BreakFast Recipe: ರಂಜಾನ್ ಹಬ್ಬಕ್ಕೆ ಸ್ಪೆಷಲ್ ಕಾಶ್ಮೀರಿ ಪಲಾವ್, ಸಖತ್ ಟೇಸ್ಟಿ ಫುಡ್

ಆಹಾರ ಶುಚಿ, ರುಚಿಯಾಗಿರುವುದು ಮಾತ್ರವಲ್ಲದೆ ಆರೋಗ್ಯಕರವಾಗಿಯೂ ಇರಬೇಕು ಎಂಬ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತೆ. ಡ್ರೈ ಫ್ರೂಟ್ ಬಳಸಿ ಮಾಡುವ ಕಾಶ್ಮೀರಿ ಪಲಾವ್​ ಒಮ್ಮೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಾಂತಿ- ಸೌಹಾರ್ದತೆಯ ಸಂಕೇತವಾದ ರಂಜಾನ್ (Ramadan) ಮುಸ್ಲಿಂರ (Muslim) ಪವಿತ್ರ ಹಬ್ಬ. ಈ ತಿಂಗಳು ಮುಸ್ಲಿಮರು 30 ದಿನಗಳ ಉಪವಾಸ ಆಚರಿಸುತ್ತಾರೆ. ಅಲ್ಲದೆ ಈ ತಿಂಗಳಲ್ಲಿ ದಾನ- ಧರ್ಮ ಹೆಚ್ಚಾಗಿ ಮಾಡಲಾಗುತ್ತೆ. ಇನ್ನು ವಿಶೇಷ ಅಂದ್ರೆ ಈ ತಿಂಗಳು ಉಪವಾಸವಿಡುವ ಕಾರಣ ಹಬ್ಬದಂದು ಮಾಡುವ ಆಹಾರ ತುಂಬಾ ವಿಶೇಷವಾಗಿರುತ್ತೆ. ರಂಜಾನ್ ಹಬ್ಬದಲ್ಲಿ 10ಕ್ಕೂ ಅಧಿಕ ಬಗೆಯ (Different types)  ಸಸ್ಯಹಾರಿ ಹಾಗೂ ಮಾಂಸಹಾರಿ (veg, non-veg) ಖಾದ್ಯಗಳನ್ನು (Food)  ತಯಾರಿಸಲಾಗುತ್ತೆ.

ಆಹಾರ ಶುಚಿ, ರುಚಿಯಾಗಿರುವುದು ಮಾತ್ರವಲ್ಲದೆ ಆರೋಗ್ಯಕರವಾಗಿಯೂ ಇರಬೇಕು ಎಂಬ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತೆ. ತಿಂಗಳುಗಳ ಉಪವಾಸ ಮಾಡಿದ ದೇಹಕ್ಕೆ ಶಕ್ತಿ ತುಂಬುವಂತಿರಬೇಕು ಎಂಬ ಕಾರಣಕ್ಕಾಗಿ ದೇಹಕ್ಕೆ ಶಕ್ತಿ ನೀಡುವ ಆಹಾರಗಳನ್ನು ತಯಾರಿಸಲಾಗುತ್ತೆ.

ಬೇಕಾಗುವ ಸಾಮಗ್ರಿಗಳು:

ಬಾಸ್ಮತಿ ಅಕ್ಕಿ - 2 ಕಪ್

ಬಟಾಣಿ ಬೇಯಿಸಿ - ಳಿ ಕಪ್

ಕ್ಯಾರೆಟ್ ಸಣ್ಣಗೆ ತುಂಡು ಮಾಡಿ ಬೇಯಿಸಿ - ¼ ಕಪ್

ಕ್ಯಾಪ್ಸಿಕಂ - 1 ಸಣ್ಣಗೆ ತುಂಡು ಮಾಡಿ

ಈರುಳ್ಳಿ - ಅರ್ಧ ಕಪ್

ಸಕ್ಕರೆ - 2 ಚಮಚ

ಉಪ್ಪು - 2 ಚಮಚ / ರುಚಿಗೆ ತಕ್ಕಂತೆ

ಪಿಸ್ತಾ, ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ - ¼ ಕಪ್

ಕ್ರೀಂ - 2 ಟೇಬಲ್ ಚಮಚ

ಹಾಲು - 1 ಟೇಬಲ್ ಚಮಚ- ಇದಕ್ಕೆ ಸ್ವಲ್ಪ ಕೇಸರಿ ಸೇರಿಸಿ ಕುದಿಸಿಡಬೇಕು.

ಚೆಕ್ಕೆ - ಅರ್ಧ ಸಣ್ಣ ತುಂಡು

ಏಲಕ್ಕಿ - 2

ಜೀರಿಗೆ - ¼ ಚಮಚ

ತುಪ್ಪ / ಬೆಣ್ಣೆ - 2 ಟೇಬಲ್ ಚಮಚ

ಮಾಡುವ ವಿಧಾನ:

ಎರಡು ಕಪ್ ಅಕ್ಕಿಯನ್ನು ತೊಳೆದು 3 ಗ್ಲಾಸ್ ನೀರಿನಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, 2 ಚಮಚ ತುಪ್ಪ ಹಾಕಿ ಬೇಯಿಸಬೇಕು. ಬೆಂದ ನಂತರ ಕುಕ್ಕರಿನ ಮುಚ್ಚಳ ತೆಗೆದಿಡಬೇಕು ಅಥವಾ ಒಂದು ದೊಡ್ಡ ಬಟ್ಟಲಿನಲ್ಲಿ ಅನ್ನವನ್ನು ಹರಡಿಡಬೇಕು. ಇದರಿಂದ ಅನ್ನ ಉದುರಾಗಿರುತ್ತದೆ.
ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿಮಾಡಿ ಇದರಲ್ಲಿ  ಡ್ರೈಫ್ರೂಟ್​ ಗಳನ್ನು ಹುರಿದು ತೆಗೆದಿಡಬೇಕು.

ಇದನ್ನೂ ಓದಿ: Sunday Special: ಮಂಗಳೂರು ಶೈಲಿಯಲ್ಲಿ ಚಿಕನ್​ ಗೀ ರೋಸ್ಟ್​ ಮಾಡೋದು ಹೀಗೆ..

ನಂತರ ಇದೇ ತುಪ್ಪದಲ್ಲಿ ಈರುಳ್ಳಿಯನ್ನು ಚೆನ್ನಾಗಿ ಹುರಿಯಬೇಕು. ಇದಕ್ಕೆ ಚೆಕ್ಕೆ,  ಏಲಕ್ಕಿ, ಜೀರಿಗೆ, ಕ್ಯಾಪ್ಸಿಕಂ ಸೇರಿಸಿ ಸ್ವಲ್ಪ ಹುರಿಯಿರಿ. ಬೇಯಿಸಿದ ಕ್ಯಾರೆಟ್, ಬಟಾಣಿ ಸೇರಿಸಿ ಸ್ವಲ್ಪ ಹುರಿದುಕೊಂಡು ನಂತರ ಕೇಸರಿ ಹಾಲು, ಕ್ರೀಂ ಮತ್ತು ಬೇಯಿಸಿಟ್ಟ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ  ತಿನ್ನಲು ಕೊಡಿ

ಬ್ರಿಂಜಿ ರೈಸ್ ಮಾಡಲು ಬೇಬೇಕಾಗುವ ಸಾಮಗ್ರಿಗಳು:

ಮಸಾಲಾ ಪೇಸ್ಟ್‌ಗೆ:

ಒಂದು ಮುಷ್ಟಿ ಕೊತ್ತಂಬರಿ ಸೊಪ್ಪು, ಒಂದು ಮುಷ್ಟಿ ಪುದೀನಾ, 2 ಏಲಕ್ಕಿ, 4 ಲವಂಗ, ಅರ್ಧ ಇಂಚಿನ ಚಕ್ಕೆ, 1 ಚಮಚ ಜೀರಿಗೆ, 2 ಚಮಚ ನೀರು.

ಇತರೆ ಸಾಮಗ್ರಿಗಳು:

2 ಚಮಚ ತುಪ್ಪ, 1 ಚಮಚ ಎಣ್ಣೆ, 4 ದಾಲ್ಚೀನಿ ಎಲೆ, 1 ಸ್ಟಾರ್, 2  ಏಲಕ್ಕಿ,  1 ಈರುಳ್ಳಿ (ಸಣ್ಣಗೆ ಹೆಚ್ಚಿದ್ದು), 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 3 ಹಸಿಮೆಣಸು ಸೀಳಿದ್ದು, ಸಣ್ಣಗೆ ಹೆಚ್ಚಿಕೊಂಡ ಟೊಮ್ಯಾಟೋ 1, ತುರಿದುಕೊಂಡ ಕ್ಯಾರೆಟ್ ಅರ್ಧ, 2 ಚಮಚ ಬಟಾಣಿ, ಅರ್ಧ ಆಲೂಗಡ್ಡೆಯ ಹೋಳುಗಳು, ಗೋಬಿ ಆರೇಳು ಸಣ್ಣ ಪೀಸ್, 5 ಬೀನ್ಸ್, 1 ಚಮಚ ಉಪ್ಪು, ಸ್ವಲ್ಪ ಕರಿಬೇವು, 1 ಕಪ್ ನೀರು, 1 ಕಪ್ ಕಾಯಿಹಾಲು, 1 ಕಪ್ ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟ ಬಾಸುಮತಿ ಅಕ್ಕಿ, 2 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು, 2 ಚಮಚ ಪುದೀನಾ.

ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಫಟಾಫಟ್ ಅಂತ ಮಾಡಿ ಅವಲಕ್ಕಿ ಒಗ್ಗರಣೆ

ಮಾಡುವ ವಿಧಾನ :

1. ಮಸಾಲಾ ಪೇಸ್ಟ್‌ಗೆ ಬೇಕಾದುದನ್ನೆಲ್ಲವನ್ನೂ ಮಿಕ್ಸಿ ಮಾಡಿ ಪೇಸ್ಟ್ ಮಾಡಿಟ್ಟುಕೊಳ್ಳಿ  ಈಗ ಕುಕ್ಕರ್‌ನಲ್ಲಿ 2 ಚಮಚ ತುಪ್ಪ ಹಾಗೂ 1 ಚಚಮ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಸ್ಟಾರ್, ಚಕ್ಕೆ, ಲವಂಗ, ಏಲಕ್ಕಿ ಎಲ್ಲವನ್ನೂ ಹಾಕಿ ಸುಗಂಧ ಹೊಮ್ಮುವವರೆಗೆ ಹುರಿಯಿರಿ. ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸು ಹಾಕಿ ಹುರಿಯಿರಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಟೊಮ್ಯಾಟೋ ಸೇರಿಸಿ ಮೆತ್ತಗಾಗುವರೆಗೆ ಹುರಿಯಿರಿ.

2. ಈಗ ಕ್ಯಾರೆಟ್, ಬಟಾಣಿ, ಬೀನ್ಸ್, ಆಲೂಗಡ್ಡೆ, ಹೂಕೋಸು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ ಹುರಿಯುತ್ತಿರಿ. ತರಕಾರಿ ಪರಿಮಳ ಬಂದ ಬಳಿಕ ಇದಕ್ಕೆ ಮುಂಚೆಯೇ ತಯಾರಿಸಿಟ್ಟುಕೊಂಡ ಮಸಾಲಾ ಪೇಸ್ಟ್ ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ. ಒಂದು ನಿಮಿಷದ ಕಾಲ ಹುರಿಯಿರಿ.

1 ಕಪ್ ನೀರು ಹಾಗೂ 1 ಕಪ್ ಕಾಯಿಹಾಲನ್ನು ಸೇರಿಸಿ ಕುದಿ ಬರುವವರೆಗೆ ಸೌಟಾಡಿಸುತ್ತಿರಿ. ನಂತರ ಬಾಸುಮತಿ ಅಕ್ಕಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೇರಿಸಿ. ಕುಕ್ಕರ್ ಮುಚ್ಚಳ ಹಾಕಿ ಮೀಡಿಯಂ ಉರಿಯಲ್ಲಿ 2 ವಿಶಲ್ ಬರಿಸಿ. ಸ್ವಲ್ಪ ತಣ್ಣಗಾದ ಬಳಿಕ ರಾಯ್ತಾದೊಂದಿಗೆ ಬ್ರಿಂಜಿ ರೈಸ್ ಸವಿಯಿರಿ.
Published by:Pavana HS
First published: