BreakFast Recipe: ಬೆಳಗಿನ ಉಪಹಾರಕ್ಕೆ ಮಾಡಿ ಸಬ್ಬಕ್ಕಿ ಸೊಪ್ಪಿನ ರವಾ ಇಡ್ಲಿ

ಇಡ್ಲಿಯಲ್ಲಿ ಹಲವಾರು ವಿಧಗಳಿದ್ದು ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜಿಟೇಬಲ್ (Vegetable) ಇಡ್ಲಿ, ಬೆಣ್ಣೆ ಇಡ್ಲಿ ಹೀಗೆ ಇಡ್ಲಿಯ ನಾನಾ ಹೆಸರುಗಳನ್ನು ಕೇಳಿದರೆ ಬಾಯಲ್ಲಿ ನೀರು ಬರುವುದಂತೂ ನಿಜ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದವರಿಗೆ ಇಡ್ಲಿ ಸಾಂಬಾರ್ (Idly Samber) ಎಂಬುದು ಹೊಸತರವಾದ ತಿಂಡಿ ಏನಲ್ಲ. ಬದಲಿಗೆ ಅವರು ಹೆಚ್ಚು ಇಷ್ಟಪಡುವ ಖಾದ್ಯವಾಗಿದೆ. ಮಲ್ಲಿಗೆಯಂತಹ ಇಡ್ಲಿಯೊಂದಿಗೆ (Mallige Idli) ಬೆಣ್ಣೆ, ಜೊತೆಗೆ ಬಿಸಿ ಬಿಸಿ ತೊಗರಿ ಬೇಳೆ ಸಾಂಬಾರ್ ಬೆರೆಸಿ ತಿಂದರಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬ ಆಹ್ಲಾದ ನಮ್ಮಲ್ಲಿ ಮೂಡುತ್ತದೆ. ಅಷ್ಟೊಂದು ರುಚಿಯ ಶಕ್ತಿಯನ್ನು ಇಡ್ಲಿ ಪಡೆದುಕೊಂಡಿದೆ. ಚಟ್ನಿ ಮತ್ತು ಸಾಂಬಾರ್ ಇಡ್ಲಿಗೆ ಉತ್ತಮ ಕಾಂಬಿನೇಶನ್ (Combination) ಎಂದೆನಿಸಿದ್ದು, ಎರಡನ್ನೂ ಇಡ್ಲಿಯೊಂದಿಗೆ ಸೇವಿಸುತ್ತಾರೆ. ಇಡ್ಲಿಯಲ್ಲಿ ಹಲವಾರು ವಿಧಗಳಿದ್ದು ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜಿಟೇಬಲ್ (Vegetable) ಇಡ್ಲಿ, ಬೆಣ್ಣೆ ಇಡ್ಲಿ ಹೀಗೆ ಇಡ್ಲಿಯ ನಾನಾ ಹೆಸರುಗಳನ್ನು ಕೇಳಿದರೆ ಬಾಯಲ್ಲಿ ನೀರು ಬರುವುದಂತೂ ನಿಜ

ಇಂದಿನ ಲೇಖನದಲ್ಲಿ ಕೂಡ ಥಟ್ಟನೆ ಬಿಸಿಬಿಸಿಯಾಗಿ ರುಚಿಯಾಗಿ ಮಾಡಲಾಗುವ ರವಾ ಇಡ್ಲಿಯ ಪಾಕ ವಿಧಾನಗಳನ್ನು ತಿಳಿಸಿಕೊಡುತ್ತಿದ್ದೇವೆ. ನೀವು ತರಾತುರಿಯಲ್ಲಿರುವಾಗ ಇಡ್ಲಿ ಸಿದ್ಧಪಡಿಸಬೇಕು ಎಂದಾದಲ್ಲಿ ಆಗ ರವೆ ಇಡ್ಲಿ ಅಥವಾ ರವಾ ಇಡ್ಲಿ ಉತ್ತಮ ಯೋಜನೆಯಾಗಿದೆ.

ಸಾಮಾಗ್ರಿಗಳು

ಹಿಟ್ಟಿಗಾಗಿ 1. ರವೆ - 1 ಕಪ್

2. ಮೊಸರು - 1/4 ಕಪ್

3. ಕೊತ್ತಂಬರಿ ಸೊಪ್ಪು - 1 ಕಪ್​,

4. ಸಬ್ಬಕ್ಕಿ ಸೊಪ್ಪು 1 ಕಪ್​ ಚಮಚ (ಕತ್ತರಿಸಿದ್ದು)

5. ಫ್ರುಟ್ ಸಾಲ್ಟ್ - 3/4 ಚಮಚ

6. ಉಪ್ಪು - ರುಚಿಗೆ ತಕ್ಕಷ್ಟು\

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ಇತರ ಸಾಮಾಗ್ರಿಗಳು

6. ಎಣ್ಣೆ - 1 ಚಮಚ

7. ತುಪ್ಪ - 1/2 ಚಮಚ

8. ಉದ್ದಿನ ಬೇಳೆ - 1 ಚಮಚ

9. ಸಾಸಿವೆ - 1/2 ಚಮಚ

10. ಗೋಡಂಬಿ - 1 ಚಮಚ (ತುಂಡರಿಸಿದ್ದು)

11. ಜೀರಿಗೆ - 1/2 ಚಮಚ

12. ಕರಿಬೇವು - 4

13. ಹಸಿಮೆಣಸು - 2 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)

14. ಚಿಟಿಕೆಯಷ್ಟು ಇಂಗು

ಮಾಡುವ ವಿಧಾನ:

1. ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ರವೆ, ಮೊಸರು ಮತ್ತು ಉಪ್ಪನ್ನು ಸೇರಿಸಿ. ನಿಧಾನವಾಗಿ ನೀರನ್ನು ಸೇರಿಸಿಕೊಂಡು ಹಿಟ್ಟನ್ನು ಮಿಶ್ರ ಮಾಡಿಕೊಳ್ಳಿ ಗಂಟುಗಳು ಆಗದಂತೆ ಕಲಸುತ್ತಿರಿ.

3.ಎಲ್ಲವೂ ಚೆನ್ನಾಗಿ ಹುರಿದ ಮೇಲೆ, ಹಿಟ್ಟಿಗೆ ಒಗ್ಗರಣೆಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಫ್ರುಟ್ ಸಾಲ್ಟ್ ಅನ್ನು ಸೇರಿಸಿ ಮತ್ತು ಸ್ವಲ್ಪ ನೀರು ಮಿಶ್ರ ಮಾಡಿ. ಹಿಟ್ಟಿನಲ್ಲಿ ಹುದುಗು ಉಂಟಾಗುತ್ತದೆ ಮತ್ತು ಚೆನ್ನಾಗಿ ಮಿಶ್ರ ಮಾಡಿ.

4.ಈಗ ಇಡ್ಲಿ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿ. ಇಡ್ಲಿ ತಟ್ಟೆಗೆ ಸ್ವಲ್ಪ ಹಿಟ್ಟನ್ನು ಹಾಕಿ ಮತ್ತು ಸ್ಟೀಮರ್‌ನಲ್ಲಿ ತಟ್ಟೆಯನ್ನಿರಿಸಿ.

5. ಸ್ಟೀಮ್‌ಗಾಗಿ 7-8 ನಿಮಿಷಗಳು ಬೇಕು. ಚಮಚದ ಸಹಾಯದಿಂದ ಇಡ್ಲಿಗಳನ್ನು ಹೊರತೆಗೆಯಿರಿ ಮತ್ತು ಪ್ಲಾಟರ್ ಮೇಲಿರಿಸಿ.

6. ಬಿಸಿಯಾದ ರವಾ ಇಡ್ಲಿ ಸೇವನೆಗೆ ಸಿದ್ಧವಾಗಿದೆ. ಇಡ್ಲಿಯೊಂದಿಗೆ ಬಿಸಿ ಸಾಂಬಾರ್ ಇಲ್ಲವೇ ಚಟ್ನಿ ಉತ್ತಮ ಕಾಂಬಿನೇಶನ್ ಆಗಿದೆ. ಈ ವಿಶಿಷ್ಟ ರೆಸಿಪಿಯನ್ನು ನೀವೂ ಟ್ರೈ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

ಈರುಳ್ಳಿ ಚಟ್ನಿ

ಬೇಕಾಗುವ ಪದಾರ್ಥಗಳು : 10 ಸಣ್ಣ ಈರುಳ್ಳಿ, 1 ಸಣ್ಣ ಬೆಳ್ಳುಳ್ಳಿ, 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, 1 ಟೀಸ್ಪೂನ್ ಕೊತ್ತಂಬರಿ ಬೀಜ, 4 ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಸಣ್ಣ ತುಂಡು ಹುಣಸೆಹಣ್ಣು, ಅರ್ಧ ಟೀಸ್ಪೂನ್ ಉಪ್ಪು , ಕಾಲು ಕಪ್ ನೀರು 1 ಟೀಸ್ಪೂನ್ ಸಾಸಿವೆ ಪಿಂಚ್ ಹಿಂಗ್ ಸ್ವಲ್ಪ ಅರಿಶಿನ 1 ಟೀಸ್ಪೂನ್ ಮೆಣಸಿನ ಪುಡಿ

ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ. ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ. ಬಾಣಲಿಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ.ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, ಳಿ ಟೀಸ್ಪೂನ್ ಉಪ್ಪು ಮತ್ತು ನೀರು ಸೇರಿಸಿ. ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್‌ ಆಗಿ ರುಬ್ಬಿಕೊಳ್ಳಿ.
Published by:Pavana HS
First published: