ದೋಸೆ (Dose) ಹಿಟ್ಟಿನಲ್ಲಿ ರುಚಿಕರ ಪಡ್ಡು ತಯಾರಿಸಬಹುದು. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ, ಈರುಳ್ಳಿ (Onion), ಕ್ಯಾರೆಟ್ ಹಾಕಿ ಒಳ್ಳೆ ಪಡ್ಡು ತಯಾರಿಸಬಹುದು. ದೋಸೆಗೆ ಎಂದು ರುಬ್ಬಿದ ಹಿಟ್ಟು ಉಳಿತು ಏನಪ್ಪಾ ಮಾಡೋದು ಅನ್ನೋದು ಪ್ರತಿಯೊಬ್ಬ ಮಹಿಳೆಯರ (Women) ಚಿಂತೆಯಾಗಿರುತ್ತೆ. ಆದ್ರೆ ಚಿಂತೆ ಮಾಡ್ಬೇಡಿ, ಈ ರೀತಿ ಪಡ್ಡು (Paddu) ಮಾಡಿದ್ರೆ ಸಾಕು ಎಲ್ಲ ಖಾಲಿಯಾಗುತ್ತೆ ಅಷ್ಟು ರುಚಿಕರವಾಗಿರುತ್ತೆ ಈ ಪಡ್ಡು. ಮಕ್ಕಳಿಗಂತೂ (Children) ತುಂಬಾ ಇಷ್ಟವಾಗುತ್ತೆ. ಪಡ್ಡು ಜೊತೆ ಚಟ್ನಿ ಒಳ್ಳೆಯ ಕಾಂಬಿನೇಷನ್, (Combination) ಪಡ್ಡುವಿನ ರುಚಿ ಹೆಚ್ಚಿಸಲು ನೀವು ಹೀಗೆ ಮಾಡಿ.
ಸೆಟ್ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು ಇತ್ಯಾದಿಗಳನ್ನು ಸೇರಿಸಿರುವುದರಿಂದ ಮತ್ತಷ್ಟು ರುಚಿಕರವಾಗಿರುತ್ತೆ. ಪಡ್ಡು ಬೆಳಗಿನ ತಿಂಡಿಗೆ ಅತ್ಯುತ್ತಮವಾಗಿದೆ. ಜೊತೆಗೆ ಮಕ್ಕಳಿಗೆ ಮಧ್ಯಾಹ್ನದ ಟಿಫಿನ್ ಬಾಕ್ಸ್ಗೂ ಪಡ್ಡು ಮಾಡಿಕೊಡಬಹುದು, ಸಂಜೆಯ ಸ್ನ್ಯಾಕ್ಸ್ ಎಲ್ಲಕ್ಕೂ ಪಡ್ಡು ಚೆನ್ನಾಗಿರುತ್ತದೆ.
ಪಡ್ಡು ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಸೆಟ್ ದೋಸೆ ಹಿಟ್ಟು
* ಸಣ್ಣಗೆ ಹೆಚ್ಚಿದ ಈರುಳ್ಳಿ - 5
* ಸಕ್ಕರೆ
* ಸಣ್ಣಗೆ ಹೆಚ್ಚಿದ ಹಸಿಮೆಣಸು 6 - 7
* ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆಗಳು 15 - 20
* ಬೇಯಿಸಲು ಎಣ್ಣೆ
ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
ಪಡ್ಡು ಮಾಡುವ ವಿಧಾನ:
1. ಸೆಟ್ ದೋಸೆಯ ವಿಧಾನದಲ್ಲಿಯೇ ಹಿಟ್ಟು ತಯಾರಿಸಿಕೊಂಡು 7 - 8 ಘಂಟೆ ಹುದುಗು ಬರಲು ಬಿಟ್ಟು, ನಂತರ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ.
2. ನಂತರ ಈ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
3. ಪಡ್ಡು ಕಾವಲಿಯನ್ನು ಕಾಯಲಿಟ್ಟು, ಪ್ರತಿ ತೂತಿನಲ್ಲೂ 1 ಚಮಚದಷ್ಟು ಎಣ್ಣೆ ಹಾಕಬೇಕು.
4. ಒಂದು ದೊಡ್ಡ ಚಮಚದಲ್ಲಿ ಪಡ್ಡು ಹಿಟ್ಟನ್ನು ತೆಗೆದುಕೊಂಡು, ಎಲ್ಲದಕ್ಕೂ ಮುಕ್ಕಾಲು ಭಾಗದವರೆಗೆ ಹಾಕಿ. ಪಡ್ಡು ಉಬ್ಬಿ ಬರಲು ಸ್ವಲ್ಪ ಜಾಗ ಬಿಡಿ.
5. ಪಡ್ಡುವಿನ ತಳಭಾಗ ಹೊಂಬಣ್ಣಕ್ಕೆ ಬರುತ್ತಿದ್ದಂತೆ, ಚಮಚದ ಸಹಾಯದಿಂದ ಪಡ್ಡುವನ್ನು ನಿಧಾನಕ್ಕೆ ಮಗುಚಿ ಇನ್ನೊಂದು ಕಡೆಯೂ ಬೇಯಿಸಬೇಕು. ಬಿಸಿ ಬಿಸಿ ಪಡ್ಡು ತೆಂಗಿನಕಾಯಿ ಚಟ್ನಿ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.
ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ
ಸಬ್ಬಕ್ಕಿ ಸೊಪ್ಪಿನ ಇಡ್ಲಿ ಮಾಡುವ ವಿಧಾನ
ಸಾಮಾಗ್ರಿಗಳು
ಹಿಟ್ಟಿಗಾಗಿ ರವೆ - 1 ಕಪ್,. ಮೊಸರು - 1/4 ಕಪ್, ಕೊತ್ತಂಬರಿ ಸೊಪ್ಪು - 1 ಕಪ್, ಸಬ್ಬಕ್ಕಿ ಸೊಪ್ಪು 1 ಕಪ್ ಚಮಚ (ಕತ್ತರಿಸಿದ್ದು), ಫ್ರುಟ್ ಸಾಲ್ಟ್ - 3/4 ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ - 1 ಚಮಚ, ತುಪ್ಪ - 1/2 ಚಮಚ, ಉದ್ದಿನ ಬೇಳೆ - 1 ಚಮಚ, ಸಾಸಿವೆ - 1/2 ಚಮಚ, ಗೋಡಂಬಿ - 1 ಚಮಚ (ತುಂಡರಿಸಿದ್ದು), ಜೀರಿಗೆ - 1/2 ಚಮಚ, ಕರಿಬೇವು - 4, ಹಸಿಮೆಣಸು - 2 ಚಮಚ (ಚಿಕ್ಕದಾಗಿ ಕತ್ತರಿಸಿದ್ದು), ಚಿಟಿಕೆಯಷ್ಟು ಇಂಗು
ಮಾಡುವ ವಿಧಾನ:
1. ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ರವೆ, ಮೊಸರು ಮತ್ತು ಉಪ್ಪನ್ನು ಸೇರಿಸಿ. ನಿಧಾನವಾಗಿ ನೀರನ್ನು ಸೇರಿಸಿಕೊಂಡು ಹಿಟ್ಟನ್ನು ಮಿಶ್ರ ಮಾಡಿಕೊಳ್ಳಿ ಗಂಟುಗಳು ಆಗದಂತೆ ಕಲಸುತ್ತಿರಿ.
3 .ಎಲ್ಲವೂ ಚೆನ್ನಾಗಿ ಹುರಿದ ಮೇಲೆ, ಹಿಟ್ಟಿಗೆ ಒಗ್ಗರಣೆಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಫ್ರುಟ್ ಸಾಲ್ಟ್ ಅನ್ನು ಸೇರಿಸಿ ಮತ್ತು ಸ್ವಲ್ಪ ನೀರು ಮಿಶ್ರ ಮಾಡಿ. ಹಿಟ್ಟಿನಲ್ಲಿ ಹುದುಗು ಉಂಟಾಗುತ್ತದೆ ಮತ್ತು ಚೆನ್ನಾಗಿ ಮಿಶ್ರ ಮಾಡಿ.
4. ಈಗ ಇಡ್ಲಿ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿ. ಇಡ್ಲಿ ತಟ್ಟೆಗೆ ಸ್ವಲ್ಪ ಹಿಟ್ಟನ್ನು ಹಾಕಿ ಮತ್ತು ಸ್ಟೀಮರ್ನಲ್ಲಿ ತಟ್ಟೆಯನ್ನಿರಿಸಿ.
5. ಸ್ಟೀಮ್ಗಾಗಿ 7-8 ನಿಮಿಷಗಳು ಬೇಕು. ಚಮಚದ ಸಹಾಯದಿಂದ ಇಡ್ಲಿಗಳನ್ನು ಹೊರತೆಗೆಯಿರಿ ಮತ್ತು ಪ್ಲಾಟರ್ ಮೇಲಿರಿಸಿ.
6. ಬಿಸಿಯಾದ ರವಾ ಇಡ್ಲಿ ಸೇವನೆಗೆ ಸಿದ್ಧವಾಗಿದೆ. ಇಡ್ಲಿಯೊಂದಿಗೆ ಬಿಸಿ ಸಾಂಬಾರ್ ಇಲ್ಲವೇ ಚಟ್ನಿ ಉತ್ತಮ ಕಾಂಬಿನೇಶನ್ ಆಗಿದೆ. ಈ ವಿಶಿಷ್ಟ ರೆಸಿಪಿಯನ್ನು ನೀವೂ ಟ್ರೈ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ