ನಿಸರ್ಗದಲ್ಲಿ (Nature) ಹಲವು ಬಗೆಯ ಹೂವುಗಳಿವೆ (Flower). ಅವುಗಳಲ್ಲಿ ಬಹುತೇಕ ಹೂಗಳನ್ನು ಮನೆಯ ಮುಂದೆ, ಹಿತ್ತಲಲ್ಲಿ, ತೋಟದಲ್ಲಿ ಬೆಳೆಸಲಾಗುತ್ತದೆ. ನಿಸರ್ಗದಲ್ಲಿ ಕಾಣಿಸುವ ಈ ಹೂವುಗಳು ಹಲವು ಪ್ರಯೋಜನ (Benefits) ನೀಡುತ್ತದೆ. ಅಂತಹ ಹೂವುಗಳಲ್ಲಿ ದಾಸವಾಳ ಹೂವು (Hibiscus Flower) ಸಹ ಒಂದು. ದಾಸವಾಳ ಹೂವು ವಿಶಿಷ್ಟ ಪೋಷಕಾಂಶ ಹೊಂದಿದೆ. ಕೆಂಪು ದಾಸವಾಳ ಮತ್ತು ಎಲೆಯನ್ನು ಕೂದಲು ಉದುರುವಿಕೆ ತಡೆಗೆ ಮನೆಮದ್ದಾಗಿ ಬಳಕೆ ಮಾಡುವುದು ನಿಮಗೆ ಗೊತ್ತಿರುವ ವಿಚಾರ. ಈಗ ಈ ವಿಶಿಷ್ಟ ದಾಸವಾಳ ಹೂವನ್ನು ಕ್ಯಾನ್ಸರ್ (Cancer) ಚಿಕಿತ್ಸೆಗೆ ಬಳಕೆ ಮಾಡಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಹಾಗಾದ್ರೆ ಯಾವ ಕ್ಯಾನ್ಸರ್ ಕಾಯಿಲೆ ಕಡಿಮೆ ಮಾಡಲು ದಾಸವಾಳವನ್ನು ಬಳಕೆ ಮಾಡಲಾಗುತ್ತದೆ ಎಂಬುದನ್ನು ನಾವು ಇಲ್ಲಿ ತಿಳಿಯೋಣ.
ಯಾವ ಕ್ಯಾನ್ಸರ್ ಕಾಯಿಲೆಗೆ ದಾಸವಾಳ ಹೂವನ್ನು ಬಳಕೆ ಮಾಡಲಾಗುತ್ತದೆ?
ಅಂದ ಹಾಗೇ ದಾಸವಾಳ ಹೂವಿನಲ್ಲಿ ಹಲವು ವಿಧಗಳಿವೆ. ಬಿಳಿ, ಕೆಂಪು, ಗುಲಾಬಿ, ಕೇಸರಿ ಹೀಗೆ ಹಲವು ಬಣ್ಣದ ದಾಸವಾಳವನ್ನು ನೀವು ಕಂಡಿರಬಹುದು. ದಾಸವಾಳ ಚೆಂದದ ಹೂವು, ಪೂಜೆ, ಸಮಾರಂಭಗಳಲ್ಲಿ ಬಳಸುತ್ತಾರೆ. ಈಗ ಕ್ಯಾನ್ಸರ್ ಕಾಯಿಲೆ ಕಡಿಮೆ ಮಾಡಲು ದಾಸವಾಳವನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಶೋಧನೆ ಹೇಳಿದೆ.
ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಹಲವು ವಿಧದ ಕ್ಯಾನ್ಸರ್ ಗಳಿವೆ. ಆದ್ರೆ ಎಲ್ಲಾ ರೀತಿಯ ಕ್ಯಾನ್ಸರ್ ಅಪಾಯಕಾರಿ ಅಲ್ಲ. ಭಾರತದಲ್ಲಿ 2022 ರಲ್ಲಿ 20 ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ ಅಂತಾ ಎನ್ ಸಿಬಿಐ ವರದಿ ತಿಳಿಸಿದೆ.
ಸ್ತನ ಕ್ಯಾನ್ಸರ್
ಸ್ತನ ಕ್ಯಾನ್ಸರ್ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ, ಉತ್ತಮ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಹಲವು ವಿಧದ ಔಷಧ, ವಿಕಿರಣ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯನ್ನು ಹೊಂದುದೆ. ರೋಗ ಲಕ್ಷಣಗಳ ತೀವ್ರತೆ ನೋಡಿ ಚಿಕಿತ್ಸೆ ಬಗ್ಗೆ ವೈದ್ಯರು ನಿರ್ಣಯಿಸುತ್ತಾರೆ.
ಸ್ತನ ಕ್ಯಾನ್ಸರ್ ನಿವಾರಣೆಗೆ ಮನೆಮದ್ದು
ಸ್ತನ ಕ್ಯಾನ್ಸರ್ ನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು ಎಂದು ಸಂಶೋಧನೆಯೊಂದು ಹೇಳಿದೆ. ಔಷಧಿಗಳ ಜೊತೆಗೆ ಮನೆಮದ್ದು ಅಥವಾ ನೈಸರ್ಗಿಕ ಪರಿಹಾರ ಕಂಡುಕೊಳ್ಳಬಹುದು. ಸ್ತನ ಕ್ಯಾನ್ಸರ್‌ಗೆ ಅದ್ಭುತವಾದ ನೈಸರ್ಗಿಕ ಪರಿಹಾರವಾಗಿ ದಾಸವಾಳದ ಹೂವು ಬಳಕೆ ಮಾಡಲಾಗುತ್ತದೆ.
ದಾಸವಾಳ ಹೂವಿನ ರಸ
ಸಂಶೋಧಕರ ಪ್ರಕಾರ, ನೈಸರ್ಗಿಕ ವಸ್ತುಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಲ್ಲ ಎನ್ನುತ್ತಾರೆ. ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಮನೆಮದ್ದಾಗಿ ದಾಸವಾಳದ ಹೂವಿನ ರಸವನ್ನು ದೀರ್ಘಾವಧಿಯವರೆಗೆ ಬಳಸಿದ್ರೂ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಹೇಳಿದ್ದಾರೆ. ಔಷಧವಾಗಿ ದಾಸವಾಳ ಹೂವನ್ನು ಬಳಕೆ ಮಾಡಲಾಗುತ್ತದೆ. ದಾಸವಾಳ ಹೂವಿನ ರಸವು ಕ್ಯಾನ್ಸರ್ ದುರ್ಬಲತೆ ಕಡಿಮೆ ಮಾಡುತ್ತದೆ.
ದಾಸವಾಳದ ಹೂವಿನಲ್ಲಿರುವ ಕ್ಯಾನ್ಸರ್ ವಿರೋಧಿ ಅಂಶಗಳು
ದಾಸವಾಳ ಹೂವಿನ ರಸವು ಉತ್ಕರ್ಷಣ ನಿರೋಧಕ ಮತ್ತು ಹೈಪೋಲಿಪಿಡೆಮಿಕ್ ಪರಿಣಾಮ ಹೊಂದಿದೆ. ಅನೇಕ ಔಷಧೀಯ ಮತ್ತು ಆಂಟಿಕಾರ್ಸಿನೋಜೆನಿಕ್ ಗುಣ ಹೊಂದಿದೆ.
ಆದರೆ ದಾಸವಾಳದ ಹೂವಿನ ರಸವು ಸ್ತನ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ ಅಂತಾರೆ ಸಂಶೋಧಕರು. ಇದು ಅಡ್ಡಪರಿಣಾಮ ಕಡಿಮೆ ಮಾಡುತ್ತದೆ.
ದಾಸವಾಳದ ಹೂವಿನ ರಸದ ಬಗ್ಗೆ ಸಂಶೋಧಕರು ಅಧ್ಯಯನ ಮಾಡಿ, ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ದಾಸವಾಳದ ಸಾರ ಸಹಕಾರಿ ಎಂದು ಕಂಡುಕೊಂಡಿದ್ದಾರೆ. ಹಾಗೆಯೇ ದಾಸವಾಳ ರಸವು ಟ್ರಿಪಲ್-ನೆಗೆಟಿವ್ ಮತ್ತು ಈಸ್ಟ್ರೊಜೆನ್-ರಿಸೆಪ್ಟರ್ ಸ್ತನ ಕ್ಯಾನ್ಸರ್ ಧನಾತ್ಮಕ ಕೋಶಗಳ ವಿರುದ್ಧ ಸಂಯೋಜಿಸಿದರೆ ಪರಿಣಾಮಕಾರಿ ಎಂದಿದ್ದಾರೆ.
ಇದನ್ನೂ ಓದಿ: ದಿಢೀರ್ ತೂಕ ನಷ್ಟ ಕೂಡ ಡೇಂಜರ್; ಸಣ್ಣ ಆಗಲು ಈ 5 ಸಮಸ್ಯೆಗಳೇ ಕಾರಣ
ದಾಸವಾಳ ಹೂವಿನ ರಸ ಬಳಸುವ ವಿಧಾನ ಯಾವುದು?
ದಾಸವಾಳ ಹೂವುಗಳನ್ನು ಪುಡಿ ಮಾಡಿ ಅದರ ಪುಡಿಯನ್ನು ಕುದಿಸಿ ತಣ್ಣಗಾದ ನಂತರ ಫಿಲ್ಟರ್ ಮಾಡಿ ಬಳಸಲಾಗುತ್ತದೆ. ಆದರೆ ಇದನ್ನು ವೈದ್ಯರ ಸಲಹೆ ಪಡೆದು ಬಳಸಿ ಅಂತಾರೆ ಸಂಶೋಧಕರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ