• Home
  • »
  • News
  • »
  • lifestyle
  • »
  • Breakfast Recipe: ಬೆಳಗಿನ ತಿಂಡಿಗೆ ಮನೆಯಲ್ಲೇ ಫಟಾಫಟ್ ಮಾಡಿ ಹೆಲ್ದಿ ಓಟ್ಸ್ ಇಡ್ಲಿ

Breakfast Recipe: ಬೆಳಗಿನ ತಿಂಡಿಗೆ ಮನೆಯಲ್ಲೇ ಫಟಾಫಟ್ ಮಾಡಿ ಹೆಲ್ದಿ ಓಟ್ಸ್ ಇಡ್ಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಿಗ್ಗೆ ಕಚೇರಿಗೆ ಹೊರಡುವ ಧಾವಂತದಲ್ಲಿ ಬೇಗನೇ ತಯಾರಿಸಬಹುದಾದ, ಸ್ವಾದಿಷ್ಟ ಮತ್ತು ಪೌಷ್ಠಿಕವಾದ ಆಹಾರವಾದುದರಿಂದ ಯುವಜನತೆಗಂತೂ ಅನಿವಾರ್ಯವಾದ ಉಪಾಹಾರವಾಗಿಬಿಟ್ಟಿದೆ.

  • Share this:

ನಿಮ್ಮ ದೈಹಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಬೆಳಗ್ಗಿನ ಉಪಹಾರವನ್ನು (Breakfast) ಎಂದಿಗೂ ನಿರ್ಲಕ್ಷ್ಯಸದಿರಿ. ನೀವು ಮಾಡುವ ಈ ಉಪಹಾರ ಕೇವಲ ಹೊಟ್ಟೆ ತುಂಬಿಸುವುದಕ್ಕೆ ಮಾತ್ರವಲ್ಲ ನಿಮ್ಮನ್ನು ಇಡೀ ದಿನ ಚಟುವಟಿಕೆಯಿಂದ (Activity) ಇರಿಸುವ ದಿವ್ಯ ಔಷಧವಾಗಿದೆ. (Medicine) ಹೆಚ್ಚಿನವರು ಕಚೇರಿಗೆ ಹೋಗುವ ಲಗುಬಗೆಯಲ್ಲಿ ಅಥವಾ ಡಯೆಟ್ ಎಂಬ ನೆಪದಲ್ಲಿ ಬೆಳಗ್ಗಿನ ಉಪಹಾರವನ್ನು ಸೇವಿಸದೇ ಮಧ್ಯಾಹ್ನ ಜೊತೆಯಾಗಿ ಊಟ ಮಾಡಿದರೆ ಆಯಿತು ಎಂಬ ಉಪೇಕ್ಷೆಯಲ್ಲಿ ಈ ಅದ್ಭುತ ಟಾನಿಕ್ ಅನ್ನು ಕೈಬಿಡುತ್ತಿದ್ದಾರೆ. ಆದರೆ ನೀವು ಸೇವಿಸುವ ಉಪಹಾರ ನಿಮ್ಮ ದೇಹದ ತೂಕ ಇಳಿಕೆಯಲ್ಲೂ (Weight loss)  ಅದ್ಭುತ ಪರಿಣಾಮವನ್ನು ಬೀರುತ್ತದೆ.


ಓಟ್ಸ್ ನಮ್ಮ ಉಪಾಹಾರದಲ್ಲಿ ನುಸುಳಿ ಹೆಚ್ಚು ಸಮಯವಾಗಿಲ್ಲ, ಆಗಲೇ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡುಬಿಟ್ಟಿದೆ. ಬೆಳಿಗ್ಗೆ ಕಚೇರಿಗೆ ಹೊರಡುವ ಧಾವಂತದಲ್ಲಿ ಬೇಗನೇ ತಯಾರಿಸಬಹುದಾದ, ಸ್ವಾದಿಷ್ಟ ಮತ್ತು ಪೌಷ್ಠಿಕವಾದ ಆಹಾರವಾದುದರಿಂದ ಯುವಜನತೆಗಂತೂ ಅನಿವಾರ್ಯವಾದ ಉಪಾಹಾರವಾಗಿಬಿಟ್ಟಿದೆ. ಅಲ್ಲದೇ ಮಧ್ಯಾಹ್ನದ ಊಟದವರೆಗೂ ಅಗತ್ಯವಾದ ಶಕ್ತಿ ನೀಡುವ ಮೂಲಕ ಹಾಗೂ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ತೂಕ ಇಳಿಸಲೂ ನೆರವಾಗುತ್ತದೆ.


ಆದರೆ ಬರೆಯ ಓಟ್ಸ್ ಅನ್ನು ಹಾಲಿನಲ್ಲಿ ಮುಳುಗಿಸಿ ತಿನ್ನುವುದಕ್ಕಿಂತ ದೋಸೆ ಅಥವಾ ಇಡ್ಲಿಯ ರೂಪದಲ್ಲಿ ಸೇವಿಸಿದರೆ ಇನ್ನಷ್ಟು ಪೌಷ್ಠಿಕ ಮತ್ತು ರುಚಿಕರವಾಗಿರುತ್ತದೆ. ಮಕ್ಕಳಂತೂ ಈ ಇಡ್ಲಿಯನ್ನು ಇನ್ನಿಲ್ಲದಷ್ಟು ಇಷ್ಟಪಡುತ್ತಾರೆ. ಇದರ ಉತ್ತಮ ಗುಣವೆಂದರೆ ಇದನ್ನು ಚಟ್ನಿ, ಸಾಂಬಾರ್, ಚಟ್ನಿಪುಡಿ, ಸಕ್ಕರೆ, ಬೆಲ್ಲ, ಜೇನು, ಜಾಮ್ ಅಷ್ಟೇ ಏಕೆ, ಹಾಲು ಮತ್ತು ಮೊಸರಿನ ಜೊತೆಗೂ ಸೇವಿಸಬಹುದು. ಅತಿಥಿಗಳಿಗೆ ಇದನ್ನು ಓಟ್ಸ್ ನಿಂದ ಮಾಡಿದ್ದು ಎಂದು ಹೇಳಿದ ಹೊರತು ಅವರು ಇದನ್ನು ಅಕ್ಕಿಯಿಂದಲೇ ತಯಾರಿಸಿದ್ದು ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ರುಚಿಕರವಾದ ಉಬ್ಬಿದ ಓಟ್ಸ್ ಇಡ್ಲಿ ಮಾಡುವ ಬಗೆಯನ್ನು ಕೆಳಗೆ ವಿವರಿಸಲಾಗಿದೆ:


ಇದನ್ನೂ ಓದಿ: Sweet Recipes: ಬಿರು ಬೇಸಿಗೆ ತಂಪಾಗಿ ಕುಡಿಯಿರಿ ಈ Rich and Healthy ಸ್ಮೂಥಿ; ಮಾಡುವುದು ಸುಲಭ


ಅಗತ್ಯವಿರುವ ಸಾಮಾಗ್ರಿಗಳು:


ಓಟ್ಸ್ - ಕಾಲು ಕಪ್, ಉದ್ದಿನ ಬೇಳೆ - ಒಂದು ಕಪ್, ಉಪ್ಪು-ರುಚಿಗನುಸಾರ, ಶುಂಠಿಯ ಪೇಸ್ಟ್ - ಅರ್ಧ ಚಿಕ್ಕಚಮಚ, ಹಸಿಮೆಣಸಿನ ಪೇಸ್ಟ್ - ಒಂದು ಚಿಕ್ಕ ಚಮಚ, ಸವರಲು ಎಣ್ಣೆ - ಕಾಲು ಚಮಚ ಅಥವಾ ಅಗತ್ಯಕ್ಕೆ ತಕ್ಕಂತೆ, ನೀರು - ಒಂದೂವರೆ ಕಪ್


ಮಾಡುವ ವಿಧಾನ:


1) ಓಟ್ಸ್ ಮತ್ತು ಉದ್ದಿನ ಬೇಳೆಯನ್ನು ಒಣದಾಗಿರುವಂತೆಯೇ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗೆ ಪುಡಿಮಾಡಿ


2) ಇದಕ್ಕೆ ನೀರು ಹಾಕಿ ಕಲಕಿ ನುಣ್ಣನೆಯ ಮಿಶ್ರಣ ತಯಾರಿಸಿ. ಇದಕ್ಕೆ ಉಪ್ಪು ಮತ್ತು ಹಸಿಮೆಣಸಿನ ಪೇಸ್ಟ್ ಸೇರಿಸಿ ಕಲಕಿ. ಇದು ಸುಮಾರು ಇಡ್ಲಿಹಿಟ್ಟಿನ ಹದಕ್ಕೆ ಬರಬೇಕು.


3) ಈ ಪಾತ್ರೆಯನ್ನು ಸುಮಾರು ಒಂದು ಘಂಟೆ ಕಾಲ ಮುಚ್ಚಿಡಿ.


4) ಒಂದು ಗಂಟೆಯ ಬಳಿಕ ಇಡ್ಲಿಪಾತ್ರೆಯ ಲೋಟ (ಅಥವಾ ಅಚ್ಚು) ಗಳ ಒಳಭಾಗಕ್ಕೆ ಕೊಂಚ ಎಣ್ಣೆ ಸವರಿ ಪ್ರತಿ ಅಚ್ಚಿನಲ್ಲಿಯೂ ತುಂಬುವಷ್ಟು ಹಿಟ್ಟನ್ನು ತುಂಬಿ.


5) ಇಡ್ಲಿಗಳನ್ನು ಇಡ್ಲಿಪಾತ್ರೆಯಲ್ಲಿ ಸುಮಾರು ಎಂಟರಿಂದ ಹತ್ತು ನಿಮಿಷಗಳವರೆಗೆ ಹಬೆಯಲ್ಲಿ ಬೇಯಿಸಿ.


6) ಅಚ್ಚುಗಳಿಂದ ಹೊರತೆಗೆದ ಇಡ್ಲಿಗಳನ್ನು ಬಿಸಿಬಿಸಿಯಿರುವಂತೆಯೇ ಬಡಿಸಿ, ಮೆಚ್ಚುಗೆ ಗಳಿಸಿ.


ಇದನ್ನೂ ಓದಿ:Vegan Omelette: ಮೊಟ್ಟೆಯಿಲ್ಲದೇ ಆಮ್ಲೆಟ್ ಮಾಡಿ! ಕಡಲೆ ಹಿಟ್ಟಿನ ವೆಜ್ ಆಮ್ಲೆಟ್ ಒಮ್ಮೆ ಟ್ರೈ ಮಾಡಿ!


ಇದು ಅಪ್ಪಟ ಸಸ್ಯಾಹಾರಿಯಾದುದರಿಂದ ಮತ್ತು ಸುಲಭವಾಗಿ ಜೀರ್ಣವಾಗುವ ಕಾರಣ ಎಲ್ಲಾ ವಯಸ್ಸಿನವರಿಗೆ ಹಾಗೂ ಅಶಕ್ತರು, ರೋಗಿಗಳಿಗೂ ಸೂಕ್ತವಾಗಿದೆ. ಹೆಚ್ಚಿನ ರುಚಿಗಾಗಿ ಕೊತ್ತಂಬರಿ ಸೊಪ್ಪಿನ ಕೆಲವು ಎಲೆಗಳನ್ನೂ ಚಿಕ್ಕದಾಗಿ ಹೆಚ್ಚಿ ಸೇರಿಸಬಹುದು.

Published by:ಪಾವನ ಎಚ್ ಎಸ್
First published: