Breakfast Recipe: ಕೇರಳ ಸ್ಟೈಲ್ ಟೊಮೆಟೋ ಕರಿ; ಚಪಾತಿ, ರೋಟಿಗೆ ಬೆಸ್ಟ್ ಕಾಂಬಿನೇಷನ್

ಟೊಮೆಟೊ ಕರಿ ರೆಸಿಪಿಯು ಅತ್ಯಂತ ಸುಲಭವಾದ ರೆಸಿಪಿಯಾಗಿರುತ್ತದೆ. ಭಾರತೀಯ ಶೈಲಿಯ ಈ ಖಾದ್ಯವನ್ನು ರೋಟಿ, ಬ್ರೆಡ್ ಮತ್ತು ಅನ್ನದ ಜೊತೆಗೆ ತಿನ್ನಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇರಳ ಸ್ಟೈಲ್​  (Kerala Style) ಊಟ ತುಂಬಾ ರುಚಿಕರವಾಗಿರುತ್ತದೆ. ದೇವರ ನಾಡಲ್ಲಿ ಜನರು ಬಗೆ ಬಗೆ ಖಾದ್ಯಗಳನ್ನು ಮಾಡೋದು ಅಲ್ಲಿನ ವಿಶೇಷತೆ ಕೂಡ, ಕೇರಳದಲ್ಲಿ ವೆಜ್​ ಅಂಡ್​ ನಾನ್​ ವೆಜ್ (Veg and Non veg)​ ಎರಡೂ ಬಗೆಯ ಆಹಾರಗಳನ್ನು ಅತ್ಯುತ್ತಮವಾಗಿ ತಯಾರು ಮಾಡಲಾಗುತ್ತದೆ. ಕೇರಳಕ್ಕೆ ಹೋದವರು ಅಲ್ಲಿನ ಸಂಪ್ರದಾಯಿಕ ಆಹಾರಗಳನ್ನು ಮಿಸ್​ ಮಾಡೋದೆ ಇಲ್ಲ. ಅದರಲ್ಲಿ ಅವರು ಮನೆಯಲ್ಲಿ ತಯಾರಿಸೋ ಸರಳ ಅಡುಗೆಗಳು (Dish) ಸಹ ತುಂಬಾ ಟೇಸ್ಟಿಯಾಗಿರುತ್ತದೆ. ಅದರಲ್ಲಿ ಒಂದು ಟೊಮೆಟೋ  ಕರಿ

ಟೊಮೆಟೊ ಕರಿ ರೆಸಿಪಿಯು ಅತ್ಯಂತ ಸುಲಭವಾದ ರೆಸಿಪಿಯಾಗಿರುತ್ತದೆ. ಭಾರತೀಯ ಶೈಲಿಯ ಈ ಖಾದ್ಯವನ್ನು ರೋಟಿ, ಬ್ರೆಡ್ ಮತ್ತು ಅನ್ನದ ಜೊತೆಗೆ ತಿನ್ನಬಹುದು. ಅದರಲ್ಲೂ ಕೇರಳ ಶೈಲಿಯ ರೆಸಿಪಿಯು ಅತ್ಯಂತ ಜನಪ್ರಿಯವಾಗಿದೆ. ತಕ್ಷಣಕ್ಕೆ ತಯಾರಾಗುವ ಆಹಾರ ಇದು. ಜೊತೆಗೆ ಈ ಟೊಮೆಟೊ ಕರಿ ಮಾಡೋದು ತುಂಬಾ ಸುಲಭ

ಬೇಕಾಗುವ ಪದಾರ್ಥ

*ಟೊಮೆಟೊ - 4 (ಕತ್ತರಿಸಿದ್ದು)

*ಈರುಳ್ಳಿ - 2 (ಕತ್ತರಿಸಿದ್ದು)

*ಹಸಿ ಮೆಣಸಿನ ಕಾಯಿಗಳು - 3 (ಉದ್ದಕ್ಕೆ ಕತ್ತರಿಸಿದ್ದು)

*ತುರಿದ ತೆಂಗಿನಕಾಯಿ - 1/2 ಕಪ್

*ಕಾರದ ಪುಡಿ - ¾ ಟೀ ಚಮಚ

*ಅರಿಶಿಣ ಪುಡಿ - ಸ್ವಲ್ಪ

*ಸಾಸಿವೆ - ಅರ್ಧ ಚಮಚ

*ಕೊತ್ತಂಬರಿ ಸೊಪ್ಪು

*ಉಪ್ಪು: ರುಚಿಗೆ ತಕ್ಕಷ್ಟು

*ತೆಂಗಿನ ಎಣ್ಣೆ - ಅಗತ್ಯವಿದ್ದಷ್ಟು

ಮಾಡುವ ವಿಧಾನ

1. ಮೊದಲು ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾಯಿಸಿ. ನಂತರ ಅದಕ್ಕೆ ಸಾಸಿವೆ  ಹಾಕಿ. ಅದು ಚಟ ಪಟ ಎಂದು ಹಾರುವವರೆಗೆ ಕಾಯಿರಿ. ನಂತರ ಅದಕ್ಕೆ ಟೊಮೆಟೊ ಹಸಿ ಮೆಣಸಿನಕಾಯಿಗಳನ್ನು ಹಾಕಿ.

2. ಟೊಮೆಟೊ ಚೆನ್ನಾಗಿ ಬೇಯುವವರೆಗೆ ಕಾಯಿರಿ. ನಂತರ ಅದಕ್ಕೆ ನೀರನ್ನು ಬೆರೆಸಿ, ಮತ್ತು ಸ್ವಲ್ಪ ಮೆದುವಾದ ಗ್ರೇವಿಯಂತೆ ತಯಾರಿಸಿಕೊಳ್ಳಿ.

3. ಇದೇ ಸಮಯದಲ್ಲಿ, ತುರಿದ ತೆಂಗಿನಕಾಯಿ, ಈರುಳ್ಳಿ ಮತ್ತು ಸ್ವಲ್ಪ ನೀರನ್ನು ಮಿಕ್ಸರಿನಲ್ಲಿ ಹಾಕಿಕೊಂಡು, ಚೆನ್ನಾಗಿ ರುಬ್ಬಿ. ಪೇಸ್ಟ್‌ನಂತೆ ಮಾಡಿಕೊಳ್ಳಿ.

4. ಈಗ ಈ ಮಿಶ್ರಣವನ್ನು ಬಾಣಲೆಯಲ್ಲಿ ಹಾಕಿ ಅದಕ್ಕೆ ನೀರನ್ನು ಬೆರೆಸಿ.

5. ನಂತರ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಈ ಗ್ರೇವಿಗೆ ಹಾಕಿ, ಚೆನ್ನಾಗಿ ಕಲೆಸಿಕೊಡಿ.

6. ನಂತರ ಇದಕ್ಕೆ ನೀರನ್ನು ಹಾಕಿ ಮತ್ತು 10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ಬೆಂಡೆಕಾಯಿ ಕರಿ ಮಾಡೋದು ಹೇಗೆ? 

ಬೇಕಾಗುವ ಸಾಮಾಗ್ರಿಗಳು
 *ಬೆಂಡೆಕಾಯಿ - 1/2 ಕಿಲೊ (ಸಣ್ಣದಾಗಿ ಹೆಚ್ಚಿದ್ದು)

*ಈರುಳ್ಳಿ - 2 (ದೊಡ್ಡದು ಮತ್ತು ಸಣ್ಣದಾಗಿ ಹೆಚ್ಚಿದ್ದು)

*ಎಣ್ಣೆ - 1/2 ಚಮಚ

*ಟೊಮೆಟೊ - 2 ( ಸಣ್ಣದಾಗಿ ಹೆಚ್ಚಿದ್ದು)

*ಶುಂಠಿ - 1/2 ಚಮಚ (ಸಣ್ಣದಾಗಿ ಹೆಚ್ಚಿದ್ದು)

*ಬೆಳ್ಳುಳ್ಳಿ ಪೇಸ್ಟ್ - 1/2 ಚಮಚ

*ಉದ್ದಿನ ಬೇಳೆ - 1 ಚಮಚ

*ಮೆಣಸಿನ ಹುಡಿ - 1 ಚಮಚ

*ಸಾಸಿವೆ - 1/2 ಚಮಚ

*ಅರಿಶಿನ ಹುಡಿ - 1/2 ಚಮಚ

*ತುರಿದ ಕೊಬ್ಬರಿ - 1/2 ಚಮಚ

*ಗರಂ ಮಸಾಲಾ - 1 ಚಮಚ

*ಕರಿಬೇವು - 4-5

*ಅಮಚೂರ್ - 1/2 ಚಮಚ

*ಗೋಡಂಬಿ - 10 (ಹಾಲಿನಲ್ಲಿ ನೆನೆಸಿದ್ದು)

*ಕಸೂರಿ ಮೇಥಿ - 1/2 ಚಮಚ (ಹುಡಿ ಮಾಡಿದ್ದು)

* ದನಿಯಾ - 1 1/2 ಚಮಚ

*ಮೊಸರು - 1 ಕಪ್

*ಉಪ್ಪು ರುಚಿಗೆ ತಕ್ಕಷ್ಟು

*ನೀರು - 2 ಕಪ್‌ಗಳು

*ಇಂಗು - ಚಿಟಿಕೆಯಷ್ಟು

*ಜೀರಿಗೆ - 1/2 ಚಮಚ

ಮಾಡುವ ವಿಧಾನ

1. ಹಾಲಿನಲ್ಲಿ ನೆನೆಯಿಸಿದ ಗೋಡಂಬಿಯನ್ನು ಕೊಬ್ಬರಿಯೊಂದಿಗೆ ರುಬ್ಬಿಕೊಳ್ಳಿ

2. ಉಪ್ಪಿನಲ್ಲಿ ಬೆಂಡೆಕಾಯಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ

3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಬೆಂಡೆಕಾಯಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ ಟಿಶು ಪೇಪರ್​ನಲ್ಲಿ ಅದನ್ನು ಇಡಿ ಇದರಿಂದ ಹೆಚ್ಚುವರಿ ಎಣ್ಣೆಯನ್ನು ಟಿಶು ಹೀರಿಕೊಳ್ಳುತ್ತದೆ

4. ಮತ್ತೊಮ್ಮೆ ಬಾಣಲೆಗೆ ಎಣ್ಣೆ ಸುರಿಯಿರಿ. ಮತ್ತು ಮೃದುವಾಗುವರೆಗೆ ಮತ್ತೊಮ್ಮೆ  ಹುರಿಯಿರಿ. ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಜೀರಿಗೆಯೊಂದಿಗೆ ಒಗ್ಗರಣೆಯನ್ನು ಮಾಡಿ. ಮತ್ತು ಕಂದು ಬಣ್ಣ ಬರಲು ಹುರಿಯುತ್ತಿರಿ.

ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

5. ಈರುಳ್ಳಿ ಮತ್ತು ಶುಂಠಿಯನ್ನು ಬಾಣಲೆಗೆ ಹಾಕಿ ಹುರಿಯಿರಿ. ಮೆಣಸಿನ ಹುಡಿ, ಅರಿಶಿನ, ಕೊತ್ತಂಬರಿ ಪುಡಿ, ಕಸೂರಿ ಮೇಥಿ, ಅಮೆಚೂರ್ ಹುಡಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಗರಂ ಮಸಾಲಾ ಹುಡಿಯನ್ನು ಬಾಣಲೆಗೆ ಹಾಕಿ ಮತ್ತು ಚೆನ್ನಾಗಿ ಫ್ರೈ ಮಾಡಿ.

6. ಇನ್ನು ಮಸಾಲೆಗೆ ಟೊಮೆಟೊವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಗೋಡಂಬಿ ಮತ್ತು ತೆಂಗಿನ ಪೇಸ್ಟ್ ಅನ್ನು ಸೇರಿಸಿಕೊಳ್ಳಿ ಮತ್ತು ಮೊಸರನ್ನು ಬಾಣಲೆಗೆ ಹಾಕಿ.

7. ಬೆಂಡೆಕಾಯಿ ಹೋಳುಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದರಿಂದ ಮಸಾಲೆಯೊಂದಿಗೆ ಬೆಂಡೆಕಾಯಿ ಬೆರೆತುಕೊಳ್ಳುತ್ತದೆ. ಈಗ ನೀರು ಹಾಕಿ ಮತ್ತು ಬೇಯಲು ಬಿಡಿ.

8. ನಿಮ್ಮ ಕರಿಯ ಅಳತೆಯನ್ನು ನೋಡಿಕೊಳ್ಳಿ. ನಿಮಗೆ ನೀರು ಹೇಗೆ ಬೇಕೋ ಹಾಗೆ ಸೇರಿಸಿಕೊಳ್ಳಿ. ಚಪಾತಿ ಮತ್ತು ಅನ್ನದೊಂದಿಗೆ ಈ ಕರಿ ತುಂಬಾ ಚೆನ್ನಾಗಿದೆ.
Published by:Pavana HS
First published: