Breakfast Recipe: ಬೆಳಗಿನ ಉಪಹಾರಕ್ಕೆ ಮಾಡಿ ರವಾ ಉತ್ತಪ್ಪ

ದೋಸೆ ಬಹುತೇಕ ಎಲ್ಲರ ನೆಚ್ಚಿನ ತಿಂಡಿಗಳಲ್ಲಿ ಒಂದು. ದೋಸೆಯಲ್ಲಿ ನೂರಾರು ವಿಧಾನಗಳಿವೆ. ಅಂಥಾ ನೂರಾರು ಶೈಲಿಯಲ್ಲಿ ಒಂದು ಉತ್ತಪ್ಪ. ಬಿಸಿಬಿಸಿಯಾದ ಹಾಗು ಸ್ಪಂಜಿನಂತೆ ಇರುವ ದೋಸೆಯನ್ನು ಇಷ್ಟಪಡುವವರಿಗೆ ಉತ್ತಪ್ಪ ಬಹಳ ಇಷ್ವವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತೀಯರ (South Indians) ಫೆವರೇಟ್‌ ತಿಂಡಿಗಳಲ್ಲಿ (Favorite Food) ಪ್ರಮುಖವಾದುದು ದೋಸೆ (Dose) ಮತ್ತು ಇಡ್ಲಿ (Idli). ಈ ಪೈಕಿ ಎರಡರಲ್ಲೂ ವೈರೆಟಿ ವೈರೆಟಿ ದೋಸೆ, ಇಡ್ಲಿಗಳಿವೆ. ಇನ್ನು ದೋಸೆ ವಿಚಾರಕ್ಕೆ ಬಂದ್ರೆ ಹಲವು ವೆರೈಟಿ  ದೋಸೆಗಳನ್ನ ( Dose) ಮನೆಯಲ್ಲಿ ಮಾಡ್ತಾರೆ. ದೋಸೆ ಬಹುತೇಕ ಎಲ್ಲರ ನೆಚ್ಚಿನ ತಿಂಡಿಗಳಲ್ಲಿ ಒಂದು. ದೋಸೆಯಲ್ಲಿ ನೂರಾರು ವಿಧಾನಗಳಿವೆ. ಅಂಥಾ ನೂರಾರು ಶೈಲಿಯಲ್ಲಿ ಒಂದು ಉತ್ತಪ್ಪ. ಬಿಸಿಬಿಸಿಯಾದ ಹಾಗು ಸ್ಪಂಜಿನಂತೆ ಇರುವ ದೋಸೆಯನ್ನು ಇಷ್ಟಪಡುವವರಿಗೆ ಉತ್ತಪ್ಪ ಬಹಳ ಇಷ್ವವಾಗುತ್ತದೆ. ಅವಲಕ್ಕಿಯನ್ನೇ ಪ್ರಧಾನವಾಗಿ ಬಳಸಿ ತಯಾರಿಸುವ ಉತ್ತಪ್ಪ ದಕ್ಷಿಣ ಭಾರತದ ಬೆಳಗಿನ ಉಪಹಾರಗಳಲ್ಲಿ ಒಂದು. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಉತ್ತಪ್ಪ ತಯಾರಿಸುವ ವಿಧಾನ ಮುಂದೆ ನೋಡೋಣ:

ಬೇಕಾಗುವ ಸಾಮಾಗ್ರಿಗಳು:

ರವೆ – ಒಂದೂವರೆ ಕಪ್

ಮೊಸರು – 1 ಕಪ್

ಉಪ್ಪು – ರುಚಿಗೆ ತಕ್ಕಷ್ಟು

ಜೀರಿಗೆ – 1 ಚಮಚ

ಹಸಿ ಮೆಣಸಿನಕಾಯಿ – 1 (ಸಣ್ಣಗೆ ಹೆಚ್ಚಿದ್ದು)

ಹಸಿ ಶುಂಠಿ – 2 ದೊಡ್ಡ ಚಮಚ (ಸಣ್ಣಗೆ ಹೆಚ್ಚಿದ್ದು)

ಈರುಳ್ಳಿ – 2 ದೊಡ್ಡ ಚಮಚ (ಸಣ್ಣಗೆ ಹೆಚ್ಚಿದ್ದು)

ಟೊಮೆಟೊ – 1 (ಸಣ್ಣಗೆ ಹೆಚ್ಚಿದ್ದು)

ದೊಡ್ಡ ಮೆಣಸಿನಕಾಯಿ – 2 ದೊಡ್ಡ ಚಮಚ (ಸಣ್ಣಗೆ ಹೆಚ್ಚಿದ್ದು)

ತುರಿದ ಗಜ್ಜರಿ – 2  ದೊಡ್ಡ ಚಮಚ

ಕೊತ್ತಂಬರಿ ಸೊಪ್ಪು – 2 ದೊಡ್ಡ ಚಮಚ

ಉಪ್ಪು – ಕಾಲು ಚಮಚ

ಎಣ್ಣೆ – ಸ್ವಲ್ಪ

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಎಳನೀರಿನ ದೋಸೆ ಮಾಡಿ

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಗೆ ಒಂದೂವರೆ ಕಪ್ ರವೆ, ೧ ಕಪ್ ಮೊಸರು, ಮುಕ್ಕಾಲು ಕಪ್ ನೀರು ಹಾಕಿ ಕಲಸಿ.

ಮುಚ್ಚಳ ಮುಚ್ಚಿ 15 ನಿಮಿಷ ಇಡಿ.

15 ನಿಮಿಷಗಳ ನಂತರ ಹಿಟ್ಟನ್ನು ಇನ್ನೊಂಮ್ಮೆ ಕಲಸಿ, ಕಾಲು ಕಪ್ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ.ನಂತರ ಇದಕ್ಕೆ ರುಚಿಗೆ ತಕ್ಕಷ್ಟುಉಪ್ಪು, 1 ಚಮಚ ಜೀರಿಗೆ, 1 ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ೨ ದೊಡ್ಡ ಚಮಚ ಸಣ್ಣಗೆ ಹೆಚ್ಚಿದ ಹಸಿ ಶುಂಠಿ ಹಾಕಿ ಚೆನ್ನಾಗಿ ಕಲಸಿ.

ಈಗ ಒಂದು ಬಟ್ಟಲಿಗೆ 2 ದೊಡ್ಡ ಚಮಚ ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಸಣ್ಣಗೆ ಹೆಚ್ಚಿದ ಟೊಮೆಟೊ, 2  ದೊಡ್ಡ ಚಮಚ ಸಣ್ಣಗೆ ಹೆಚ್ಚಿದ ದೊಡ್ಡ ಮೆಣಸಿನಕಾಯಿ, 2 ದೊಡ್ಡ ಚಮಚ ತುರಿದ ಗಜ್ಜರಿ, ೨ ದೊಡ್ಡ ಚಮಚ ಕೊತ್ತಂಬರಿ ಸೊಪ್ಪು, ಕಾಲು ಚಮಚ ಉಪ್ಪು ಚೆನ್ನಾಗಿ ಕಲಸಿ.

ನಂತರ ಬಿಸಿಯಾದ ಕಾವಲಿ ಮೇಲೆ ಎಣ್ಣೆ ಹಾಕಿ ಅದರ ಮೇಲೆ ಕಲಸಿದ ಹಿಟ್ಟನ್ನು ಹಾಕಿ, ಅದರ ಮೆಲೆ ಕಲಸಿಟ್ಟ ತರಕಾರಿಗಳನ್ನು ಉದುರಿಸಿ ಸ್ವಲ್ಪ ಒತ್ತಿ.

ಇದನ್ನೂ ಓದಿ: Toor Dal Dosa: ಪ್ರೋಟೀನ್ ಭರಿತ ತೊಗರಿ ಬೇಳೆ ದೋಸೆ ಆರೋಗ್ಯಕರ ಉಪಹಾರಕ್ಕೆ ಬೆಸ್ಟ್​

ಮೇಲೆ 1 ಚಮಚ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.ನಂತರ ಇದನ್ನು ಮುಗುಚಿ ಹಾಕಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.

ಬಿಸಿಯಾದ ಮತ್ತು ರುಚಿಯಾದ ರವಾ ಉತ್ತಪ್ಪವನ್ನು ನಿಮಗಿಷ್ಟವಾದ ಚಟ್ನಿಯೊಂದಿಗೆ ಬಡಿಸಿ.
Published by:Pavana HS
First published: