BreakFast Recipe: ಬೆಳಗಿನ ಉಪಹಾರಕ್ಕಾಗಿ ರುಚಿಕರ ಅವಲಕ್ಕಿ ದೋಸೆ

ಕಡಿಮೆ ಕ್ಯಾಲೋರಿಯುಕ್ತ ಮತ್ತು ಗರಿಗರಿಯಾಗಿರುವ ಈ ದೋಸೆ ರೆಸಿಪಿ ನಿಮ್ಮ ಬೆಳಗಿನ ತಿಂಡಿಯನ್ನು ರುಚಿಕರವನ್ನಾಗಿಸುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ಧಾವಂತದ ಜೀವನದಲ್ಲಿ ನಾವು ಯಾವಾಗಲೂ ಬೆಳಗಿನ ಉಪಹಾರಕ್ಕಾಗಿ (BreakFast) ಸುಲಭ ವಿಧಾನದಲ್ಲಿ ತಯಾರಾಗುವ ಖಾದ್ಯವನ್ನು ಅವಲಂಬಿಸುತ್ತೇವೆ. ಆರೋಗ್ಯಕ್ಕೂ (Health) ಉತ್ತಮವಾಗಿರುವ ನಿಮ್ಮ ಡಯೆಟ್ (Diet) ಅನ್ನು ನಿಯಂತ್ರಣದಲ್ಲಿಡುವ ಆಹಾರ ಪದಾರ್ಥಗಳೆಂದರೆ ನಮ್ಮ ಬೆಳಗಿನ ತಿಂಡಿ . ಅದಕ್ಕಾಗಿಯೇ ನಮ್ಮ ತಿಂಡಿ ಪೌಷ್ಠಿಕಾಂಶದಿಂದ ಕೂಡಿರಬೇಕು. ಸರಳವಾಗಿ ತಯಾರಿಸಬಹುದಾದ ಅವಲಕ್ಕಿ ದೋಸೆಯ (Poha dosa) ತಯಾರಿ ವಿಧಾನವನ್ನು ತಿಳಿಯಿರಿ. ಕಡಿಮೆ ಕ್ಯಾಲೋರಿಯುಕ್ತ ಮತ್ತು ಗರಿಗರಿಯಾಗಿರುವ ಈ ದೋಸೆ ರೆಸಿಪಿ ನಿಮ್ಮ ಬೆಳಗಿನ ತಿಂಡಿಯನ್ನು ರುಚಿಕರವನ್ನಾಗಿಸುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಅವಲಕ್ಕಿಯೊಂದಿಗೆ ಅಕ್ಕಿ, ಮಜ್ಜಿಗೆ ಹೀಗೆ ನಿಮ್ಮ ಪೌಷ್ಟಿಕತೆಗೆ ಮತ್ತು ದೈಹಿಕ ಸ್ವಾಸ್ಥ್ಯಕ್ಕೆ ಅತೀ ಅಗತ್ಯವಾಗಿರುವ ಸಾಮಾಗ್ರಿಗಳನ್ನು ಮಿಶ್ರ ಮಾಡಿ ಈ ದೋಸೆಯನ್ನು ತಯಾರಿಸಲಾಗುತ್ತದೆ.

ನಿಮಗೆ ಇದನ್ನು ತಯಾರಿಸಲು ಹೆಚ್ಚು ಸಮಯ ಕೂಡ ಬೇಕಾಗಿಲ್ಲ. ಕೆಲವೊಂದು ಗಂಟೆಗಳವರೆಗೆ ಅಕ್ಕಿಯನ್ನು ನೆನೆಸಿ ಇದಕ್ಕೆ ಅವಲಕ್ಕಿ ಮಜ್ಜಿಗೆ ಬೆರೆಸಿ ನುಣ್ಣಗೆ ರುಬ್ಬಿ ಈ ದೋಸೆಯನ್ನು ತಯಾರಿಸಲಾಗುತ್ತದೆ. ಹಿಟ್ಟಿನಲ್ಲಿ ಬೆರೆತಿರುವ ಮಜ್ಜಿಗೆ ಮತ್ತು ಅವಲಕ್ಕಿ ನಿಮಗೆ ಇದುವರೆಗೂ ಸೇವಿಸದೇ ಇರುವ ದೋಸೆಯ ರುಚಿಯನ್ನು ನೀಡುತ್ತದೆ. ಹಾಗಿದ್ದರೆ ತಡ ಮಾಡದೇ ದೋಸೆಯನ್ನು ತಯಾರಿಸುವ ವಿಧಾನದತ್ತ ಮುನ್ನಡೆಯಿರಿ ಮತ್ತು ನಿಮ್ಮ ಮನೆಯವರಿಗೆ ಈ ರುಚಿಯಾದ ದೋಸೆಯನ್ನು ತಯಾರಿಸಿ ಅವರ ಮೆಚ್ಚುಗೆಯನ್ನು ಪಡೆದುಕೊಳ್ಳಿ.

ಬೇಕಾಗಿರೋ ಸಾಮಾಗ್ರಿಗಳು

*ಅಕ್ಕಿ - 1 1/2 ಕಪ್

*ಕುಚ್ಚುಲಕ್ಕಿ (ಕೆಂಪು ಅಕ್ಕಿ)

*ಅವಲಕ್ಕಿ - 1 ಕಪ್

*ಉಪ್ಪು - ರುಚಿಗೆ ತಕ್ಕಷ್ಟು

*ಎಣ್ಣೆ/ತುಪ್ಪ - ಸ್ವಲ್ಪ

ಇದನ್ನೂ ಓದಿ; Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ತಯಾರಿಸುವ ವಿಧಾನ

1. ಮೊದಲಿಗೆ ಅಕ್ಕಿಯನ್ನು 7-8 ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಸಾಕಷ್ಟು ನೀರು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಅವಲಕ್ಕಿ, ಮೊಸರು/ಮಜ್ಜಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಸಾಕಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

2. ಹಿಟ್ಟು ಮಜ್ಜಿಗೆಯಂತೆ ದಪ್ಪಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

3. ತವಾವನ್ನು ಬಿಸಿ ಮಾಡಿಕೊಳ್ಳಿ. ತವಾ ಕಾದ ಬಳಿಕ ದೋಸೆ ಹಾಕಿ, ಸ್ವಲ್ಪ ಎಣ್ಣೆಹಾಕಿ ಇದಕ್ಕೆ ಮುಚ್ಚಳವನ್ನು ಮುಚ್ಚಿ ಮತ್ತು ದೋಸೆಯ ಎರಡೂ ಭಾಗ ಬೇಯುವುದಕ್ಕಾಗಿ 1 ನಿಮಿಷ ಹಾಗೆಯೇ ಬಿಡಿ.

4 ನಂತರ ದೋಸೆಯನ್ನು ತಟ್ಟೆಗೆ ವರ್ಗಾಯಿಸಿ. ರುಚಿಯಾದ ಅವಲಕ್ಕಿ ದೋಸೆ ಸವಿಯಲು ಸಿದ್ಧವಾಗಿದೆ. ಈ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಕೂಡ ನೀವು ಸೇವಿಸಬಹುದು.

ಈರುಳ್ಳಿ ಚಟ್ನಿ

ಬೇಕಾಗುವ ಪದಾರ್ಥಗಳು :  10 ಸಣ್ಣ ಈರುಳ್ಳಿ, 1 ಸಣ್ಣ ಬೆಳ್ಳುಳ್ಳಿ, 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಉದ್ದಿನ ಬೇಳೆ,  1 ಚಮಚ ಕಡೆಲೆ ಬೇಳೆ,  1 ಟೀಸ್ಪೂನ್ ಕೊತ್ತಂಬರಿ ಬೀಜ, 4 ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಸಣ್ಣ ತುಂಡು ಹುಣಸೆಹಣ್ಣು, ಅರ್ಧ ಟೀಸ್ಪೂನ್ ಉಪ್ಪು , ಕಾಲು ಕಪ್ ನೀರು 1 ಟೀಸ್ಪೂನ್ ಸಾಸಿವೆ ಪಿಂಚ್ ಹಿಂಗ್  ಸ್ವಲ್ಪ ಅರಿಶಿನ 1 ಟೀಸ್ಪೂನ್ ಮೆಣಸಿನ ಪುಡಿ

ಇದನ್ನೂ ಓದಿ:Breakfast Recipe: ಬೆಳಗಿನ ಉಪಹಾರಕ್ಕೆ ಮಾಡಿ ಆರೋಗ್ಯಕರ ಗೋಧಿ ನುಚ್ಚಿನ ಕಿಚಡಿ

ಮಾಡುವ ವಿಧಾನ: 

ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ. ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ. ಬಾಣಲಿಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ.ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, ಳಿ ಟೀಸ್ಪೂನ್ ಉಪ್ಪು ಮತ್ತು ನೀರು ಸೇರಿಸಿ. ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್‌ ಆಗಿ ರುಬ್ಬಿಕೊಳ್ಳಿ.
Published by:Pavana HS
First published: