• Home
  • »
  • News
  • »
  • lifestyle
  • »
  • Breakfast Recipe: ಮಕ್ಕಳ ಲಂಚ್ ಬಾಕ್ಸ್​ಗೆ ಮಾಡಿ ರುಚಿಕರ ಒಗ್ಗರಣೆ ಶಾವಿಗೆ

Breakfast Recipe: ಮಕ್ಕಳ ಲಂಚ್ ಬಾಕ್ಸ್​ಗೆ ಮಾಡಿ ರುಚಿಕರ ಒಗ್ಗರಣೆ ಶಾವಿಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳ ಲಂಚ್​ ಬಾಕ್ಸ್​ಗೆ ಹಾಗೂ ಮನೆಗೆ ದಿಢೀರಾಗಿ ಯಾರಾದರೂ ಬಂದಾಗ ಉಪಹಾರವಾಗಿ ಇದನ್ನು ಮಾಡಿಕೊಡಬಹುದು. ಬೇಕಿದ್ದರೆ ಇದಕ್ಕೆ ಗಜ್ಜರಿ, ಬೀನ್ಸ್ ಕೂಡ ಹಾಕಿ ಮಾಡಬಹುದು.

  • Share this:

ದಕ್ಷಿಣ ಭಾರತದ(SouthIndian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food) ಹೊಂದಿದ್ದುಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆಆದ್ದರಿಂದ  ಭಕ್ಷ್ಯಗಳ ರುಚಿಯೇ (Tasty) ಬೇರೆಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ  ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ಅದರಲ್ಲಿ ಶಾವುಗೆ ಒಗ್ಗರಣೆ ಕೂಡ ಒಂದು


ಇದರಲ್ಲಿ ತೆಂಗಿನ ತುರಿಯು ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಶಾವಿಗೆಯನ್ನು ತುಪ್ಪದಲ್ಲಿ ಹುರಿದು ಮಾಡುವುದರಿಂದ ಉದುರಾಗಿ ಆಕರ್ಷಕವಾಗಿರುತ್ತದೆ. ಮಕ್ಕಳು ಕೂಡ ಖುಷಿಯಿಂದ ತಿನ್ನುತ್ತಾರೆ. ಮನೆಗೆ ದಿಢೀರಾಗಿ ಯಾರಾದರೂ ಬಂದಾಗ ಉಪಹಾರವಾಗಿ ಮಾಡಿಕೊಡಬಹುದು. ಬೇಕಿದ್ದರೆ ಇದಕ್ಕೆ ಗಜ್ಜರಿ, ಬೀನ್ಸ್ ಕೂಡ ಹಾಕಿ ಮಾಡಬಹುದು.


ಬೇಕಾಗುವ ಸಾಮಾಗ್ರಿಗಳು


ತುಪ್ಪ – 1 ಚಮಚ


ಶಾವಿಗೆ – 1 ಕಪ್


ಎಣ್ಣೆ – 3 ದೊಡ್ಡ ಚಮಚ


ಶೇಂಗಾ ಬೀಜ – ಕಾಲು ಕಪ್


ಗೋಡಂಬಿ – 10


ಸಾಸಿವೆ – ಅರ್ಧ ಚಮಚ


ಉದ್ದಿನ ಬೇಳೆ – 1 ಚಮಚ


ಒಣ ಮೆಣಸಿನಕಾಯಿ – 1


ಕರಿಬೇವು – ಸ್ವಲ್ಪ


ಹಸಿ ಮೆಣಸಿನಕಾಯಿ – 2  (ಉದ್ದಕ್ಕೆ ಸೀಳಿದ್ದು)


ಈರುಳ್ಳಿ – 3  (ಸಣ್ಣಗೆ ಹೆಚ್ಚಿದ್ದು)


ಅರಸಿನ ಪುಡಿ- ಕಾಲು ಚಮಚ


ಉಪ್ಪು – ಮುಕ್ಕಾಲು ಚಮಚ


ತೆಂಗಿನ ತುರಿ – ಕಾಲು ಕಪ್


ಕೊತ್ತಂಬರಿ ಸೊಪ್ಪು – 3 ದೊಡ್ಡ ಚಮಚ


ನಿಂಬೆ ರಸ – 1 ಚಮಚ


ಇದನ್ನೂ ಓದಿ: Breakfast Recipe: ಬೆಳಗಿನ ತಿಂಡಿಗೆ, ಮಕ್ಕಳ ಲಂಚ್ ಬಾಕ್ಸ್​ಗೆ ರುಚಿಕರ ಮಶ್ರೂಮ್ ರೈಸ್​ ಮಾಡಿ


ಮಾಡುವ ವಿಧಾನ:


ಮೊದಲು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಅದಕ್ಕೆ 1 ಕಪ್ ಶಾವಿಗೆ ಹಾಕಿ ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ 4 ರಿಂದ 5 ನಿಮಿಷ ಹುರಿಯಿರಿ.ಇದನ್ನು ಒಂದು ತಟ್ಟೆಗೆ ತೆಗೆಯಿರಿ.ಬಾಣಲೆಗೆ 3 ದೊಡ್ಡ ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಕಾಲು ಕಪ್ ಶೇಂಗಾ ಬೀಜ ಹಾಕಿ ಗರಿ ಗರಿಯಾಗುವರೆಗೆ ಹುರಿದು ತೆಗೆಯಿರಿ.ಇದೇ ಎಣ್ಣೆಗೆ ಈಗ ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ತೆಗೆಯಿರಿ.


ಈಗ ಉಳಿದ ಎಣ್ಣೆಗೆ ಅರ್ಧ ಚಮಚ ಸಾಸಿವೆ ಹಾಕಿ. ಸಾಸಿವೆ ಸಿಡಿದ ಬಳಿಕ 1 ಚಮಚ ಉದ್ದಿನ ಬೇಳೆ,1 ಒಣ ಮೆಣಸಿನಕಾಯಿ ಮುರಿದು ಹಾಕಿ,  ಕರಿಬೇವು ಹಾಕಿ ಹುರಿಯಿರಿ. ಇದಕ್ಕೆ 2 ಉದ್ದಕ್ಕೆ ಸೀಳಿದ ಹಸಿ ಮೆಣಸಿನಕಾಯಿ, 2 ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಕಾಲು ಚಮಚ ಅರಿಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ.


ಈಗ ಇದಕ್ಕೆ ಒಂದೂವರೆ ಕಪ್ ನೀರು ಹಾಕಿ ಚೆನ್ನಾಗಿ ಕಲಸಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ನಿಮಿಷ ಕುದಿಸಿ.ನೀರು ಕುದಿ ಬಂದ ನಂತರ ಇದಕ್ಕೆ ಮುಕ್ಕಾಲು ಚಮಚ ಉಪ್ಪು ಹಾಕಿ ಕಲಕಿ ನಂತರ ಇದಕ್ಕೆ ಹುರಿದ ಶಾವಿಗೆ ಹಾಕಿ ಚೆನ್ನಾಗಿ ಕಲಕಿ.ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 3 ನಿಮಿಷ ಬೇಯಿಸಿ. ಪುನಃ ಕಲಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 3 ನಿಮಿಷ ಬೇಯಿಸಿ.


ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹೆಸರುಕಾಳಿನ ದೋಸೆ


ಈಗ ಇದಕ್ಕೆ ಹುರಿದ ಶೇಂಗಾ ಬೀಜ ಮತ್ತು ಗೋಡಂಬಿ ಹಾಕಿ ನಂತರ ಕಾಲು ಕಪ್ ತೆಂಗಿನ ತುರಿ 3 ದೊಡ್ಡ ಚಮಚ ಕೊತ್ತಂಬರಿ ಸೊಪ್ಪು 1 ಚಮಚ ನಿಂಬೆ ರಸ ಹಾಕಿ ನಿಧಾನವಾಗಿ ಕಲಸಿ.


ಗೋಧಿ ದೋಸೆ ಮಾಡುವ ವಿಧಾನ


ಮಾಡುವ ವಿಧಾನ


ಒಂದು ಪಾತ್ರೆಯನ್ನು ತೆಗೆದುಕೊಂಡು ಗೋಧಿ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ಇದಕ್ಕೆ ಹಾಕಿ.ಇದೀಗ, ಹೆಚ್ಚಿಟ್ಟ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಜೀರಿಗೆ ಹಾಗೂ ಉಪನ್ನು ಪಾತ್ರೆಗೆ ಹಾಕಿ. ಚೆನ್ನಾಗಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ. ಮಿಶ್ರಣವನ್ನು ಕಲಸಿಕೊಳ್ಳಲು ಬೇಕಾದಷ್ಟು ನೀರನ್ನು ಹಾಕಿ ಇದೀಗ ದೋಸೆ ಕಾವಲಿ ತೆಗೆದುಕೊಂಡು ಬಿಸಿಯಾಗಲು ಬಿಡಿ, ಕೊಂಚ ಹೊತ್ತಿನ ಬಳಿಕ ಪ್ಯಾನ್ ಬಿಸಿಯಾದೊಡನೆ ಪ್ಯಾನ್‎ಗೆ ಎಣ್ಣೆ ಹಾಕಿ. ಇನ್ನು ದೋಸೆ ಕಾವಲಿಗೆ ಹಿಟ್ಟನ್ನು ಹುಯ್ಯಿರಿ ಮತ್ತು ಎಣ್ಣೆಯನ್ನು ಹಾಕಿ. 2 ನಿಮಿಷಗಳ ತರುವಾಯ ದೋಸೆಯನ್ನು ಮುಗುಚಿ, ಇದು ಕಂದು ಬಣ್ಣಕ್ಕೆ ತಿರುಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದು ಕೆಂಪಗೆ ಕಂದು ಬಣ್ಣಕ್ಕೆ ಬಂತು ಎಂದಾದಲ್ಲಿ, ಸರ್ವಿಂಗ್ ಪ್ಲೇಟ್‎ಗೆ ದೋಸೆಯನ್ನು ವರ್ಗಾಯಿಸಿ.

Published by:Pavana HS
First published: