Breakfast Recipe: ಬೆಳಗಿನ ಉಪಹಾರಕ್ಕೆ ಹೆಲ್ದಿ ಗೋಧಿ ರೊಟ್ಟಿ ಮಾಡಿ

ಅದೇ ಮಾಮೂಲಿ ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ದರೆ, ಈ ಗೋಧಿ ರೊಟ್ಟಿಯನ್ನೊಮ್ಮೆ ಟ್ರೈ ಮಾಡಿ. ಗೋಧಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಈ ರೊಟ್ಟಿ ನಾಲಗೆಗೆ ಒಳ್ಳೆ ರುಚಿ ನೀಡುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮ್ಯಾನವಾಗಿ ಮಹಿಳೆಯರು (Women) ಬೆಳಗಿನ ಉಪಹಾರವಾಗಿ (Breakfast) ದೋಸೆ, (Dosa) ಇಡ್ಲಿ ಹಾಗೂ ಅನ್ನದ ವಿವಿಧ ಅಡುಗೆಗಳನ್ನು ಮಾಡ್ತಾರೆ. ರೊಟ್ಟಿ ಮಾಡೋದು ತೀರಾ ಕಡಿಮೆ.  ಅಕ್ಕಿ ರೊಟ್ಟಿ, ರಾಗಿ ರೊಟ್ಟಿ ಆರೋಗ್ಯಕ್ಕೆ (Health) ಒಳ್ಳೆದು ಅನ್ನೋದು ಎಲ್ಲರಿಗೂ ಹಾಗಾಗೇ ಮನೆಯಲ್ಲಿ ರೊಟ್ಟಿ (Rotti) ಮಾಡ್ತಿವಿ. ಅದೇ ಮಾಮೂಲಿ ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ದರೆ, ಈ ಗೋಧಿ ರೊಟ್ಟಿಯನ್ನೊಮ್ಮೆ ಟ್ರೈ ಮಾಡಿ. ಗೋಧಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಈ ರೊಟ್ಟಿ ನಾಲಗೆಗೆ ರುಚಿ ನೀಡುವುದು. ಬೆಳಿಗ್ಗೆ ತಿಂಡಿಗೆ, ಸಂಜೆ ಸ್ನಾಕ್ ಗೆ ಕೂಡ ಈ ರೊಟ್ಟಿ ಮಾಡಬಹುದು. ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ಹಂತಹಂತವಾಗಿ ನೋಡೋಣ.

ಬೇಕಾಗುವ ಸಾಮಗ್ರಿಗಳು:

ಅಕ್ಕಿಹಿಟ್ಟು – 1 ಕಪ್
ಗೋಧಿ ಹಿಟ್ಟು – 2ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಅರಿಸಿನ ಪುಡಿ – ಕಾಲು ಚಮಚ
ಅಚ್ಛಾ ಖಾರದಪುಡಿ – ಮುಕ್ಕಾಲು ಚಮಚ
ಜೀರಿಗೆ – ಅರ್ಧ ಚಮಚ
ಗರಂ ಮಸಾಲಾ -ಅರ್ಧ ಚಮಚ
ಹಸಿ ಮೆಣಸಿನಕಾಯಿ – 2 (ಸಣ್ಣಗೆ ಹೆಚ್ಚಿದ್ದು)
ಕರಿ ಬೇವು – 10
ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
ಕೊತ್ತಂಬರಿ ಸೊಪ್ಪು – 3 ರಿಂದ 4 ದೊಡ್ಡ ಚಮಚ
ಗೋಡಂಬಿ ಚೂರುಗಳು – 10
ಮೊಸರು – 1 ಕಪ್
ತೆಂಗಿನ ತುರಿ – ಅರ್ಧ ಕಪ್
ನೀರು – ಸ್ವಲ್ಪ
ಎಣ್ಣೆ – ಸ್ವಲ್ಪ

ಇದನ್ನೂ ಓದಿ: Breakfast Recipe: ಬೆಳಗಿನ ಬ್ರೇಕ್​ಫಾಸ್ಟ್​ಗೆ ಮಾಡಿ ರುಚಿಕರ ಮೆಂತ್ಯ ರೋಟಿ

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಗೆ 1 ಕಪ್ ಅಕ್ಕಿಹಿಟ್ಟು, 2 ಕಪ್ ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಅರಿಸಿನ ಪುಡಿ, ಮುಕ್ಕಲು ಚಮಚ ಅಚ್ಚ ಖಾರದಪುಡಿ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಗರಂ ಮಸಾಲ, 1 ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, 10 ಕರಿ ಬೇವಿನ ಎಲೆಗಳನ್ನು ಕೈಯಿಂದ ಮುರಿದು ಹಾಕಿ, ನಂತರ ಇದಕ್ಕೆ 1 ಸಣ್ಣಗೆ ಹೆಚ್ಚಿದ ಈರುಳ್ಳಿ, 3 ರಿಂದ ೪ ದೊಡ್ಡ ಚಮಚ ಕೊತ್ತಂಬರಿ ಸೊಪ್ಪು, 10 ಗೋಡಂಬಿ ಚೂರುಗಳನ್ನು ಹಾಕಿ ಚೆನ್ನಾಗಿ ಕಲಸಿ.

ನಂತರ ಇದಕ್ಕೆ 1 ಕಪ್ ಮೊಸರು, ಅರ್ಧ ಕಪ್ ತೆಂಗಿನ ತುರಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ನಾಡಿ. ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ.

ಒಂದು ಬಟರ್‌ ಪೇಪರ್‌ ಮೇಲೆ ಎಣ್ಣೆ ಸವರಿ, ಅದರ ಮೇಲೆ ಹಿಟ್ಟಿನ ಉಂಡೆ ಇಟ್ಟು ಸಮವಾಗಿ ತಟ್ಟಿ.

ನಂತರ ಕಾವಲಿ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ , ಅದರ ಮೇಲೆ ತಟ್ಟಿದ ರೊಟ್ಟಿ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿ ಚೆನ್ನಾಗಿ ಬೇಯಿಸಿ.

ಈ ರುಚಿಯಾದ ಮಸಾಲೆ ಗೋಧಿ ರೊಟ್ಟಿಯನ್ನು ನಿಮಗಿಷ್ಟವಾದ ಚಟ್ನಿ ಅಥವಾ ಸಾಂಬಾರು ಜೊತೆಗೆ ಸವಿಯಿರಿ.

ಇದನ್ನೂ ಓದಿ: Breakfast Recipe: ಬೆಳಗಿನ ತಿಂಡಿಗೆ ಮನೆಯಲ್ಲೇ ಫಟಾಫಟ್ ಮಾಡಿ ಹೆಲ್ದಿ ಓಟ್ಸ್ ಇಡ್ಲಿ

ಈರುಳ್ಳಿ ಚಟ್ನಿ

ಬೇಕಾಗುವ ಪದಾರ್ಥಗಳು : 

10 ಸಣ್ಣ ಈರುಳ್ಳಿ, 1 ಸಣ್ಣ ಬೆಳ್ಳುಳ್ಳಿ, 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಉದ್ದಿನ ಬೇಳೆ,  1 ಚಮಚ ಕಡೆಲೆ ಬೇಳೆ,  1 ಟೀಸ್ಪೂನ್ ಕೊತ್ತಂಬರಿ ಬೀಜ, 4 ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಸಣ್ಣ ತುಂಡು ಹುಣಸೆಹಣ್ಣು, ಅರ್ಧ ಟೀಸ್ಪೂನ್ ಉಪ್ಪು , ಕಾಲು ಕಪ್ ನೀರು 1 ಟೀಸ್ಪೂನ್ ಸಾಸಿವೆ ಪಿಂಚ್ ಹಿಂಗ್  ಸ್ವಲ್ಪ ಅರಿಶಿನ 1 ಟೀಸ್ಪೂನ್ ಮೆಣಸಿನ ಪುಡಿ

ಮಾಡುವ ವಿಧಾನ: 

ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ. ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ. ಬಾಣಲಿಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ.ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, ಅರ್ಧ ಟೀಸ್ಪೂನ್ ಉಪ್ಪು ಮತ್ತು ನೀರು ಸೇರಿಸಿ. ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್‌ ಆಗಿ ರುಬ್ಬಿಕೊಳ್ಳಿ.
Published by:Pavana HS
First published: