Breakfast Recipe: ಬೆಳಗಿನ ಉಪಹಾರಕ್ಕೆ 3 ಬಗೆಯ ಗರಿ ಗರಿ ದೋಸೆ

ದೋಸೆ ದಕ್ಷಿಣ ಭಾರತದ ಫೇಮಸ್ ತಿಂಡಿಗಳಲ್ಲಿ ಒಂದಾಗಿದೆ. ದೋಸೆಯಲ್ಲೂ ನೂರಾರು ತರದ ದೋಸೆಗಳನ್ನು ಮಾಡಬಹುದು, ಆದ್ದರಿಂದ ದೋಸೆ ಪ್ರಿಯರಿಗೆ ದೋಸೆ ಯಾವತ್ತೂ ಬೋರಾಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ಉಪಹಾರವನ್ನು (BreakFast) ಸಿದ್ಧಪಡಿಸುವುದು ಎಂದರೆ ಮಹಿಳೆಯರಿಗೆ (Women) ಕೊಂಚ ತಲೆನೋವಿನ ಸಂಗತಿಯೇ. ಮನೆಯಲ್ಲಿರುವ ಪ್ರತಿಯೊಬ್ಬರ ಅಭಿರುಚಿಯನ್ನು ಅರಿತುಕೊಂಡೇ ಉಪಹಾರವನ್ನು ಸಿದ್ಧಪಡಿಸಬೇಕಾಗಿರುವುದರಿಂದ ಹಲವಾರು ಗೊಂದಲಗಳು ಉಂಟಾಗುವುದು ಸಹಜವೇ ಆಗಿದೆ. ನೀವು ಮನೆಯಲ್ಲೇ (Home) ಇರುವವರು ಆಗಿರಿ ಅಥವಾ ಹೊರಕ್ಕೆ ಉದ್ಯೋಗಕ್ಕೆ (Job) ಹೋಗುವವರೇ ಆಗಿರಿ ಬೆಳಗಿನ ತಿಂಡಿಗೆ ಏನು ಸಿದ್ಧಮಾಡುವುದು ಎಂಬುದಾಗಿ ರಾತ್ರಿಯೇ ನೀವು ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ದಿನವೂ ಒಂದೇ ಬಗೆಯ ಖಾದ್ಯವನ್ನು ತಯಾರಿಸಿದಲ್ಲಿ ಅದು ಬೇಜಾರು ಉಂಟುಮಾಡಬಹುದು. ಹಾಗಾದ್ರೆ ಈ ಮೂರು ಬಗೆಯ ಬ್ರೇಕ್​ ಫಾಸ್ಟ್​ ಟ್ರೈಮಾಡಿ

ದೋಸೆ ದಕ್ಷಿಣ ಭಾರತದ ಫೇಮಸ್ ತಿಂಡಿಗಳಲ್ಲಿ ಒಂದಾಗಿದೆ. ದೋಸೆಯಲ್ಲೂ ನೂರಾರು ತರದ ದೋಸೆಗಳನ್ನು ಮಾಡಬಹುದು, ಆದ್ದರಿಂದ ದೋಸೆ ಪ್ರಿಯರಿಗೆ ದೋಸೆ ಯಾವತ್ತೂ ಬೋರಾಗುವುದಿಲ್ಲ. ದೋಸೆಯ ರುಚಿ ಇರುವುದು ಅದಕ್ಕೆ ಬಳಸುವ ಪದಾರ್ಥಗಳಲ್ಲಿ ಹಾಗೂ ಹಿಟ್ಟಿನ ಹದದಲ್ಲಿ. ಇದುವರೆಗೆ ಟೊಮೆಟೊ ದೋಸೆ ಮಾಡಿರದಿದ್ದರೆ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು

ದೋಸೆ ಹಿಟ್ಟು 2 ಕಪ್

ಟೊಮೆಟೊ 2

ಹಸಿ ಮೆಣಸು 3

ಜೀರಿಗೆ 1 ಚಮಚ

1 ಚಿಕ್ಕ ಪೀಸ್ ಶುಂಠಿ

ರುಚಿಗೆ ತಕ್ಕ ಉಪ್ಪು

ಎಣ್ಣೆ

ತಯಾರಿಸುವ ವಿಧಾನ

ಮೊದಲು ದೋಸೆ ಹಿಟ್ಟು ರೆಡಿ ಮಾಡಿ ( 1 ಗ್ಲಾಸ್ ಅಕ್ಕಿ ಮತ್ತು 1/4 ಗ್ಲಾಸ್ ಗಿಂತ ಸ್ವಲ್ಪ ಕಡಿಮೆ ಉದ್ದಿನ ಬೇಳೆಯನ್ನು ನೀರಿನಲ್ಲಿ 4-5 ಗಂಟೆಗಳ ನೆನೆ ಹಾಕಿ ನಂತರ ರುಬ್ಬಿ 8-9 ಗಂಟೆಗಳ ಕಾಲ‘ (ರಾತ್ರಿ ರುಬ್ಬಿಟ್ಟರೆ ಬೆಳಗ್ಗೆ ದೋಸೆಗೆ ಹಿಟ್ಟು ರೆಡಿಯಾಗುವುದು)

ಬೆಳಗ್ಗೆ ದೋಸೆ ಮಾಡುವ ಅರ್ಧ ಗಂಟೆ ಮೊದಲು ಟೊಮೆಟೊ, ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ ಹಾಕಿ ಗಟ್ಟಿಯಾಗಿ ರುಬ್ಬಿ, ಅದನ್ನು ದೋಸೆ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕಲೆಸಿ.

ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ ದೋಸೆ ಹುಯ್ಯಿರಿ. ರೆಡಿಯಾದ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಲು ರುಚಿಯಾಗಿರುತ್ತದೆ.

ಇದನ್ನೂ ಓದಿ:Breakfast Recipe: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹೆಸರುಕಾಳಿನ ದೋಸೆ

ಗೋಧಿ ದೋಸೆ ಒಮ್ಮೆ ಮಾಡಿ ನೋಡಿ

ಸಾಮಾಗ್ರಿಗಳು

ಗೋಧಿ ಹಿಟ್ಟು - 2 ಕಪ್‎ಗಳು

ಅಕ್ಕಿ ಹಿಟ್ಟು - 1 ಕಪ್

ಕೊತ್ತಂಬರಿ ಎಳೆಗಳು - 1 ಚಮಚ

ಹಸಿಮೆಣಸು ಅಥವಾ ಕೆಂಪು ಮೆಣಸು - 4 ರಿಂದ 5

ಕರಿಬೇವು - 8 ರಿಂದ 10

ಕಡ್ಲೆ ಹುಡಿ - 1/2 ಕಪ್

ಜೀರಿಗೆ - 1/2 ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

1. ಒಂದು ಪಾತ್ರೆಯನ್ನು ತೆಗೆದುಕೊಂಡು ಗೋಧಿ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ಇದಕ್ಕೆ ಹಾಕಿ.
2. ಇದೀಗ, ಹೆಚ್ಚಿಟ್ಟ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಜೀರಿಗೆ ಹಾಗೂ ಉಪನ್ನು ಪಾತ್ರೆಗೆ ಹಾಕಿ.
3. ಚೆನ್ನಾಗಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ.
4. ಮಿಶ್ರಣವನ್ನು ಕಲಸಿಕೊಳ್ಳಲು ಬೇಕಾದಷ್ಟು ನೀರನ್ನು ಹಾಕಿ
5. ಇದೀಗ ದೋಸೆ ಕಾವಲಿ ತೆಗೆದುಕೊಂಡು ಬಿಸಿಯಾಗಲು ಬಿಡಿ
6. ಕೊಂಚ ಹೊತ್ತಿನ ಬಳಿಕ ಪ್ಯಾನ್ ಬಿಸಿಯಾದೊಡನೆ ಪ್ಯಾನ್‎ಗೆ ಎಣ್ಣೆ ಹಾಕಿ.
7. ಇನ್ನು ದೋಸೆ ಕಾವಲಿಗೆ ಹಿಟ್ಟನ್ನು ಹುಯ್ಯಿರಿ ಮತ್ತು ಎಣ್ಣೆಯನ್ನು ಹಾಕಿ.
8. 2 ನಿಮಿಷಗಳ ತರುವಾಯ ದೋಸೆಯನ್ನು ಮುಗುಚಿ, ಇದು ಕಂದು ಬಣ್ಣಕ್ಕೆ ತಿರುಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
9. ಇದು ಕೆಂಪಗೆ ಕಂದು ಬಣ್ಣಕ್ಕೆ ಬಂತು ಎಂದಾದಲ್ಲಿ, ಸರ್ವಿಂಗ್ ಪ್ಲೇಟ್‎ಗೆ ದೋಸೆಯನ್ನು ವರ್ಗಾಯಿಸಿ.

ಬಿಸಿಬಿಸಿಯಾಗಿ ತೆಂಗಿನ ಚಟ್ನಿಯೊಂದಿಗೆ ದೋಸೆಯನ್ನು ಸೇವಿಸಲು ನೀಡಿ. ಈ ತ್ವರಿತ ದೋಸೆ ರೆಸಿಪಿಯನ್ನು ತಯಾರಿಸಿಕೊಂಡು ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನೀರ್​ ದೋಸೆ

ಬೇಕಾಗುವ ಸಾಮಾಗ್ರಿಗಳು

ಅಕ್ಕಿ 2 ಕಪ್( ನಾಲ್ಕು ಜನರಿಗೆ ಸಾಕಾಗುತ್ತದೆ)
ತೆಂಗಿನಕಾಯಿ(ಬೇಕಿದ್ದರೆ)
ರುಚಿಗೆ ತಕ್ಕ ಉಪ್ಪು

ಇದನ್ನೂ ಓದಿ: World Idli Day: ವಿಶ್ವ ಪ್ರಸಿದ್ಧ 'ರಾಮಸ್ಸೆರಿ ಇಡ್ಲಿ' ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ

ಮಾಡುವ ವಿಧಾನ

ರಾತ್ರಿ ಅಕ್ಕಿಯನ್ನು ನೆನೆ ಹಾಕಿಡಿ. ನಂತರ ಬೆಳಗ್ಗೆ ಅಕ್ಕಿಯನ್ನು ನುಣ್ಣಗೆ ರುಬ್ಬಿ (ತೆಂಗಿನಕಾಯಿ ಹಾಕುವುದಾದರೆ ಅಕ್ಕಿ ಜೊತೆ ಹಾಕಿ ರುಬ್ಬಿ). ನಂತರ ಅದನ್ನು ಪಾತ್ರೆಗೆ ಹಾಕಿ ಹಿಟ್ಟಿಗೆ ನೀರು ಹಾಗೂ ಉಪ್ಪು ಹಾಕಿ ಕಲೆಸಿ. ಈ ಹಿಟ್ಟು ನೀರು-ನೀರಾಗಿರಲಿ., ನಂತರ ದೋಸೆ ಕಾವಲಿಯಿಟ್ಟು, ಸ್ವಲ್ಪ ಎಣ್ಣೆ ಹಚ್ಚಿ ಒಂದು ಸೌಟು ದೋಸೆ ಹಿಟ್ಟನ್ನು ಹುಯ್ಯಿರಿ. ನಂತರ ತವಾವನ್ನು ಮತ್ತೊಂದು ಪಾತ್ರೆಯಿಂದ ಮುಚ್ಚಿ. ನಂತರ ದೋಸೆಯನ್ನು ಮಡಚಿ ತಟ್ಟೆಗೆ ಹಾಕಿ. ನೀರು ದೋಸೆ ಎರಡೇ ನಿಮಿಷದಲ್ಲಿ ರೆಡಿ.
Published by:Pavana HS
First published: