BreakFast Recipe: ಮಕ್ಕಳಿಗಾಗಿ ರುಚಿಕರವಾದ ದಹಿ ವಡಾ ಮಾಡಿ ಕೊಡಿ

ಮಕ್ಕಳಿಗೆ ಮೊಸರಲ್ಲಿ ವಿಧ ವಿಧದ ಅಡುಗೆ ಮಾಡಿ ಕೊಡಬಹುದು, ಆದ್ರೆ ಮಕ್ಕಳ ಬೆಳಗಿನ ಉಪಹಾರಕ್ಕೆ (BreakFast) ಮೊಸರು ವಡೆ ಅತ್ಯುತ್ತಮವಾಗಿದೆ. ಮಕ್ಕಳಿಗೆ ಬೆಳಗಿನ ಉಪಹಾರಕ್ಕೆ ಪೌಷ್ಠಿಕಾಂಶವುಳ್ಳ ಆಹಾರ ನೀಡೋದು ಅತ್ಯಗತ್ಯವಾಗಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬ್ಯುಸಿ ಜೀವನದಲ್ಲಿ (Busy Life Style) ನಾವು ಯಾವಾಗಲೂ ಸುಲಭವಾಗಿರುವುದನ್ನು ಎದುರು ನೋಡುತ್ತೇವೆ. ಮಿಂಚಿನ ವೇಗದಲ್ಲಿ ನಾವು ತಯಾರು ಮಾಡುವಂತಹ ತಿಂಡಿಗಳು ನಮಗೆ ಸಮಯವನ್ನು (Time) ಉಳಿಸುವುದರೊಂದಿಗೆ ಇನ್ನಿತರ ಕೆಲಸಗಳನ್ನು ಮಾಡಲು ನಮಗೆ ಸಹಾಯ ಮಾಡುತ್ತದೆ. ಅದಕ್ಕಾಗಿಯೇ  ನಿಮ್ಮ ಮನಸ್ಸಿಗೆ ಆನಂದವನ್ನು ಬಾಯಿಗೆ ರುಚಿಯನ್ನು ನೀಡುವ ಮೊಸರು ವಡೆ ತಯಾರಿಸೋ ಸುಲಭವಾದ ವಿಧಾನವನ್ನು ತಿಳಿದುಕೊಳ್ಳಿ. ಇದು ದೇಹಕ್ಕೆ ಮೊಸರಿನ ಪ್ರೋಟೀನ್ (Protein) ಅನ್ನು ನೀಡುವುದರೊಂದಿಗೆ ಇದನ್ನು ತಯಾರಿಸುವಾಗ ನಾವು ಹಾಕುವ ಪದಾರ್ಥಗಳು ಸಹ ದೇಹಕ್ಕೆ ಆರೋಗ್ಯಕಾರಿ (Healthy) ಅಂಶವನ್ನು ನೀಡುತ್ತದೆ.  ಮೊಸರು ವಡೆ (Dahi Vada) ಮಕ್ಕಳಿಗೂ ತುಂಬಾನೇ ಇಷ್ಟವಾಗುತ್ತೆ.

ಮೊಸರು ಅಧಿಕ ಪೌಷ್ಠಿಕಾಂಶ ಹೊಂದಿರೋ ಆಹಾರವಾಗಿದೆ. ಮೊಸರನ್ನು ಮಕ್ಕಳಿಗೆ ನೀಡೋದು ತುಂಬಾ ಒಳ್ಳೆಯದು. ಮಕ್ಕಳ ದೇಹಕ್ಕೆ ಬೇಕಾಗಿರೋ ಪ್ರೋಟೀನ್​ ಮೊಸರಿನಿಂದ ಸಿಗುತ್ತೆ. ಹೀಗಾಗಿ ಮೊಸರನ್ನು ಮಕ್ಕಳಿಗೆ ನೀಡೋದನ್ನು ತಪ್ಪಿಸಬೇಡಿ. ಕೆಲ ಮಕ್ಕಳು ಮೊಸರನ್ನು ಇಷ್ಟಪಡುವುದಿಲ್ಲ. ಬೇಡ ಎಂದು ಹಠ ಮಾಡುತ್ತಾರೆ. ಮೊಸರು ಅನ್ನ ತಿನ್ನಲು ಇಷ್ಟವಿಲ್ಲದ ಮಕ್ಕಳಿಗೆ ಮೊಸರಲ್ಲಿ ವಿಧ ವಿಧದ ಅಡುಗೆ ಮಾಡಿ ತಿನ್ನಿಸಬಹುದು. ಮಕ್ಕಳ ಬೆಳಗಿನ ಉಪಹಾರಕ್ಕೆ (BreakFast) ಮೊಸರು ವಡೆ ಅತ್ಯುತ್ತಮವಾಗಿದೆ. ಮಕ್ಕಳಿಗೆ ಬೆಳಗಿನ ಉಪಹಾರಕ್ಕೆ ಪೌಷ್ಠಿಕಾಂಶವುಳ್ಳ ಆಹಾರ ನೀಡೋದು ಅತ್ಯಗತ್ಯವಾಗಿದೆ.

ಇದೊಂದು ಸರಳವಾಗಿ ತಯಾರಿಸುವ ತಿಂಡಿಯಾಗಿದ್ದು ನಿಮಗೆ ಹೆಚ್ಚಿನ ಸಮಯವನ್ನು ಇದಕ್ಕೆ ನೀಡುವ ಅಗತ್ಯವಿಲ್ಲ. ದೇಹಕ್ಕೆ ಆರೋಗ್ಯವನ್ನು ಮನೆಮಂದಿಗೆ ರುಚಿಯನ್ನು ಸಂತಸವನ್ನು ನೀಡುವ ಹಾಗೂ ಸರಳವಾಗು ತಯಾರಿಸಬಹುದಾದ ಮೊಸರು ವಡೆ ರೆಸಿಪಿ ನಿಮ್ಮ ಬಾಯಲ್ಲಿ ಖಾದ್ಯದ ರುಚಿಯನ್ನು ಹಾಗೆಯೇ ಇರಿಸುತ್ತದೆ. ಹಾಗಿದ್ದರೆ ಬನ್ನಿ ಮೊಸರು ವಡೆ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ

ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ರೆಸ್ಟೋರೆಂಟ್ ಸ್ಟೈಲ್ ಪನೀರ್ ಪಲಾವ್ ಮಾಡಿ

ಮೊಸರು ವಡೆ ಮಾಡಲು ಬೇಕಾದ ಸಾಮಾಗ್ರಿಗಳು

*ಉದ್ದಿನ ಬೇಳೆ - 1/2 ಕಪ್

*ಹೆಸರು ಬೇಳೆ - 1/2 ಕಪ್

*ಶುಂಠಿ - ಅರ್ಧ ಇಂಚಿನಷ್ಟು

*ಉಪ್ಪು - ಅರ್ಧ ಚಮಚ

*ಹಸಿಮೆಣಸು - 2-3

*ಸೋಡಾ ಪುಡಿ -  ಕಾಲು ಚಮಚ

*ಮೊಸರು - 250 ಗ್ರಾಮ್

*ಉಪ್ಪು - 1 ಚಮಚ

*ಜೀರಿಗೆ - 2 ಚಮಚ

*ಮೆಣಸಿನ ಪುಡಿ - ಕಾಲು ಚಮಚ

*ಚಾಟ್ ಮಸಾಲಾ ಪುಡಿ - 1 ಚಮಚ

*ಕೊತ್ತಂಬರಿ ಸೊಪ್ಪು - 2 ಚಮಚ

ಮೊಸರು ವಡೆ ಮಾಡುವ ವಿಧಾನ

* ಮೊದಲಿಗೆ ನೀವು ಮೊಸರಿಗೆ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಕಡೆದುಕೊಳ್ಳಬೇಕು. ನಂತರ ಮೊಸರಿಗೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ (ಕೊತ್ತಂಬರಿ ಸೊಪ್ಪು ಹೊರತುಪಡಿಸಿ) ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ವಡೆ ತಯಾರಾಗುವವರೆಗೆ ಫ್ರಿಡ್ಜ್‌ನಲ್ಲಿ ಇದನ್ನಿಡಿ.

* ಎರಡೂ ಬೇಳೆಗಳನ್ನು ತೆಗೆದುಕೊಂಡು (ಉದ್ದಿನ ಬೇಳೆ ಹಾಗೂ ಹೆಸರು ಬೇಳೆ) ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು 4-6 ಗಂಟೆಗಳ ಕಾಲ ನೆನೆಸಿ, ಮತ್ತು ಬೇಳೆಗಳಿಂದ ನೀರನ್ನೆಲ್ಲಾ ಬಸಿದುಕೊಳ್ಳಿ. ನಂತರ ಗ್ರೈಂಡರ್‌ನಲ್ಲಿ ಇದನ್ನು ಹಾಕಿ ನೀರು ಹಾಕದೇ ನುಣ್ಣಗೆ ಕಡೆದುಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ಒಂದೆಡೆ ಇರಿಸಿ.

*ಹಿಟ್ಟಿಗೆ ಈಗ ಉಪ್ಪು, ಶುಂಠಿ, ಕತ್ತರಿಸಿದ ಹಸಿಮೆಣಸು ಹಾಕಿ ಹಿಟ್ಟನ್ನು ಮಿಶ್ರ ಮಾಡಿಕೊಳ್ಳಿ. ಹಿಟ್ಟು ತೆಳುವಾಗಿದೆ ಎಂದಾದರೆ 2-3 ಚಮಚದಷ್ಟು ರವೆಯನ್ನು ಸೇರಿಸಿ. ಕೊನೆಗೆ ಸೋಡವನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

ಇದನ್ನೂ ಓದಿ: ಬೆಳಗಿನ ತಿಂಡಿಗೆ ರುಚಿಕರ ಪಾಲಕ್ -ಮೆಂತ್ಯೆ ಸೊಪ್ಪಿನ ರೊಟ್ಟಿ ಮಾಡಿ ಸವಿಯಿರಿ

ಬಳಿಕ ಒಂದು ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಕಾದ ಬಳಿಕ ಉದ್ದಿನ ವಡೆ ಆಕಾರಕ್ಕೆ ಮಾಡಿ ಎಣ್ಣೆಯಲ್ಲಿ ಡೀಪ್​ ಪ್ರೈ ಮಾಡಿ ಬಳಿಕ ತೆಗೆದು ಅದರ ಮೇಲೆ ಮೊಸರು ಬಳಿಕ ಕೊತ್ತಂಬರಿ ಸೊಪ್ಪು ಹಾಕಿದ್ರೆ ಮೊಸರು ವಡೆ ರೆಡಿಯಾಗುತ್ತೆ
Published by:Pavana HS
First published: