BreakFast Recipe: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹಾಗೂ ರುಚಿಕರ ಮೊಳಕೆ ಕಾಳಿನ ಬಾತ್

ಪೋಷಕಾಂಶ (Nutrition) ಭರಿತ ಆಹಾರ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿ ನಮ್ಮ ದೈಹಿಕ ಚಟುವಟಿಕೆಗೆ ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಬೆಳಗಿನ ಉಪಹಾರಕ್ಕೆ ಈ ಬಾತ್​ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ದಿನದಲ್ಲಿ ಆರೋಗ್ಯವಾಗಿರುವುದು (Healthy) ಅತಿ ಮುಖ್ಯವಾಗಿರುತ್ತದೆ. ಆರೋಗ್ಯವೇ ಭಾಗ್ಯ ಎಂಬಂತೆ ಉತ್ತಮ ಆರೋಗ್ಯವಿದ್ದರೆ ಮಾತ್ರ ಬಾಳು ಹಸನಾಗುತ್ತದೆ. ಈಗ ಜನರು ಆರೋಗ್ಯವಂತ ಆಹಾರದ ಕಡೆಗೆ ತಮ್ಮ ಗಮನವನ್ನು ಹರಿಸುತ್ತಿದ್ದಾರೆ. ಪೋಷಕಾಂಶ (Nutrition) ಭರಿತ ಆಹಾರ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿ ನಮ್ಮ ದೈಹಿಕ ಚಟುವಟಿಕೆಗೆ ಶಕ್ತಿಯನ್ನು ನೀಡುತ್ತದೆ. ಇಂದಿನ ಲೇಖನದಲ್ಲಿ ಒಂದು ಆರೋಗ್ಯಯುತ ಆಹಾರ ಪದ್ಧತಿಯನ್ನು (Eating Habits)  ನಾವು ನಿಮಗಿಲ್ಲಿ ನೀಡಿದ್ದು ಅವು ನಿಜವಾಗಿಯೂ ನಿಮಗೆ ಫಲಪ್ರದವಾಗಿದೆ. ಇಲ್ಲಿ ನೀಡಿರುವ ವೀಡಿಯೋ ರೆಸಿಪಿಯು ಖಂಡಿತವಾಗಿಯೂ ಈ ಪಲಾವ್ (Palov) ರೆಸಿಪಿಯನ್ನು ತಯಾರಿಸಲು ನಿಮಗೆ ಫಲಕಾರಿಯಾಗಿದೆ.

ಸಾಮಾಗ್ರಿಗಳು

* ಬ್ರೌನ್ ರೈಸ್ - 2 ಕಪ್‌ಗಳು

* ಮಿಶ್ರ ಮಾಡಿದ ಧಾನ್ಯ - 1 ಕಪ್ (ನೀರಿನಲ್ಲಿ ನೆನೆಸಿದ್ದು)

* ಈರುಳ್ಳಿ - 1 (ಕತ್ತರಿಸಿದ್ದು)

* ಬೆಳ್ಳುಳ್ಳಿ - 3-4 ಎಸಳು (ತುಂಡರಿಸಿದ್ದು)

* ಶುಂಠಿ - 1 ಸ್ಪೂನ್ (ತುಂಡರಿಸಿದ್ದು)

* ಟೊಮೇಟೊ - 1 (ಕತ್ತರಿಸಿದ್ದು)

* ಕ್ಯಾಪ್ಸಿಕಂ - 1 (ಕತ್ತರಿಸಿದ್ದು)

* ಉಪ್ಪು - ರುಚಿಗೆ ತಕ್ಕಷ್ಟು

* ಅರಶಿನ ಹುಡಿ - 1 ಸ್ಪೂನ್

* ಮೆಣಸಿನ ಹುಡಿ - 1 ಸ್ಪೂನ್

* ಪಾವ್ ಭಾಜಿ ಮಸಾಲಾ - 2 ಸ್ಪೂನ್

* ಜೀರಿಗೆ ಹುಡಿ - 1 ಸ್ಪೂನ್

* ಎಣ್ಣೆ - 2 ಸ್ಪೂನ್

* ನೀರು - 1/2 ಕಪ್

ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ   

ಮಾಡುವ ವಿಧಾನ: 1.

ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ ಹಾಕಿ. ಅದು ಒಡೆಯಲು ಬಿಡಿ.

2. ಈಗ ಕತ್ತರಿಸಿದ ಈರುಳ್ಳಿಯನ್ನು ಅದಕ್ಕೆ ಹಾಕಿ ಅದು ಕೆಂಪಗಾಗುವವರೆಗೆ ಹುರಿಯಿರಿ.

3. ನಂತರ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ, ಅರಶಿನ, ಮೆಣಸಿನ ಹುಡಿ ಮತ್ತು ಟೊಮೇಟೊವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ 3-4 ನಿಮಿಷಗಳ ಕಾಲ ಬೇಯಿಸಿ.

4. ಸ್ವಲ್ಪ ನೀರು ಹಾಕಿ ಟೊಮೇಟೋ ಬೇಯಲು ಬಿಡಿ

5. ನಂತರ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ ಮತ್ತು ಸ್ವಲ್ಪ ನೀರು ಹಾಕಿ ಅದನ್ನು ಬೇಯಿಸಿ.

6. ಈಗ ಪಾವ್ ಬಾಜಿ ಮಸಾಲಾ, ನೆನೆಸಿದ ಧಾನ್ಯಗಳು ಮತ್ತು ಉಪ್ಪು ಸೇರಿಸಿ.

7. ಈಗ ಬೇಯಿಸಿದ ಬ್ರೌನ್ ರೈಸ್ ಸೇರಿಸಿ ಮತ್ತು ಚೆನ್ನಾಗಿ ಕಲಸಿ.

8. ಒಮ್ಮೆ ಪೂರ್ತಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ ಮತ್ತು ಸವಿಯಲು ನೀಡಿ ಈ ಆರೋಗ್ಯವಂತ ಪಲಾವ್ ರೆಸಿಪಿಯನ್ನು ನಿಮ್ಮ ಆರೋಗ್ಯದ ಸುಧಾರಿಕೆಗಾಗಿ ಪ್ರಯತ್ನಿಸಿ ಮತ್ತು ಆರೋಗ್ಯವಂತರಾಗಿರಿ.

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ರುಚಿಕರ ಪಾಲಕ್​ ರೈಸ್​

ಬೇಕಾಗುವ ಪದಾರ್ಥಗಳು:

* 2 ಕಪ್ ಅನ್ನ
* 1 ಕಪ್ ತೊಳೆದು ಕತ್ತರಿಸಿದ ಪಾಲಾಕ್ ಸೊಪ್ಪು
* 1 ದೊಡ್ಡ ಈರುಳ್ಳಿ
* 3-4 ಹಸಿರು ಮೆಣಸಿನಕಾಯಿ
* 1/2 ಚಕ್ಕೆ, 3 ಕರಿಮೆಣಸು
* 1 ಚಮಚ ಸಾಸಿವೆ, 1 ಚಮಚ ಜೀರಿಗೆ, ಲವಂಗ
* 1/2 ಕಪ್ ಗೋಡಂಬಿ
* ಉಪ್ಪು, ಎಣ್ಣೆ, ಒಂದು ನಿಂಬೆಹಣ್ಣು

ಪಾಲಾಕ್ ರೈಸ್ ಮಾಡುವ ವಿಧಾನ:

1. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಸಾಸಿವೆ, ಜೀರಿಗೆ, ಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ ಹಾಕಿ ಕೆಲವು ನಿಮಿಷ ಹುರಿಯಬೇಕು. ನಂತರ ಕತ್ತರಿಸಿಕೊಂಡ ಪಾಲಾಕ್ ಸೊಪ್ಪನ್ನು ಹಾಕಿ ಹುರಿಯಬೇಕು.
2. ಇದಕ್ಕೆ 1/2 ಕಪ್ ನೀರು ಹಾಕಿ ಕುದಿಯುವವರೆಗೂ ಸಣ್ಣ ಉರಿಯಲ್ಲಿಡಬೇಕು.
3. ನಂತರ ಲವಂಗ, ಚಕ್ಕೆ, ಕರಿಮೆಣಸು ಮತ್ತು ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಂಡು ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆಗೆ ಹಾಕಿ ಹುರಿಯಬೇಕು.
4. ಪಾಲಾಕ್ ಮಿಶ್ರಣದೊಂದಿಗೆ ರುಬ್ಬಿದ ಮಿಶ್ರಣವನ್ನು ಬೆರೆಸಿ ಅಗತ್ಯವಿದ್ದರೆ ಉಪ್ಪು ಬೆರೆಸಿ ಚೆನ್ನಾಗಿ ತಿರುಗಿಸಿ ತಣ್ಣಗಾಗಲು ಬಿಡಬೇಕು. (ಅನ್ನಕ್ಕೂ ಉಪ್ಪು ಹಾಕಿದ್ದರೆ ಎಚ್ಚರಿಕೆಯಿಂದ ಉಪ್ಪನ್ನು ಬೆರೆಸಿಕೊಳ್ಳಬೇಕು)
5. ಈ ಪಾಲಾಕ್ ಮಸಾಲೆಯೊಂದಿಗೆ ಅನ್ನ ಬೆರೆಸಿ ನಿಂಬೆ ರಸವನ್ನು ಇದರ ಮೇಲೆ ಹಿಂಡಿ ಚೆನ್ನಾಗಿ ಕಲೆಸಬೇಕು. ಈಗ ಟೇಸ್ಟಿ ಪಾಲಾಕ್ ರೈಸ್ ತಿನ್ನಲು ರೆಡಿಯಾಗಿರುತ್ತೆ.
Published by:Pavana HS
First published: