ನಮ್ಮ ಆರೋಗ್ಯದ (Health) ದೃಷ್ಟಿಯಿಂದ ಬೆಳಗಿನ ತಿಂಡಿ (Breakfast) ಬಹಳ ಮುಖ್ಯ. ಬೆಂಗಳೂರಿನಂತಹ (Bengaluru) ನಗರದಲ್ಲಿ ಕೆಲಸದ ಒತ್ತಡದ ನಡುವೆ ಕೆಲವೊಮ್ಮೆ ಬೆಳಗಿನ ತಿಂಡಿ ಮಾಡಲು ಸಾಧ್ಯವಾಗುವುದಿಲ್ಲ, ಹೊರಗಡೆ ತಿನ್ನುವುದಾಗುತ್ತದೆ. ಅದರಲ್ಲೂ ಇಲ್ಲಿ ಬೆಳಗಿನ ರುಚಿ ರುಚಿಯಾದ ತಿಂಡಿಗೆ ಹಲವಾರು ಸ್ಥಳಗಳಿವೆ. ಒಂದೊಂದು ಏರಿಯಾದಲ್ಲಿ ಒಂದೊಂದು ಹೋಟೆಲ್ಗಳು ಹೆಚ್ಚು ಪ್ರಸಿದ್ದ. ಇನ್ನು ಬೆಂಗಳೂರಿನಲ್ಲಿ ಪ್ರಸಿದ್ದ ಏರಿಯಾ ಎಂದರೆ ಜಯನಗರ. ಇಲ್ಲಿ ಜನರ ಓಡಾಟ ಹೆಚ್ಚಿರುತ್ತದೆ, ಹಾಗೆಯೇ ತಿಂಡಿಯ ಶಾಪ್ಗಳು ಹೆಚ್ಚು. ನೀವು ಬೆಂಗಳೂರಿನಲ್ಲಿ ಬ್ರೇಕ್ಫಾಸ್ಟ್ ಸೆಂಟರ್ ಹುಡುಕುತ್ತಿದ್ದರೆ ಇಲ್ಲಿದೆ (Near Me) ಲಿಸ್ಟ್.
ತಾಜಾ ತಿಂಡಿ
ಇದು ಜಯನಗರದ ಪ್ರಸಿದ್ದ ತಿಂಡಿ ಸ್ಥಳಗಳಲ್ಲಿ ಒಂದು. ಸ್ವಚ್ಛತೆ, ರುಚಿಯ ವಿಚಾರವಾಗಿ ಇದು ನಂಬರ್ ಒನ್ ಎನ್ನಬಹುದು. ಬೆಳಿಗ್ಗೆ 6 ಗಂಟೆಯಿಂದ ಇಲ್ಲಿ ನಿಮಗೆ ತಿಂಡಿಗಳು ಸಿಗುತ್ತದೆ. ಕೇವಲ ಬೆಳಗಿನ ತಿಂಡಿಗಳು ಮಾತ್ರವಲ್ಲದೇಆಮ್ಲೆಟ್, ಇಡ್ಲಿ, ವಡಾ ಮತ್ತು ರೋಸ್ ಮಿಲ್ಕ್ ಅನ್ನು ಸಹ ನೀವಿಲ್ಲಿ ಟ್ರೈ ಮಾಡಲೇಬೇಕು. ಅಷ್ಟೇ ಅಲ್ಲದೇ ಇಲ್ಲಿನ ಕಾಫಿ ರುಚಿಯನ್ನು ನೀವು ಮರೆಯುವುದೇ ಇಲ್ಲ.
ವಿಳಾಸ:
ನಂ. 1004, 26ನೇ ಮೇನ್, 4ನೇ ಟಿ ಬ್ಲಾಕ್, ಜಯನಗರ ಎಚ್ಡಿಎಫ್ಸಿ ಬ್ಯಾಂಕ್ ಪಕ್ಕ, ಬೆಂಗಳೂರು 560041
ಮೊಬೈಲ್ ನಂಬರ್: +91 76762 08899
ಸಮಯ: ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ
ಮಯ್ಯಾಸ್
ಈ ರೆಸ್ಟೋರೆಂಟ್ ಹೆಸರನ್ನು ಬೆಂಗಳೂರಿಗರು ಕೇಳದೇ ಇರುವುದಿಲ್ಲ. ಎಂಟಿಆರ್ ನಂತರ ಹೆಚ್ಚು ಪ್ರಸಿದ್ದ ಎಂದರೆ ಮಯ್ಯಾಸ್ ಎನ್ನಬಹುದು. ಇಲ್ಲಿ ಗರಿ ಗರಿ ದೋಸೆ, ಮೃದುವಾದ ಇಡ್ಲಿಯನ್ನು ಒಮ್ಮೆ ತಿಂದರೆ ಪದೇ ಪದೇ ಹೊಗಬೇಕು ಅನಿಸುತ್ತದೆ. ನೀವು ಜಯನಗರದಲ್ಲಿದ್ದರೆ ಅಥವಾ ಯಾವುದೇ ಕೆಲಸದ ಮೇಲೆ ಹೋದರೆ ಇಲ್ಲಿಗೆ ಒಮ್ಮೆ ವಿಸಿಟ್ ಮಾಡುವುದು ಸೂಕ್ತ.
ವಿಳಾಸ: 459/30 ಜಯನಗರ ಪೊಲೀಸ್ ಠಾಣೆ ಎದುರು 30ನೇ ಕ್ರಾಸ್ ಬಿಐಎಎಲ್, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು 560011
ಮೊಬೈಲ್ ನಂಬರ್: +91 80 4341 4400
ಸಮಯ: ಬೆಳಗ್ಗೆ 6.30 ರಿಂದ ಮಧ್ಯಾಹ್ನ 1
ಸಂಜೆ 4 ರಿಂದ ರಾತ್ರಿ 9ರ ವರೆಗೆ
ಉಪಹಾರ ದರ್ಶನಿ
ಈ ಹೆಸರಿನ ಹಲವಾರು ರೆಸ್ಟೋರೆಂಟ್ಗಳಿವೆ, ಆದರೆ ಜಯನಗರದ ಈ ಉಪಹಾರ ದರ್ಶಿನಿ ಬೆಸ್ಟ್ ಎನ್ನಲಾಗುತ್ತದೆ. ಇಡ್ಲಿ ಚಟ್ನಿ, ಶ್ಯಾವಿಗೆ ಬಾತ್, ಚೌ ಚೌ ಭಾತ್, ಖಾರಾ ಬಾತ್ ಮತ್ತು ಉಪ್ಪಿಟ್ಟಿಗೆ ಈ ಸಣ್ಣ ಸ್ಥಳ ಪ್ರಸಿದ್ದವಾಗಿದೆ. ನೀವು ಬೆಳಗ್ಗೆ ತಿಂಡಿ ಮಾಡಲು ಸಾಧ್ಯವಾಗದಿದ್ದರೆ ಇಲ್ಲಿ ತಿಂಡಿ ತಿನ್ನಬಹುದು. ಈ ಪುಟ್ಟ ಸ್ಥಳದಲ್ಲಿ ದೋಸೆ ಜೊತೆ ಬಿಸಿ ಬಿಸಿ ಕಾಫಿ ಕುಡಿದರೆ ಫುಲ್ ಡೇ ಫ್ರೆಶ್ ಆಗಿರಬಹುದು.
ವಿಳಾಸ: ಸಂಖ್ಯೆ 73/1 ಡಿವಿಜಿ ರಸ್ತೆ, ಬೆಂಗಳೂರು 560004
ಮೊಬೈಲ್ ನಂಬರ್: +91 80 2661 1355
ಸಮಯ: 6.30 ಮಧ್ಯಾಹ್ನ 12ಸಂಜೆ 3.30 ರಿಂದ ರಾತ್ರಿ 8,30
ಇದನ್ನೂ ಓದಿ: ಬೆಳಗಿನ ತಿಂಡಿಗೆ ಈ ಐತಿಹಾಸಿಕ ರೆಸ್ಟೋರೆಂಟ್ಗಳಿಗೆ ಒಮ್ಮೆ ವಿಸಿಟ್ ಮಾಡಿ
ಬ್ರಾಹ್ಮಣರ ಟಿಫನ್ ಮತ್ತು ಕಾಫಿ
ಬೆಂಗಳೂರಿನ ಅದ್ಭುತ ತಿಂಡಿ ಸ್ಥಳಗಳ ವಿಚಾರಕ್ಕೆ ಬಂದಾಗ, ಬ್ರಾಹ್ಮಣರ ಟಿಫನ್ ಮತ್ತು ಕಾಫಿ ನಿಮ್ಮ ಲಿಸ್ಟ್ನಲ್ಲಿರಬೇಕು. ಇಲ್ಲಿನ ಮಸಾಲಾ ದೋಸೆ ಮತ್ತು ಬಟನ್ ಇಡ್ಲಿ, ಉಪ್ಪಿಟ್ಟು, ದಹಿ ವಡಾ, ಪದ್ದು, ಬಜ್ಜಿ, ಮಂಗಳೂರು ಬನ್ಸ್, ಪೊಂಗಲ್, ಮೊಸರು ಅನ್ನ ಮತ್ತು ಉದ್ದಿನ ಬೋಂಡಾವನ್ನು ಟ್ರೈ ಮಾಡಲೇಬೇಕು. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ಪದೇ ಪದೇ ಹೋಗುವುದು ಪಕ್ಕಾ.
ವಿಳಾಸ: 35/8 11'ನೇ ಮೇನ್ ರೋಡ್ 4ನೇ ಬ್ಲಾಕ್, ಜಯನಗರ, ಬೆಂಗಳೂರು 560011
ಮೊಬೈಲ್ ನಂಬರ್: 91 91647 30896
ಸಮಯ: 8:30 ರಿಂದ 3 pm ಮತ್ತು 5:30 pm ನಿಂದ 8:30 pm
ಗಣೇಶ ದರ್ಶನ
ಬೆಂಗಳೂರಿನ ಗಣೇಶ ದರ್ಶನ ರೆಸ್ಟೊರೆಂಟ್ ಕಾಫಿ ಮತ್ತು ಗರಿಗರಿಯಾದ ಮಸಾಲೆ ದೋಸೆಯ ಜೊತೆ ಹರಟೆ ಹೊಡೆಯಲು ಒಂದು ಸುಂದರವಾದ ಸ್ಥಳ ಎನ್ನಬಹುದು. ಮಸಾಲೆಯುಕ್ತ ಖಾರಾ-ಭಾತ್, ಸಿಹಿ ಕೇಸರಿ-ಭಾತ್, ರುಚಿಕರವಾದ ರವಾ ಇಡ್ಲಿಯನ್ನು ಮಿಸ್ ಮಾಡದೇ ಟ್ರೈ ಮಾಡಿ. ಇಲ್ಲಿ ವಾರಾಂತ್ಯದಲ್ಲಿ ಹೆಚ್ಚು ಜನಸಂದಣಿ ಇರುತ್ತದೆ. ನೀವು ಸಾಧ್ಯವಾದಷ್ಟು ಬೇಗ ಈ ಸ್ಥಳಕ್ಕೆ ಭೇಟಿ ನೀಡಬೇಕು.
ಇದನ್ನೂ ಓದಿ: ಬೆಸ್ಟ್ ತಿಂಡಿಗಳು ಸಿಗುವ ಬೆಂಗಳೂರಿನ ಟಾಪ್ 5 ಸ್ಥಳಗಳಿವು
ವಿಳಾಸ: ಸಂಖ್ಯೆ 244 27ನೇ ಕ್ರಾಸ್ ಬಾಟಾ ಶೋರೂಮ್ ಎದುರು, ಬಸ್ ನಿಲ್ದಾಣದ ಎದುರು, ಬೆಂಗಳೂರು 560011
ಮೊಬೈಲ್ ನಂಬರ್: +91 80 4150 5554
ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಮತ್ತು ಸಂಜೆ 6 ರಿಂದ ರಾತ್ರಿ 9 ರವರೆಗೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ