• Home
  • »
  • News
  • »
  • lifestyle
  • »
  • Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗೆ ಇಷ್ಟವಾಗೋ ವೆಜಿಟೇಬಲ್ ಸ್ಯಾಂಡ್​ವಿಜ್

Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗೆ ಇಷ್ಟವಾಗೋ ವೆಜಿಟೇಬಲ್ ಸ್ಯಾಂಡ್​ವಿಜ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಯಾಂಡ್‌ವಿಚ್ ಅನ್ನು ಕಡಿಮೆ ಸಾಮಾಗ್ರಿಯೊಂದಿಗೆ ಸರಳವಾಗಿ ತಯಾರಿಸಬಹುದು. ಟೋಸ್ಟ್‌ನಿಂದ ಹಿಡಿದು ಸ್ಯಾಂಡ್‌ವಿಚ್‌ವರೆಗೆ ನಿಮ್ಮ ಬ್ರೇಕ್‌ಫಾಸ್ಟ್ ಅನ್ನು ನೀವು ಯಮ್ಮಿಯನ್ನಾಗಿ ಮಾಡಿಕೊಳ್ಳಬಹುದು

  • Share this:

ಮಕ್ಕಳು (Children) ತರಕಾರಿಯನ್ನೇ ತಿನ್ನೋದಿಲ್ಲ ಅನ್ನೋದು ಪ್ರತಿಯೊಬ್ಬ ತಾಯಂದಿರ ದೂರಾಗಿರುತ್ತೆ. ಹೀಗಾಗಿ ಮಕ್ಕಳಿಗೆ ಬೇರೆಯದ್ದೆ  ರೂಪದಲ್ಲಿ ನೀವು ತರಕಾರಿಗಳನ್ನ (Vegetables) ತಿನ್ನಿಸಬೇಕು. ಇದಕ್ಕೆ ಬೆಸ್ಟ್​ ಮಾರ್ಗ ಅಂದ್ರೆ ಅದು ಸ್ಯಾಂಡ್​ವಿಚ್ (Sandwich)​,  ಮಕ್ಕಳಿಗೆ ಇಷ್ಟವಾಗುತ್ತೆ ಜೊತೆಗೆ ತರಕಾರಿ ಕೂಡ ಅವರ ದೇಹ ಸೇರುತ್ತೆ. ಸ್ಯಾಂಡ್‌ವಿಚ್ ಅನ್ನು ಮನೆಯಲ್ಲೇ (Home) ಸುಲಭವಾಗಿ ತಯಾರಿಸಬಹುದು. ರುಚಿಕರವಾದ ಬ್ರೆಡ್ (Bread) ರೆಸಿಪಿಯನ್ನು ವಿಧ ವಿಧವಾಗಿ ತಯಾರಿಸಿ ಬೆಳಗಿನ ಬ್ರೇಕ್‌ಫಾಸ್ಟ್ ನನ್ನು ವೈವಿಧ್ಯಮಯವಾಗಿಸಿ. ಟೋಸ್ಟ್‌ನಿಂದ ಹಿಡಿದು ಸ್ಯಾಂಡ್‌ವಿಚ್‌ವರೆಗೆ ನಿಮ್ಮ ಬ್ರೇಕ್‌ಫಾಸ್ಟ್ ಅನ್ನು ನೀವು ಯಮ್ಮಿಯನ್ನಾಗಿ ಮಾಡಿಕೊಳ್ಳಬಹುದು


ಸ್ಯಾಂಡ್‌ವಿಚ್ ಅನ್ನು ಕಡಿಮೆ ಸಾಮಾಗ್ರಿಯೊಂದಿಗೆ ಸರಳವಾಗಿ ತಯಾರಿಸಬಹುದು. ರುಚಿಕರವಾದ ಬ್ರೇಕ್‌ಫಾಸ್ಟ್ ರೆಸಿಪಿ ತಯಾರಿಸಲು ಮೊಟ್ಟೆ ಅಥವಾ ಆಲೂಗಡ್ಡೆ ಮಿಶ್ರಣವನ್ನು ಸೇರಿಸಬಹುದು. ಅದರಲ್ಲೂ ವೆಜಿಟೇಬಲ್ ಸ್ಯಾಂಡ್‌ವಿಚ್ ತುಂಬಾ ರುಚಿಯಾದ ಒಂದು ಖಾದ್ಯವಾಗಿದೆ. ಇಲ್ಲಿದೆ ನಿಮಿಷಗಳಲ್ಲಿ ತಯಾರು ಮಾಡಬಹುದಾದ ವೆಜಿಟೇಬಲ್ ಸ್ಯಾಂಡ್‌ ವಿಚ್. ಇದರಲ್ಲಿ ಬಳಸಲಾಗುವ ಮಸಾಲೆ ಹಾಗೂ ಕರಗುವ ಚೀಸ್ ಸ್ಯಾಂಡ್‌ವಿಚ್‌ಗೆ ವಿಶೇಷ ರುಚಿ ನೀಡಿ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಹಾಗಾದ್ರೆ ಬನ್ನಿ ರುಚಿಕರ ಸ್ಯಾಂಡ್​ವಿಚ್​ ಮಾಡೋದು ಹೇಗೆ ಅಂತ ತಿಳಿದುಕೊಳ್ಳೋಣ


ವೆಜಿಟೇಬಲ್ ಸ್ಯಾಂಡ್​ವಿಚ್ ಮಾಡಲು ಬೇಕಾಗಿರೋ​ ಸಾಮಾಗ್ರಿಗಳು:


ಬ್ರೆಡ್ ತುಂಡುಗಳು - 4-8


ಚೀಸ್ ಸ್ಲೈಸ್‌ಗಳು - 4


ಈರುಳ್ಳಿ - 1 (ಕತ್ತರಿಸಿದ್ದು)


ಕ್ಯಾಪ್ಸಿಕಂ - 1/2 (ಕತ್ತರಿಸಿದ್ದು)


ಟೊಮೇಟೋ - 1 (ಕತ್ತರಿಸಿದ್ದು)


ಹಸಿಮೆಣಸು - 2 (ಕತ್ತರಿಸಿದ್ದು)


ಮೆಣಸಿನ ಹುಡಿ - 1/2 ಸ್ಪೂನ್


ಚಾಟ್ ಮಸಾಲಾ - 1 ಸ್ಪೂನ್


ಲಿಂಬೆ ರಸ - 1 ಸ್ಪೂನ್


ಉಪ್ಪು - ರುಚಿಗೆ ತಕ್ಕಷ್ಟು


ಬೆಣ್ಣೆ - 1 ಸ್ಪೂನ್


ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ


ವೆಜಿಟೇಬಲ್ ಸ್ಯಾಂಡ್​ವಿಚ್  ಮಾಡುವ ವಿಧಾನ:


1.  ಪಾತ್ರೆಯಲ್ಲಿ ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು ಮತ್ತು ಟೊಮೇಟೋವನ್ನು ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ.


2. ಮೆಣಸಿನ ಹುಡಿ, ಲಿಂಬೆ ರಸ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ಪಕ್ಕದಲ್ಲಿಡಿ.


3. ಬ್ರೆಡ್ ಬದಿಗಳನ್ನು ಕತ್ತರಿಸಿ. ಚೀಸ್‌ನ ಒಂದು ಸ್ಲೈಸ್ ಅನ್ನು ತೆಗೆದುಕೊಂಡು ಬ್ರೆಡ್‌ ಮೇಲೆ ಹರಡಿ.


4. ಚಟ್‌ಪಟಾ ವೆಜಿಟೇಬಲ್ ಮಿಕ್ಸ್ ಅನ್ನು ಸೇರಿಸಿ ಮತ್ತು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ.


5.ಇದೀಗ ಬ್ರೆಡ್‌ನ ಸುತ್ತಲೂ ಬೆಣ್ಣೆ ಸವರಿ ಗ್ರಿಡ್‌ನಲ್ಲಿಡಿ. ಉಳಿದ ಬ್ರೆಡ್ ಸ್ಲೈಸ್‌ಗೆ ಇದೇ ವಿಧಾನವನ್ನು ಅನುಸರಿಸಿ. ಬಿಸಿ ಬಿಸಿಯಾದ ಚೀಸ್ ಸ್ಯಾಂಡ್‌ವಿಚ್ ಅನ್ನು ಟೊಮೇಟೋ ಕೆಚಪ್‌ನೊಂದಿಗೆ ಸವಿಯಲು ನೀಡಿ.


ಪನ್ನೀರ್​ ಸ್ಯಾಂಡ್​​ವಿಚ್​ ಕೂಡ ಆರೋಗ್ಯಕರವಾಗಿದೆ. ಮಕ್ಕಳಿಗೆ ತುಂಬಾನೇ ಇಷ್ಟವಾಗುತ್ತೆ. ಇದನ್ನೂ ಕೂಡ ಸುಲಭವಾಗಿ ಮಾಡಬಹುದು.


ಬೇಕಾಗುವ ಸಾಮಗ್ರಿಗಳು


ಪನ್ನೀರ್- 100ಗ್ರಾಂ,  ಬ್ರೆಡ್ ಸ್ಲೈಸ್ ಗಳು- 8-10, ಈರುಳ್ಳಿ- 2 (ಹೆಚ್ಚಿದ್ದು), ಕ್ಯಾಪ್ಸಿಕಂ- 1/2(ಕತ್ತರಿಸಿದ್ದು), ಹಸಿಮೆಣಸಿನಕಾಯಿ- 2 (ಕತ್ತರಿಸಿದ್ದು), ಅರಿಶಿಣ ಪುಡಿ- 1 ಟೀ ಚಮಚ, ಅಚ್ಚ ಖಾರದ ಪುಡಿ- 1 ಟೀಚಮಚ,  ಟೊಮೊಟೊ ಸಾಸ್- 2 ಟೀ ಚಮಚ,  ಉಪ್ಪು ರುಚಿಗೆ ತಕ್ಕಷ್ಟು
10. ಎಣ್ಣೆ- 1 ಟೀ ಚಮಚ,  ಬೆಣ್ಣೆ- ಬ್ರೆಡ್ ಟೋಸ್ಟ್​ ಮಾಡಲು


ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ


ಮಾಡುವ ವಿಧಾನ


1. ಬಾಣಲಿಯಲ್ಲಿ ಎಣ್ಣೆಯನ್ನು ಕಾಯಿಸಿಕೊಂಡು ಈರುಳ್ಳಿಯನ್ನು 2 ನಿಮಿಷಗಳವರೆಗೆ ಬಾಡಿಸಿ


2. ಕ್ಯಾಪ್ಸಿಕಂ ಮತ್ತು ಹಸಿಮೆಣಸಿನಕಾಯನ್ನು ಹಾಕಿ 3-4 ನಿಮಿಷಗಳವರೆಗೆ ಬೇಯಿಸಿ. ಇದಕ್ಕೆ ಅರಿಶಿಣ ಪುಡಿ ಮತ್ತು ಉಪ್ಪನ್ನು ಸೇರಿಸಿ.


3. ಪನ್ನೀರನ್ನು ತೆಗೆದುಕೊಂಡು ಮುರಿದುಕೊಳ್ಳಿ.


4. ಅಚ್ಚ ಖಾರದ ಪುಡಿ, ಟೊಮೊಟೊ ಸಾಸ್ ಅನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದಕ್ಕೆ ಪನ್ನೀರನ್ನು ಹಾಕಿ. ಪನ್ನೀರು ಇವೆಲ್ಲವನ್ನು ಹೀರಿಕೊಳ್ಳುವವರೆಗೆ ತಿರುಗಿಸುತ್ತಿರಿ. ಇದನ್ನು 3-4 ನಿಮಿಷ ಬೇಯಿಸಿ. ಒಲೆ ಆರಿಸಿ.


5. ಟೋಸ್ಟರ್ ನಲ್ಲಿ ಬ್ರೆಡ್ಡಿಗೆ ಬೆಣ್ಣೆ ಹಚ್ಚಿ, ಪನ್ನೀರ್ ಮಸಾಲೆ ಇಟ್ಟು ಟೋಸ್ಟ್ ಮಾಡಿಕೊಳ್ಳಿ

Published by:ಪಾವನ ಎಚ್ ಎಸ್
First published: