೆ. ಇದಲ್ಲದೆ, ಆಲ್ಕೋಹಾಲ್ ಸೇವನೆಯು ಶಿಶುವಿನ ಹಾಲಿನ ಸೇವನೆಯನ್ನು 20 ರಿಂದ 23% ರಷ್ಟು ಕಡಿಮೆ ಮಾಡುತ್ತದೆ. ಜೊತೆಗೆ ಶಿಶುಗಳಿಗೆ ಕಳಪೆ ನಿದ್ರೆಯಂತಹ ನಿದ್ರೆ ಸಂಬಂಧಿತ ಸಮಸ್ಯೆಗಳನ್ನೂ ಉಂಟುಮಾಡುತ್ತದೆ.
4.ಪಾಶ್ಚರೀಕರಿಸದ ಹಾಲಿನ ಉತ್ಪನ್ನಗಳು: ಯಾವುದೇ ಕಚ್ಚಾ ಹಾಲು ಅಥವಾ ಹಾಲಿನ ಉತ್ಪನ್ನಗಳು ಸೋಂಕಿನ ಮೂಲವಾಗಿರಬಹುದು. ಪಾಶ್ಚರೀಕರಿಸದ ಹಾಲನ್ನು ಕುಡಿಯುವುದರಿಂದ ಸಿ ಜೆಜುನಿ ಸೋಂಕನ್ನು ಹೊಂದುವ ಅಪಾಯವಿದೆ ಎನ್ನಲಾಗುತ್ತದೆ.
ಹಾಗಾಗಿ ಪಾಶ್ಚರೀಕರಿಸದ ಹಾಲಿನ ಉತ್ಪಗಳಿಂದ ದೇಹ ಸೇರುವ ಬ್ಯಾಕ್ಟೀರಿಯಾಗಳು ಎದೆಹಾಲನ್ನು ತಲುಪಬಹುದು. ಇದರಿಂದ ಮಗುವಿಗೆ ಸೋಂಕು ತಗುಲುವ ಅಪಾಯವಿದೆ.
ಇದನ್ನೂ ಓದಿ: Diet Chart: ಚಳಿಗಾಲದಲ್ಲಿ ಆರೋಗ್ಯವಾಗಿರಲು ಈ ಡಯೆಟ್ ಪ್ಲಾನ್ ಪಾಲಿಸಿ
5.ಕೃತಕ ಸಿಹಿಕಾರಕಗಳು: ಹಾಲುಣಿಸುವ ತಾಯಂದಿರು ಕೃತಕ ಸಿಹಿಕಾರಕಗಳನ್ನು ಸೇವಿಸದಿರುವುದು ಉತ್ತಮ. ಎದೆಹಾಲಿನ ಹೆಚ್ಚಿದ ಸಿಹಿಯು ಶಿಶುವಿನಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಕೃತಕ ಸಿಹಿಯ ಬದಲಿಗೆ ನೀವು 10-15 ಗ್ರಾಂ ಬೆಲ್ಲವನ್ನು ಸೇರಿಸುವುದು ಉತ್ತಮ ಎಂಬುದಾಗಿ ತಜ್ಞರು ಹೇಳುತ್ತಾರೆ.
ಒಟ್ಟಾರೆ, ಹಾಲುಣಿಸುವ ತಾಯಿ ಸೇವಿಸುವ ಆಹಾರವು ನೇರವಾಗಿ ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಾಗಿದ್ದಷ್ಟೂ ಒಳ್ಳೆಯದು ಎಂಬುದಾಗಿ ತಜ್ಞರು ಹೇಳುತ್ತಾರೆ. ಇದರಿಂದ ನಿಮ್ಮ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯವೂ ಚೆನ್ನಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ