ಹೋಟೆಲ್, ರೆಸ್ಟೋರೆಂಟ್ ನಲ್ಲಿ ತಿಂದಾ ರುಚಿಯಾದ ಅಡುಗೆಯನ್ನೇ ಮಕ್ಕಳು ಕೇಳ್ತಾರಾ. ಮುಂಜಾನೆಯ ಗಡಿಬಿಡಿಯ ಸಮಯದಲ್ಲಿ ಸುಲಭವಾಗಿ ಬಿಸಿ ಬಿಸಿಯಾದ ವೆಜ್ ಬಿರಿಯಾನಿ ಮಾಡಿ. ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳು ಸಹ ಹೆಚ್ಚು ಇಷ್ಟಪಡುತ್ತಾರೆ. ನಿಮ್ಮ ಪುಟ್ಟ ಮಕ್ಕಳ ಹಸಿವನ್ನು ತಣಿಸಲು ಈ ರುಚಿಯಾದ ತರಕಾರಿ ಬಿರಿಯಾನಿಯನ್ನು ನೀವು ಪ್ರಯತ್ನಿಸಲೇಬೇಕು. ಈ ರುಚಿಯಾದ ತರಕಾರಿ ಬಿರಿಯಾನಿಯ ರೆಸಿಪಿಯನ್ನು ತಯಾರಿಸಲು ನೀವು ತುಂಬಾ ಹೊತ್ತು ಕಳೆಯಬೇಕೆಂದಿಲ್ಲ. ಇದನ್ನು ತಯಾರಿಸಲು ಕೇವಲ 20 ನಿಮಿಷ ಸಾಕು. ಬನ್ನಿ ಈ ಹೊಸತಾದ ರುಚಿಯನ್ನು ತಯಾರಿಸಿ ನಿಮ್ಮ ಮನೆಮಂದಿಗೆಲ್ಲಾ ಖುಷಿ ನೀಡಿ.
ಬೇಕಾಗುವ ಪದಾರ್ಥಗಳು:
ಬಾಸುಮತಿ ಅಕ್ಕಿ 4 ಕಪ್
ವಿವಿಧ ಬಗೆಯ ತರಕಾರಿಗಳು (ಬೀನ್ಸ್, ಕ್ಯಾರೆಟ್, ಹಸಿ ಬಟಾಣಿ, ಹೂಕೋಸು, ಆಲೂಗಡ್ಡೆ)
2 ಕಪ್ ಈರುಳ್ಳಿ ,
2 ಬೆಳ್ಳುಳ್ಳಿ,
ಒಂದು ಚಮಚದಷ್ಟು ಶುಂಠಿ ಪೇಸ್ಟ್
ಒಣ ಮೆಣಸಿನಕಾಯಿ 6
ಪಲಾವ್ ಎಲೆ 3
ಸೋಯಾ ಚಂಕ್ಸ್ 100 ಗ್ರಾಂ
ತುರಿದ ಹಸಿಕೊಬ್ಬರಿ ಸ್ವಲ್ಪ
ದಾಲ್ಚಿನ್ನಿ ಸ್ವಲ್ಪ
ಲವಂಗ,
ಏಲಕ್ಕಿ,
ಗೋಡಂಬಿ ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
ವೆಜಿಟೇಬರ್ ಬಿರಿಯಾನಿ ತಯಾರಿಕೆಗೆ ಬೇಕಾಗಿರುವ ಎಲ್ಲ ಸಾಮಗ್ರಿಗಳನ್ನು ತೆಗೆದಿಟ್ಟುಕೊಳ್ಳುವ ಮೊದಲು ಬಾಸುಮತಿ ಅಕ್ಕಿಯನ್ನು ಎರಡು ಬಾರಿ ತೊಳೆದು ನೀರಿನಲ್ಲಿ ನೆನೆಯಿಟ್ಟುಬಿಡಿ. ಅದು ಸುಮಾರು ಅರ್ಧ ಗಂಟೆ ನೆನೆಯಲಿ.
ಸೋಯಾ ಚಂಕ್ಸ್ ನನ್ನು ನೀರಿನಲ್ಲಿ ನೆನೆಸಿ ಹೆಚ್ಚಾಗಿ ತೊಳೆದುಕೊಳ್ಳಿ
ಅಕ್ಕಿ ನೆನೆಯಿಟ್ಟ ಕೂಡಲೆ ತರಕಾರಿ ಹೆಚ್ಚಿಕೊಳ್ಳಲು ಶುರುಹಚ್ಚಿಕೊಳ್ಳಿ. ತೊಳೆದು ಹೆಚ್ಚಿದ ತರಕಾರಿಗಳು ಎರಡು ಬಟ್ಟಲಷ್ಟಾದರೆ ಸಾಕು. ಇನ್ನೊಂದೆಡೆ ಹಸಿಕೊಬ್ಬರಿಯನ್ನು ಹೆರೆದಿಟ್ಟುಕೊಂಡು, ಮಿಕ್ಸಿಯಲ್ಲಿ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ತಯಾರಿಸಿಕೊಳ್ಳಿ. ಬೆಳ್ಳುಳ್ಳಿ ಕಂಡರೆ ಮೂಗು ಮುರಿಯುವವರು ಅದನ್ನು ಸಾಮಗ್ರಿಗಳ ಲಿಸ್ಟಿನಿಂದ ಡಿಲೀಟ್ ಮಾಡಿಕೊಳ್ಳಿ.
ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ
ಇದೆಲ್ಲ ಒಂದು ಹಂತಕ್ಕೆ ಬಂದ ನಂತರ ಪ್ಯಾನ್ ನಲ್ಲಿ ನಾಲ್ಕು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ತುಸು ಕಾಯ್ದ ನಂತರ ಚಿಟಿಕೆ ಅರಿಶಿನ ಹಾಕಿ ಹೆಚ್ಚಿಟ್ಟುಕೊಂಡ ಈರುಳ್ಳಿ, ಒಣ ಮೆಣಸಿನಕಾಯಿ, ತರಕಾರಿ, ದಾಲ್ಚಿನ್ನಿ, ಪಲಾವ್ ಎಲೆ ಸೇರಿಸಿ ಘಮ್ಮನೆ ವಾಸನೆ ಬರುವವರೆಗೆ ತಾಳಿಸಿ. ಗೋಡಂಬಿ ಹಾಕಿದರೆ ಬಿರಿಯಾನಿ ಘಮಲು ಇನ್ನೂ ಜಾಸ್ತಿಯಾಗುತ್ತದೆ. ಸೋಯಾ ಚಂಕ್ಸ್ ಹಾಕಿ
ಇದಕ್ಕೆ ತುಸು ನೀರು ಹಾಕಿ ಅರ್ಧ ಬೇಯುವವರೆಗೆ ಬಿಡಿ. ಐದು ನಿಮಿಷದ ನಂತರ ನೆನೆಯಿಟ್ಟ ಅಕ್ಕಿ, ಅಕ್ಕಿಯ ಎರಡು ಪಟ್ಟಿನಷ್ಟು ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಕೊಬ್ಬರಿ, ಏಲಕ್ಕಿ ಮತ್ತು ಲವಂಗ ಹಾಕಿ ಪ್ಯಾನ್ ಮುಚ್ಚಳ ಮುಚ್ಚಿಟ್ಟು ವೈಟ್ ಇಡಿ.
ಮುಚ್ಚಳ ತೆಗೆದರೆ ಘಮ್ಮನೆ ವೆಜಿಟೇಬರ್ ಬಿರಿಯಾನಿ ತಯಾರಾಗಿರುತ್ತದೆ, ಜೊತೆಗೆ ಹೊಟ್ಟೆಯೂ ಚುರುಗುಟ್ಟುತ್ತಿರುತ್ತದೆ, ತಟ್ಟೆಯಲ್ಲಿ ಬಿರಿಯಾನಿ ಹಾಕಿಕೊಂಡು ಎರಡು ಚಮಚ ತುಪ್ಪ ಬೆರೆಸಿ ಮನೆಯವರಿಗೆಲ್ಲಾ ತಿನ್ನಲು ನೀಡಿ. ರೆಸ್ಟೋರೆಂಟ್ ಶೈಲಿಯಲ್ಲಿ ವೆಜ್ ಬಿರಿಯಾನಿಯನ್ನು ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು:
ಮೊಸರು 2 ಕಪ್
ಈರುಳ್ಳಿ 1 (ಚಿಕ್ಕದಾಗಿ ಕತ್ತರಿಸಿದ್ದು)
ಬೆಳ್ಳುಳ್ಳಿ ಎಸಳು 5-6
ಹಸಿ ಮೆಣಸಿನಕಾಯಿ ( ಖಾರಕ್ಕೆ ತಕ್ಕಷ್ಟು)
ಜೀರಿಗೆ ಅರ್ಧ ಚಮಚ
ಚಿಟಿಕೆಯಷ್ಟು ಕರಿಮೆಣಸಿನ ಪುಡಿ
ಕೊತ್ತಂಬರಿ ಸೊಪ್ಪು 2 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
ಎಣ್ಣೆ ಅರ್ಧ ಚಮಚ
ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
ತಯಾರಿಸುವ ವಿಧಾನ:
* ತವಾವನ್ನು ಬಿಸಿ ಮಾಡಿ ಅದರಲ್ಲಿ ಜೀರಿಗೆಯನ್ನು ಹಾಕಿ ಹುರಿದು ಪುಡಿ ಮಾಡಬೇಕು. ಬೆಳ್ಳುಳ್ಳಿಯನ್ನು ತವಾದಲ್ಲಿ ರೋಸ್ಟ್ ಮಾಡಿಡಬೇಕು.
* ಈಗ ಒಂದು ಬಟ್ಟಲಿನಲ್ಲಿ ಮೊಸರು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕದಡಬೇಕು. ಈಗ ಮೊಸರಿಗೆ ಬೆಳ್ಳುಳ್ಳಿ, ಜೀರಿಗೆ, ಈರುಳ್ಳಿ, ಕರಿ ಮೆಣಸಿನ ಪುಡಿ, ಹಸಿ ಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕೆಲಸಬೇಕು.
* ನಂತರ ಅರ್ಧ ಚಮಚ ಎಣ್ಣೆಯನ್ನು ಬಿಸಿ ಮಾಡಿ ಮೊಸರಿಗೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಈರುಳ್ಳಿ, ಬೆಳ್ಳುಳ್ಳಿ ರಾಯತ ರೆಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ