Breakfast Recipe: ಒಂದೇ ತರ ತಿಂಡಿ ತಿಂದು ಬೋರ್ ಆಗಿದ್ರೆ ಎಲೆಕೋಸಿನ ದೋಸೆ ಮಾಡಿ ಸವಿಯಿರಿ

Cabbage Dosa: ಯಾವಾಗಲೂ ಒಂದೇ ತರ ದೋಸೆ ಸೇವನೆ ಮಾಡುವುದು ನಿಜಕ್ಕೂ ಬೋರ್ ಆಗುತ್ತದೆ. ಆದರೆ ಅದಕ್ಕೆ ತರಕಾರಿಗಳನ್ನು ಹಾಕಿ ಮಾಡುವುದರಿಂದ ಆರೋಗ್ಯಕರ ಕೂಡ. ಈ ಬಾರಿ ನೀವು ಎಲೆ ಕೋಸಿನ ದೋಸೆ ಮಾಡಿ ಸವಿಯಬಹುದು. ಹೇಗೆ ಎಂಬುದು ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ (South India) ಅತ್ಯಂತ ಜನಪ್ರಿಯ ತಿಂಡಿ (Breakfast) ಅಂದರೆ ದೋಸೆ (Dosa). ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೂ ಸಹ ಇದನ್ನು ಬೇಡವೆನ್ನುವವರಿಲ್ಲ. ದೋಸೆಗಳಲ್ಲಿ ಅಪಾರವಾದ ವಿಧಗಳಿವೆ. ಒಂದು ರಾತ್ರಿ ನೆನೆಸಿಡಬೇಕಾದ ಉದ್ದಿನ ದೋಸೆಯಿಂದ ಹಿಡಿದು ತಕ್ಷಣ ಮಾಡಬಹುದಾದ ಮೈದಾಹಿಟ್ಟಿನ ದೋಸೆ ಹಾಗೂ ನೀರುದೋಸೆ ಹೀಗೆ ಹಲವಾರು ವಿಧಗಳಿದೆ. ಇಂದು ದೋಸೆ (Dosa) ಹಿಟ್ಟು ಸಿದ್ಧ ರೂಪದಲ್ಲಿ ಅಂಗಡಿಗಳಲ್ಲಿ ಸಿಗುತ್ತಿರುವ ಕಾರಣ ನೆನೆಸಿಟ್ಟು ರುಬ್ಬುವ ತೊಂದರೆಯೇ ಇಲ್ಲ. ಆದರೆ ಮನೆಯಲ್ಲಿಯೇ ಅಕ್ಕಿ, ಉದ್ದಿನಬೇಳೆಯನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ರುಬ್ಬುವ ಮೂಲಕ ಹೆಚ್ಚಿನ ಕಷ್ಟವಿಲ್ಲದೇ ರುಚಿಕರ ದೋಸೆ ತಯಾರಿಸಬಹುದು.

ಹಿಂದಿನಿಂದಲೂ ಮಸಾಲೆ ದೋಸೆ ಎಲ್ಲರಿಗೂ ಇಷ್ಟ. ಈ ಮಸಾಲೆಯನ್ನು ಕೊಂಚ ಬದಲಿಸುವ ಮೂಲಕ ಈ ದೋಸೆಯ ರುಚಿಯನ್ನ ಭಿನ್ನವಾಗಿಸಿ ಇನ್ನಷ್ಟು ರುಚಿಕರವಾಗಿಸಬಹುದು. ದೋಸೆಯ ರುಚಿಯೇ ವಿಭಿನ್ನ , ಮಸಾಲೆ ದೋಸೆ, ದಾವಣಗೆರೆ ಬೆಣ್ಣೆ ದೋಸೆ, ನೀರು ದೋಸೆ, ರಾಗಿ ದೋಸೆ, ಪುದೀನಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ಗ್ರೀನ್ ಪೀಸ್ ದೋಸೆ ಹೀಗೆ ಇದರ ಪಟ್ಟಿ ಬೆಳೆಯುತ್ತದೆ. ನಿಮಗೆ ಯಾವಾಗಲೂ ಒಂದೇ ತರ ದೋಸೆ ಸೇವನೆ ಮಾಡುವುದು ನಿಜಕ್ಕೂ ಬೋರ್ ಆಗುತ್ತದೆ. ಆದರೆ ಅದಕ್ಕೆ ತರಕಾರಿಗಳನ್ನು ಹಾಕಿ ಮಾಡುವುದರಿಂದ ಆರೋಗ್ಯಕರ ಕೂಡ. ಈ ಬಾರಿ ನೀವು ಎಲೆ ಕೋಸಿನ ದೋಸೆ ಮಾಡಿ ಸವಿಯಬಹುದು. ಹೇಗೆ ಎಂಬುದು ಇಲ್ಲಿದೆ

ಎಲೆಕೋಸಿನ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

3 ಒಣಗಿದ ಕೆಂಪು ಮೆಣಸಿನಕಾಯಿ

1 ಇಂಚು ಶುಂಠಿ

1 ಎಲೆಕೋಸು

ಕಪ್ ಅಕ್ಕಿ

2 ಚಮಚ ಉದ್ದಿನ ಬೇಳೆ

½ ಟೀಸ್ಪೂನ್ ಮೆಂತ್ಯೆ


1 ಕಪ್ ತೆಂಗಿನಕಾಯಿ


2 ಟೀಸ್ಪೂನ್ ಕೊತ್ತಂಬರಿ ಬೀಜ


1 ಚಮಚ ಜೀರಿಗೆ


¼ ಕಪ್ ಬೆಲ್ಲ


3 ಚಮಚ ಹುಣಸೆಹಣ್ಣಿನ ತಿರುಳು


ಅರ್ಧ ಟೀಸ್ಪೂನ್ ಅರಿಶಿನ


1 ಟೀಸ್ಪೂನ್ ಉಪ್ಪು


1 ಕಪ್ ನೀರು




ಇದನ್ನೂ ಓದಿ: ಪುರುಷರೇ, ಗಡ್ಡದ ಕೂದಲು ಉದುರುತ್ತಿದ್ರೆ ಹೀಗೆ ಮಾಡ್ಬೇಕಂತೆ

ಎಲೆಕೋಸಿನ ದೋಸೆ ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ 1 ಕಪ್ ಅಕ್ಕಿ, 2 ಟೀಸ್ಪೂನ್ ಉದ್ದಿನ ಬೇಳೆ ಮತ್ತು ½ ಟೀಸ್ಪೂನ್ ಮೆಂತ್ಯೆ ಹಾಕಿ ಅದಕ್ಕೆ,  3 ಒಣ ಮೆಣಸಿನಕಾಯಿ ಸೇರಿಸಿ, 6 ರಿಂದ 7 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಡಿ. ಈ ಎಲ್ಲಾ ಪದಾರ್ಥಗಳು ಚೆನ್ನಾಗಿ ನೆನೆಯುವುದರಿಂದ ರುಬ್ಬಿಕೊಳ್ಳಲು ಸಹಾಯ ಮಾಡುತ್ತದೆ. 



ನಂತರ ಮಿಕ್ಸಿ ಜಾರ್ ಗೆ ನೆನೆಸಿದ ಮೆಣಸಿನ ಕಾಯಿ ಮಾತ್ರ ಹಾಗೂ ಮೆಣಸಿನಕಾಯಿ ಹಾಕಿ ಅದಕ್ಕೆ 1 ಕಪ್ ತೆಂಗಿನಕಾಯಿ, 2 ಚಮಚ ಕೊತ್ತಂಬರಿ ಬೀಜ, 1 ಚಮಚ ಜೀರಿಗೆ, ¼ ಕಪ್ ಬೆಲ್ಲ,  ಸ್ವಲ್ಪ ಹುಣಸೆ ರಸ, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಹಾಕಿ, ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅಕ್ಕಿ ಮತ್ತು ಉದ್ದಿನಬೇಳೆಯನ್ನು ರುಬ್ಬಿಕೊಂಡು ಈ ಮಸಾಲೆಯ ಮಿಶ್ರಣಕ್ಕೆ ಹಾಕಿ. ಯಾವಾಗಲೂ ಅಕ್ಕಿ ಮತ್ತು ಮಸಾಲೆಯನ್ನು ಬೇರೆ ಬೇರೆ ರುಬ್ಬಿಕೊಳ್ಳಿ. ಈಗ ಈ ಮಿಶ್ರಣಗಳನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. 




ಇದನ್ನೂ ಓದಿ: ಬೆಂಗಳೂರಿನಲ್ಲಿ ಟೇಸ್ಟಿ ಐಸ್​ಕ್ರೀಂ ಎಲ್ಲಿ ಸಿಗುತ್ತೆ? ಇಲ್ಲಿದೆ ಪಾರ್ಲರ್​ಗಳ ಪಟ್ಟಿ

ನಂತರ ಈ ಮಿಶ್ರಣಕ್ಕೆ  ಎಲೆಕೋಸು ಮತ್ತು 1 ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಗ್ಯಾಸ್​ ಮೇಲೆ ಪ್ಯಾನ್​ ಇಟ್ಟು, ಎಣ್ಣೆ ಹಾಕಿ ಕಾಯಿಸಿ. ಪ್ಯಾನ್​ ಕಾದ ನಂತರ ಹಿಟ್ಟನ್ನು ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿ. 


Published by:Sandhya M
First published: